Twitter ಮುಖ್ಯಸ್ಥ ಸ್ಥಾನಕ್ಕೆ ಗುಡ್‌ಬೈ ಹೇಳ್ತಾರಾ ಎಲಾನ್ ಮಸ್ಕ್..? ಜನರ ಒಲವು ಹೀಗಿದೆ ನೋಡಿ..
ಸಮೀಕ್ಷೆಯ ಫಲಿತಾಂಶಗಳಿಗೆ ನಾನು ಬದ್ಧನಾಗಿರುತ್ತೇನೆ ಎಂದು ಎಲಾನ್ ಮಸ್ಕ್ ಭಾನುವಾರ ಹೇಳಿದ್ದರು. ಆದರೆ ಫಲಿತಾಂಶ ಬಂದ ಬಳಿಕ ಅವರು ಈವರೆಗೆ ಯಾವುದೇ ಟ್ವೀಟ್ ಮಾಡಿಲ್ಲ.
ಟ್ವಿಟ್ಟರ್ (Twitter) ಮಾಲೀಕ ಎಲೋನ್ ಮಸ್ಕ್ (Elon Musk) ಅವರು ತಾವು 44 ಬಿಲಿಯನ್ ಡಾಲರ್‌ಗೆ ಖರೀದಿಸಿದ ಮೈಕ್ರೋಬ್ಲಾಗಿಂಗ್ ಸೈಟ್‌ನ (Micro Blogging Site) ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂದು ತಮ್ಮ ಫಾಲೋವರ್‌ಗಳನ್ನು ಸಮೀಕ್ಷೆಯಲ್ಲಿ (Poll) ಕೇಳಿ ಟ್ವೀಟ್ ಮಾಡಿದ್ದರು. ಈ ಪೈಕಿ, ಹೆಚ್ಚಿನ ಬಳಕೆದಾರರು ಈ ಕ್ರಮದ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಸಮೀಕ್ಷೆಯ ಫಲಿತಾಂಶಗಳು ತೋರಿಸಿವೆ. ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದ ಸಮೀಕ್ಷೆಯಲ್ಲಿ ಒಟ್ಟು 17 ಮಿಲಿಯನ್ ಮತಗಳು (Votes) ಚಲಾವಣೆಯಾಗಿದೆ. ಇದರಲ್ಲಿ, ಎಲೋನ್ ಮಸ್ಕ್ ಅವರು ಅಧಿಕಾರ ವಹಿಸಿಕೊಂಡ 2 ತಿಂಗಳೊಳಗೆ ಬಿಲಿಯನೇರ್‌ಗೆ ಹಿನ್ನೆಡೆಯಾಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿಯಲು ಹೆಚ್ಚಿನ ಟ್ವಿಟ್ಟರ್ ಬಳಕೆದಾರರು ಪೋಲ್‌ನಲ್ಲಿ ಮತ ಹಾಕಿದ್ದಾರೆ.
ಭಾನುವಾರ ಸಂಜೆ ಈ ಸಮೀಕ್ಷೆ ಪ್ರಾರಂಭವಾಗಿದ್ದು, ಈ ಪೋಲ್ ಪ್ರಕಾರ ಮಾರು 57.5% ರಷ್ಟು ಮತಗಳು "ಹೌದು" ಎಂದು ಬಂದಿದ್ದರೆ, ಇನ್ನು, 42.5% ರಷ್ಟು ಜನರು ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಎಲೋನ್ ಮಸ್ಕ್ ಕೆಳಗಿಳಿಯುವುದನ್ನು ವಿರೋಧಿಸಿದ್ದಾರೆ. 17.5 ಮಿಲಿಯನ್ ಅಂದರೆ 1.75 ಕೋಟಿ ಜನರು ಈ ಮತದಾನದಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನು ಓದಿ: ವಿಶ್ವದ ನಂ.1 ಶ್ರೀಮಂತನ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್; ಸಿರಿವಂತನ ಬಿರುದು ಅರ್ನಾಲ್ಟ್ ತೆಕ್ಕೆಗೆ
