ಚೀನಾ ದಾಳಿ ಮಾಡಿದರೆ ನಾವು ತೈವಾನ್ ಪರ ನಿಲ್ಲುತ್ತೇವೆ: ಮಹತ್ವದ ಹೇಳಿಕೆ ನೀಡಿದ Joe Biden
ಯುಎಸ್ ಪಡೆಗಳು ಚೀನಾದಿಂದ ಹಕ್ಕು ಸಾಧಿಸಿದ ಪ್ರಜಾಸತ್ತಾತ್ಮಕವಾಗಿ ಆಡಳಿತದಲ್ಲಿರುವ ದ್ವೀಪವನ್ನು ರಕ್ಷಿಸುತ್ತದೆಯೇ ಎಂದು ಕೇಳಿದಾಗ, ಅವರು "ಒಂದು ವೇಳೆ, ಅಭೂತಪೂರ್ವ ದಾಳಿ ನಡೆದರೆ ಹೌದು (Yes)’’ ಎಂದು ಜೋ ಬೈಡೆನ್ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.
ತೈವಾನ್ ಮೇಲೆ ಒಂದು ವೇಳೆ ಚೀನಾ ಆಕ್ರಮಣ ಮಾಡಿದರೆ, ಅಮೆರಿಕ ಪಡೆಗಳು (US Forces) ದ್ವೀಪ ರಾಷ್ಟ್ರವನ್ನು ರಕ್ಷಿಸುತ್ತವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಈ ವಿಚಾರದ ಬಗ್ಗೆ ಈವರೆಗಿನ ಅತ್ಯಂತ ಸ್ಪಷ್ಟ ಹೇಳಿಕೆಯನ್ನು ವಿಶ್ವದ ದೊಡ್ಡಣ್ಣ ಹೇಳಿದೆ. ಭಾನುವಾರ ಪ್ರಸಾರವಾದ ಸಿಬಿಎಸ್ 60 ನಿಮಿಷಗಳ ಸಂದರ್ಶನದಲ್ಲಿ ಯುಎಸ್ ಪಡೆಗಳು ಚೀನಾದಿಂದ ಹಕ್ಕು ಸಾಧಿಸಿದ ಪ್ರಜಾಸತ್ತಾತ್ಮಕವಾಗಿ ಆಡಳಿತದಲ್ಲಿರುವ ದ್ವೀಪವನ್ನು ರಕ್ಷಿಸುತ್ತದೆಯೇ ಎಂದು ಕೇಳಿದಾಗ, ಅವರು "ಒಂದು ವೇಳೆ, ಅಭೂತಪೂರ್ವ ದಾಳಿ ನಡೆದರೆ ಹೌದು (Yes)’’ ಎಂದು ಜೋ ಬೈಡೆನ್ ಉತ್ತರಿಸಿದ್ದಾರೆ. ಅಲ್ಲದೆ, ರಷ್ಯಾ ಮೇಲೆ ಉಕ್ರೇನ್ ದಾಳಿಗಿಂತ ಭಿನ್ನವಾಗಿ, ಯುಎಸ್ ಪಡೆಗಳು - ಅಮೆರಿಕನ್ ಪುರುಷರು ಮತ್ತು ಮಹಿಳೆಯರು ಚೀನಾದ ಆಕ್ರಮಣದ ಸಂದರ್ಭದಲ್ಲಿ ತೈವಾನ್ ಅನ್ನು ರಕ್ಷಿಸುತ್ತದೆ ಎಂದು ಅವರು ಅರ್ಥೈಸುತ್ತಾರೆಯೇ ಎಂದು ಸ್ಪಷ್ಟಪಡಿಸಲು ಕೇಳಿದಾಗ, ಅಮೆರಿಕ ಅಧ್ಯಕ್ಷ ಹೌದು ಎಂದು ಉತ್ತರಿಸಿದರು.
ಇದು ಇತ್ತೀಚೆಗೆ ನಡೆದ ಸಂದರ್ಶನವಾಗಿದ್ದು, ಇಲ್ಲಿ ಜೋ ಬೈಡೆನ್ ದ್ವೀಪ ರಾಷ್ಟ್ರ ತೈವಾನ್ ರಕ್ಷಿಸಲು US ಪಡೆಗಳನ್ನು ಒಪ್ಪಿಸುವ ಬಗ್ಗೆ ಅವರ ಈ ಹೇಳಿಕೆಯು ಹಿಂದಿನ ಹೇಳಿಕೆಗಳಿಗಿಂತ ಸ್ಪಷ್ಟವಾಗಿದೆ. ತೈವಾನ್ ಮೇಲಿನ ದಾಳಿಗೆ ಮಿಲಿಟರಿ ಪ್ರತಿಕ್ರಿಯಿಸುತ್ತದೆಯೇ ಎಂಬುದನ್ನು ಈವರೆಗೆ ಸ್ಪಷ್ಟಪಡಿಸಿರಲಿಲ್ಲ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ವೇತ ಭವನದ ವಕ್ತಾರರು ತೈವಾನ್ ಬಗ್ಗೆ ಯುಎಸ್ ನೀತಿ ಬದಲಾಗಿಲ್ಲ ಎಂದು ಹೇಳಿದರು. "ಈ ವರ್ಷದ ಆರಂಭದಲ್ಲಿ ಟೋಕಿಯೋದಲ್ಲಿ ಅಮೆರಿಕ ಅಧ್ಯಕ್ಷರು ಇದನ್ನು ಮೊದಲು ಹೇಳಿದ್ದಾರೆ. ನಮ್ಮ ತೈವಾನ್ ನೀತಿಯು ಬದಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅದು ನಿಜವಾಗಿದೆ" ಎಂದೂ ವಕ್ತಾರರು ಹೇಳಿದರು.
ಇದನ್ನು ಓದಿ: ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ತೈವಾನ್ ಬಳಿ ಮಿಲಿಟರಿ ಕಸರತ್ತು ಆರಂಭಿಸಿದ ಚೀನಾ
ಇನ್ನು, ತೈವಾನ್‌ನ ವಿದೇಶಾಂಗ ಸಚಿವಾಲಯವು (Taiwan Foreign Ministry) "ತೈವಾನ್‌ಗೆ ಅಮೆರಿಕ ಸರ್ಕಾರದ ಭದ್ರತಾ ಬದ್ಧತೆಯನ್ನು" ಪುನರುಚ್ಚರಿಸಿದ್ದಕ್ಕಾಗಿ ಜೋ ಬೈಡೆನ್‌ಗೆ ಧನ್ಯವಾದಗಳನ್ನು ಸಲ್ಲಿಸಿತು. ತೈವಾನ್ ತನ್ನ ಸ್ವರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವುದನ್ನು ಮುಂದುವರಿಸುತ್ತದೆ ಮತ್ತು ತೈವಾನ್ ಹಾಗೂ ಯುನೈಟೆಡ್ ಸ್ಟೇಟ್ಸ್ ನಡುವಿನ ನಿಕಟ ಭದ್ರತಾ ಪಾಲುದಾರಿಕೆಯನ್ನು ಗಾಢಗೊಳಿಸುತ್ತದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವಾರ ಜೋ ಬೈಡೆನ್ ಅವರೊಂದಿಗೆ ಸಿಬಿಎಸ್ ಸಂದರ್ಶನ (Interview) ನಡೆಸಿದೆ ಎಂದು ತಿಳಿದುಬಂದಿದೆ.
ಸದ್ಯ, ಸೋಮವಾರ ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಗಾಗಿ (Funeral) ಅಧ್ಯಕ್ಷರು ಬ್ರಿಟನ್ ಪ್ರವಾಸದಲ್ಲಿದ್ದಾರೆ. ಮೇ ತಿಂಗಳಲ್ಲಿ ಸಹ ಜೋ ಬೈಡೆನ್ ಅವರು ತೈವಾನ್ ಅನ್ನು ರಕ್ಷಿಸಲು ಮಿಲಿಟರಿಯಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿದ್ದಾರೆಯೇ ಎಂದು ಕೇಳಲಾಯಿತು ಮತ್ತು ಅವರು "ಹೌದು ... ಅದು ನಾವು ಮಾಡಿದ ಬದ್ಧತೆಯಾಗಿದೆ" ಎಂದು ಉತ್ತರಿಸಿದ್ದರು. 60 ನಿಮಿಷಗಳ ಸಂದರ್ಶನದಲ್ಲಿ, ಅಮೆರಿಕ ಅಧ್ಯಕ್ಷ, ಯುನೈಟೆಡ್ ಸ್ಟೇಟ್ಸ್ "ಒನ್-ಚೀನಾ" ನೀತಿಗೆ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ: ಚೀನಾದ ಪತ್ರಕರ್ತನನ್ನು ಮದುವೆಯಾಗಿದ್ದಾರಾ ಅಮೆರಿಕದ ನ್ಯಾನ್ಸಿ ಪೆಲೋಸಿ..?
ಇನ್ನು, ಆಗಸ್ಟ್‌ನಲ್ಲಿ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಭೇಟಿ ನೀಡಿದ್ದರಿಂದ ಕೋಪಗೊಂಡಿದ್ದ ಬೀಜಿಂಗ್‌ಗೆ ಜೋ ಬೈಡೆನ್ ಅವರ ಹೇಳಿಕೆಗಳಿಂದ ಮತ್ತಷ್ಟು ಆಕ್ರೋಶಗೊಳ್ಳುವ ಸಾಧ್ಯತೆಗಳಿವೆ. ನ್ಯಾನ್ಸಿ ಪೆಲೋಸಿಯ ಆ ಭೇಟಿಯು ತೈವಾನ್‌ನ ಸುತ್ತಲೂ ಚೀನಾ ಅತಿದೊಡ್ಡ ಮಿಲಿಟರಿ ಕಸರತ್ತು ನಡೆಸಿತ್ತು ಮತ್ತು ತೈವಾನ್‌ಗೆ ಅಮೆರಿಕ ಮಿಲಿಟರಿ ಬೆಂಬಲವನ್ನು ಹೆಚ್ಚಿಸುವ ಸುಧಾರಿತ ಕಾನೂನು ಜಾರಿಗೆ ತಂದ ಅಮೆರಿಕ ಸಂಸದರ ಕ್ರಮಗಳನ್ನು ಚೀನಾ ಪ್ರತಿಭಟಿಸಿದೆ. ಅಲ್ಲದೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತೈವಾನ್ ಅನ್ನು ಬೀಜಿಂಗ್‌ನ ನಿಯಂತ್ರಣಕ್ಕೆ ತರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.