ಚಂಡೀಗಢ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಹರ್ಯಾಣದ ಸೋನಿಪತ್ ಜಿಲ್ಲೆಯಲ್ಲಿ ರೈತರೊಬ್ಬರ ಪುತ್ರಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದರು.
2023ರಲ್ಲಿ ರಾಹುಲ್ ಗಾಂಧಿಯವರು ಮೊದಲ ಬಾರಿಗೆ ಮದಿನಾ ಗ್ರಾಮದಲ್ಲಿ ರೈತ ಸಂಜಯ್ ಮಲಿಕ್ ಎನ್ನುವವರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಎದುರಿಸಿರುವ ಕಷ್ಟಗಳ ಬಗ್ಗೆ ಆಲಿಸಿದ್ದರು. ಇದೇ ಬಾಂಧವ್ಯದಿಂದ ಅವರಿಗ ಆ ರೈತನ ಮಗಳ ಮದುವೆಗೆ ಸಾಕ್ಷಿಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿದು, ರೈತನ ಕುಟುಂಬಸ್ಥರು, ಗ್ರಾಮಸ್ಥರ ಜತೆಗೆ ಕೆಲ ಕಾಲ ಮಾತುಕತೆ ನಡೆಸಿದರು.
10:55 PM (IST) Mar 11
ಹಾರ್ಮುಜ್ ಜಲಸಂಧಿಯಲ್ಲಿ, ಭಾರತದ ಕಾಂಡ್ಲಾ ಬಂದರಿಗೆ ಬರುತ್ತಿದ್ದ ಥೈಲ್ಯಾಂಡ್‌ನ 'ಮಯೂರಿ ನಾರಿ' ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಘಟನೆಯು ಸಮುದ್ರಯಾನ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಅಮಾಯಕ ಸಿಬ್ಬಂದಿಯ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದಿದೆ.
10:32 PM (IST) Mar 11
ಹಿಂದಿನ ತಲೆಮಾರಿನ ಹಲವು ನಟರ ಬಯೋಪಿಕ್‌ಗಳು ಈಗಾಗಲೇ ತೆರೆಕಂಡು ಸದ್ದು ಮಾಡಿವೆ. ಇದೀಗ ಅಕ್ಕಿನೇನಿ ನಾಗೇಶ್ವರ ರಾವ್ (ANR) ಅವರ ಬಯೋಪಿಕ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಯಾವಾಗ ಬರಲಿದೆ? ಯಾರು ನಟಿಸಲಿದ್ದಾರೆ? ಇದರಲ್ಲಿ ನಿಜವೆಷ್ಟು?
10:23 PM (IST) Mar 11
ಉತ್ತರ ಪ್ರದೇಶದ ಸಂಭಾಲ್ ಎಸ್‌ಪಿ ಕೃಷ್ಣ ಕುಮಾರ್ ಬಿಷ್ಣೋಯ್ ಮತ್ತು ಬರೇಲಿ ಎಸ್‌ಪಿ ಅನ್ಶಿಕಾ ವರ್ಮಾ ಅವರು ಮಾರ್ಚ್ 29 ರಂದು ವಿವಾಹವಾಗಲಿದ್ದಾರೆ. 2021ರಲ್ಲಿ ಗೋರಖ್‌ಪುರದಲ್ಲಿ ಭೇಟಿಯಾದ ಈ ಐಪಿಎಸ್ ಜೋಡಿಯ ವಿವಾಹವು ರಾಜಸ್ಥಾನದ ಜೋಧ್‌ಪುರದಲ್ಲಿ ಸಾಂಪ್ರದಾಯಿಕವಾಗಿ ನಡೆಯಲಿದೆ.
10:14 PM (IST) Mar 11
ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕಾದಲ್ಲಿ ಭಾರಿ ಮೊತ್ತದ ಹೂಡಿಕೆ ಮಾಡಿದೆ. ಟೆಕ್ಸಾಸ್‌ನಲ್ಲಿ $300 ಬಿಲಿಯನ್ ಮೌಲ್ಯದ ತೈಲ ಸಂಸ್ಕರಣಾಗಾರವನ್ನು ಸ್ಥಾಪಿಸುತ್ತಿದ್ದು,. ಕಳೆದ 50 ವರ್ಷಗಳಲ್ಲಿ ಅಮೆರಿಕಾದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಹೊಸ ಸಂಸ್ಕರಣಾಗಾರ ಇದಾಗಿದೆ.
08:47 PM (IST) Mar 11
ದೇವಕಿನಂದನ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ 'ಸನಾತನ ಪ್ರೀಮಿಯರ್ ಲೀಗ್' (SPL) ಎಂಬ ರಾಷ್ಟ್ರೀಯ ಟಿ10 ಟೂರ್ನಿ ಆರಂಭವಾಗಿದೆ. ಐಪಿಎಲ್ ಮಾದರಿಯ ವೇದಿಕೆ ನೀಡುವುದು ಮತ್ತು ಪ್ರತಿ ರನ್‌ಗೆ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ದೇಣಿಗೆ ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುವುದು ಇದರ ಮುಖ್ಯ ಉದ್ದೇಶ.
08:20 PM (IST) Mar 11
07:52 PM (IST) Mar 11
ಕರೀನಾ ಕಪೂರ್ ಪ್ರೀತಿಸಿ ಮದುವೆಯಾದ ಸೈಫ್ ಅಲಿ ಖಾನ್ ಲಕ್ಷಾಂತರ ಹಿಂದೂಗಳನ್ನು ಕೊಂದ ಐತಿಹಾಸಿಕ ವ್ಯಕ್ತಿ ತೈಮೂರ್ ಹೆಸರನ್ನು ತಮ್ಮ ಮಗನಿಗೆ ಇಟ್ಟು ವಿವಾದ ಸೃಷ್ಟಿಸಿದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ಹೆಸರಿನ ಹಿಂದಿನ ಕಾರಣದ ಬಗ್ಗೆ ಕರೀನಾ ನೀಡಿದ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.
07:49 PM (IST) Mar 11
07:37 PM (IST) Mar 11
ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರ ವೃತ್ತಿಜೀವನದಲ್ಲಿ ಒಂದು ಆಸೆ ಈಡೇರಲೇ ಇಲ್ಲ. ಆ ಆಸೆಯನ್ನು ಈಡೇರಿಸುವುದಾಗಿ ಒಬ್ಬ ಸ್ಟಾರ್ ನಟಿ ಮಾತು ಕೊಟ್ಟಿದ್ದರು. ಆದರೆ, ಆ ಮಾತನ್ನು ಉಳಿಸಿಕೊಳ್ಳುವ ಮೊದಲೇ ಅವರು ಇಹಲೋಕ ತ್ಯಜಿಸಿದರು. ಹಾಗಾದರೆ ಆ ನಟಿ ಯಾರು? ಆ ಕಥೆ ಏನು? ಇಲ್ಲಿದೆ ವಿವರ.
07:33 PM (IST) Mar 11
2026ರ ಟಿ20 ವಿಶ್ವಕಪ್ ಗೆದ್ದ ನಂತರ, ವಿಮಾನ ಟಿಕೆಟ್ ಸಿಗದ ಕಾರಣ ಆಲ್ ರೌಂಡರ್ ಶಿವಂ ದುಬೆ ಅಹಮದಾಬಾದ್‌ನಿಂದ ಮುಂಬೈಗೆ 3ನೇ ಎಸಿ ರೈಲಿನಲ್ಲಿ ಪ್ರಯಾಣಿಸಿದರು. ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಮಾಸ್ಕ್, ಕ್ಯಾಪ್ ಧರಿಸಿ ಗುರುತು ಮರೆಮಾಚಿದ್ದರು.
07:13 PM (IST) Mar 11
ಕೆಲವೊಂದು ಜೋಡಿಗಳು ಬೆಳ್ಳಿತೆರೆ ಮೇಲೆ ಸಖತ್ ಹಿಟ್ ಆಗುತ್ತವೆ. ಹೀರೋಗಳಿಂದ ಹೀರೋಯಿನ್‌ಗಳು, ಹೀರೋಯಿನ್‌ಗಳಿಂದ ಹೀರೋಗಳು ಸ್ಟಾರ್‌ಡಮ್ ಪಡೆಯುವುದು ಸಾಮಾನ್ಯ. ಇದೇ ರೀತಿ, ಸ್ಟಾರ್ ನಟಿ ತ್ರಿಷಾ ಜೊತೆ ನಟಿಸಿದ್ದರಿಂದಲೇ ಒಬ್ಬ ನಟ ತೆಲುಗಿನಲ್ಲಿ ಸ್ಟಾರ್ ಪಟ್ಟಕ್ಕೇರಿದ್ದು ನಿಮಗೆ ಗೊತ್ತಾ?
07:00 PM (IST) Mar 11
06:50 PM (IST) Mar 11
ಸೌತ್ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ತಮ್ಮ 'ಉಸ್ತಾದ್ ಭಗತ್ ಸಿಂಗ್' ಚಿತ್ರದಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಈ ಸಿನಿಮಾ ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸಿರುವ ನಾಯಕಿ ಯಾರು ಮತ್ತು ಅವರಿಬ್ಬರ ವಯಸ್ಸಿನ ಅಂತರ ಎಷ್ಟು ಎಂಬ ಚರ್ಚೆ ಜೋರಾಗಿದೆ.
06:36 PM (IST) Mar 11
ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ ಸೊಹೈಲ್ ಕಟೂರಿಯಾ ತಮ್ಮ ನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದು, ಹನ್ಸಿಕಾ ಯಾವುದೇ ಜೀವನಾಂಶವನ್ನು ಪಡೆದಿಲ್ಲ ಎಂಬುದು ವಿಶೇಷ. ಭಿನ್ನಾಭಿಪ್ರಾಯಗಳೇ ಡೈವೋರ್ಸ್‌ಗೆ ಕಾರಣ ಎನ್ನಲಾಗಿದೆ.
06:36 PM (IST) Mar 11
06:30 PM (IST) Mar 11
ಈ ಲೇಖನವು, 42 ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ ನರ್ಸ್ ಅರುಣಾ ಶಾನಬಾಗ್ ದುರಂತ ಕಥೆಯು ಭಾರತದಲ್ಲಿ ನಿಷ್ಕ್ರಿಯ ದಯಾಮರಣದ ಕಾನೂನು ಚರ್ಚೆಗೆ ಹೇಗೆ ಕಾರಣವಾಯಿತು?. ಇತ್ತೀಚೆಗೆ ಹರೀಶ್ ರಾಣಾ ಪ್ರಕರಣದಲ್ಲಿ ಸುಪ್ರೀಂ ನೀಡಿದ ತೀರ್ಪು, 'ಘನತೆಯಿಂದ ಸಾಯುವ ಹಕ್ಕಿನ' ಕುರಿತ ಈ ಚರ್ಚೆ ಮುನ್ನೆಲೆಗೆ ತಂದಿದೆ.
06:08 PM (IST) Mar 11
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಸೃಷ್ಟಿಯಾಗಿದ್ದು, ಭಾರತೀಯ ರೈಲ್ವೆಯ ಅಡುಗೆ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ, ಐಆರ್‌ಸಿಟಿಸಿ ತನ್ನ ಅಡುಗೆ ಗುತ್ತಿಗೆದಾರರಿಗೆ ಪರ್ಯಾಯ ವಿಧಾನಗಳನ್ನು ಬಳಸಲು ಸೂಚಿಸಿದೆ.
06:06 PM (IST) Mar 11
ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ, ಉದ್ಯಮಿ ಸೊಹೇಲ್ ಖತೂರಿಯಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದು, ನ್ಯಾಯಾಲಯ ಇದಕ್ಕೆ ಅನುಮತಿ ನೀಡಿದೆ.
05:45 PM (IST) Mar 11
ನಟಿ ಅನುಪಮಾ ಪರಮೇಶ್ವರನ್ ನಟನೆಯ 'ಲಾಕ್‌ಡೌನ್' ಸಿನಿಮಾ ಥಿಯೇಟರ್‌ಗೆ ಬಂದ ಎರಡು ತಿಂಗಳ ನಂತರ ಈಗ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ಸ್ಟ್ರೀಮ್ ಆಗುತ್ತಿದೆ.
05:36 PM (IST) Mar 11
ಫ್ಲೋರಿಡಾಗೆ ತೆರಳುತ್ತಿದ್ದ ಸೌತ್‌ವೆಸ್ಟ್ ವಿಮಾನದಲ್ಲಿ, ಮುಸ್ಲಿಂ ಪ್ರಯಾಣಿಕರೊಬ್ಬರ ಫೋನ್ ರಿಂಗ್ ಆಗಿದ್ದರಿಂದ ಆತಂಕ ಸೃಷ್ಟಿಯಾಯಿತು. ಈ ಘಟನೆಯಿಂದಾಗಿ ವಿಮಾನವನ್ನು ಅಟ್ಲಾಂಟಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಭದ್ರತಾ ತಪಾಸಣೆಯ ನಂತರ ಸತ್ಯಾಂಶ ಬಯಲಾಯಿತು.
05:27 PM (IST) Mar 11
ಪತ್ನಿ ಆರತಿ ಜೊತೆಗಿನ ವಿಚ್ಛೇದನದ ನಂತರ ನಟ ರವಿ ಮೋಹನ್ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. 'ಸಮಾಜದಲ್ಲಿ ಗಂಡಸರೇ ನಿಜವಾದ ಸಂತ್ರಸ್ತರು, ನನ್ನ ಮನಸ್ಸಿನ ಶುದ್ಧತೆ ಒಂದು ದಿನ ಎಲ್ಲರಿಗೂ ಅರ್ಥವಾಗುತ್ತೆ' ಎಂದು ಅವರು ಹೇಳಿದ್ದಾರೆ.
05:07 PM (IST) Mar 11
ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ 'ಹಾರ್ಮುಜ್ ಜಲಸಂಧಿ' ಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದರೂ, ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಹೊತ್ತ 'ಶೆನ್‌ಲಾಂಗ್' ಟ್ಯಾಂಕರ್ ಯಶಸ್ವಿಯಾಗಿ ಮುಂಬೈ ತಲುಪಿದೆ. ಇರಾನ್ ಎಚ್ಚರಿಕೆಯ ನಡುವೆಯೂ, ಈ ನೌಕೆಯು ತನ್ನ ಗುರುತಿನ ವ್ಯವಸ್ಥೆಯನ್ನು ಆಫ್ ಮಾಡಿ ರಹಸ್ಯವಾಗಿ ಈ ಮಾರ್ಗವನ್ನು ದಾಟಿದೆ.
05:02 PM (IST) Mar 11
ನಟ ವಿಜಯ್ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ತ್ರಿಷಾ ಜೊತೆ ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ನಟಿ ಖುಷ್ಬೂ ಪ್ರತಿಕ್ರಿಯಿಸಿದ್ದು, ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ.
04:47 PM (IST) Mar 11
ಧುರಂಧರ್ 2 ಟಿಕೆಟ್ ದರ ಕೂಡ ಏರಿಕೆಯಾಗಿದ್ದು, ಮುಂಬೈಯಲ್ಲಿ ಅತ್ಯಧಿಕ 3100 ರು. ಟಿಕೆಟ್ ದರ ನಿಗದಿಯಾಗಿದೆ. ಬೆಂಗಳೂರಿನಲ್ಲಿ 2900 ರು.ವರೆಗೂ ಟಿಕೆಟ್ ರೇಟ್ ಏರಿಕೆಯಾಗಿದೆ. ದೇಶದ ವಿವಿಧೆಡೆ ಟಿಕೆಟ್ ದರ 2000 ರು. ದಾಟಿದೆ.
04:41 PM (IST) Mar 11
ರಸ್ತೆಯಲ್ಲಿ ಸಾಗುತ್ತಿದ್ದ ಲ್ಯಾಂಬೋರ್ಘಿನಿ ಕಾರನ್ನು ನೋಡಿ ಸ್ಕೂಟಿಯಲ್ಲಿದ್ದ ಬಾಲಕನೊಬ್ಬ ಆಸೆಪಟ್ಟಾಗ, ಉದ್ಯಮಿಯೊಬ್ಬರು ಅವನ ಆಸೆ ಪೂರೈಸಿದ್ದಾರೆ.ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
04:31 PM (IST) Mar 11
ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರಿ ವೈರಲ್ ಆಗಿದ್ದ ಮೋನಿ ಭೋಂಸ್ಲೆ, ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆಗಿರಲು ಕುಟುಂಬದ ವಿರೋಧದ ನಡುವೆ ಕೇರಳದಲ್ಲಿ ಪೊಲೀಸ್ ರಕ್ಷಣೆ ಕೋರಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯ ನಂತರ ಮೋನಿ ತನ್ನ ಪ್ರಿಯಕರನೊಂದಿಗೆ ತೆರಳಲು ಅನುಮತಿ ಪಡೆದರು.
04:11 PM (IST) Mar 11
'ಕಿಶನ್ ಕನ್ಹಯ್ಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಶಿಲ್ಪಾ ಶಿರೋಡ್ಕರ್, ತಮ್ಮ ಚೊಚ್ಚಲ ಚಿತ್ರದಲ್ಲೇ ವಿವಾದಕ್ಕೆ ಸಿಲುಕಿದ್ದರು. ಜಲಪಾತದ ಕೆಳಗಿನ ಪಾರದರ್ಶಕ ಸೀರೆಯ ದೃಶ್ಯದಿಂದಾಗಿ ಮಂದಾಕಿನಿಗೆ ಹೋಲಿಸಲ್ಪಟ್ಟ ಅವರು, ಆ ದೃಶ್ಯದ ಬಗ್ಗೆ ಇಂದಿಗೂ ಪಶ್ಚಾತ್ತಾಪ ಪಡುತ್ತಾರೆ.
03:19 PM (IST) Mar 11
02:55 PM (IST) Mar 11
ಜ್ಯೋತಿಷಿ ಆಶಿಮಾ ಅವರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಜನ್ಮಸಂಖ್ಯೆಯ ಆಧಾರದ ಮೇಲೆ ಅವರ ದಾಂಪತ್ಯ ಜೀವನದ ಭವಿಷ್ಯ ನುಡಿದಿದ್ದಾರೆ. ಮಂಗಳ-ಬುಧರ ಈ ಜೋಡಿಯು ಆಕರ್ಷಕವಾಗಿದ್ದು ಅವರ ಜೀವನ ಹೇಗಿರಲಿದೆ ಎನ್ನುವುದು ಇಲ್ಲಿದೆ..
02:35 PM (IST) Mar 11
02:15 PM (IST) Mar 11
ಅಮೆರಿಕಾ-ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಕಚ್ಚಾ ತೈಲ ಮತ್ತು ಜೆಟ್ ಇಂಧನದ ಬೆಲೆಗಳು ಗಗನಕ್ಕೇರಿವೆ. ಇದರ ನೇರ ಪರಿಣಾಮವಾಗಿ, ಭಾರತೀಯ ವಿಮಾನಯಾನ ಸಂಸ್ಥೆಗಳು ಸೇರಿದಂತೆ ವಿಶ್ವಾದ್ಯಂತದ ಏರ್‌ಲೈನ್‌ಗಳು ಅಂತರರಾಷ್ಟ್ರೀಯ ಪ್ರಯಾಣ ದರದಲ್ಲಿ ಭಾರಿ ಏರಿಕೆ ಮಾಡಿವೆ.
01:10 PM (IST) Mar 11
12:41 PM (IST) Mar 11
13 ವರ್ಷಗಳಿಂದ ವೆಂಟಿಲೇಟರ್ ಸಹಾಯದಿಂದ ಕೃತಕ ಜೀವಾಧಾರಕ ವ್ಯವಸ್ಥೆಯಲ್ಲಿದ್ದ ಹರೀಶ್ ರಾಣಾ ಅವರಿಗೆ ದಯಾಮರಣ ನೀಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. 2018ರಲ್ಲಿ ದಯಾಮರಣ ಕಾನೂನುಬದ್ಧಗೊಂಡ ನಂತರ ದೇಶದಲ್ಲಿ ಅನುಮತಿ ಪಡೆದ ಮೊದಲ ಪ್ರಕರಣ ಇದಾಗಿದೆ.
12:29 PM (IST) Mar 11
11:48 AM (IST) Mar 11
11:33 AM (IST) Mar 11
ತಾಯಿಗೆ ಯಕೃತ್ತು ದಾನ ಮಾಡಿದ ಮಗ ಶಸ್ತ್ರಚಿಕಿತ್ಸೆಯ ನಂತರ ಸೋಂಕಿನಿಂದ ಮೃತಪಟ್ಟಿದ್ದಾನೆ. ಇತ್ತ ತಾಯಿ ಚೇತರಿಸಿಕೊಂಡಿದ್ದು, ಮಗನ ಸಾವು ತಿಳಿದು ಆಘಾತಕ್ಕೀಡಾಗಿದ್ದಾರೆ. ಇದೇ ರೀತಿಯ ಘಟನೆಯೊಂದು ಮಂಗಳೂರಿನಲ್ಲಿ ನಡೆದಿತ್ತು ಉಪನ್ಯಾಸಕಿಯೊಬ್ಬರು ಯಕೃತ್ತು ದಾನ ಮಾಡಿ ಪ್ರಾಣ ಕಳೆದುಕೊಂಡಿದ್ದರು..
10:56 AM (IST) Mar 11
ಟಿ20 ವಿಶ್ವಕಪ್ ಟ್ರೋಫಿಯನ್ನು ಸೂರ್ಯಕುಮಾರ್ ಯಾದವ್ ಮತ್ತು ಜಯ್ ಶಾ ಅವರು ಅಹಮದಾಬಾದ್‌ನ ದೇವಸ್ಥಾನಕ್ಕೆ ಕೊಂಡೊಯ್ದಿದ್ದನ್ನು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ತೀವ್ರವಾಗಿ ಖಂಡಿಸಿದ್ದಾರೆ. ಈ ಗೆಲುವು 140 ಕೋಟಿ ಭಾರತೀಯರಿಗೆ ಸೇರಿದ್ದು, ಇದನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದಿದ್ದಾರೆ.
08:52 AM (IST) Mar 11