ಚಾಮರಾಜನಗರ: ಪ್ರವಾಸಿಗರ ಕಣ್ಣ ಮುಂದೆ ಮರಿಗೆ ಜನ್ಮ ನೀಡಿದ ಆನೆ

ಶುಕ್ರವಾರ ಬೆಳಗಿನ ಸಫಾರಿಗೆ ತೆರಳಿದ ಪ್ರವಾಸಿಗರಿದ್ದ ವಾಹನ ಸಫಾರಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಚಾಲಕ ಆನೆಯನ್ನು ನೋಡಿ ನೋಡಿ ಎನ್ನುವ ವೇಳೆಗೆ ಆನೆ ಅತ್ತಿಂದತ್ತ ಒಂದು ಸುತ್ತು ಹೊಡೆದ ಬಳಿಕ ಮರಿ ಆನೆಗೆ ಜನ್ಮ ನೀಡಿದೆ.

Elephant Gave Birth to Baby in front of Tourists in Bandipur Safari Zone  in Chamarajanagara grg

ಗುಂಡ್ಲುಪೇಟೆ(ಜೂ.01): ಬಂಡೀಪುರ ಸಫಾರಿ ಜೋನ್‌ನಲ್ಲಿ ಪ್ರವಾಸಿಗರಿಗೆ ತಾಯಿ ಹುಲಿ ಜೊತೆ ಮೂರು ಹುಲಿ ಮರಿ ಕಾಣಿಸಿಕೊಂಡಿದ್ದವು. ಶುಕ್ರವಾರ ಸಫಾರಿ ಜೋನ್‌ನಲ್ಲಿ ಆನೆಯೊಂದು ಮರಿಗೆ ಜನ್ಮನೀಡಿತು. ಪ್ರವಾಸಿಗರ ಕಣ್ಣ ಮುಂದೆಯೇ ಈ ಘಟನೆ ನಡೆದಿದ್ದು, ಪ್ರವಾಸಿಗರಲ್ಲಿ ಸಂತಸ ಮೂಡಿಸಿತು. 

ಶುಕ್ರವಾರ ಬೆಳಗಿನ ಸಫಾರಿಗೆ ತೆರಳಿದ ಪ್ರವಾಸಿಗರಿದ್ದ ವಾಹನ ಸಫಾರಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಚಾಲಕ ಆನೆಯನ್ನು ನೋಡಿ ನೋಡಿ ಎನ್ನುವ ವೇಳೆಗೆ ಆನೆ ಅತ್ತಿಂದತ್ತ ಒಂದು ಸುತ್ತು ಹೊಡೆದ ಬಳಿಕ ಮರಿ ಆನೆಗೆ ಜನ್ಮ ನೀಡಿದೆ.

ಜೀವಂತ ಕಾಡಾನೆಯ ದಂತ ಕತ್ತರಿಸಿದ ಕರ್ನಾಟಕ ಅರಣ್ಯ ಇಲಾಖೆ

ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ನವೀನ್‌ ಕುಮಾರ್‌ ಕನ್ನಡಪ್ರಭದೊಂದಿಗೆ ಮಾತನಾಡಿ, ಆನೆಯೊಂದು ಶುಕ್ರವಾರ ಬೆಳಗ್ಗೆ ಸಫಾರಿ ರಸ್ತೆಯ ಬಳಿ ಮರಿ ಹಾಕಿದೆ ಎಂದು ಖಚಿತ ಪಡಿಸಿದರು.

Latest Videos
Follow Us:
Download App:
  • android
  • ios