ಸಮೀಕ್ಷೆಯ ಫಲಿತಾಂಶಗಳಿಗೆ ನಾನು ಬದ್ಧನಾಗಿರುತ್ತೇನೆ ಎಂದು ಎಲಾನ್ ಮಸ್ಕ್ ಭಾನುವಾರ ಹೇಳಿದ್ದರು. ಆದರೆ ಫಲಿತಾಂಶ ಬಂದ ಬಳಿಕ ಅವರು ಈವರೆಗೆ ಯಾವುದೇ ಟ್ವೀಟ್ ಮಾಡಿಲ್ಲ. ಅಲ್ಲದೆ, ಫಲಿತಾಂಶ ತಮ್ಮ ವಿರುದ್ಧವಾಗಿ ಬಂದರೆ, ತಾನು ಯಾವಾಗ ಕೆಳಗಿಳಿಯುತ್ತೇನೆ ಎಂಬುದರ ಕುರಿತು ವಿವರಗಳನ್ನು ಸಹ ಎಲಾನ್ ಮಸ್ಕ್ ಈವರೆಗೆ ನೀಡಿಲ್ಲ. ಆದರೆ, ಅಧಿಕಾರವನ್ನು ಬಯಸುವವರು ಕನಿಷ್ಠ ಅರ್ಹರು ಎಂಬ ಮಾರ್ಮಿಕ ಟ್ವೀಟ್ ಅನ್ನು ಸಹ ಅವರು ಮಾಡಿದ್ದರು. ಈ ಮಧ್ಯೆ, ಪ್ರೀಮಾರ್ಕೆಟ್ ಟ್ರೇಡಿಂಗ್‌ನಲ್ಲಿ ಎಲಾನ್ ಮಸ್ಕ್ ಒಡೆತನದ ಎಲೆಕ್ಟ್ರಿಕ್-ಕಾರು ತಯಾರಕ ಟೆಸ್ಲಾ ಷೇರುಗಳು ಸುಮಾರು 5% ನಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಈ ತಿಂಗಳ ಆರಂಭದಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಕಳೆದುಕೊಂಡ ಎಲಾನ್ ಮಸ್ಕ್, ಟನೆಲಿಂಗ್ ಎಂಟರ್‌ಪ್ರೈಸ್ ಬೋರಿಂಗ್ ಕಂಪನಿಯನ್ನು ಸ್ಥಾಪಿಸಿದ್ದರು, ಜತೆಗೆ ವೈದ್ಯಕೀಯ ಸಾಧನ ಕಂಪನಿ ನ್ಯೂರಾಲಿಂಕ್ ಅನ್ನು ಬೆಂಬಲಿಸುತ್ತಾರೆ ಮತ್ತು ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್ ಮುಖ್ಯಸ್ಥರೂ ಆಗಿದ್ದಾರೆ. ಇನ್ನೊಂದೆಡೆ, ಟ್ವಿಟ್ಟರ್ ಒಪ್ಪಂದದ ನಂತರ ಎಲಾನ್ ಮಸ್ಕ್ ಆಸ್ತಿ ಕಡಿಮೆಯಾಗುತ್ತಿದೆ ಎಂದು ಟೆಸ್ಲಾ ಹೂಡಿಕೆದಾರರು ಸಹ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟ್ವಿಟ್ಟರ್ ಬ್ಲೂಟಿಕ್ ಸೇವೆ ಜಾರಿ: ಟ್ವೀಟ್ ಪದಗಳ ಮಿತಿ 4000ಕ್ಕೆ ಹೆಚ್ಚಳ..!
ಟೆಸ್ಲಾ ಷೇರುಗಳು ಈ ವರ್ಷ ಈಗಾಗಲೇ ಸುಮಾರು 60% ನಷ್ಟು ಮೌಲ್ಯವನ್ನು ಕಳೆದುಕೊಂಡಿವೆ. ಹಾಗೂ, ಇತರ ಕಾರು ತಯಾರಕರಂತೆ, ಇದು ಪೂರೈಕೆ ಸರಪಳಿ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದೆ ಮತ್ತು ಎಲೆಕ್ಟ್ರಿಕಲ್ ವಾಹನ ತಯಾರಿಕಾ ಉದ್ಯಮದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಇನ್ನು, ಟ್ವಿಟ್ಟರ್ CEO ಆಗಿ ಎಲಾನ್ ಮಸ್ಕ್ ಅವರ ಆಳ್ವಿಕೆಯು ಅಂತ್ಯಗೊಳ್ಳುತ್ತದೆ ಮತ್ತು ಇದು ಟೆಸ್ಲಾ ಷೇರುಗಳಿಗೆ ಪ್ರಮುಖ ಪಾಸಿಟಿವ್ ಅಂಶವಾಗಿದೆ ಎಂದು ವೆಡ್‌ಬುಶ್ ವಿಶ್ಲೇಷಕ ಡಾನ್ ಐವ್ಸ್ ಹೇಳಿದ್ದಾರೆ.
ಮಸ್ಕ್ ಅಂದ್ರೆ ಟೆಸ್ಲಾ ಟೆಸ್ಲಾ ಅಂದ್ರೆ ಮಸ್ಕ್..!
ಟೆಸ್ಲಾ ಪ್ರತಿ ವರ್ಷ ಸರಿಸುಮಾರು ಒಂದು ಮಿಲಿಯನ್ ಕಾರುಗಳನ್ನು ವಿತರಿಸುವ ವಿಶ್ವದ ಅಗ್ರ ವಾಹನ ತಯಾರಕರಲ್ಲಿ ಒಂದಾಗಿದೆ. ಆದರೆ ಇತ್ತೀಚಿನ ವ್ಯವಸ್ಥಾಪನಾ ಸವಾಲುಗಳು, ಚೀನಾದಲ್ಲಿ ಸಾಂಕ್ರಾಮಿಕ-ಸಂಬಂಧಿತ ಲಾಕ್‌ಡೌನ್‌ಗಳು, ಹೆಚ್ಚಿನ ಸಾಲದ ವೆಚ್ಚಗಳು ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಯ ಮಂದ ದೃಷ್ಟಿಕೋನವು ಕಳವಳವನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: Forbes: ಜಗತ್ತಿನ ನಂ. 1 ಶ್ರೀಮಂತ ಎಂಬ ಹಣೆಪಟ್ಟಿನೂ ಕಳಕೊಂಡ್ರೇ ಎಲಾನ್ ಮಸ್ಕ್..?
ಹಾಗೂ, ಕಳೆದ ತಿಂಗಳಷ್ಟೇ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಸಮಯವನ್ನು ಕಡಿಮೆ ಮಾಡುವುದಾಗಿ ಮತ್ತು ಅಂತಿಮವಾಗಿ ಸಾಮಾಜಿಕ ಮಾಧ್ಯಮ ಕಂಪನಿಯನ್ನು ನಡೆಸಲು ಹೊಸ ನಾಯಕನನ್ನು ಹುಡುಕುವುದಾಗಿ ಡೆಲವೇರ್ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಸಿಇಒ ಸ್ಥಾನದಲ್ಲಿ ಸಂಭವನೀಯ ಬದಲಾವಣೆಯ ಕುರಿತು ಟ್ವಿಟ್ಟರ್ ಬಳಕೆದಾರರ ಕಾಮೆಂಟ್‌ಗೆ ಪ್ರತ್ಯುತ್ತರಿಸಿದ ಎಲಾನ್ ಮಸ್ಕ್ "ಯಾರೂ ಉತ್ತರಾಧಿಕಾರಿ ಇಲ್ಲ" ಎಂದು ಭಾನುವಾರ ಹೇಳಿದರು.
ಇನ್ನೊಂದೆಡೆ, ಸೋಮವಾರ ಟ್ವಿಟ್ಟರ್‌ನಲ್ಲಿ "ಎಲಾನ್", "ಟ್ವಿಟ್ಟರ್ ಸಿಇಒ", "ವೋಟ್ ಯೆಸ್" ಮತ್ತು "ವೋಟ್ ನೋ" ಎಂಬ ಇಂಗ್ಲೀಷ್ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್ ವಿಷಯಗಳಾಗಿದೆ.
ಇದನ್ನೂ ಓದಿ: ಟ್ವಿಟ್ಟರ್ ಕಚೇರಿಯ ಕೊಠಡಿಗಳನ್ನು ಬೆಡ್‌ರೂಂ ಆಗಿ ಪರಿವರ್ತಿಸಿದ ಎಲಾನ್ ಮಸ್ಕ್..!