ನವದೆಹಲಿ: ಕೋವಿಡ್ ವೇಳೆ ಸೃಷ್ಟಿಸಲಾಗಿದ್ದ ಹಾಗೂ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ಪಿಎಂ ಕೇರ್ಸ್ ನಿಧಿಗೆ 2023-24 ಮತ್ತು 2024-25ರಲ್ಲಿ ದೇಶ-ವಿದೇಶಗಳಲ್ಲಿ 1,162.92 ಕೋಟಿ ರು. ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಈ ಅವಧಿಯಲ್ಲಿ ಕೇವಲ 16.47 ಕೋಟಿ ರು. ಖರ್ಚು ಮಾಡಿದೆ ಎಂದು ಆಡಿಟ್ ವರದಿಗಳು ತಿಳಿಸಿವೆ. 2024-25ರಲ್ಲಿ ಈ ನಿಧಿಯು 479.97 ಕೋಟಿ ರು. ದೇಣಿಗೆ ಸಂಗ್ರಹಿಸಿತ್ತು, ಆದರೆ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇವಲ 87.85 ಲಕ್ಷ ರು. ಖರ್ಚು ಮಾಡಿದೆ. 2023-24ರಲ್ಲಿ 682.94 ಕೋಟಿ ರು. ಸಂಗ್ರಹಿಸಿ 15.59 ಕೋಟಿ ರು. ಖರ್ಚು ಮಾಡಿತ್ತು.
ಮಾರ್ಚ್ 31, 2025ಕ್ಕೆ ಮುಗಿದ ವಿತ್ತ ವರ್ಷದಲ್ಲಿ, ನಿಧಿಯ ಖಾತೆಗಳಲ್ಲಿ 8,452.06 ಕೋಟಿ ರು. ಇದೆ. ಇದರಲ್ಲಿ 7,846.65 ಕೋಟಿ ಸ್ಥಿರ ಠೇವಣಿಗಳಲ್ಲಿದೆ. ಒಟ್ಟಾರೆ, ಈ ನಿಧಿಯು 2020ರ ಮಾರ್ಚ್‌ನಲ್ಲಿ ಆರಂಭವಾದಾಗಿನಿಂದ 14,766.95 ಕೋಟಿ ರು. ದೇಣಿಗೆ ಸಂಗ್ರಹಿಸಿದೆ ಮತ್ತು 2024-25 ರವರೆಗೆ 8,133.29 ಕೋಟಿ ರು. ಖರ್ಚು ಮಾಡಿದೆ.
10:57 PM (IST) Aug 19
ನಟಿ ನಿವೇತಾ ಥಾಮಸ್ ಇತ್ತೀಚೆಗೆ ತಮ್ಮ ಹೊಸ ಲುಕ್‌ನ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ನಟಿ ಸಾಕಷ್ಟು ತೂಕ ಇಳಿಸಿಕೊಂಡಿರುವುದು ಈ ಫೋಟೋದಲ್ಲಿ ಎದ್ದು ಕಾಣುತ್ತಿದೆ.
10:13 PM (IST) Aug 19
ನಟಿ ಮೀನಾ ಅವರ ವೈಯಕ್ತಿಕ ಜೀವನದಲ್ಲಿ 2022ರ ವರ್ಷ ಮರೆಯಲಾಗದ ನೋವನ್ನು ತಂದಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮೀನಾ, ಪತಿಯನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
10:05 PM (IST) Aug 19
SBI ತನ್ನ 'ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್' (BSBD) ಖಾತೆದಾರರಿಗೆ ನಗದು ಹಿಂಪಡೆಯುವಿಕೆಯ ಹೊಸ ನಿಯಮಗಳನ್ನು ಘೋಷಿಸಿದೆ. ಅಕ್ಟೋಬರ್ 1, 2026 ರಿಂದ, ತಿಂಗಳಿಗೆ 4 ಉಚಿತ ವಹಿವಾಟುಗಳ ನಂತರ ಪ್ರತಿ ನಗದು ಹಿಂಪಡೆಯುವಿಕೆಗೆ ₹15 ಮತ್ತು ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ.
09:48 PM (IST) Aug 19
Kiara Advani: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಪಯಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ.
09:39 PM (IST) Aug 19
ಖಾಸಗಿ ಕಂಪನಿಯ ಕಡತ ವಿಲೇವಾರಿ ಮಾಡಲು ಪತ್ನಿಯ ಮೂಲಕ 10 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. 15 ಲಕ್ಷಕ್ಕೆ ಬೇಡಿಕೆಯಿಟ್ಟು 10 ಲಕ್ಷಕ್ಕೆ ಡೀಲ್ ಕುದುರಿಸಿದ್ದ 2020ರ ಬ್ಯಾಚ್‌ನ ಐಸಿಎಎಸ್ ಅಧಿಕಾರಿ ಸಂದೀಪ್ ಸದ್ಯ ಸಿಬಿಐ ಬಲೆಗೆ ಬಿದ್ದಿದ್ದಾನೆ.
08:44 PM (IST) Aug 19
08:35 PM (IST) Aug 19
07:57 PM (IST) Aug 19
06:53 PM (IST) Aug 19
ಪಿಎಂ ಕೇರ್ಸ್ ಫಂಡ್‌ನ ಇತ್ತೀಚಿನ ಆಡಿಟ್ ವರದಿಯ ಪ್ರಕಾರ, ನಿಧಿಯ ಒಟ್ಟು ಬಾಕಿ ಮೊತ್ತ 8,452 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ 1,162 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದರೂ, ಕೇವಲ 16.47 ಕೋಟಿ ರೂ. ಮಾತ್ರ ವೆಚ್ಚ ಮಾಡಿರುವುದು ವರದಿಯಿಂದ ಬಹಿರಂಗವಾಗಿದೆ.
06:22 PM (IST) Aug 19
05:59 PM (IST) Aug 19
ಒಂದು ಕಾಲದಲ್ಲಿ ಹಿಂಸಾಚಾರದಿಂದ ಗುರುತಿಸಲ್ಪಡುತ್ತಿದ್ದ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ, 'ಲಾಯ್ಡ್ಸ್ ಮೆಟಲ್ಸ್' ಕಂಪನಿಯು ಕ್ರಾಂತಿಕಾರಿ ಯೋಜನೆ ಜಾರಿಗೊಳಿಸಿದೆ. ಈ ಮೂಲಕ, 25,000ಕ್ಕೂ ಹೆಚ್ಚು ಮಾಜಿ ಮಾವೋವಾದಿಗಳು ಮತ್ತು ಸ್ಥಳೀಯ ಬುಡಕಟ್ಟು ಜನರು ಕಂಪನಿಯ ಶೇರುದಾರರಾಗಿ ಮುಖ್ಯವಾಹಿನಿಗೆ ಮರಳಿದ್ದಾರೆ.
05:51 PM (IST) Aug 19
05:48 PM (IST) Aug 19
05:20 PM (IST) Aug 19
04:43 PM (IST) Aug 19
'ಡಿಜಿಟಲ್ ಅರೆಸ್ಟ್'ನಂತಹ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರವು ಹೊಸ ಸಿಮ್ ಕಾರ್ಡ್ ಪಡೆಯುವ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ. ಹೊಸ ಸಿಮ್ ಸಕ್ರಿಯಗೊಳಿಸುವ ಮುನ್ನ ಗ್ರಾಹಕರ ಮಾಹಿತಿಯನ್ನು 'ರಿಯಲ್-ಟೈಮ್ ಡಿಜಿಟಲ್ ಇಂಟೆಲಿಜೆನ್ಸ್ ಪೋರ್ಟಲ್' ಮೂಲಕ ಪರಿಶೀಲಿಸುವುದು ಕಡ್ಡಾಯವಾಗಲಿದೆ.
04:20 PM (IST) Aug 19
04:00 PM (IST) Aug 19
03:45 PM (IST) Aug 19
'ಟಾಕ್ಸಿಕ್' ಸಿನಿಮಾವನ್ನು ಬರೋಬ್ಬರಿ 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಾರತದ ಸಿನಿಮಾವೊಂದು ಈ ಮಟ್ಟಕ್ಕೆ ಜಾಗತಿಕವಾಗಿ ಅಬ್ಬರಿಸುತ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಡಿಮ್ಯಾಂಡ್ ಹೆಚ್ಚಾದಂತೆ ಈ ಪರದೆಗಳ ಸಂಖ್ಯೆ ಇನ್ನೂ ಏರಿಕೆಯಾಗೋದು ಗ್ಯಾರಂಟಿ.
03:27 PM (IST) Aug 19
03:23 PM (IST) Aug 19
03:20 PM (IST) Aug 19
02:53 PM (IST) Aug 19
ನಾಸಾದ ಹಬಲ್ ದೂರದರ್ಶಕವನ್ನು ಬಳಸಿದ ಖಗೋಳಶಾಸ್ತ್ರಜ್ಞರು, ಸುಮಾರು 12 ಶತಕೋಟಿ ವರ್ಷಗಳ ಹಿಂದೆ ನಡೆದ ಬೃಹತ್ ಗ್ಯಾಲಕ್ಸಿ ಘರ್ಷಣೆಯ ಪುರಾವೆಗಳನ್ನು ಪತ್ತೆಹಚ್ಚಿದ್ದಾರೆ. ಈ ಸಂಶೋಧನೆಯು, ಯುವ ಕ್ಷೀರಪಥವು LKH ಎಂಬ ಕುಬ್ಜ ನಕ್ಷತ್ರಪುಂಜವನ್ನು ವಿಲೀನಗೊಳಿಸಿಕೊಂಡು ತನ್ನ ಬೆಳವಣಿಗೆಗೆ ಅಡಿಪಾಯ ಹಾಕಿಕೊಂಡಿದ್ದನ್ನು ಬಹಿರಂಗಪಡಿಸಿದೆ.
02:43 PM (IST) Aug 19
'ಬೈಸನ್ ಕಾಳಮಾದನ್' ಸಿನಿಮಾದ ಸೆಟ್‌ನಲ್ಲಿ ಚಿಗುರಿದ ಈ ಸ್ನೇಹ ಪ್ರೀತಿಯಾಗಿ ಅರಳಿತ್ತು ಎನ್ನಲಾಗಿದೆ. ಈಗ ಇಬ್ಬರ ನಡುವೆ ಬಿರುಕು ಮೂಡಿದ್ದು'ತನ್ನ ಆತ್ಮಾಭಿಮಾನಕ್ಕಾಗಿ ಸಂಬಂಧದಿಂದ ಹೊರಬಂದೆ' ಎಂದು ನಟಿ ಅನುಪಮಾ ಹೇಳುತ್ತಿದ್ದರೆ, ಅತ್ತ ಧ್ರುವ ವಿಕ್ರಮ್ ಈ ಆರೋಪಗಳಿಂದ ಕಂಗೆಟ್ಟಿದ್ದಾರೆ. ಆ ಸೀಕ್ರೆಟ್ ಬಗ್ಗೆ ಏನ್ ಹೇಳಿದಾರೆ ಧ್ರುವ ನೋಡಿ..
02:14 PM (IST) Aug 19
01:41 PM (IST) Aug 19
01:41 PM (IST) Aug 19
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸೀತಾ ಬಾಡಿ, ಶಿಥಿಲಾವಸ್ಥೆಯಲ್ಲಿದ್ದ ಮಕ್ಕಳ ಕೇಂದ್ರದಿಂದ ರಕ್ಷಿಸಲ್ಪಟ್ಟ ನವಜಾತ ಶಿಶುವಿಗೆ ಎದೆಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ. ನಿರಂತರವಾಗಿ ಅಳುತ್ತಿದ್ದ 17 ದಿನದ ಮಗುವನ್ನು ಸಮಾಧಾನಪಡಿಸಲು ಬೇರೆ ದಾರಿ ಇಲ್ಲದಿದ್ದಾಗ, ಸಚಿವರು ಸ್ವತಃ ಹಾಲುಣಿಸಿ ತಾಯಿ ಪ್ರೀತಿ ತೋರಿದ್ದಾರೆ.
01:28 PM (IST) Aug 19
01:11 PM (IST) Aug 19
ಈ ವೀಕೆಂಡ್ ನೋಡಲು ಒಂದು ಅತ್ಯುತ್ತಮ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬನ ರಿವಾಲ್ವರ್ ಕಳೆದುಹೋಗಿ, ಅದು ಬ್ಯಾಂಕ್ ದರೋಡೆಗೆ ಬಳಕೆಯಾದಾಗ ನಡೆಯುವ ರೋಚಕ ತನಿಖೆಯು ಈ ಸಿನಿಮಾದ ಕಥಾವಸ್ತುವಾಗಿದೆ.
12:53 PM (IST) Aug 19
12:10 PM (IST) Aug 19
ನಟ ರವಿತೇಜ ಅವರು ವರ್ಷಗಳ ಹಿಂದೆ ಹೈದರಾಬಾದ್ ಬಳಿ ಕೇವಲ 12 ಲಕ್ಷಕ್ಕೆ 26 ಎಕರೆ ಭೂಮಿ ಖರೀದಿಸಿದ್ದರು. ನಟ ಅಜಯ್ ಘೋಷ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಪ್ರಸ್ತುತ ಆ ಭೂಮಿಯ ಮೌಲ್ಯ ಕೋಟಿಗಟ್ಟಲೆ ಆಗಿದೆ. ಇಷ್ಟೆಲ್ಲಾ ಆಸ್ತಿ ಇದ್ದರೂ, ತಮ್ಮ ಸರಳ ವ್ಯಕ್ತಿತ್ವದಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
11:40 AM (IST) Aug 19
11:19 AM (IST) Aug 19
11:07 AM (IST) Aug 19
ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಮುಂದಿನ ವರ್ಷ ತನ್ನ ದೇಶದ ಅರ್ಹ ನಾಗರಿಕರಿಗೆ 30 ಸಾವಿರ ರೂಪಾಯಿ ನಗದು ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದಕ್ಕೆ ಕೃತಕ ಬುದ್ಧಿಮತ್ತೆ ನೇತೃತ್ವದ ಪ್ರಗತಿಯೇ ಕಾರಣ ಎಂದು ಅವರು ಹೇಳಿದ್ದಾರೆ.
10:41 AM (IST) Aug 19
06:20 AM (IST) Aug 19
ಅಯೋಧ್ಯೆ ರಾಮಮಂದಿರದ ಕಾಣಿಕೆ ಕಳವು ಪ್ರಕರಣದಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಮಾಜಿ ಸದಸ್ಯ ಅನಿಲ್ ಮಿಶ್ರಾಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ಚಿಟ್ ನೀಡಿದೆ. ತನಿಖಾ ವರದಿಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದ್ದು, ಶೀಘ್ರ ತನಿಖೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಕೂಡ ಸೂಚಿಸಿದೆ.
06:00 AM (IST) Aug 19
05:41 AM (IST) Aug 19
05:36 AM (IST) Aug 19