ಹಕ್ಕಿಗಳು ಸಂತಾನೋತ್ಪತ್ತಿಗಾಗಿ ಹಾಗೂ ಕೆಲವೊಮ್ಮೆ ಹವಾಮಾನ ಬದಲಾವಣೆಯಿಂದ ರಕ್ಷಿಸಿಕೊಳ್ಳಲು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವುದನ್ನು ನಾವು ನೋಡಿದ್ದೇವೆ. ಆದರೆ ಏಡಿಗಳು ಸಾಗರೋಪಾದಿಯಲ್ಲಿ ವಲಸೆ ಹೋಗುವುದನ್ನು ಎಂದಾದರೂ ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿದೆ ನೋಡಿ.
ಹಕ್ಕಿಗಳು ಸಂತಾನೋತ್ಪತ್ತಿಗಾಗಿ ಹಾಗೂ ಕೆಲವೊಮ್ಮೆ ಹವಾಮಾನ ಬದಲಾವಣೆಯಿಂದ ರಕ್ಷಿಸಿಕೊಳ್ಳಲು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವುದನ್ನು ನಾವು ನೋಡಿದ್ದೇವೆ. ಆದರೆ ಏಡಿಗಳು ಸಾಗರೋಪಾದಿಯಲ್ಲಿ ವಲಸೆ ಹೋಗುವುದನ್ನು ಎಂದಾದರೂ ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿದೆ ನೋಡಿ. ಏಡಿಗಳ ಮಹಾವಲಸೆಯಿಂದಾಗಿ ಇಡೀ ರಸ್ತೆಗಳೇ ಸಾಗರದಂತೆ ತುಂಬಿ ಹೋಗಿವೆ. ಎಲ್ಲಿ ನೋಡಿದರಲ್ಲಿ ಬರೀ ಏಡಿಗಳೇ ತೆವಳುತ್ತಾ ಸಾಗುವುದು ಕಾಣುತ್ತಿದೆ. ಇಂತಹ ದೃಶ್ಯ ಕಂಡು ಬಂದಿದ್ದು, ಆಸ್ಟ್ರೇಲಿಯಾದ ಕ್ರಿಸ್‌ಮಸ್ ಐಸ್‌ಲ್ಯಾಂಡ್‌ನಲ್ಲಿ ಇಲ್ಲಿಗೆ ಅಂದಾಜು 65 ಸಾವಿರಕ್ಕೂ ಹೆಚ್ಚು ಏಡಿಗಳು ವಾರ್ಷಿಕ ಮಹಾವಲಸೆಯ ಭಾಗವಾಗಿ ವಲಸೆ ಹೋಗುತ್ತಿವೆ.
ಸಂತಾನೋತ್ಪತ್ತಿಯ ಸಲುವಾಗಿ ಈ ಕೆಂಪು ಏಡಿಗಳು ಮಳೆ ಕಾಡುಗಳಿಂದ ದ್ವೀಪದತ್ತ ಪ್ರತಿವರ್ಷವೂ ವಲಸೆ (migration) ಹೋಗುತ್ತವೆ. ಅಲ್ಲಿ ಮೊಟ್ಟೆಗಳನ್ನು ಇಟ್ಟು ಮರಳಿ ಬರುತ್ತವೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ(Australia) ಮಹಾವಲಸೆ ಆರಂಭವಾಗಿದ್ದು, ಇಡೀ ರಸ್ತೆಗಳು, ಸೇತುವೆಗಳು, ಸಣ್ಣಪುಟ್ಟ ಹಾದಿಗಳು ಎಲ್ಲೆಂದರಲ್ಲಿ ಏಡಿಗಳೇ ಕಾಣಿಸುತ್ತಿವೆ. ಈ ವಿಡಿಯೋವನ್ನು ಅಲ್ಲಿನ Now This News ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಏಡಿಗಳು ತೆವಳುತ್ತಾ ಸಾಗುತ್ತಿದ್ದರೆ, ಅವುಗಳ ಸುರಕ್ಷಿತ ವಲಸೆಗೆ ಸಹಾಯವಾಗುವಂತೆ ಅನೇಕ ರಸ್ತೆಗಳನ್ನು ಬಂದ್ ಮಾಡಿ ಸುಗಮವಾಗಿ ಸಾಗಿ ಹೋಗುವಂತೆ ಅನುವು ಮಾಡಿಕೊಡಲಾಗಿದೆ. ಏಡಿಗಳ ಈ ಮಹಾ ವಲಸೆಯಿಂದ ರಸ್ತೆಗಳು ಕೆಂಪು ಕೆಂಪಾಗಿ ಕಾಣಿಸುತ್ತಿವೆ.
ಕ್ರಿಸ್‌ಮಸ್ ಐಸ್‌ಲ್ಯಾಂಡ್ (Christmas Island) ಹಿಂದೂ ಮಹಾಸಾಗರದಲ್ಲಿರುವ ಸಣ್ಣದಾದ ಒಂದು ದ್ವೀಪವಾಗಿದೆ. 52 ಸ್ಕ್ವೇರ್ ಮೈಲುಗಳಷ್ಟು ವಿಸ್ತಾರವಾದ ಪ್ರದೇಶವನ್ನು ಹೊಂದಿರುವ ದ್ವೀಪವಾಗಿದ್ದು, ಆಸ್ಟ್ರೇಲಿಯಾದ ಪ್ರಮುಖ ಭೂಪ್ರದೇಶದಿಂದ 1600 ಮೈಲು ದೂರದಲ್ಲಿದೆ. ಪ್ರತಿವರ್ಷವೂ ಏಡಿಗಳ ವಲಸೆಯ ಕಾರಣಕ್ಕೆ ಇದು ಬಹಳ ಖ್ಯಾತಿ ಪಡೆದಿದೆ. ಮೊಟ್ಟೆಗಳನ್ನು ಇಡುವ ಸಲುವಾಗಿಯೇ ಏಡಿಗಳು ಇಷ್ಟು ದೂರ ವಲಸೆ ಹೋಗುತ್ತವೆ. ಪ್ರತಿ ಹೆಣ್ಣು ಏಡಿಯೂ 100,000 ಮೊಟ್ಟೆಗಳನ್ನು ಇಡುತ್ತದೆ. ಆದರೆ ಬಹುತೇಕ ಮೊಟ್ಟೆಗಳನ್ನು ಇತರ ಪ್ರಾಣಿಗಳು ತಿನ್ನುತ್ತವೆ. ಈ ವರ್ಷ ಅಂದಾಜು 65 ಮಿಲಿಯನ್ ಏಡಿಗಳು ವಲಸೆ ಹೋಗಿವೆ. ಈ ಕಾರಣಕ್ಕೆ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಕೆಎಫ್‌ಸಿ ರೆಸ್ಟೋರೆಂಟ್ ಕೆಳಗೆ ಡ್ರಗ್ ಸುರಂಗ!
ಈ ವಿಡಿಯೋ ನೋಡಿ ಸೋಶಿಯಲ್ ಮೀಡಿಯಾ ಬಳಕೆದಾರರು ಬೆರಗಾಗಿದ್ದು, ಅನೇಕರು ಈ ದೃಶ್ಯ ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪ್ರಕೃತಿಯ ಈ ವೈವಿಧ್ಯತೆ ವೈಚಿತ್ರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆ ಪ್ರದೇಶಕ್ಕೆ ನನಗೂ ಹೋಗಬೇಕೆನಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅವುಗಳನ್ನು ಹಿಡಿಯುವುದು ಅಪರಾಧವೇ ಎಂದು ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ ಮಾನ್ಸೂನ್‌ನ (monsoon) ಮೊದಲ ಮಳೆ ಬಿದ್ದ (first rainfall) ನಂತರ ವಲಸೆ ಹೊರಡುತ್ತವೆ. ಆದರೆ ಆಸ್ಟ್ರೇಲಿಯಾ (Australi) ದಕ್ಷಿಣ ಗೋಳಾರ್ಧದಲ್ಲಿರುವುದರಿಂದ (southern hemisphere) ಉತ್ತರ ಗೋಳಾರ್ಧದಲ್ಲಿರುವ (northern hemisphere) ರಾಷ್ಟ್ರಗಳಿಗೆ ಹೋಲಿಸಿದರೆ ಅಲ್ಲಿ ಈ ಸಮಯದಲ್ಲಿ ಮಾನ್ಸೂನ್ ಆರಂಭವಾಗುತ್ತದೆ. ಹೀಗಾಗಿ ಇದು ಸಾಮಾನ್ಯವಾಗಿ ಆಕ್ಟೋಬರ್ ಅಥವಾ ನವಂಬರ್‌ನಲ್ಲಿ ಶುರುವಾಗುವುದು ಆದರೆ ಕೆಲವೊಮ್ಮೆ ವಿಳಂಬವಾಗಿ ಅಂದರೆ ಡಿಸೆಂಬರ್ ಅಥವಾ ಜನವರಿಯಲ್ಲಿ ಆರಂಭವಾಗುವುದು.
ಇನ್ನು ದ್ವೀಪದತ್ತ ಈ ಏಡಿಗಳ ಮಹಾ ವಲಸೆಯ ನೇತೃತ್ವವನ್ನು ಗಂಡು ಏಡಿಗಳು ವಹಿಸಿಕೊಳ್ಳುತ್ತವೆ. ಹೆಣ್ಣು ಏಡಿಗಳು ಜೊತೆಯಲ್ಲಿಯೇ ಸಾಗುತ್ತವೆ. ಆದರೆ ಎಷ್ಟು ಸಮಯದೊಳಗೆ ಅವುಗಳು ದ್ವೀಪ ತಲುಪುತ್ತವೆ ಎಂಬ ಬಗ್ಗೆ ಉಲ್ಲೇಖವಿಲ್ಲ. ಚಂದ್ರನ ಹಂತಗಳನ್ನು ನೋಡಿಕೊಂಡು ಈ ವಲಸೆಯನ್ನು ನಿರ್ಧರಿಸಲಾಗುತ್ತದೆ. ಅಲ್ಲದೇ ಏಡಿಗಳಿಗೆ ತಾವು ಯಾವಾಗ ವಲಸೆ ಆರಂಭಿಸಿದರೆ ದ್ವೀಪಕ್ಕೆ ನಿರ್ದಿಷ್ಟ ಸಮಯದಲ್ಲಿ ತಲುಪಬಹುದು ಎಂಬ ಅರಿವಿರುತ್ತದೆ. ಹೆಣ್ಣು ಏಡಿಗಳು ಒಂದು ಲಕ್ಷದಷ್ಟು ಮೊಟ್ಟೆಗಳನ್ನು ಇಟ್ಟರೂ ಕೆಲವೇ ಕೆಲವು ಮಾತ್ರ ಮರಿಗಳಾಗುತ್ತವೆ. ಈ ಏಡಿಗಳ ವಾರ್ಷಿಕ ವಲಸೆಯ ಕಾರಣಕ್ಕೆ ಈ ದ್ವೀಪವೂ ಬಹಳ ಫೇಮಸ್ ಆಗಿದೆ.
ಆಕಾಶದಿಂದ ಬಿದ್ದ ಲೋಹದ ಚೆಂಡು: ಗ್ರಾಮಸ್ಥರ ನಿದ್ದೆಕೆಡಿಸಿದ ವಿಚಿತ್ರ ಪ್ರಕರಣ
ಅದೇನೆ ಇರಲಿ ಪ್ರಕೃತಿ ಮನುಷ್ಯನ ಊಹೆಗೆ ನಿಲುಕದ ಎಷ್ಟೊಂದು ಅಗಾಧ ಶಕ್ತಿಯನ್ನು ತನ್ನೊಳಗೆ ಇರಿಸಿಕೊಂಡಿದೆ ಅಲ್ಲವೇ? ಯಾರೂ ಏನು ಹೇಳಿಕೊಡದೆಯೇ ಏಡಿಗಳಿಗೆ ತಮ್ಮ ವಂಶವಾಹಿಯನ್ನು ಬೆಳೆಸಲು ಎಲ್ಲಿಗೆ ತೆರಳಬೇಕು, ಯಾವತ್ತು ಪ್ರಯಾಣ ಶುರು ಮಾಡಬೇಕು ಎಂಬುವುದೆಲ್ಲವೂ ತಿಳಿದಿದೆ. ಇದೆಂಥಾ ವಿಸ್ಮಯ ಅಲ್ಲವೇ..?
