MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Entertainment
  • Cine World
  • ಕ್ಯಾರಾವ್ಯಾನ್ ಒಳಗೆ ನುಗ್ಗಿದ ಕಿರಾತಕನ ನೀಚ ಕೃತ್ಯ; ಕಹಿ ಘಟನೆ ಬಿಚ್ಚಿಟ್ಟ 'ಮಂಡೋದರಿ' ಕಾಜಲ್ ಅಗರ್ವಾಲ್

ಕ್ಯಾರಾವ್ಯಾನ್ ಒಳಗೆ ನುಗ್ಗಿದ ಕಿರಾತಕನ ನೀಚ ಕೃತ್ಯ; ಕಹಿ ಘಟನೆ ಬಿಚ್ಚಿಟ್ಟ 'ಮಂಡೋದರಿ' ಕಾಜಲ್ ಅಗರ್ವಾಲ್

ಶೂಟಿಂಗ್ ಸೆಟ್‌ಗಳಲ್ಲಿ ಮಹಿಳಾ ಕಲಾವಿದರ ಸುರಕ್ಷತೆಯ ಬಗ್ಗೆ ಕಾಜಲ್ ಧ್ವನಿ ಎತ್ತಿರುವುದು ಈಗ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿನಿತಾರೆಯರಿಗೂ ಸಾಮಾನ್ಯರಂತೆ ಗೌರವ ಮತ್ತು ಸುರಕ್ಷತೆ ಅತ್ಯಗತ್ಯ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಈ ಸ್ಟೋರಿ ನೋಡಿ ಶಾಕ್ ಆಗ್ಬೇಡಿ..!

2 Min read
Author : Shriram Bhat
Published : Jul 25 2026, 12:02 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : instagram

ಕ್ಯಾರಾವ್ಯಾನ್‌ ಒಳಗೆ ನುಗ್ಗಿ ಶರ್ಟ್ ಬಿಚ್ಚಿದ ಕಿರಾತಕ; ಸೆಟ್‌ನಲ್ಲಿ ನಡೆದಿದ್ದೇನು?

ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ 'ಮಹಾನಟಿ', ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ 'ಚಂದಮಾಮ' ಖ್ಯಾತಿಯ ಕಾಜಲ್ ಅಗರ್ವಾಲ್ (Kajal Aggarwal) ಈಗ ಸುದ್ದಿಯಲ್ಲಿದ್ದಾರೆ. ಆದರೆ ಇದು ಅವರ ಹೊಸ ಸಿನಿಮಾದ ವಿಚಾರಕ್ಕಲ್ಲ, ಬದಲಾಗಿ ಶೂಟಿಂಗ್ ಸೆಟ್‌ನಲ್ಲಿ ತಮಗಾದ ಒಂದು ಅತ್ಯಂತ ಕಹಿ ಮತ್ತು ಆಘಾತಕಾರಿ ಅನುಭವದ ಬಗ್ಗೆ ಅವರು ಬಿಚ್ಚಿಟ್ಟಿರುವ ಸತ್ಯ ಈಗ ಸಿನಿವಲಯದಲ್ಲಿ ಸಂಚಲನ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : others

ಮದುವೆ, ಸಂಸಾರ, ಮಗು ಎಂದು ಚಿತ್ರರಂಗದಿಂದ ಅಲ್ಪಕಾಲ ವಿರಾಮ ಪಡೆದಿದ್ದ ಕಾಜಲ್, ಈಗ ತಮ್ಮ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ಸುಂದರಿ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅಂದು ನಡೆದ ಆ ಭಯಾನಕ ಘಟನೆಯನ್ನು ನೆನಪಿಸಿಕೊಂಡು ಮರುಗಿದ್ದಾರೆ. ಹಳೆಯ ಘಟನೆಯನ್ನು ತಾವಿನ್ನೂ ಮರೆತಿಲ್ಲ, ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂಬುದನ್ನು ಅವರು ಈ ಮೂಲಕ ಹೇಳಿಕೊಂಡಿದ್ದಾರೆ.

Related Articles

Related image1
ಇನ್ಮುಂದೆ 'ಇಂಥ' ಪಾತ್ರ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕಾಗಿದೆ; ರಾಜ್ ಬಿ ಶೆಟ್ಟಿ ಸೆನ್ಸೇಷನಲ್ ಹೇಳಿಕೆ!
Related image2
ಕುಂಭಮೇಳ ಚೆಲುವೆ ಮೋನಾಲಿಸಾಗೆ ಪೊಲೀಸ್ ರಕ್ಷಣೆಗೆ 'ಒಕೆ' ಎಂದ ಕೋರ್ಟ್; ಎಲ್ಲಿದ್ದಾರೆ ಈಗ ರುದ್ರಾಕ್ಷಿ ಸುಂದರಿ?!
37
Image Credit : others

ಕ್ಯಾರಾವ್ಯಾನ್‌ನಲ್ಲಿ ನಡೆದಿದ್ದೇನು?

