ಸಾವಿರಾರು ಬಳಕೆದಾರರಿಗೆ ಟ್ವಿಟ್ಟರ್‌ ಡೌನ್: ನೆಟ್ಟಿಗರ ಆಕ್ರೋಶ..!

ಬಳಕೆದಾರರಿಗೆ Twitter ವೆಬ್‌ಸೈಟ್‌ನಲ್ಲಿ ಹಲವಾರು ನಿಮಿಷಗಳವರೆಗೆ ಲಾಗ್ ಇನ್ ಮಾಡಲು ಸಾಧ್ಯವಾಗಲಿಲ್ಲ. ಆದರೂ, ಮೈಕ್ರೋಬ್ಲಾಗಿಂಗ್ ಸೈಟ್ ಮೊಬೈಲ್ ಫೋನ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. 

twitter down for thousands of users downdetector reports ash

ಸ್ಮಾರ್ಟ್‌ಫೋನ್‌ಗಳು (Smartphones) ಬಂದ ಮೇಲೆ ಸಾಮಾಜಿಕ ಜಾಲತಾಣಗಳ (Social Media) ಬಳಕೆ ಬಹುತೇಕ ಎಲ್ಲ ಜನರಲ್ಲೂ ಹೆಚ್ಚಿದೆ. ಈ ಹಿನ್ನೆಲೆ ಕೆಲ ಕಾಲ ಸಾಮಾಜಿಕ ಜಾಲತಾಣ ಸೇವೆಯಲ್ಲಿ ವ್ಯತ್ಯಯವಾದರೂ ಜನರು ಹೆಚ್ಚು ತೊಂದರೆ ಪಡುತ್ತಾರೆ. ಇದೇ ರೀತಿ, ಈಗ ಭಾರತ (India), ಅಮೆರಿಕ (United States) ಸೇರಿ ಜಗತ್ತಿನ ಬಹುತೇಕ ದೇಶಗಳಲ್ಲಿ ಟ್ವಿಟ್ಟರ್‌ (Twitter) ಡೌನ್‌ ಆಗಿದ್ದು, ಸಾವಿರಾರು ಜನರು ಟ್ವೀಟ್‌ (Tweet)  ಮಾಡಲು ಆಗುತ್ತಿಲ್ಲ, ಇತರರ ಟ್ವೀಟ್‌ಗಳನ್ನು ನೋಡಲು ಆಗುತ್ತಿಲ್ಲ. ನಮ್ಮ ಸೈಟ್‌ ರಿಫ್ರೆಶ್‌ ಆಗುತ್ತಿಲ್ಲ ಎಂದು ಗೊಣಗುತ್ತಿದ್ದಾರೆ. ಹೌದು, ಇಂಟರ್ನೆಟ್‌ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡಿಕೆಕ್ಟರ್‌ ( Downdetector.com) ಪ್ರಕಾರ, Twitter Inc ಸಾವಿರಾರು ಬಳಕೆದಾರರಿಗೆ ಸ್ಥಗಿತಗೊಂಡಿದೆ.

ಅಮೆರಿಕ ಕಾಲಮಾನ ಬುಧವಾರ ರಾತ್ರಿ 7. 40 ರ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಅನ್ನು ಪ್ರವೇಶಿಸುವಲ್ಲಿ 10,000 ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಅದೇ ರೀತಿ, ಭಾರತದಲ್ಲೂ ಸಹ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್‌ ಗುರುವಾರ ಬೆಳಗ್ಗೆ 6.30 ರ ಸುಮಾರಿನಿಮದ ವೆಬ್‌ ಆವೃತ್ತಿ ಅಥವಾ ಡೆಸ್ಕ್‌ಟಾಪ್‌ ಆವೃತ್ತಿಗೆ ಸೈನ್ ಇನ್ ಮಾಡುವಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದ ಕಾರಣ ಹಲವಾರು ಬಳಕೆದಾರರಿಗೆ ಡೌನ್ ಆಗಿದೆ. ಈ ಸ್ಥಗಿತ ಇನ್ನೂ ಮುಂದುವರೆದಿದೆ.

ಇದನ್ನು ಓದಿ: Jio Down: ಹಲವು ಗಂಟೆಗಳ ಕಾಲ ದೇಶಾದ್ಯಂತ ಡೌನ್‌ ಆಗಿದ್ದ ಜಿಯೋ ಸೇವೆ ಮತ್ತೆ ವಾಪಸ್‌..!

twitter down for thousands of users downdetector reports ash

ಬಳಕೆದಾರರಿಗೆ Twitter ವೆಬ್‌ಸೈಟ್‌ನಲ್ಲಿ ಹಲವಾರು ನಿಮಿಷಗಳವರೆಗೆ ಲಾಗ್ ಇನ್ ಮಾಡಲು ಸಾಧ್ಯವಾಗಲಿಲ್ಲ. ಆದರೂ, ಮೈಕ್ರೋಬ್ಲಾಗಿಂಗ್ ಸೈಟ್ ಮೊಬೈಲ್ ಫೋನ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. 

ಕೆಲವು ಬಳಕೆದಾರರು ತಮ್ಮ ಟ್ವಿಟ್ಟರ್‌ ನೋಟಿಫೀಕೇಷನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ. ಟ್ವಿಟ್ಟರ್‌ ಡೌನ್ ಆಗಿದೆ ಎಂದು ಹಲವು ಬಳಕೆದಾರರು ವರದಿ ಮಾಡಿದ್ದಾರೆ ಎಂದು ಡೌನ್‌ಡಿಕೆಕ್ಟರ್‌ ಸಾಫ್ಟ್‌ವೇರ್ ತೋರಿಸಿದೆ. "ಬಳಕೆದಾರರ ವರದಿಗಳು Twitter ನಲ್ಲಿ ಸಂಭವನೀಯ ಸಮಸ್ಯೆಗಳನ್ನು ಸೂಚಿಸುತ್ತವೆ" ಎಂದು downdetector.in ಮಾಹಿತಿ ನೀಡಿದೆ. 

ಇದನ್ನೂ ಓದಿ: Twitter ಮುಖ್ಯಸ್ಥ ಸ್ಥಾನಕ್ಕೆ ಗುಡ್‌ಬೈ ಹೇಳ್ತಾರಾ ಎಲಾನ್‌ ಮಸ್ಕ್..? ಜನರ ಒಲವು ಹೀಗಿದೆ ನೋಡಿ..

ಇನ್ನು, ಭಾರತ, ಅಮೆರಿಕ ಮಾತ್ರವಲ್ಲದೆ ಕೆನಡಾ, ಅರ್ಜೆಂಟೀನಾ, ಯುನೈಟೆಡ್ ಕಿಂಗ್ಡಮ್, ಫಿಲಿಪೈನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳಲ್ಲಿ ಈ ತೊಂದರೆಯಾಗಿದೆ. ಟ್ವಿಟ್ಟರ್‌ನ ಮುಖಪುಟಕ್ಕೆ ಭೇಟಿ ನೀಡಿದಾಗ ಟೈಮ್‌ಲೈನ್ ಪಾಪ್ ಅಪ್ ನೋಡುವ ಬದಲು, ಸ್ಥಗಿತವನ್ನು ಎದುರಿಸುತ್ತಿರುವ ಬಳಕೆದಾರರಿಗೆ ದೋಷ ಸಂದೇಶ ಬರುತ್ತಿದೆ. "ಏನೋ ತಪ್ಪಾಗಿದೆ, ಆದರೆ ಚಿಂತಿಸಬೇಡಿ - ಇದು ನಿಮ್ಮ ತಪ್ಪಲ್ಲ. ಮತ್ತೊಮ್ಮೆ ಪ್ರಯತ್ನಿಸೋಣ." ಎಂಬ ಸಂದೇಶ ಬರುತ್ತಿದೆ. 

ಟ್ವಿಟ್ಟರ್‌ನ iPhone ಮತ್ತು Android ಆವೃತ್ತಿಗಳು, ಬಹುಪಾಲು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವಂತೆ ತೋರುತ್ತಿದೆ; ಆದರೂ, ನೋಟಿಫಿಕೇಶನ್‌ ಟ್ಯಾಬ್ ಅಪ್‌ಡೇಟ್‌ ಆಗುವಂತೆ ತೋರುತ್ತಿಲ್ಲ. ಸದ್ಯಕ್ಕೆ, ನೀವು ಟ್ವಿಟ್ಟರ್‌ ವೆಬ್‌ಸೈಟ್‌ ನೋಡಲು ಅದರ ಅಪ್ಲಿಕೇಷನ್‌ ಬಳಕೆಮಾಡಬಹುದು. ಕೆಲವರಿಗೆ ಟ್ವಿಟ್ಟರ್‌ ಡೆಸ್ಕ್‌ಟಾಪ್‌ನಲ್ಲೂ ಕಾರ್ಯನಿರ್ವಹಿಸುತ್ತಿದೆ ಎಂದೂ ಹೇಳಲಾಗಿದೆ. 

ಹಲವು ನೆಟ್ಟಿಗರು ಟ್ವಿಟ್ಟರ್‌ ಸೇವೆ ಡೌನ್‌ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಹಲವರು ಟ್ವಿಟ್ಟರ್‌ ಅನ್ನು ಟ್ರೋಲ್‌ ಮಾಡಿದ್ದಾರೆ. 

Latest Videos
Follow Us:
Download App:
  • android
  • ios