ಇದು ವಿಶ್ವದ ಅತೀ ಹಿರಿಯ ಹಕ್ಕಿ ವಯಸ್ಸು ಎಷ್ಟು ಗೊತ್ತಾ..?
ವಿಶ್ವದ ಅತೀ ಹಿರಿಯ ಹಕ್ಕಿಯೊಂದು ಅಮೆರಿಕಾದಲ್ಲಿ ಪತ್ತೆಯಾಗಿದೆ. ಅಮೆರಿಕಾದ ಮೀನು ಹಾಗೂ ವನ್ಯಜೀವಿ ಸೇವಾ ಸಂಸ್ಥೆ ((USFWS) ಗುರುವಾರ ಈ ವಿಚಾರವನ್ನು ಘೋಷಣೆ ಮಾಡಿದೆ.

ವಿಶ್ವದ ಅತೀ ಹಿರಿಯ ಹಕ್ಕಿಯೊಂದು ಅಮೆರಿಕಾದಲ್ಲಿ ಪತ್ತೆಯಾಗಿದೆ. ಅಮೆರಿಕಾದ ಮೀನು ಹಾಗೂ ವನ್ಯಜೀವಿ ಸೇವಾ ಸಂಸ್ಥೆ ((USFWS) ಗುರುವಾರ ಈ ವಿಚಾರವನ್ನು ಘೋಷಣೆ ಮಾಡಿದೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅಮೆರಿಕಾ ವನ್ಯಜೀವಿ ಸೇವಾ ಸಂಸ್ಥೆಯ ಅಧಿಕಾರಿಗಳು ಹಕ್ಕಿಯ ಫೋಟೋದೊಂದಿಗೆ ಈ ವಿಚಾರ ಬಹಿರಂಗಪಡಿಸಿದೆ. ವಿಸ್ಡಮ್ ಎಂದು ಕರೆಯಲ್ಪಡುವ ಈ ಹಕ್ಕಿಗೆ ಕನಿಷ್ಠ 71 ವರ್ಷ ವಯಸ್ಸಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿಕೊಂಡಿದ್ದಾರೆ. Laysan albatross ಅಥವಾ ಕಡಲುಕೋಳಿ ಅಥವಾ ಕಡಲು ಹಕ್ಕಿ ಎಂದು ಕರೆಯಲ್ಪಡುವ ವಿಸ್ಡಮ್ ಉತ್ತರ ಫೆಸಿಫಿಕ್‌ನ ಅದರ ಗೂಡಿರುವ ಜಾಗದಲ್ಲಿ ದಶಕಗಳ ಹಿಂದೆ ಕಾಣಿಸಿಕೊಂಡ ಜಾಗದಲ್ಲೇ ಮತ್ತೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಪಂಚದ ಅತ್ಯಂತ ಹಳೆಯ ಕಾಡು ಪಕ್ಷಿಯಾದ (Wildbird) ಈ ವಿಸ್ಡಮ್ ಇತ್ತೀಚೆಗೆ ಮಿಡ್‌ವೇ ಅಟಾಲ್‌ಗೆ ಮರಳಿದೆ! ಇದೊಂದು ಪ್ರೀತಿಯ ಲೇಸನ್ ಕಡಲುಕೋಳಿ (Laysan albatross) ಅಥವಾ ಮೋಲಿ, ಇದಕ್ಕೆ ಕನಿಷ್ಠ 71 ವರ್ಷ ವಯಸ್ಸಾಗಿದೆ. 1956 ರಲ್ಲಿ ವಿಸ್ಡಮ್ ಮೊಟ್ಟೆಯಿಟ್ಟ ನಂತರ ಜೀವಶಾಸ್ತ್ರಜ್ಞರು ಮೊದಲ ಬಾರಿಗೆ ಈ ವಿಸ್ಡಮ್ ಹಕ್ಕಿಯನ್ನು ಗುರುತಿಸಿದ್ದರು. ಮತ್ತು ಆ ಬಗ್ಗೆ ವರದಿ ಮಾಡಿದ್ದರು. ಸಾಮಾನ್ಯವಾಗಿ ಈ ದೊಡ್ಡ ಹಕ್ಕಿ ತನಗೆ ಐದು ವರ್ಷವಾಗುವವರೆಗೂ ಸಂತಾನೋತ್ಪತಿ ಶುರು ಮಾಡುವುದಿಲ್ಲ ಎಂದು ನಂಬಿರುವುದರಿಂದ ಹೀಗಾಗಿ ಇದರ ವಯಸ್ಸನ್ನು ಕನಿಷ್ಠ 71 ವರ್ಷ ಎಂದು ಅಂದಾಜಿಸಲಾಗಿದೆ ಎಂದು ಟ್ವಿಟ್ಟರ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
1956 ರಲ್ಲಿ ವಿಸ್ಡಮ್ (Wisdom) ಮೊದಲು ಮೊಟ್ಟೆಯನ್ನು ಇಟ್ಟ ನಂತರ ಜೀವಶಾಸ್ತ್ರಜ್ಞರು (biologists) ಆ ಪಕ್ಷಿಯನ್ನು ಗುರುತಿಸಿದರು ಎಂದು ಸಂಸ್ಥೆ ಹೇಳಿದ್ದು, ತನ್ನ ಜೀವಿತಾವಧಿಯಲ್ಲಿ ಈ ಹಕ್ಕಿ 50 ರಿಂದ 60 ಮೊಟ್ಟೆಗಳನ್ನು ಇಟ್ಟಿದ್ದು, ಸುಮಾರು 30 ಮರಿಗಳನ್ನು ಬೆಳೆಸಿದೆ ಕಳೆದ ವರ್ಷ ಈ ವಿಸ್ಟಮ್ ಹಕ್ಕಿಯ ಸಂತತಿಯಾಗಿರುವ ಹಕ್ಕಿಯೊಂದು ತನ್ನ ಮರಿಯನ್ನು ಬೆಳೆಸಲು ಶುರು ಮಾಡಿರುವುದರಿಂದ ಈ ವಿಸ್ಡಮ್ ಹಕ್ಕಿ ಅಜ್ಜಿಯಾಗಿದೆ (grandmother) ಎಂಬುದನ್ನು ಜೀವ ವಿಜ್ಞಾನಿಗಳು ಗುರುತಿಸಿದ್ದಾರೆ ಎಂದು ಹಫ್ಪೋಸ್ಟ್ ವರದಿ ಮಾಡಿದೆ. ಅಂದಹಾಗೆ ಈ ವಿಸ್ಡಮ್‌ನ ದೀರ್ಘಕಾಲದ ಸಂಗಾತಿ ಅಕೆಕಮೈ ಈ ವರ್ಷ ಎಲ್ಲೂ ಕಾಣಿಸಿಕೊಂಡಿಲ್ಲ. 2021ರಲ್ಲಿ ಈ ಕಡಲುಕೋಳಿ ಜೋಡಿ ಕೊನೆಯದಾಗಿ ಮರಿಗಳನ್ನು ಹೊಂದಿದ್ದವು ಎಂದು USFWS ಹೇಳಿದೆ. ವಿಶ್ವದ ಅತೀ ಹಿರಿಯ ಹಕ್ಕಿ ಇದು ಎಂದು ತಿಳಿದ ಬಳಿಕ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಹಕ್ಕಿ ನನ್ನ ಹೆತ್ತವರಿಗಿಂತ ಹಿರಿಯದು ಎಂದು ಪ್ರತಿಕ್ರಿಯಿಸಿದ್ದಾರೆ.
ಕಟ್ಟಡದ ತುದಿಯಲ್ಲಿದ್ದ ಜೇನುಗೂಡಿನ ಮೇಲೆ ಹಕ್ಕಿಯ ದಾಳಿ: ವೈರಲ್ ವಿಡಿಯೋ
ಹನಿಮೂನ್ ಹೊರಟ ಏಡಿಗಳು... ಮಹಾ ವಲಸೆಗೆ ರಸ್ತೆಯೇ ಸ್ತಬ್ಧ