ಸಿನಿಮಾ ಸೆಟ್ ಎಂದರೆ ಕಲಾವಿದರಿಗೆ ಎರಡನೇ ಮನೆ ಇದ್ದಂತೆ. ಅದರಲ್ಲೂ ಕ್ಯಾರಾವ್ಯಾನ್ ಎಂಬುದು ಅವರ ಅತ್ಯಂತ ಖಾಸಗಿ ಜಾಗ. ಆದರೆ ಅದೇ ಖಾಸಗಿ ಜಾಗದಲ್ಲಿ ಕಾಜಲ್‌ಗೆ ಭದ್ರತೆಯ ಭಯ ಕಾಡಿತ್ತು. ಆ ಘಟನೆಯನ್ನು ವಿವರಿಸುತ್ತಾ ಕಾಜಲ್, "ಅಂದು ಶೂಟಿಂಗ್ ಬಿಡುವಿನ ವೇಳೆ ನಾನು ನನ್ನ ಕ್ಯಾರಾವ್ಯಾನ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಮೊದಲ ಟೇಕ್ ಮುಗಿಸಿ ಸುಧಾರಿಸಿಕೊಳ್ಳುತ್ತಿದ್ದ ಸಮಯದಲ್ಲಿ, ಆ ಚಿತ್ರದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಯಾವುದೇ ಅನುಮತಿ ಪಡೆಯದೆ, ಕನಿಷ್ಠ ಬಾಗಿಲು ಕೂಡ ತಟ್ಟದೆ ದಿಢೀರನೆ ಒಳಕ್ಕೆ ನುಗ್ಗಿ ಬಂದ. ನಾನು ಒಬ್ಬಳೇ ಇದ್ದದ್ದನ್ನು ಕಂಡು ಆತ ಅಸಭ್ಯವಾಗಿ ವರ್ತಿಸಲು ಶುರುಮಾಡಿದ," ಎಂದು ಹೇಳಿದ್ದಾರೆ.

47
Image Credit : others

ಅಷ್ಟಕ್ಕೇ ನಿಲ್ಲದ ಆ ವ್ಯಕ್ತಿ, ಕಾಜಲ್ ಎದುರೇ ತನ್ನ ಶರ್ಟ್ ಬಿಚ್ಚಿ ತನ್ನ ಎದೆಯ ಮೇಲಿದ್ದ ಟ್ಯಾಟೂವನ್ನು ತೋರಿಸಿದ್ದಾನೆ. ಆ ಟ್ಯಾಟೂ ಮತ್ಯಾರದ್ದೂ ಅಲ್ಲ, ಸ್ವತಃ ಕಾಜಲ್ ಅಗರ್ವಾಲ್ ಅವರ ಹೆಸರಾಗಿತ್ತು! "ಅವನ ವರ್ತನೆಯಿಂದ ನಾನು ಒಂದು ಕ್ಷಣ ಸ್ತಬ್ದಳಾದೆ, ಏನು ಮಾಡಬೇಕೆಂದು ತೋಚದೆ ಕೈಕಾಲುಗಳು ನಡುಗಲು ಆರಂಭಿಸಿದವು. ಅಭಿಮಾನದ ಹೆಸರಿನಲ್ಲಿ ಇಂತಹ ವರ್ತನೆ ಖಂಡಿತಾ ಒಪ್ಪುವಂತದ್ದಲ್ಲ," ಎಂದು ಕಾಜಲ್ ಆತಂಕದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

57
Image Credit : instagram

ಅಭಿಮಾನಕ್ಕೆ ಗೌರವವಿದೆ, ಆದರೆ ಅತಿಕ್ರಮಣಕ್ಕಲ್ಲ!

ತಮ್ಮ ಅಭಿಮಾನಿಗಳ ಬಗ್ಗೆ ಅಪಾರ ಗೌರವ ಹೊಂದಿರುವ ಕಾಜಲ್, ಈ ಘಟನೆಯನ್ನು ಬಹಳ ಪ್ರಬುದ್ಧವಾಗಿಯೇ ನಿಭಾಯಿಸಿದ್ದಾರೆ. "ನನ್ನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ನನಗೆ ಖುಷಿಯಿದೆ, ಆದರೆ ಒಬ್ಬ ಮಹಿಳೆ ಏಕಾಂತದಲ್ಲಿದ್ದಾಗ ಅವಳ ಅನುಮತಿಯಿಲ್ಲದೆ ರೂಮಿನೊಳಗೆ ಬರುವುದು ಕ್ರಿಮಿನಲ್ ವರ್ತನೆ. ನಾನು ಆತನಿಗೆ ಮೃದುವಾಗಿಯೇ ತಿಳಿಹೇಳಿ ಎಚ್ಚರಿಕೆ ನೀಡಿದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಖಾಸಗಿತನ (Privacy) ಇರುತ್ತದೆ ಎಂಬುದನ್ನು ಗೌರವಿಸಬೇಕು," ಎಂಬ ಕಡಕ್ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ.

