ಟ್ವಿಟ್ಟರ್‌ ಕಚೇರಿಗೆ ಸ್ವಂತ ಟಾಯ್ಲೆಟ್ ಪೇಪರ್ ತರುತ್ತಿರುವ ಉದ್ಯೋಗಿಗಳು: ಕಾರಣ ಹೀಗಿದೆ..

ಟ್ವಿಟ್ಟರ್‌ ಸಂಸ್ಥೆಯಲ್ಲಿ ಎಲಾನ್‌ ಮಸ್ಕ್‌ ತೀವ್ರ ವೆಚ್ಚ ಕಡಿತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆ,  ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ಅಮೆರಿಕದ  ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ದಿನಾ ಆಫೀಸ್‌ಗೆ ಬರುವಾಗ ತಮ್ಮ ಮನೆಯಿಂದಲೇ ಟಾಯ್ಲೆಟ್‌ ಪೇಪರ್‌ ತರಲು ಪ್ರಾರಂಭಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 

twitter employees bring their own toilet paper after elon musk fired janitors report ash

ಎಲಾನ್‌ ಮಸ್ಕ್‌ (Elon Musk) ಟ್ವಿಟ್ಟರ್‌ (Twitter) ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಮೈಕ್ರೋ ಬ್ಲಾಗಿಂಗ್ ಜಾಲತಾಣದ (Micro Blogging Platform) ಬಗ್ಗೆ ಸಾಕಷ್ಟು ಸುದ್ದಿಗಳು ಹೊರಬರುತ್ತಲೇ ಇದೆ. ಸಾವಿರಾರು ಸಿಬ್ಬಂದಿಯನ್ನು (Employees) ಟ್ವಿಟ್ಟರ್‌ ಸಂಸ್ಥೆಯಿಂದ ಕಿತ್ತು ಹಾಕಿದ ಬಳಿಕವೂ ಸಂಸ್ಥೆ ಸಾಕಷ್ಟು ನಷ್ಟ ಅನುಭವಿಸುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆ ನಷ್ಟ ತಡೆಯಲು ಎಲಾನ್‌ ಮಸ್ಕ್‌ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಂಡ ಕಾರಣ ಟ್ವಿಟ್ಟರ್‌ ಕಚೇರಿ (Office) ತೀವ್ರ ಅವ್ಯಸ್ಥೆಯಿಂದ ಕೂಡಿದೆ ಎಂದು ತಿಳಿದುಬಂದಿದೆ.

ಟ್ವಿಟ್ಟರ್‌ ಸಂಸ್ಥೆಯಲ್ಲಿ ಎಲಾನ್‌ ಮಸ್ಕ್‌ ತೀವ್ರ ವೆಚ್ಚ ಕಡಿತ ಕ್ರಮಗಳನ್ನು (Cost Cutting Measures) ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆ,  ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ಅಮೆರಿಕದ  ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ದಿನಾ ಆಫೀಸ್‌ಗೆ ಬರುವಾಗ ತಮ್ಮ ಮನೆಯಿಂದಲೇ ಟಾಯ್ಲೆಟ್‌ ಪೇಪರ್‌ ತರಲು ಪ್ರಾರಂಭಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 

ಇದನ್ನು ಓದಿ: ಸಾವಿರಾರು ಬಳಕೆದಾರರಿಗೆ ಟ್ವಿಟ್ಟರ್‌ ಡೌನ್: ನೆಟ್ಟಿಗರ ಆಕ್ರೋಶ..!

ಹೆಚ್ಚಿನ ವೇತನಕ್ಕಾಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹೌಸ್‌ ಕೀಪಿಂಗ್ ಸಿಬ್ಬಂದಿ ಮುಷ್ಕರ ನಡೆಸಿದ ನಂತರ ಅವರನ್ನು ವಜಾಗೊಳಿಸಲಾಗದೆ. ಈ ಹಿನ್ನೆಲೆ ಕಚೇರಿ ವಾಸನೆ ಹೊಡೆಯುತ್ತಿರುವ ಕಾರಣ, ಬೇಸತ್ತ ಉದ್ಯೋಗಿಗಳು ಟಾಯ್ಲೆಟ್‌ ಪೇಪರ್‌ ತರುತ್ತಿದ್ದಾರೆ ಎನ್ನಲಾಗಿದೆ. 

ಹೌಸ್‌ ಕೀಪಿಂಗ್ ಸಿಬ್ಬಂದಿಯ ಕೊರತೆ ಕಚೇರಿಯನ್ನು ಅಸ್ತವ್ಯಸ್ತಗೊಳಿಸಿದ್ದು, ಕಚೇರಿಯ ಶೌಚಾಲಯಗಳೆಲ್ಲ ಕೊಳಕಾಗಿದೆ. ಜತೆಗೆ, ಉಳಿದ ಆಹಾರದ ವಾಸನೆ ಎಲ್ಲವೂ ಸೇರಿಕೊಂಡು ನಿರಂತರ ವಾಸನೆ ಉಂಟಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿದೆ. 

ಇದನ್ನೂ ಓದಿ: Twitter ಮುಖ್ಯಸ್ಥ ಸ್ಥಾನಕ್ಕೆ ಗುಡ್‌ಬೈ ಹೇಳ್ತಾರಾ ಎಲಾನ್‌ ಮಸ್ಕ್..? ಜನರ ಒಲವು ಹೀಗಿದೆ ನೋಡಿ..

ಈ ಹಿನ್ನೆಲೆ ಸಪ್ಲೈಗಳನ್ನು ಬದಲಿಸಲು ಹೌಸ್‌ ಕೀಪಿಂಗ್ ಸಿಬ್ಬಂದಿ ಇಲ್ಲದ ಕಾರಣ ಕೆಲವು ಉದ್ಯೋಗಿಗಳು ತಮ್ಮದೇ ಆದ ಟಾಯ್ಲೆಟ್ ಪೇಪರ್ ಅನ್ನು ತರುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಅಲ್ಲದೆ, ಟ್ವಿಟ್ಟರ್‌ ಕಚೇರಿಯ 6 ಮಹಡಿಗಳ ಪೈಕಿ 4 ಮಹಡಿಯ ಕಚೇರಿಗಳನ್ನು ಬಂದ್‌ ಮಾಡಿ ಕೇವಲ 2 ಮಹಡಿಗಳ ಕೊಡಿಗಳಿಗೆ ಎಲಾನ್‌ ಮಸ್ಕ್‌ ಉದ್ಯೋಗಿಗಳನ್ನು ತುಂಬಿದ್ದಾರೆ ಎಂದೂ ಹೇಳಲಾಗುತ್ತಿದೆ. 

ಇನ್ನು, ಹೌಸ್‌ ಕೀಪಿಂಗ್ ಸುದ್ದಿ ಮಾತ್ರವಲ್ಲದೆ, ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿರುವ ಟ್ವಿಟ್ಟರ್‌ನ ಡೇಟಾ ಕೇಂದ್ರವೊಂದನ್ನೂ ಕ್ಲೋಸ್‌ ಮಾಡುತ್ತಿದ್ದಾರೆ. ಇದರಿಂದ ಟ್ವಿಟ್ಟರ್‌ ಕಾರ್ಯಕ್ಷಮತೆಗೆ ಹಾನಿ ಮಾಡುತ್ತದೆ ಎಂಬ ಉದ್ಯೋಗಿಗಳ ಆತಂಕದ ಹೊರತಾಗಿಯೂ ಬಂದ್‌ ಮಾಡಲಾಗಿದೆ. ಸಾಮಾಜಿಕ ನೆಟ್‌ವರ್ಕ್ ಅನ್ನು ಚಾಲನೆಯಲ್ಲಿರುವ ಮೂರು ನಿರ್ಣಾಯಕ ಸರ್ವರ್ ಸೌಲಭ್ಯಗಳಲ್ಲಿ ಈ ಡೇಟಾ ಕೇಂದ್ರವೂ ಒಂದು ಎಂದು ತಿಳಿದುಬಂದಿದೆ. ಸರ್ವರ್‌ಗಳನ್ನು ಕಳೆದುಕೊಳ್ಳುವುದು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಕೆಲವರು ಕಳವಳ ವ್ಯಕ್ತಪಡಿಸಿದರು. ಆದರೆ, ಹಣ ಉಳಿಸುವುದು ಆದ್ಯತೆ ಎಂದು ಹೇಳಲಾಯಿತು ಎಂದೂ ನ್ಯೂಯಾರ್ಕ್‌ ಟೈಮ್ಸ್ ವರದಿ ಹೇಳುತ್ತದೆ. 

ಇದನ್ನೂ ಓದಿ: ಟ್ವಿಟ್ಟರ್‌ ಬ್ಲೂಟಿಕ್‌ ಸೇವೆ ಜಾರಿ: ಟ್ವೀಟ್‌ ಪದಗಳ ಮಿತಿ 4000ಕ್ಕೆ ಹೆಚ್ಚಳ..!

ಈ ಮಧ್ಯೆ, ಟ್ವಿಟ್ಟರ್‌ ಕಂಪನಿಯು ತನ್ನ ಸಿಯಾಟಲ್ ಕಟ್ಟಡದಲ್ಲಿ ಬಾಡಿಗೆ ಪಾವತಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿರುವುದರಿಂದ ತನ್ನ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಲು ಕೇಳಿಕೊಂಡಿದೆಯಂತೆ. ಈ ವರದಿಯ ಪ್ರಕಾರ, ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ ಸದ್ಯ ನ್ಯೂಯಾರ್ಕ್ ನಗರ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಾತ್ರ ಕಚೇರಿಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.

ಆದರೂ, ತನ್ನ ಬೇ ಏರಿಯಾ ಪ್ರಧಾನ ಕಚೇರಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿ ಬಾಡಿಗೆ ಕಟ್ಟುವುದನ್ನೇ ಟ್ವಿಟ್ಟರ್‌ ಕಂಪನಿ ಬಿಟ್ಟಿದೆ ಎಂದೂ ಹೇಳಲಾಗುತ್ತದೆ. ಅಲ್ಲದೆ, ನ್ಯೂಯಾರ್ಕ್ ಕಚೇರಿಗಯಲ್ಲಿ ಕ್ಲೀನರ್‌ಗಳು ಮತ್ತು ಸೆಕ್ಯುರಿಟಿ ಗಾರ್ಡ್‌ಗಳನ್ನು ಸಹ ವಜಾಗೊಳಿಸಲಾಗಿದೆ.

ಇದನ್ನು ಓದಿ: ಟ್ವಿಟ್ಟರ್‌ ಕಚೇರಿಯ ಕೊಠಡಿಗಳನ್ನು ಬೆಡ್‌ರೂಂ ಆಗಿ ಪರಿವರ್ತಿಸಿದ ಎಲಾನ್‌ ಮಸ್ಕ್..!

ಇನ್ನೊಂದೆಡೆ, ಎಲಾನ್‌ ಮಸ್ಕ್ ಅವರ ವಿಚಿತ್ರ ನಾಯಕತ್ವದ ಶೈಲಿ ಕೆಲವು ಟ್ವಿಟ್ಟರ್‌ ಉದ್ಯೋಗಿಗಳನ್ನು ದೂರ ಮಾಡಿದೆ ಎಂದೂ ನ್ಯೂಯಾರ್ಕ್‌ ಟೈಮ್ಸ್‌ ವರದಿ ಹೇಳಿದೆ. ಹಾಗೆ, ಕಂಪನಿಯ ಕಾರ್ಯಾಚರಣೆಗಳ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಉದ್ಯೋಗಿಗಳನ್ನು ಗುರುತಿಸುವಂತೆ ಅವರು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಂ. 1 ಶ್ರೀಮಂತ ಸ್ಥಾನ ಕಳೆದುಕೊಂಡ ಬಳಿಕ ಟ್ವಿಟ್ಟರ್‌ ಬಜೆಟ್‌ನಿಂದ ಕಾರ್ಮಿಕೇತರ ವೆಚ್ಚದಲ್ಲಿ 500 ಮಿಲಿಯನ್ ಡಾಲರ್‌ ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ವರದಿಯಾಗಿದೆ.

Latest Videos
Follow Us:
Download App:
  • android
  • ios