MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
Bandipur National Park
Hanur Shootout Case
Bengaluru Schools H1N1 Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Entertainment
  • Ravi Teja Investment: 12 ಲಕ್ಷ ಹೂಡಿಕೆ ಮಾಡಿದರೆ 100 ಕೋಟಿ ರೂ. ಲಾಭ; ನಟ ರವಿತೇಜ ಆಸ್ತಿ ಕುರಿತ ಶಾಕಿಂಗ್ ಸೀಕ್ರೆಟ್ ರಿವೀಲ್!

Ravi Teja Investment: 12 ಲಕ್ಷ ಹೂಡಿಕೆ ಮಾಡಿದರೆ 100 ಕೋಟಿ ರೂ. ಲಾಭ; ನಟ ರವಿತೇಜ ಆಸ್ತಿ ಕುರಿತ ಶಾಕಿಂಗ್ ಸೀಕ್ರೆಟ್ ರಿವೀಲ್!

ನಟ ರವಿತೇಜ ಅವರು ವರ್ಷಗಳ ಹಿಂದೆ ಹೈದರಾಬಾದ್ ಬಳಿ ಕೇವಲ 12 ಲಕ್ಷಕ್ಕೆ 26 ಎಕರೆ ಭೂಮಿ ಖರೀದಿಸಿದ್ದರು. ನಟ ಅಜಯ್ ಘೋಷ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಪ್ರಸ್ತುತ ಆ ಭೂಮಿಯ ಮೌಲ್ಯ ಕೋಟಿಗಟ್ಟಲೆ ಆಗಿದೆ. ಇಷ್ಟೆಲ್ಲಾ ಆಸ್ತಿ ಇದ್ದರೂ, ತಮ್ಮ ಸರಳ ವ್ಯಕ್ತಿತ್ವದಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2 Min read
Author : Sumanth SN
Published : Aug 19 2026, 12:10 PM IST
Share this Photo Gallery
  • FB
  • TW
  • Linkdin
  • Whatsapp
17
ಭೂಮಿಯ ಮೇಲೆ ಹೀರೋಗಳ ಹೂಡಿಕೆ
Image Credit : Instagram

ಭೂಮಿಯ ಮೇಲೆ ಹೀರೋಗಳ ಹೂಡಿಕೆ

ಟಾಲಿವುಡ್ ಸಿನಿಮಾ ರಂಗದಲ್ಲಿ ಹಲವರು ಕಲಾವಿದರು ತಾವು ದುಡಿದ ಹಣವನ್ನು ಭೂಮಿ ಸೇರಿದಂತೆ ಸ್ಥಿರಾಸ್ತಿಗಳಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ದಶಕಗಳ ಹಿಂದೆಯಿಂದಲೂ ಈ ರೀತಿ ಹಲವು ನಟ-ನಟಿಯರು ಹೂಡಿಕೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಈ ರೀತಿ ವರ್ಷಗಳ ಹಿಂದೆ ಕಡಿಮೆ ಹಣಕ್ಕೆ ಖರೀದಿ ಮಾಡಿದ ಆಸ್ತಿಗಳು ಈಗ ಕೋಟಿ ಕೋಟಿ ಮೌಲ್ಯವನ್ನು ಹೊಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ರವಿತೇಜ ಸಿನಿಮಾ ಬಿಡುಗಡೆಗೆ ಸಿದ್ಧತೆ
Image Credit : Instagram

ರವಿತೇಜ ಸಿನಿಮಾ ಬಿಡುಗಡೆಗೆ ಸಿದ್ಧತೆ

ಇದೇ ಸಾಲಿಗೆ ಸದ್ಯ ಟಾಲಿವುಡ್ ನಟ ರವಿತೇಜ ಸೇರ್ಪಡೆಯಾಗಿದ್ದಾರೆ. ಅವರ ಆಸ್ತಿಗೆ ಸಂಬಂಧಿಸಿದ ಸುದ್ದಿಯೊಂದು ಸಿನಿಮಾ ರಂಗದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತೀಚೆಗೆ ರವಿತೇಜ ಅವರ ಸಿನಿಮಾ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಈ ಸಂಗತಿ ರಿವೀಲ್ ಆಗಿದೆ.

