ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರ, ಅಮೆರಿಕವು ಇರಾನ್ ವಿರುದ್ಧ ಕ್ಷಿಪಣಿ ದಾಳಿಗಳನ್ನು ಆರಂಭಿಸಿದೆ. ಈ ಮಿಲಿಟರಿ ಕ್ರಮಗಳು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮಾತಿನ ಸಮರಕ್ಕೂ ಕಾರಣವಾಗಿದೆ.

US-Iran: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತೆ ಅಪಾಯಕಾರಿ ಮಟ್ಟ ತಲುಪಿದೆ. ಇರಾನ್ ವಿರುದ್ಧ ಅಮೆರಿಕ ಮತ್ತೆ ಮುಗಿಬಿದ್ದು ಕ್ಷಿಪಣಿ ದಾಳಿ ನಡೆಸಿದೆ. ವಿಶ್ವದ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಆಕ್ರೋಶಗೊಂಡಿರುವ ಅಮೆರಿಕ, ಹಡುಗಗಳ ಸುರಕ್ಷಿತವಾಗಿ ಸಾಗಣೆ ಮಾಡಲುನಾವು ಇರಾನ್ ಮೇಲೆ ಮತ್ತೆ ದಾಳಿ ಮುಂದುವರಿಸುವುದು ಅನಿವಾರ್ಯವಾಗಿದೆ ಎಂದು ಯುಸ್ ಮಿಲಿಟರಿ ಹೇಳಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾರ್ಮುಜ್ ಜಲಸಂಧಿಯನ್ನು ಇರಾನ್ ಹಿಡಿತದಿಂದ ಮುಕ್ತಗೊಳಿಸಲು ಹೊಸ ಮಿಲಿಟರಿ ದಾಳಿ ನಡೆಸಿರುವುದಾಗಿ ಅಮೆರಿಕ ಹೇಳಿಕೊಂಡಿದೆ. ಬುಧವಾರ ಇರಾನ್ ಮೇಲೆ ಮತ್ತೆ ಭೀಕರ ದಾಳಿ ನಡೆಸಿದೆ. ಅದಕ್ಕೂ ಹಿಂದಿನ ದಿನ (ಮಂಗಳವಾರ) ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಮೂರು ಸರಕು ಹಡಗುಗಳ ಮೇಲೆ ಇರಾನ್ ದಾಳಿ ನಡೆಸುವ ಮೂಲಕ ಅಮೆರಿಕವನ್ನ ಕೆಣಕಿತು. ಅನಂತರ ಅಮೆರಿಕ ಈಗ ಭಾರೀ ದಾಳಿ ನಡೆಸುತ್ತಿದೆ.

ಸ್ವಲ್ಪ ಸಮಯದ ಹಿಂದೆ ನನಗೆ ಇರಾನ್‌ನಿಂದ ಕರೆ ಬಂತು..!

ಅಮೆರಿಕದ ಡಿಜಿಟಲ್ ಮಾಧ್ಯಮ ವೆಬ್‌ಸೈಟ್ ಆಕ್ಸಿಯೋಸ್ ಪ್ರಕಾರ, 'ಸ್ವಲ್ಪ ಸಮಯದ ಹಿಂದೆ ಕರೆ ಬಂತು. ಇರಾನ್ ಅಧಿಕಾರಿಗಳು ರಾಜಿ ಮಾಡಿಕೊಳ್ಳಲು ಕರೆ ಮಾಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಆದರ ಅಧ್ಯಕ್ಷ ಟ್ರಂಪ್ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರಿಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ವಿ, 'ನಾವು ನಿಂದನೆಯ ಭಾಷೆಯಿಂದಲ್ಲ, ಬದಲಾಗಿ ಕ್ರಿಯೆಯಿಂದ ಪ್ರತಿಕ್ರಿಯಿಸುತ್ತೇವೆ' ಎಂದು ತಿರುಗೇಟು ನೀಡಿದ್ದಾರೆ. 

ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು!

ಟ್ರಂಪ್ ಅವರ ಹೇಳಿಕೆಗಳು ಇರಾನ್ ಜನರ ಶ್ರೇಷ್ಠತೆ, ಘನತೆ ಮತ್ತು ದೃಢಸಂಕಲ್ಪವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಇರಾನ್ ತನ್ನ ರಾಷ್ಟ್ರೀಯ ಹಿತಾಸಕ್ತಿ,ಸಾರ್ವಭೌಮತ್ವವನ್ನು ರಕ್ಷಿಸಲು ಬದ್ಧವಾಗಿದೆ. ಯಾವುದೇ ಒತ್ತಡ ಅಥವಾ ಅವಮಾನಕರ ವಾಕ್ಚಾತುರ್ಯಕ್ಕೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯಿಸಿದೆ.