ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (Joe Biden) ಅವರ ಪತ್ನಿ ಜಿಲ್ ಬೈಡೆನ್ (Jill Biden) ಅವರು ಅಮೆರಿಕಾದ ಉಪಾಧ್ಯಕ್ಷೆ ಕಮಲ ಹ್ಯಾರಿಸ್ (Kamala Harris) ಅವರ ಪತಿ ಡೌಗ್ ಎಂಹಾಫ್ (Doug Emhoff) ಅವರ ತುಟಿಗೆ ತನ್ನ ಗಂಡನಿಗೆ ಮುತ್ತಿಟ್ಟಂತೆ ಎಲ್ಲರೆದುರೇ ಮುತ್ತಿಕ್ಕಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಷಿಂಗ್ಟನ್: 60 ಕಳೆದ ಮೇಲೆ ಅರಳು ಮರಳು ಎಂಬ ಗಾದೆ ನಿಮಗೆ ನೆನಪಿರಬಹುದು. ಈ ಘಟನೆಯನ್ನು ನೋಡಿದರೆ ಅದೇ ಈ ಗಾದೆಯೇ ನೆನಪಾಗುತ್ತಿದೆ. ದೊಡ್ಡವರೇ ಇರಲಿ ಜನ ಸಾಮಾನ್ಯರೇ ಇರಲಿ, ಸಾರ್ವಜನಿಕ ಸ್ಥಳದಲ್ಲಿ ಕ್ಯಾಮರಾ ಮುಂದೆ ಕಂಡವರ ಪತಿ ಅಥವಾ ಪತ್ನಿಯ ತುಟಿಗೆ ಮುತ್ತಿಕ್ಕುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಆದರೆ ಇಲ್ಲಿ ಒಂದು ದೊಡ್ಡ ದೇಶದ ಅಧ್ಯಕ್ಷರ ಪತ್ನಿಯೊಬ್ಬರು ಆ ದೇಶದ ಉಪಾಧ್ಯಕ್ಷೆಯ ಪತಿಯ ತುಟಿಗೆ ಕ್ಯಾಮರಾ ಮುಂದೆ ಮುತ್ತಿಕ್ಕಿದ್ದು, ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (Joe Biden) ಅವರ ಪತ್ನಿ ಜಿಲ್ ಬೈಡೆನ್ (Jill Biden) ಅವರು ಅಮೆರಿಕಾದ ಉಪಾಧ್ಯಕ್ಷೆ ಕಮಲ ಹ್ಯಾರಿಸ್ (Kamala Harris) ಅವರ ಪತಿ ಡೌಗ್ ಎಂಹಾಫ್ (Doug Emhoff) ಅವರ ತುಟಿಗೆ ತನ್ನ ಗಂಡನಿಗೆ ಮುತ್ತಿಟ್ಟಂತೆ ಎಲ್ಲರೆದುರೇ ಮುತ್ತಿಕ್ಕಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೋ ಬೈಡೆನ್ ಅವರ ಪತ್ನಿ ಜಿಲ್ ಬೈಡೆನ್ ಇದನ್ನು ತಿಳಿದು ಮಾಡಿದರೋ ತಿಳಿಯದೇ ಫ್ಲೋದಲ್ಲಿ ಮಾಡಿದರು ತಿಳಿದಿಲ್ಲ. ಆದರೆ ಈ ವಿಚಾರ ಬಹಳ ಚರ್ಚೆಯಾಗುತ್ತಿದ್ದು, ನೆಟ್ಟಿಗರು ಅಮೆರಿಕಾ ಅಧ್ಯಕ್ಷರ ಪತ್ನಿಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಫೆ.7 ರಂದು ಕ್ಯಾಪಿಟಲ್ ಹಿಲ್‌ನಲ್ಲಿ ನಡೆದ ಸ್ಟೇಟ್ ಆಫ್ ಯೂನಿಯನ್ ಸಭೆಗೂ ಮುನ್ನ ಈ ಮುಜುಗರದ ಘಟನೆ ನಡೆದಿದೆ. ಫೆ.7 ರಂದು ರಾತ್ರಿ ಅಮೆರಿಕಾ ಆಧ್ಯಕ್ಷ ಜೋ ಬೈಡೆನ್ ಅವರು ಕ್ಯಾಪಿಟಲ್ ಹಿಲ್‌ನಲ್ಲಿ ತಮ್ಮ 2ನೇ ಸ್ಟೇಟ್ ಆಫ್ ಯೂನಿಯನ್‌ನಲ್ಲಿ (State of Union) ಭಾಷಣ ಮಾಡಿದ್ದರು. ಇದಾದ ನಂತರ ಈ ಮುತ್ತಿನಾಟ ನಡೆದಿದೆ.
ಅಮೆರಿಕಾ ಅಧ್ಯಕ್ಷರಿಗೆ ಏನಾಯ್ತು? ಸ್ಟೇಜ್‌ನಲ್ಲೇ ಅತ್ತಿತ್ತ ವಾಲಿದ Joe Biden... ವಿಡಿಯೋ ವೈರಲ್
ನೇರಳೆ ಬಣ್ಣದ ಧಿರಿಸು ಧರಿಸಿದ್ದ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರ ಪತ್ನಿ ಜಿಲ್ ಬೈಡೆನ್, ಅಲ್ಲಿ ಚಪ್ಪಾಳೆ ತಟ್ಟುತ್ತಾ ನಿಂತಿದ್ದ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪತಿ ಡೌಗ್ ಎಂಹಾಫ್ ಬಳಿ ಬಂದು ಹಸ್ತ ಲಾಘವ ಮಾಡಿ ಇದೆಲ್ಲಾ ಸಹಜ ಎಂಬಂತೆ ಅವರ ತುಟಿಗೆ ಮುತ್ತಿಕ್ಕಿ ಅವರ ಬಳಿ ಬಂದು ನಿಂತಿದ್ದಾರೆ. ಈ ವೇಳೆ ಸುತ್ತಲೂ ಅನೇಕರು ಇರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.
ಜೋ ಬೈಡೆನ್ ಅವರು ಸ್ಟೇಟ್ ಆಫ್ ದ ಯೂನಿಯನ್‌ನಲ್ಲಿ ಭಾಷಣ ಮಾಡಲು ಸಿದ್ಧಗೊಂಡಿದ್ದರೆ, ಇತ್ತ ಅವರ ಪತ್ನಿ ಜಿಲ್ ಬೈಡೆನ್ ಇಡೀ ಕಾರ್ಯಕ್ರಮವನ್ನೇ ತಮ್ಮತ್ತ ಸೆಳೆದಿದ್ದಾರೆ ಎಂದು ಅಮೆರಿಕಾದ ಮಾಧ್ಯಮಗಳು ಜಿಲ್ ಬೈಡೆನ್ ವರ್ತನೆಯನ್ನು ಟೀಕಿಸಿವೆ. ಇನ್ನು ಅಮೆರಿಕಾದ ಟ್ಯಾಬ್ಲೈಡ್ ಒಂದು ಈ ಘಟನೆಯ ಬಳಿಕ ಸ್ಟೇಟ್ ಆಫ್ ಯೂನಿಯನ್ ಅನ್ನು ಸ್ಮೂಚ್ ಆಫ್ ಯೂನಿಯನ್ (ಚುಂಬನದ ಯೂನಿಯನ್) ಎಂದು ಕರೆಯುವ ಮೂಲಕ ಅಮೆರಿಕಾ ಅಧ್ಯಕ್ಷರ ವರ್ತನೆಯನ್ನು ಟೀಕಿಸಿವೆ.
ಅಲ್ಲದೇ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donal Trump) ಅವರ ಮಾಜಿ ಸಲಹೆಗಾರ ಕೆಲ್ಯನ್ನೆ ಕಾನ್ವೇ (Kellyanne Conway) ಈ ವಿಡಿಯೋವನ್ನು ಹಂಚಿಕೊಂಡು ನಿಜವಾಗಿಯೂ ಅಮೆರಿಕಾದಲ್ಲಿ ಕೋವಿಡ್ ಸಂಪೂರ್ಣವಾಗಿ ಕಡಿಮೆ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೆ ಕೆಲವು ನೆಟ್ಟಿಗರು ಈ ಕಿಸ್ಸಿಂಗ್ ಸೀನ್ ಅನ್ನು ಹಲವು ಸಿನಿಮಾಗಳ ಕಿಸ್ಸಿಂಗ್ ಸೀನ್‌ಗೆ ಹೋಲಿಸಿ ಜಿಲ್ ಬೈಡೆನ್ ಅನ್ನು ಟ್ರೋಲ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಅಮೆರಿಕಾದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.
ಚೀನಾ ದಾಳಿ ಮಾಡಿದರೆ ನಾವು ತೈವಾನ್ ಪರ ನಿಲ್ಲುತ್ತೇವೆ: ಮಹತ್ವದ ಹೇಳಿಕೆ ನೀಡಿದ Joe Biden
ಅಮೆರಿಕಾದ ಬೆನ್ನಿ ಜಾನ್ಸನ್ ಎಂಬುವವರು ಕೂಡ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದರ ಜೊತೆ ಜೋ ಬೈಡೆನ್ ಭಾಷಣ ಮುಗಿಸಿ ಹಾದಿ ತಪ್ಪಿದಂತೆ ನಡೆಯುತ್ತಿರುವ ವಿಡಿಯೋವನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ. ಜೋ ಬೈಡೆನ್ ಅವರು ಹೀಗೆ ದಿಕ್ಕು ತಪ್ಪಿದಂತೆ ವರ್ತಿಸುವುದು ಇದು ಮೊದಲೇನಲ್ಲಾ. ಈ ಹಿಂದೆ ಕಳೆದ ವರ್ಷ ಅವರು ಸ್ಟೇಜ್‌ನಲ್ಲೇ ಕಣ್ಣು ಮಂಜಾದವರಂತೆ ಅತ್ತಿತ ವಾಲುತ್ತಾ ಹೆಜ್ಜೆ ಹಾಕಿದ ಘಟನೆ ನಡೆದಿತ್ತು, ಇದರ ವಿಡಿಯೋ ಆಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಜೋ ಬೈಡೆನ್ ಅವರು ಏಡ್ಸ್, ಟಿಬಿ ಹಾಗೂ ಮಲೇರಿಯಾ ರೋಗದ ವಿರುದ್ಧ ಹೋರಾಡಲು ನಿಧಿ ಸಂಗ್ರಹಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಆದರೆ ಮಾತಿನ ಮಧ್ಯೆ ತಮ್ಮ ಭಾಷಣದ ಪೋಡಿಯಂ ಬಿಟ್ಟು ಹೊರಟ ಬೈಡೆನ್ ನಂತರ ಕಣ್ಣು ಕಾಣಿಸದವರು ಪರದಾಡುವಂತೆ ಕೈಗಳನ್ನು ಮುಂದೆ ಮಾಡುತ್ತಾ ತಡಕಾಡುವಂತೆ ಕಾಣಿಸುವ ವಿಡಿಯೋ ವೈರಲ್ ಆಗಿತ್ತು.
ಅದೇನೆ ಇರಲಿ ಜೋ ಬೈಡೆನ್ ಹಾಗೂ ಪತ್ನಿ ಜಿಲ್ ಬೈಡೆನ್ ಇಬ್ಬರಿಗೂ 70ರ ಇಳಿ ವಯಸ್ಸಾಗಿದ್ದು, ಇವರ ವರ್ತನೆ ನಮ್ಮ 60 ಕಳೆದ ಮೇಲೆ ಅರಳು ಮರಳು ಎಂಬ ನಮ್ಮ ಹಳೆ ಗಾದೆಯನ್ನು ಮತ್ತೆ ನೆನಪಿಸುತ್ತಿದೆ.
