ಬೃಹತ್ ಮರ ರಸ್ತೆಗುರುಳಿಸಿ ರೋಡ್ ಬ್ಲಾಕ್ ಮಾಡಿದ ಗಜರಾಜ: ಅಪರೂಪದ ದೃಶ್ಯ ವೈರಲ್
ಇಲ್ಲೊಂದು ಕಡೆ ಆನೆಯೊಂದು ಬೃಹತ್ ಮರವನ್ನು ನೆಲಕ್ಕುರುಳಿಸಿ ರಸ್ತೆ ಸಂಚಾರ ತಡೆ ಮಾಡಿದ್ದು, ಈ ಅಪರೂಪದ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮನುಷ್ಯರು ಪ್ರತಿಭಟನೆ, ರಸ್ತೆ ತಡೆ, ಭಾರತ ಬಂದ್, ಕರ್ನಾಟಕ ಬಂದ್ ಮುಂತಾದ ಸಂದರ್ಭಗಳಲೆಲ್ಲಾ ರಸ್ತೆ ಬದಿಯ ಯಾವುದಾದರೊಂದು ಮರವನ್ನು ಕಡಿದು ಹಾಕಿ ರಸ್ತೆ ಬಂದ್ ಮಾಡಿ ವಾಹನ ಸಂಚರಿಸಲು ಸಾಧ್ಯವಾಗದಂತೆ ಮಾಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಆನೆಯೊಂದು ಬೃಹತ್ ಮರವನ್ನು ನೆಲಕ್ಕುರುಳಿಸಿ ರಸ್ತೆ ಸಂಚಾರ ತಡೆ ಮಾಡಿದ್ದು, ಈ ಅಪರೂಪದ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೇಚರ್ ಇಸ್ ಅಮೇಜಿಂಗ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಬೃಹತ್ ಆದ ಬಹುತೇಕ ಒಣಗಿದ, ಆದರೆ ರೆಂಬೆ ಕೊಂಬೆಗಳಿರುವ ಮರವನ್ನು ಆನೆಯೊಂದು ಕೆಲ ನಿಮಿಷಗಳಲ್ಲಿ ತನ್ನೆಲ್ಲಾ ಶಕ್ತಿಯನ್ನು ಹಾಕಿ ಬುಡದಿಂದಲೇ ಮುರಿದು ಬೀಳುವಂತೆ ಮಾಡುತ್ತಿರುವ ಅಪರೂಪದ ದೃಶ್ಯ ವೀಡಿಯೋದಲ್ಲಿ ಸೆರೆ ಆಗಿದ್ದು, ನೋಡುಗರನ್ನು ಅಚ್ಚರಿಗೊಳಿಸಿದೆ.
ಚಾಮರಾಜನಗರ: ಪ್ರವಾಸಿಗರ ಕಣ್ಣ ಮುಂದೆ ಮರಿಗೆ ಜನ್ಮ ನೀಡಿದ ಆನೆ
ವೀಡಿಯೋದಲ್ಲಿ ಕಾಣಿಸುವಂತೆ ಬಿಸಿಲಿನಿಂದ ಬಹುತೇಕ ಒಣಗಿರುವ ಹುಲ್ಲಿನಿಂದ ಕೂಡಿರುವ ಅಲ್ಲಲ್ಲಿ ಒಂದೊಂದು ಮರಗಳಿರುವ ಕಾಡಿನ ಮಧ್ಯೆ ಟಾರು ರಸ್ತೆಯೊಂದು ಹಾದು ಹೋಗಿದ್ದು, ಆ ರಸ್ತೆಯ ಪಕ್ಕದಲ್ಲೇ ಇರುವ ಒಣಗಿದ ಮರವೊಂದನ್ನು ಎರಡು ಸಧೃಡವಾದ ದಂತಗಳಿರುವ ಕಾಡಿನ ಆನೆಯೊಂದು ತನ್ನ ದಂತಗಳಿಂದ ನೂಕಿ ಸೊಂಡಿಲಿನಿಂದ ಎಳೆದು ಹಲವು ಬಾರಿ ತಳ್ಳಿ ಕೆಳಗೆ ಬೀಳಿಸುತ್ತಿದೆ. ಆನೆಯ ಬೃಹತ್ ಶಕ್ತಿಗೆ ಮರ ತರಗೆಲೆಯಂತೆ ಅಲುಗಾಡಿ ಮುರಿದು ಕೆಳಗೆ ಬೀಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಬಹುಶಃ ಆ ರಸ್ತೆಯಲ್ಲಿ ಬಂದ ವಾಹನ ಸವಾರರು ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನೆ ಲದ್ದಿ ಮೂಲಕ ಗಜಗಣತಿ: ಪ್ರತಿ ಬೀಟ್‌ನ 2ಕಿಮೀಗಳ ವ್ಯಾಪ್ತಿಯಲ್ಲಿ ಪರಿಶೀಲನೆ
ಈ ವೀಡಿಯೋ ಪೋಸ್ಟ್ ಮಾಡಿರುವ 'ನೇಚರ್ ಇಸ್ ಅಮೇಜಿಂಗ್' ಪೇಜ್ ಆನೆಗೆ ಇಷ್ಟೊಂದು ಶಕ್ತಿ ಇರುತ್ತೆ ಅಂತ ಇವತ್ತೇ ಗೊತ್ತಾಗಿದ್ದು ಎಂದು ಬರೆದುಕೊಂಡಿದ್ದಾರೆ. 2 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದು, ದೈತ್ಯ ಆನೆಯ ಶಕ್ತಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.