67
Image Credit : Asianet News

ವೃತ್ತಿಜೀವನದಲ್ಲಿ ಜಬರ್ದಸ್ತ್ ಏರಿಕೆ:

ಇಷ್ಟೆಲ್ಲಾ ಕಹಿ ಘಟನೆಗಳ ನಡುವೆಯೂ ಕಾಜಲ್ ಕೆರಿಯರ್ ಗ್ರಾಫ್ ಮಾತ್ರ ಮೇಲೇರುತ್ತಿದೆ. ಇತ್ತೀಚೆಗೆ ನಂದಮೂರಿ ಬಾಲಕೃಷ್ಣ ಅಭಿನಯದ 'ಭಗವಂತ್ ಕೇಸರಿ' ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಕಾಜಲ್, ಈಗ ಮತ್ತೆ ಗೋಪಿಚಂದ್ ಮಲಿನೇನಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಬಾಲಯ್ಯಗೆ ಜೋಡಿಯಾಗುತ್ತಿದ್ದಾರೆ. ಇನ್ನು ಎಲ್ಲರಿಗೂ ಕುತೂಹಲ ಮೂಡಿಸಿರುವುದು ಅವರ ಬಾಲಿವುಡ್ ಎಂಟ್ರಿ! ಬಿಗ್ ಬಜೆಟ್‌ನ 'ರಾಮಾಯಣ' ಸಿನಿಮಾದಲ್ಲಿ ಮಂಡೋದರಿ ಪಾತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್‌ಗೆ ಜೋಡಿಯಾಗಿ ಕಾಜಲ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಿನಿದುನಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.

77
Image Credit : instagram

ಒಟ್ಟಿನಲ್ಲಿ ಶೂಟಿಂಗ್ ಸೆಟ್‌ಗಳಲ್ಲಿ ಮಹಿಳಾ ಕಲಾವಿದರ ಸುರಕ್ಷತೆಯ ಬಗ್ಗೆ ಕಾಜಲ್ ಧ್ವನಿ ಎತ್ತಿರುವುದು ಈಗ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿನಿತಾರೆಯರಿಗೂ ಸಾಮಾನ್ಯರಂತೆ ಗೌರವ ಮತ್ತು ಸುರಕ್ಷತೆ ಅತ್ಯಗತ್ಯ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಕಾಜಲ್ ಅಗರ್ವಾಲ್
ಮನರಂಜನಾ ಸುದ್ದಿ
ಮಹಿಳೆಯರು
ವೈರಲ್ ಸುದ್ದಿ

Latest Videos
Recommended Stories
Recommended image1
ಹೊಂಬಾಳೆ ಫಿಲ್ಮ್ಸ್ ಮಹತ್ವದ ಹೆಜ್ಜೆ, ದಾಖಲೆ ಕಲೆಕ್ಷನ್ ಮಾಡಿದ ಹನುಮಾನ್ ಅಂಶ್ ಸಿನಿಮಾ ಸೆ.11ಕ್ಕೆ ಜಾಗತಿಕ ರಿಲೀಸ್
Recommended image2
ಯಶ್ ಅಮ್ಮ ಪುಷ್ಪಾ ಮಾತಿಗೆ ಉಗ್ರಾವತಾರ ತಾಳಿದ ಆರ್‌ಜಿವಿ; ಅಲ್ಲು ಅರವಿಂದ್ ಸಪೋರ್ಟ್‌ ಮಾಡಿ ಹೇಳಿದ್ದೇನು?
Recommended image3
ಓ ಮೈ ಗಾಡ್!.. ಇನ್ನು ಸಿನಿಮಾ ಮಾಡೋದೇ ಇಲ್ಲ ಅಂತಿರುವಾಗ್ಲೇ ಗುಡ್​​ನ್ಯೂಸ್ ಕೊಟ್ಟ ತ್ರಿಷಾ ಕೃಷ್ಣನ್
Related Stories
Recommended image1
ಇನ್ಮುಂದೆ 'ಇಂಥ' ಪಾತ್ರ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕಾಗಿದೆ; ರಾಜ್ ಬಿ ಶೆಟ್ಟಿ ಸೆನ್ಸೇಷನಲ್ ಹೇಳಿಕೆ!
Recommended image2
ಕುಂಭಮೇಳ ಚೆಲುವೆ ಮೋನಾಲಿಸಾಗೆ ಪೊಲೀಸ್ ರಕ್ಷಣೆಗೆ 'ಒಕೆ' ಎಂದ ಕೋರ್ಟ್; ಎಲ್ಲಿದ್ದಾರೆ ಈಗ ರುದ್ರಾಕ್ಷಿ ಸುಂದರಿ?!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved