ತಮ್ಮ 'ಐದು ಸಾವಿರ ಪ್ರೀತಿ' ಹೇಳಿಕೆಗೆ ಸಂಬಂಧಿಸಿದಂತೆ ಸಚಿವ ಗಣೇಶ್ ಕುಮಾರ್ ಪತ್ನಿ ಬಿಂದು ಮೆನನ್ ಅವರ ಕ್ಷಮೆ ಯಾಚಿಸಿದ್ದಾರೆ. ಇದು ನಮ್ಮ ವೈಯಕ್ತಿಕ ವಿಷಯವಾಗಿದ್ದು, ಸಮಸ್ಯೆ ಬಗೆಹರಿದಿದೆ ಎಂದು ಬಿಂದು ಹೇಳಿದ್ದಾರೆ, ಆದರೆ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ ಮುಂದುವರೆಸಿದೆ.

ತಿರುವನಂತಪುರಂ: ನನಗೆ ಐದು ಸಾವಿರ ಪ್ರೀತಿ ಇತ್ತು ಅಂತ ಗಣೇಶ್ ಹೇಳಿದ್ದು ನನಗೆ ಅತೀ ಹೆಚ್ಚು ನೋವು ಕೊಟ್ಟಿತ್ತು ಎಂದು ಅವರ ಪತ್ನಿ ಬಿಂದು ಮೆನನ್ ಹೇಳಿದ್ದಾರೆ. ಆದರೆ, ಗಣೇಶ್ ಮೊದಲು ನನ್ನ ಸಹೋದರಿಗೆ ಕರೆ ಮಾಡಿದ್ದರು. ನಂತರ ನನಗೆ ನೇರವಾಗಿ ನನ್ನೊಂದಿಗೆ ಮಾತನಾಡಿ ಕ್ಷಮೆ ಕೇಳಿದರು. ಸದ್ಯ ಈ ಸಮಸ್ಯೆ ಬಗೆಹರಿದಿದೆ ಎಂದು ಬಿಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ನಾನು ಗಣೇಶ್ ಅವರ ಫೋನ್ ಕಾಲ್‌ಗಾಗಿಯೇ ಕಾಯುತ್ತಿದ್ದೆ. ನನ್ನೊಂದಿಗೆ ತುಂಬಾ ಭಾವುಕರಾಗಿ ಮಾತನಾಡಿದರು. ಕಳೆದ ಕೆಲವು ದಿನಗಳಲ್ಲಿ ಈ ಘಟನೆ ಬಗ್ಗೆ ನಾನು ಕೂಡ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ ಎಂದು ಬಿಂದು ಒಪ್ಪಿಕೊಂಡಿದ್ದಾರೆ. ಈ ವಿವಾದವನ್ನು ಇನ್ನು ಮುಂದೆ ಬೆಳೆಸಲು ನನಗೆ ಇಷ್ಟವಿಲ್ಲ ಎಂದು ಹೇಳಿರುವ ಬಿಂದು, ನಾನು ಅವರೊಂದಿಗೆ ಬದುಕಬೇಕಾದವಳು. ಸಚಿವರು ಸಾರ್ವಜನಿಕರ ಕ್ಷಮೆ ಕೇಳುವ ಅಗತ್ಯವಿಲ್ಲ. ಇದು ನಮ್ಮ ವೈಯಕ್ತಿಕ ವಿಷಯ ಎಂದು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕವಾಗಿ ಕ್ಷಮೆ ಕೇಳುವ ಅಗತ್ಯವಿಲ್ಲ

ಕೇರಳದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಿದ್ದ ಗಣೇಶ್‌ಕುಮಾರ್ ವಿವಾದ ಈಗ ಸುಖಾಂತ್ಯ ಕಂಡಿದೆ. ಪತ್ನಿ ಬಿಂದು ಮೆನನ್ ಅವರನ್ನೇ ಸಂಪರ್ಕಿಸಿ ಸಚಿವರು ಕ್ಷಮೆಯಾಚಿಸಿದ್ದಾರೆ. ಪತ್ನಿಯೊಂದಿಗಿನ ಸಮಸ್ಯೆ ಬಹಿರಂಗವಾದ ನಂತರ ಗಣೇಶ್‌ಕುಮಾರ್ ತೀವ್ರ ಒತ್ತಡಕ್ಕೆ ಸಿಲುಕಿದ್ದರು. ಮಿತ್ರಪಕ್ಷಗಳು ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದವು. ಈ ನಡುವೆಯೇ ಈಗ ಸಂಧಾನ ಯಶಸ್ವಿಯಾಗಿದೆ. ಈ ವಿವಾದವನ್ನು ಇಲ್ಲಿಗೆ ಮುಗಿಸಬೇಕು ಎಂದು ಗಣೇಶ್ ಕುಮಾರ್ ಅವರ ಪತ್ನಿ ಬಿಂದು ಮೆನನ್ ಮನವಿ ಮಾಡಿಕೊಂಡಿದ್ದಾರೆ.

ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

ಸಚಿವ ಕೆ.ಬಿ. ಗಣೇಶ್ ಕುಮಾರ್ ಮತ್ತು ಅವರ ಪತ್ನಿ ನಡುವಿನ ಸಮಸ್ಯೆ ಕೇವಲ ಕ್ಷಮೆಯಾಚನೆಯಿಂದ ಬಗೆಹರಿಯುವುದಿಲ್ಲ. ಗಣೇಶ್ ಕುಮಾರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ರಾಜೀನಾಮೆಗೆ ಒತ್ತಾಯಿಸಿ ಕೇರಳ ಯುವ ಕಾಂಗ್ರೆಸ್ ತಿರುವನಂಪುರದಲ್ಲಿ ಪ್ರತಿಭಟನೆ ನಡೆಸಲು ಪ್ಲಾನ್ ಮಾಡಿಕೊಂಡಿದೆ. ಸಚಿವರ ಪತ್ನಿ ದೂರು ನೀಡಿದ ನಂತರವೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯುತ್ನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ: ಅಯ್ಯೋ ವಿಧಿಯೇ ಅಮ್ಮನಿಗೆ ಜೀವ ನೀಡಿ ಉಸಿರು ಚೆಲ್ಲಿದ ಮಗ ಲಿವರ್ ದಾನದ ಬಳಿಕ ಮಗ ಸಾವು ಬದುಕುಳಿದ ತಾಯಿ

ಗಣೇಶ್ ಕುಮಾರ್ ವಿವಾದದಲ್ಲಿ ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್ ಮತ್ತು ಮಾಜಿ ಡಿಜಿಪಿ ಆರ್. ಶ್ರೀಲೇಖಾ ವಿರುದ್ಧ ಯುವ ಕಾಂಗ್ರೆಸ್ ಡಿಜಿಪಿಗೆ ದೂರು ನೀಡಿದೆ. ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಿನು ಚುಲ್ಲಿ ಈ ದೂರು ದಾಖಲಿಸಿದ್ದಾರೆ. ಗಂಭೀರ ಅಪರಾಧ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಲಾಗಿದೆ ಎಂದ ಕಾಂಗ್ರೆಸ್ ದೂರಿನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಪೋಷಕರನ್ನು ಕರೆಸಿ ಬೈದಿದ್ದಕ್ಕೆ ನೇಣು ಬಿಗಿದುಕೊಂಡ ಅರವಿಂದ್; ವಿದ್ಯಾರ್ಥಿಗಳ ಪ್ರತಿಭಟನೆ