Related Articles

Related image1
Ravi Teja: 'ಇರುಮುಡಿ ಕಟ್ಟು' ಎನ್ನುತ್ತಾ ಅಯ್ಯಪ್ಪ ಭಕ್ತರಿಗೆ ವಿಶೇಷ ಸರ್ಪ್ರೈಸ್ ಕೊಟ್ಟ ರವಿತೇಜ: ಏನದು?
Related image2
Tollywood Item Songs: ಸಿನಿಮಾವನ್ನೇ ಡಾಮಿನೇಟ್ ಮಾಡಿದ ಟಾಲಿವುಡ್‌ನ ಬೆಸ್ಟ್ ಐಟಂ ಸಾಂಗ್ಸ್ ಇವು!
37
26 ಎಕರೆ ವಿಶಾಲ ಫಾರ್ಮ್‌ಹೌಸ್
Image Credit : Instagram

26 ಎಕರೆ ವಿಶಾಲ ಫಾರ್ಮ್‌ಹೌಸ್

ನಟ ಅಜಯ್ ಘೋಷ್ ಅವರು ಇತ್ತೀಚೆಗೆ ನಡೆದ 'ಇರುಮುಡಿ' ಸಿನಿಮಾ ಪ್ರೀ-ರಿಲೀಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ರವಿತೇಜ ಅವರ ಆಸ್ತಿಯ ಬಗ್ಗೆ ಆಸಕ್ತಿಯುತ ವಿಚಾರಗಳನ್ನು ರಿವೀಲ್ ಮಾಡಿದ್ದರು. ರವಿತೇಜ, ಅಜಯ್ ಘೋಷ್ ಇಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಮಾಸ್ ಜಾತರ' ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಎದುರಾದ ಕೆಲವು ಘಟನೆಗಳನ್ನು ಅಜಯ್ ಘೋಷ್ ರಿವೀಲ್ ಮಾಡಿದ್ದರು. ಹೈದರಾಬಾದ್ ಸಮೀಪದ ಶಂಕರ್‌ಪಲ್ಲಿ ಸಮೀಪ ರವಿತೇಜ ಸುಮಾರು 26 ಎಕರೆ ವಿಶಾಲವಾದ ಫಾರ್ಮ್ ಹೌಸ್ (ತೋಟ)ವನ್ನು ಖರೀದಿ ಮಾಡಿದ್ದರಂತೆ. 'ಮಾಸ್ ಜಾತ' ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಈ ತೋಟದಲ್ಲಿಯೇ ಕೆಲವು ಸಿನಿಮಾ ಸೆಟ್‌ಗಳನ್ನು ನಿರ್ಮಿಸಿ ಶೂಟಿಂಗ್ ಮಾಡಿದ್ದರಂತೆ.

47
12 ಲಕ್ಷಕ್ಕೆ ಖರೀದಿಗೆ ಮಾಡಿದರೆ ಈಗ ಕೋಟಿ ಕೋಟಿ ಮೌಲ್ಯ!
Image Credit : Instagram

12 ಲಕ್ಷಕ್ಕೆ ಖರೀದಿಗೆ ಮಾಡಿದರೆ ಈಗ ಕೋಟಿ ಕೋಟಿ ಮೌಲ್ಯ!

ಇದೇ ಸಂದರ್ಭದಲ್ಲಿ ಅಜಯ್ ಘೋಷ್ ಆಸಕ್ತಿಕರ ವಿಚಾರ ಹೇಳಿದ್ದು, ರವಿತೇಜ 26 ಎಕರೆ ಭೂಮಿಯನ್ನು ವರ್ಷಗಳ ಹಿಂದೆ ಕೇವಲ 12 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರಂತೆ. ಆದರೆ ಹೈದರಾಬಾದ್ ನಗರ ಬೆಳೆಯುತ್ತಿದ್ದಂತೆ ಅದರ ಸುತ್ತಮುತ್ತ ಇರುವ ಭೂಮಿಯ ಬೆಲೆ ಕೂಡ ಡಬಲ್ ಆಗಿದ್ದು, ರಿಯಲ್ ಎಸ್ಟೇಟ್ ರಂಗಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿತ್ತಂತೆ. ಇದರಿಂದ ಲಕ್ಷಗಳಲ್ಲಿ ಖರೀದಿಸಿದ ಭೂಮಿ ಈಗ ಕೋಟಿ ಕೋಟಿ ಮೌಲ್ಯವನ್ನು ಹೊಂದಿದೆ ಎಂದು ಘೋಷ್ ಹೇಳಿದ್ದಾರೆ. ಈ ಹೇಳಿಕೆಯಲ್ಲಿ ಅಧಿಕೃತವಾಗಿ ಎಷ್ಟು ಕೋಟಿ ಮೌಲ್ಯವನ್ನು ಹೊಂದಿದೆ ಎಂದು ಹೇಳದಿದ್ದರು, ಶಂಕರ್‌ಪಲ್ಲಿ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಅನ್ನೋದು ಮಾತ್ರ ಖಚಿತವಾಗಿದೆ.

57
ಎಲ್ಲವೂ ಇಲ್ಲೇ ಇರುತ್ತೆ, ನಾವು ಹೋಗ್ತೀವಿ!
Image Credit : Instagram

ಎಲ್ಲವೂ ಇಲ್ಲೇ ಇರುತ್ತೆ, ನಾವು ಹೋಗ್ತೀವಿ!

ಕೋಟಿ ಕೋಟಿ ಆಸ್ತಿ ಹೊಂದಿದ್ದರು ರವಿತೇಜ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿಲ್ಲ ಎಂದು ಅಜಯ್ ಘೋಷ್ ಹೇಳಿದ್ದಾರೆ. ಶೂಟಿಂಗ್ ಸಮಯದಲ್ಲಿ ವ್ಯಕ್ತಿಯೊಬ್ಬರು ತೋಟದ ಮೌಲ್ಯದ ಕುರಿತು ಅಚ್ಚರಿ ವ್ಯಕ್ತಪಡಿಸಿ ಪ್ರಶ್ನಿಸಿದ ಸಂದರ್ಭದಲ್ಲಿ, ರವಿತೇಜ ಹೇಳಿದ ಮಾತು ಭಾರೀ ಕುತೂಹಲ ಮೂಡಿಸಿತ್ತಂತೆ. 'ಈ ತೋಟ, ಭೂಮಿ ಎಲ್ಲವೂ ಇಲ್ಲೇ ಇರುತ್ತದೆ. ಆದರೆ ನಾವು ಹೋಗ್ತೀವಿ. ಇವು ಈಗ ನಮ್ಮೊಂದಿಗೆ ಇದೆ ಅಂತ ಖುಷಿಪಡುತ್ತಾ ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗುವುದು ಮುಖ್ಯ. ನಾವು ಇಲ್ಲಿ ಬಂದಿರೋದು ಇರುವಷ್ಟು ದಿನ ಕೆಲಸ ಮಾಡಲು ಆದ್ದರಿಂದ ನಿಮ್ಮ ಕೆಲಸ ಮಾಡಿ' ಎಂದು ರವಿತೇಜ ಹೇಳಿದ್ದರಂತೆ. ಈ ಮಾತುಗಳು ವೈರಲ್ ಆಗುತ್ತಿಂತೆ, ಆಸ್ತಿ-ಹಣ-ಅಂತಸ್ತಿನ ಬಗ್ಗೆ ರವಿತೇಜ ಅವರಿಗೆ ಇರುವ ಭಾವನೆ ಬಗ್ಗೆ ಅಭಿಮಾನಿಗಳ ಸಂತಸ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

67
ಆಗಸ್ಟ್ 21ಕ್ಕೆ 'ಇರುಮುಡಿ' ಸಿನಿಮಾ ಬಿಡುಗಡೆ
Image Credit : Instagram

ಆಗಸ್ಟ್ 21ಕ್ಕೆ 'ಇರುಮುಡಿ' ಸಿನಿಮಾ ಬಿಡುಗಡೆ

ರವಿತೇಜ ಅವರು ನಟಿಸುರವ 'ಇರುಮುಡಿ' ಸಿನಿಮಾ ಆಗಸ್ಟ್ 21ಕ್ಕೆ ಬಿಡುಗಡೆಯಾಗಲಿದ್ದು, ಸಾಲು ಸಾಲು ಸಿನಿಮಾಗಳ ಸೋಲಿನ ಬಳಿಕ ಹಿಟ್ ಸಿನಿಮಾ ಸಿಗುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾ ಟ್ರೈಲರ್ ಹಾಗೂ ಹಾಡುಗಳಿಗೆ ಸಿನಿಮಾ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಈ ಸಿನಿಮಾವನ್ನು ಶಿವ ನಿರ್ವಾಣ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಸಾಯಿಕುಮಾರ್, ಪ್ರಿಯಾ ಭವಾನಿ ಶಂಕರ್, ಬೇಬಿ ನಕ್ಷತ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರವಿತೇಜ ಅವರ ವಿಭಿನ್ನ ಪಾತ್ರ, ಕೌಟುಂಬಿಕ ಭಕ್ತಿಪ್ರಧಾನ ಕಥೆಯನ್ನು ಸಿನಿಮಾ ಹೊಂದಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.

77
ಟಾಲಿವುಡ್ ನಟ ಶೋಭನ್ ಬಾಬು ಆದರ್ಶ
Image Credit : Instagram

ಟಾಲಿವುಡ್ ನಟ ಶೋಭನ್ ಬಾಬು ಆದರ್ಶ

ಟಾಲಿವುಡ್ ಸಿನಿಮಾ ಇಂಡಸ್ಟ್ರೀಯಲ್ಲಿ ಹೀರೋಗಳು ಹಿರಿಯ ನಟ ಶೋಭನ್ ಬಾಬು ಅವರನ್ನೇ ಆದರ್ಶವಾಗಿ ನೋಡುತ್ತಾರೆ. ಅದರಂತೆ ಭೂಮಿಯ ಮೇಲೆಯೇ ಹೂಡಿಕೆ ಮಾಡುತ್ತಿದ್ದಾರೆ. ಇದರೊಂದಿಗೆ ಕೋಟಿ ಕೋಟಿ ಆದಾಯ ಮಾಡುತ್ತಿದ್ದಾರೆ. ನಟ ರವಿತೇಜ ಕೂಡ 12 ಲಕ್ಷ ರೂಪಾಯಿ ಹೂಡಿಕೆ ಮಾಡಿ, 100 ಕೋಟಿಗೂ ಅಧಿಕ ಮೊತ್ತ ಲಾಭ ಗಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಟಾಲಿವುಡ್
ಹೈದರಾಬಾದ್

Latest Videos
Recommended Stories
Recommended image1
Toxic Countdown Day 07: ಟಾಕ್ಸಿಕ್ ಕೌಂಟ್‌ಡೌನ್ 07.. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದ ನಿರೀಕ್ಷೆಗಳೇನು? ಸ್ಪೆಷಲ್‌ ಸ್ಟೋರಿ ಇಲ್ಲಿದೆ ನೋಡಿ!
Recommended image2
ಕಿಯಾರಾ ಕೈ ಹಿಡಿದು ಪ್ಲಾಫ್ ಆದ ರಾಮ್ ಚರಣ್‌! ಈಗ ₹3,200 ಕೋಟಿ ಬಾಚಿದ ನಾಯಕಿಗೆ ಗಾಳ ಹಾಕಿದ ಮೆಗಾ ಪವರ್‌ಸ್ಟಾರ್!
Recommended image3
Amruthadhaare: ಜೈದೇವ್ ಮುಂದೆ ಟುಸ್ ಪಟಾಕಿ ಆಯ್ತು ಭೂಮಿಕಾ ಪ್ಲಾನ್; ಮಲ್ಲಿ ಕನ್ಫ್ಯೂಸ್!
Related Stories
Recommended image1
Ravi Teja: 'ಇರುಮುಡಿ ಕಟ್ಟು' ಎನ್ನುತ್ತಾ ಅಯ್ಯಪ್ಪ ಭಕ್ತರಿಗೆ ವಿಶೇಷ ಸರ್ಪ್ರೈಸ್ ಕೊಟ್ಟ ರವಿತೇಜ: ಏನದು?
Recommended image2
Tollywood Item Songs: ಸಿನಿಮಾವನ್ನೇ ಡಾಮಿನೇಟ್ ಮಾಡಿದ ಟಾಲಿವುಡ್‌ನ ಬೆಸ್ಟ್ ಐಟಂ ಸಾಂಗ್ಸ್ ಇವು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved