ದಾಳಿಯಲ್ಲಿ ಇಸ್ರೇಲ್ ಪಿಎಂ ನೇತನ್ಯಾಹು ಹತ್ಯೆಯಾಗಿದ್ದಾರ? 6 ಬೆರಳಿನ ವಿಡಿಯೋದಿಂದ ಅನುಮಾನ ಹೆಚ್ಚಾಗಿದೆ. ಯುದ್ಧ ಆರಂಭಗೊಂಡ ಬಳಿಕ ನೇತನ್ಯಾಹು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಮಾ.13ರ ವಿಡಿಯೋ ಇದೀಗ ಹಲವು ಪ್ರಶ್ನೆ ಹುಟ್ಟುಹಾಕಿದೆ.
ಟೆಲ್ ಅವೀವ್ (ಮಾ.14) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ಪರೂಪ ಪಡೆದುಕೊಂಡಿದೆ. ಇಸ್ರೇಲ್ ಜೊತೆ ಸೇರಿ ಅಮೆರಿಕ ಕೂಡ ದಾಳಿ ನಡೆಸುತ್ತಿದೆ. ಫೆಬ್ರವರಿ 28ರಂದು ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಸೇರಿದಂತೆ ಇಡೀ ಕುಟುಂಬವೇ ಹತ್ಯೆಯಾಗಿತ್ತು. ಆದರೆ ಇರಾನ್ ಯಾವುದೇ ಶರಣಾಗತಿಗೆ ಒಪ್ಪಂದೆ ಪ್ರತಿ ದಾಳಿ ನಡೆಸುತ್ತಲೇ ಇದೆ. ಖಮೇನಿ ಹತ್ಯೆ ಬಳಿಕ ಇರಾನ್ ಪ್ರತೀಕಾರವಾಗಿ ನಡೆಸಿದ ದಾಳಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಬಮಿನ್ ನೇತನ್ಯಾಹು ಹತ್ಯೆಯಾಗಿದ್ದಾರಾ? ಈ ಅನುಮಾನಗಳು ಹೆಚ್ಚಾಗುತ್ತಿದೆ. ಯುದ್ಧದ ಬಳಿಕ ನೇತನ್ಯಾಹು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್‌ಗಳು ಕಾಣಿಸುತ್ತಿದೆ. ಇದೀಗ ಮಾರ್ಚ್ 13ರಂದು ಪ್ರಕಟಿಸಲಾದ ವಿಡಿಯೋ ಒಂದು ನೇತನ್ಯಾಹು ಕುರಿತು ಅನುಮಾನ ಹೆಚ್ಚಿಸಿದೆ.
6 ಬೆರಳಿನಿಂದ ಹೆಚ್ಚಿದ ಅನುಮಾನ
ಬೆಂಜಮಿನ್ ನೇತನ್ಯಾಹು ಮಾರ್ಚ್ 13ರಂದು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನನ್ನು ಪೋಸ್ಟ್ ಮಾಡಿದ್ದಾರೆ. ಕಳೆದ 15 ದಿನಗಳಿಂದ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುತ್ತಿದೆ. ಫೆಬ್ರವರಿ 28ರ ದಾಳಿಯಲ್ಲಿ ಇರಾನ್ ನಾಯಕ ಆಯತೊಲ್ಲ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ. ನೇತನ್ಯಾಹು ಎಲ್ಲಿ ಎಂದು ಕೇಳುತ್ತಿದ್ದ ಹಲವರಿಗೆ ಉತ್ತರವಾಗಿ ಈ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಆದರೆ ಇದೇ ವಿಡಿಯೋದಲ್ಲಿ ಕೆಲ ಬಳಕೆದಾರರು ಅನುಮಾನಗಳು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ನೇತನ್ಯಾಹು ಬಲಗೈ ಬೆರಳು 6 ಇದೆ. ಇದು ಎಐ ವಿಡಿಯೋ ಮಾಡಿ ಪೋಸ್ಟ್ ಮಾಡಲಾಗಿದೆ ಎಂಬ ಅನುಮಾನವನ್ನು ಸೋಶಿಯಲ್ ಮೀಡಿಯಾ ಮೂಲಕ ವ್ಯಕ್ತಪಡಿಸಿದ್ದಾರೆ.
ದಾಳಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಅಮೆರಿಕ
ನೇತನ್ಯಾಹು ಮಾತನಾಡುವ ವೇಳೆ 6 ಬೆರಳುಗಳು ಗೋಚರಿಸುತ್ತಿದೆ. ಇದು ಎಐ ಮೂಲಕ ಎಡಿಟ್ ಮಾಡಿ ಹಾಕಲಾಗಿದೆ. ನೇತನ್ಯಾಹು ಜೀವಂತವಾಗಿಲ್ಲ ಅನ್ನೋದಕ್ಕೆ ಇದೆ ಸಾಕ್ಷಿ ಎಂದು ಹಲವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೇತನ್ಯಾಹು ಇರುವಿಕೆ ಬಗ್ಗೆ ಹಲವು ಪ್ರಶ್ನೆಗಳು ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದೇ ಕಾರಣದಿಂದ ಅಮೆರಿಕ ಈ ದಾಳಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದೆ ಎಂದಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಈ ವಿಡಿಯೋ ಹಾಗೂ ಕೆಲ ಸ್ಕ್ರೀನ್‌ಶಾಟ್ ಹಂಚಿಕೊಳ್ಳುವ ಮೂಲಕ ನೇತನ್ಯಾಹು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂಬ ವರದಿಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಈ ಸುದ್ದಿಯನ್ನು ಹಲವು ಫ್ಯಾಕ್ಟ್ ಟೆಕ್ ಸಂಸ್ಥೆಗಳು ಅಲ್ಲಗೆಳೆದಿದೆ. ನೇತನ್ಯಾಹು ಸುರಕ್ಷಿತವಾಗಿದ್ದಾರೆ ಎಂದು ವರದಿ ನೀಡಿದೆ.
ಇದೇ ವೇಳೆ ಅಮೆರಿಕದ ರಾಜಕೀಯ ವಿಶ್ಲೇಷಕ ಕ್ಯಾಂಡೇಸ್ ಒವೆನ್ಸ್ ಈ ಕುರಿತು ಎಕ್ಸ್ ಮೂಲಕ ಪ್ರಶ್ನಿಸಿದ್ದಾರೆ. ಅಮೆರಿಕ ಯಾಕೆ ಸುಳ್ಳು ಹೇಳುತ್ತಿದೆ. ಇರಾನ್‌ನಲ್ಲಿ ಏನು ನಡೆಯುತ್ತಿದೆ ಅನ್ನೋದು ಅಮೆರಿಕ ತನ್ನ ಜನತೆಗೆ ಸುಳ್ಳು ಹೇಳುತ್ತಿದೆ. ಎಲ್ಲಿದ್ದಾರೆ ಬಿಬಿ (ನೇತನ್ಯಾಹು) ಎಐ ನಕಲಿ ವಿಡಿಯೋ ಪೋಸ್ಟ್ ಮಾಡಿ ಯಾರಿಗೆ ಸುಳ್ಳು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಹಾಗೂ ನೇತನ್ಯಾಹು ವಿಡಿಯೋ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ.

