ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸ್ಟೇಜ್‌ನಲ್ಲೇ ಅತ್ತಿತ್ತ ಕಣ್ಣು ಮಂಜಾದವರಂತೆ ಅತ್ತಿತ ವಾಲುತ್ತಾ ಹೆಜ್ಜೆ ಹಾಕಿದ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ನ್ಯೂಯಾರ್ಕ್‌: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸ್ಟೇಜ್‌ನಲ್ಲೇ ಅತ್ತಿತ್ತ ಕಣ್ಣು ಮಂಜಾದವರಂತೆ ಅತ್ತಿತ ವಾಲುತ್ತಾ ಹೆಜ್ಜೆ ಹಾಕಿದ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಜೋ ಬೈಡೆನ್ ಅವರು ಏಡ್ಸ್‌, ಟಿಬಿ ಹಾಗೂ ಮಲೇರಿಯಾ ರೋಗದ ವಿರುದ್ಧ ಹೋರಾಡಲು ನಿಧಿ ಸಂಗ್ರಹಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಆದರೆ ಅವರು ತಮ್ಮ ಭಾಷಣದ ಪೋಡಿಯಂ ಬಿಟ್ಟು ಹೊರಟ ಬೈಡೆನ್ ನಂತರ ಕಣ್ಣು ಕಾಣಿಸದವರು ಪರದಾಡುವಂತೆ ಕೈಗಳನ್ನು ಮುಂದೆ ಮಾಡುತ್ತಾ ತಡಕಾಡುವಂತೆ ಕಾಣಿಸುತ್ತಿದೆ.

ಅಮೆರಿಕಾ ಅಧ್ಯಕ್ಷ (US President) ಬುಧವಾರ (ಸೆಪ್ಟೆಂಬರ್ 21) ನ್ಯೂಯಾರ್ಕ್‌ನಲ್ಲಿ ನಡೆದ ಜಾಗತಿಕ ನಿಧಿಯ ಏಳನೇ (Global Fund) ಮರುಸಂಗ್ರಹ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಭಾಷಣ ಮುಗಿಸಿದ ನಂತರ ಪೋಡಿಯಂ ಬಿಟ್ಟು ತೆರಳಿದ ಅವರು, ನಿಂತಲ್ಲೇ ಯಾವುದೋ ಲೋಕದಲ್ಲಿ ಕಳೆದು ಹೋದಂತೆ ಕಾಣಿಸಿಕೊಂಡರು. ಅಲ್ಲದೇ ಇದೇ ವೇಳೆ ಅವರು ಏನನ್ನೋ ಹೇಳುತ್ತಿರುವುದು ಕೂಡ ಕಾಣಿಸುತ್ತಿದೆ. ಆದರೆ ಕಾರ್ಯಕ್ರಮದಲ್ಲಿ ಭಾಷಣದ ನಂತರದ ಭಾರಿ ಚಪ್ಪಾಳೆಯಿಂದಾಗಿ ಇದ್ಯಾವುದು ಕೂಡ ಕೇಳಿಸುವುದಿಲ್ಲ. ಈ ದೃಶ್ಯವನ್ನು ಅನೇಕರು ಟ್ವಿಟ್ಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. 

Scroll to load tweet…

ಈ ಕಾರ್ಯಕ್ರಮವನ್ನು ಏಡ್ಸ್(Aids), ಕ್ಷಯ ಮತ್ತು ಮಲೇರಿಯಾ (Maleria) ವಿರುದ್ಧ ಹೋರಾಡಲು ನಿಧಿ ಸಂಗ್ರಹಿಸುವ ಸಲುವಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬರೀ ಮೊತ್ತದ ಅಂದರೆ 14.25 ಶತಕೋಟಿ ಡಾಲರ್‌ ನಿಧಿ ಸಂಗ್ರಹಿಸಲಾಗಿದೆ. ಇದು ಬಹುಪಕ್ಷೀಯ ಆರೋಗ್ಯ ಸಂಸ್ಥೆಗೆ (multilateral health organisation) ಇದುವರೆಗೆ ಬಂದ ಅತ್ಯಂತ ದೊಡ್ಡ ಮೊತ್ತವಾಗಿದೆ.

ಸೈಕಲ್‌ನಿಂದ ಕೆಳಗೆ ಬಿದ್ದ ಅಮೆರಿಕಾ ಅಧ್ಯಕ್ಷ : ವಿಡಿಯೋ ವೈರಲ್

ಈ ಕಾರ್ಯಕ್ರಮದಲ್ಲಿ ಜೋ ಬೈಡೆನ್ ಅವರು ಭಾಷಣ ಮಾಡುತ್ತಾ ಈ ರೀತಿ ಅಭೂತಪೂರ್ವವಾಗಿ ನಿಧಿ ಸಂಗ್ರಹವಾಗಲು ಕಾರಣರಾದ ಎಲ್ಲರಿಗೂ ಅವರು ನೀಡಿದ ಕೊಡುಗೆಗಾಗಿ ಧನ್ಯವಾದ ಸಲ್ಲಿಸಿದರು. ಇದು ಜೀವವನ್ನು ಉಳಿಸುವುದರ ಬಗ್ಗೆ ಆಗಿದೆ. ಎಲ್ಲಾ ಸಮುದಾಯದವರು ಆರೋಗ್ಯಕರವಾಗಿದ್ದಾರೆ ಮತ್ತು ಸಧೃಡರು ಎಂದು ಖಚಿತಪಡಿಸಿಕೊಳ್ಳಲು ಪಾಲುದಾರರೊಂದಿಗೆ ಕೆಲಸ ಮಾಡುವುದಾಗಿದೆ. ಇಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ. ಕನಿಷ್ಠ ಎಲ್ಲರೂ ಆರೋಗ್ಯ ಹಾಗೂ ಸಧೃಡವಾಗಲು ಸಣ್ಣ ನೆರವು ನೀಡಿ, ಇದರಿಂದ ಎಲ್ಲೆಡೆ ಜನರು ಘನತೆಯಿಂದ ಬದುಕಬಹುದು ಎಂದು ಅವರು ಶ್ವೇತಭವನದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ಕಮಲಾ ಹ್ಯಾರಿಸ್‌ನ್ನು ಫಸ್ಟ್‌ಲೇಡಿ ಎಂದು ಕರೆದ ಅಮೆರಿಕ ಅಧ್ಯಕ್ಷ: ವಿಡಿಯೋ ವೈರಲ್‌

ಜನರ ಜೀವನದಲ್ಲಿ ಪ್ರಮುಖವಾದ ಸವಾಲುಗಳನ್ನು ತೆಗೆದುಕೊಳ್ಳಲು ಮತ್ತು ಪ್ರಗತಿಯನ್ನು ತಲುಪಲು ನಾವು ಸಾಮೂಹಿಕವಾಗಿ ಶಕ್ತಿ ಪ್ರದರ್ಶಿಸೋಣ. ನಾವು ಮಾಡಬೇಕಾದುದು ತುಂಬಾ ಇದೆ. ಹೀಗಾಗಿ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದು ಅವರು ಹೇಳಿದರು. ಹೀಗೆ ಭಾಷಣ ಮುಗಿಸಿದ ನಂತರ 79 ವರ್ಷ ಪ್ರಾಯದ ಅಮೆರಿಕಾ ಅಧ್ಯಕ್ಷ, ಪೋಡಿಯಂ (podium) ಬಿಟ್ಟು ಬಲಕ್ಕೆ ತಿರುಗಿದ್ದು, ಅಲ್ಲೇ ಸೆಕೆಂಡುಗಳ ಕಾಲ ನಿಂತಿದ್ದಾರೆ. ಅಲ್ಲದೇ ಅಲ್ಲೇ ಕೆಳಗಿಳಿಯಲು ನೋಡಿದ್ದಾರೆ. ಇದೇ ವೇಳೆ ಕಾರ್ಯಕ್ರಮದ ಆಯೋಜಕರು ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಿಡಿಯೋವನ್ನು ಎರಡು ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದು, ಅಮೆರಿಕಾ ಅಧ್ಯಕ್ಷರ ಈ ವರ್ತನೆ ಅನೇಕರನ್ನು ಅಚ್ಚರಿಗೆ ದೂಡಿದೆ.