ಭಾರತದ 80ನೇ ಸ್ವಾತಂತ್ರ್ಯ ದಿನವನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ, ದುಬೈನ ಬುರ್ಜ್ ಖಲೀಫಾ ಕಟ್ಟಡವು ಭಾರತದ ತ್ರಿವರ್ಣ ಧ್ವಜದ ಬಣ್ಣಗಳಿಂದ ಝಗಮಗಿಸಿತು. ಇದು ಭಾರತ ಮತ್ತು ಯುಎಇ ನಡುವಿನ ಬಲವಾದ ಸ್ನೇಹ ಸಂಬಂಧವನ್ನು ಜಗತ್ತಿಗೆ ಸಾರಿತು.
ಭಾರತದ 80 ನೇ ಸ್ವಾತಂತ್ರ್ಯ ದಿನವನ್ನು ದೇಶಾದ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ದೇಶವಷ್ಟೇ ಅಲ್ಲ ವಿದೇಶದಲ್ಲೂ ಭಾರತೀಯರು, ವಿದೇಶಿಗರು ಸಂಭ್ರಮಿಸಿ ಶುಭಾಶಯ ತಿಳಿಸಿದರು. ಅಫ್ಘಾನಿಸ್ತಾನದಂತಹ ಕಟ್ಟ ಮುಸ್ಲಿಂ ದೇಶಗಳ ಜನರು ಕೂಡ ಭಾರತದ ಧ್ವಜ ಎತ್ತಿ ಹಿಡಿದು ಶುಭಾಶಯ ತಿಳಿಸಿದರು ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅದವು. ಅಷ್ಟೇ ಅಲ್ಲ ಈಗ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ.ಶುಕ್ರವಾರ ರಾತ್ರಿ (ಆಗಸ್ಟ್ 15, 2026) ದುಬೈನ ಐಕಾನಿಕ್ ಬುರ್ಜ್ ಖಲೀಫಾ ಭಾರತೀಯ ಧ್ವಜದ ಬಣ್ಣಗಳಲ್ಲಿ ಝಗಮಿಸಿತು. ವಿಶ್ವದ ಅತಿ ಎತ್ತರದ ಕಟ್ಟಡವನ್ನು ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ಬೆಳಗಿಸಲಾಯಿತು. ಈ ದೃಶ್ಯ ನೋಡುತ್ತಿದ್ದರೆ ಭಾರತದ ವಿಶ್ವರೂಪ ದರ್ಶನವಾದಂತಾಗುತ್ತೆ. ಸ್ವಾತಂತ್ರ್ಯ ಸಿಕ್ಕಿದ್ದು ಭಾರತಕ್ಕಾದರೂ, ಸಂಭ್ರಮಿಸಿದ್ದು ಹಲವು ದೇಶಗಳು!
ದುಬೈನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಈ ವಿಶೇಷ ಸಂದರ್ಭದ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಇದು ಭಾರತ ನಡೆದುಬಂದ ದಾರಿ, ಹೆಮ್ಮೆ ಮತ್ತು ವಿಶೇಷ ಗೌರವ ಭಾರತ ಮತ್ತು ಯುಎಇ ನಡುವಿನ ಬಲವಾದ ಸ್ನೇಹದ ಸಂಕೇತವಾಗಿದೆ ಎಂದು ಬರೆಯಲಾಗಿದೆ.
ಭಾರತದ ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಬೆಳಗಿದ ಬುರ್ಜ್ ಖಲೀಫಾ
ಶುಕ್ರವಾರ ರಾತ್ರಿ ಬುರ್ಜ್ ಖಲೀಫಾವನ್ನು ಭಾರತದ ತ್ರಿವರ್ಣ ಧ್ವಜದ ಕೇಸರಿ ಬಿಳಿ ಹಸಿರು ಬಣ್ಣಗಳಲ್ಲಿ ಪ್ರದರ್ಶಿಸಿತು. ಇದಕ್ಕೂ ಮೊದಲು ಹಲವಾರು ಬಾರಿ ತ್ರಿವರ್ಣ ಬಣ್ಣಗಳಲ್ಲಿ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಲಾಗಿತ್ತು, ವಿಶೇಷವಾಗಿ ಭಾರತದ ಸ್ವಾತಂತ್ರ್ಯ ದಿನದಂದು.
ಭಾರತ-ಯುಎಇ ಸಂಬಂಧ ಹೇಗಿದೆ?
ಭಾರತ-ಯುಎಇ ಸಂಬಂಧ ಹೇಗಿದೆ ಅನ್ನೋದಕ್ಕೆ ಬುರ್ಜ್ ಖಲೀಫಾದಲ್ಲಿ ನಡೆದ ಈ ಪ್ರದರ್ಶನ ಸಾಕ್ಷಿ. ಇದು ಕೇವಲ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯಾಗಿರಲಿಲ್ಲ, ಬದಲಾಗಿ ಭಾರತ ಮತ್ತು ಯುಎಇ ನಡುವಿನ ಸಂಬಂಧವನ್ನು ಬಲಪಡಿಸುವ ಪ್ರತಿಬಿಂಬವೂ ಆಗಿತ್ತು. ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರವು ಸ್ಥಿರವಾಗಿ ಹೆಚ್ಚಾಗಿದೆ. ಯುಎಇ ದೊಡ್ಡ ಭಾರತೀಯ ವಲಸಿಗರಿಗೆ ನೆಲೆಯಾಗಿದೆ, ಇದು ಭಾರತೀಯ ರಾಷ್ಟ್ರೀಯ ಹಬ್ಬಗಳನ್ನು ಅಲ್ಲಿನ ಭಾರತೀಯ ಸಮುದಾಯಕ್ಕೆ ವಿಶೇಷವಾಗಿ ಮಹತ್ವದ್ದಾಗಿ ಮಾಡುತ್ತದೆ.
ಬುರ್ಜ್ ಖಲೀಫಾ ಎತ್ತರ ಎಷ್ಟಿದೆ?
ಬುರ್ಜ್ ಖಲೀಫಾ 828 ಮೀಟರ್ ಎತ್ತರದಲ್ಲಿದ್ದು ಇದು ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಪ್ರಸಿದ್ಧವಾಗಿದೆ. ದುಬೈನ ಹೆಗ್ಗುರುತಾಗಿರುವ ಇದು, ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಸಮಯದಲ್ಲಿ ವಿಶೇಷ ದೀಪಾಲಂಕಾರಗಳಿಗೆ ಫೇಮಸ್. ಭಾರತದ 80 ನೇ ಸ್ವಾತಂತ್ರ್ಯ ದಿನದಂದು, ಭಾರತೀಯ ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಅದರ ದೀಪಾಲಂಕಾರವು ಮತ್ತೊಮ್ಮೆ ಭಾರತ ಮತ್ತು ಯುಎಇ ನಡುವಿನ ಸ್ನೇಹ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಪ್ರದರ್ಶಿಸಿತು.
ಭಾರತಕ್ಕೆ ವಿಶ್ವ ನಾಯಕರ ಅಭಿನಂದನೆಗಳು
ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಅನೇಕ ದೇಶಗಳ ನಾಯಕರು ಮತ್ತು ಸರ್ಕಾರಗಳು ಶುಭಾಶಯಗಳನ್ನು ಕೋರಿದರು. ಫ್ರೆಂಚ್ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಭಾರತದ 80 ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರಕ್ಕೆ ಶುಭಾಶಯ ಕೋರಿದರು. ಹೀಗಾಗಿ, ಭಾರತದ ಸ್ವಾತಂತ್ರ್ಯ ದಿನವನ್ನು ದೇಶದೊಳಗೆ ಮತ್ತು ಪ್ರಪಂಚದಾದ್ಯಂತ ಆಚರಿಸಲಾಯಿತು.


