Asianet Suvarna News Asianet Suvarna News

ಇಸ್ರೇಲ್‌ ದಾಳಿಗೆ ಬೆದರಿ ಗಾಜಾ ಪಟ್ಟಿಯ 4 ಲಕ್ಷ ಜನ ವಲಸೆ: 5100 ದಾಟಿದ ಸಾವಿನ ಸಂಖ್ಯೆ

24 ಗಂಟೆಯಲ್ಲಿ ಮನೆ ತೊರೆಯಿರಿ ಎಂಬ ಇಸ್ರೇಲ್‌ ಸೂಚನೆಯಿಂದ ಆತಂಕಕ್ಕೆ ಒಳಗಾಗಿದ್ದ ಉತ್ತರ ಗಾಜಾದ 11 ಲಕ್ಷ ಜನರ ಪೈಕಿ ಕನಿಷ್ಠ 4 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ದಕ್ಷಿಣ ಗಾಜಾಕ್ಕೆ ವಲಸೆ ಹೋಗಿದ್ದಾರೆ.

Threat of Israeli attack, 4 lakh people migrated from Gaza Strip Death toll crosses 5100 in Israel Palestin war akb
Author
First Published Oct 15, 2023, 7:00 AM IST

ಜೆರುಸಲೇಂ: ಹಮಾಸ್‌ ಉಗ್ರರು ಮತ್ತು ಅವರ ಮೂಲಸೌಕರ್ಯ ನಾಶಕ್ಕೆ ಸತತ ದಾಳಿ ನಡೆಸುತ್ತಿರುವ ಇಸ್ರೇಲಿ ಸೇನಾಪಡೆಗಳು ಗಾಜಾಪಟ್ಟಿ ಪ್ರದೇಶದ ಮೇಲಿನ ತಮ್ಮ ವಾಯುದಾಳಿಯನ್ನು ತೀವ್ರಗೊಳಿಸಿದ್ದು, ಭೂದಾಳಿ ನಡೆಸಲು ಗಡಿಯೊಳಗೆ ನುಗ್ಗಿ ಸಜ್ಜಾಗಿ ನಿಂತಿವೆ. ಹೀಗಾಗಿ 24 ಗಂಟೆಯಲ್ಲಿ ಮನೆ ತೊರೆಯಿರಿ ಎಂಬ ಇಸ್ರೇಲ್‌ ಸೂಚನೆಯಿಂದ ಆತಂಕಕ್ಕೆ ಒಳಗಾಗಿದ್ದ ಉತ್ತರ ಗಾಜಾದ 11 ಲಕ್ಷ ಜನರ ಪೈಕಿ ಕನಿಷ್ಠ 4 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ದಕ್ಷಿಣ ಗಾಜಾಕ್ಕೆ ವಲಸೆ ಹೋಗಿದ್ದಾರೆ.

ಈ ನಡುವೆ, ಈವರೆಗೂ ಗಾಜಾದ 1000ಕ್ಕೂ ಹೆಚ್ಚು ಪ್ರದೇಶಗಳನ್ನು ಗುರಿಯಾಗಿಸಿ ವಾಯುದಾಳಿ (Airstrike)ನಡೆಸಿ ಯಶಸ್ಸು ಸಾಧಿಸಿದ್ದಾಗಿ ಇಸ್ರೇಲ್‌ ಹೇಳಿದೆ. 


ಮತ್ತೊಂದೆಡೆ ಗಾಜಾಪಟ್ಟಿ ಗಡಿಯೊಳಗೆ ಇಸ್ರೇಲಿ ಸೇನೆ (Israel Army)ಪ್ರವೇಶಿಸಿದ್ದು, ತನ್ನ ಯೋಧರು, ಯುದ್ಧ ಟ್ಯಾಂಕರ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಗಡಿ ಪ್ರದೇಶದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದು, ಯಾವುದೇ ಕ್ಷಣದಲ್ಲಿ ದಾಳಿ ಆರಂಭಿಸುವ ಸುಳಿವು ನೀಡಿದೆ.

ಗಾಜಾಗೆ ರಕ್ತ ಕೊಡಲು ಸಿದ್ಧ, ಉಗ್ರರ ಮೇಲಿನ ದಾಳಿ ಖಂಡಿಸಿದ ಬಂಗಾಳ ಜಮೈತ್ ಇ ಉಲೆಮಾ!

ತೆರವು ಸೂಚನೆಗೆ ಖಂಡನೆ:

ಈ ನಡುವೆ ಇದೇ ವೇಳೆ 11 ಲಕ್ಷ ಜನರ ಏಕಾಏಕಿ ತೆರವಿಗೆ ಸೂಚಿಸಿದ ಇಸ್ರೇಲ್‌ ಸರ್ಕಾರದ ನಿರ್ಧಾರವನ್ನು 57 ಇಸ್ಲಾಮಿಕ್‌ ದೇಶಗಳ ಸಂಘಟನೆಯಾದ ‘ಆರ್ಗನೈಜೇಷನ್‌ ಆಫ್‌ ಇಸ್ಲಾಮಿಕ್‌ ಕೋ ಆಪರೇಷನ್‌’ ಖಂಡಿಸಿದೆ. ಜೊತೆಗೆ ಯುರೋಪಿಯನ್‌ ಒಕ್ಕೂಟ ಕೂಡಾ ಜನರ ತೆರವಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿವೆ. ಅಲ್ಲದೆ ವಿಶ್ವಸಂಸ್ಥೆ (United Nation) ಕೂಡಾ ಇಸ್ರೇಲ್‌ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದೆ.

'ಗರ್ಭಿಣಿಯ ಹೊಟ್ಟೆ ಸೀಳಲಾಗಿತ್ತು, ಇನ್ನೂ ಕರುಳಬಳ್ಳಿ ಕತ್ತರಿಸದ ಮಗುವಿಗೆ ಚಾಕು ಇರಿದಿದ್ದರು..' ಇದು ಹಮಾಸ್‌ನ ಭೀಬತ್ಸ ಕೃತ್ಯ!

5 ಸಾವಿರ ದಾಟಿದ ಸಾವು:ಸಂಘರ್ಷದಿಂದ ಉಭಯ ದೇಶಗಳಲ್ಲಿ ಸಾವನ್ನಪ್ಪಿದ ಯೋಧರು ಮತ್ತು ನಾಗರಿಕ ಸಂಖ್ಯೆ 5100 ದಾಟಿದ್ದು, ಗಾಯಾಳುಗಳ ಸಂಖ್ಯೆ 10 ಸಾವಿರದ ಸನಿಹಕ್ಕೆ ಬಂದಿದೆ. ಈ ಪೈಕಿ ಇಸ್ರೇಲ್‌ ಕಡೆ 1600 ಜನರು ಸಾವ್ನಪ್ಪಿದ್ದಾರೆ. ಗಾಜಾ ಪಟ್ಟಿ ಪ್ರದೇಶದಲ್ಲಿ 724 ಮಕ್ಕಳು ಸೇರಿದಂತೆ 2215 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಗಾಜಾ ಗಡಿಯಲ್ಲಿ 1300 ಹಮಾಸ್‌ ಉಗ್ರರ ಶವ ಪತ್ತೆಯಾಗಿದೆ ಎಂಬ ಇಸ್ರೇಲ್‌ ಸರ್ಕಾರದ ಹೇಳಿಕೆಯನ್ನು ಪರಿಗಣಿಸಿದರೆ ಒಟ್ಟಾರೆ ಸಾವಿನ ಸಂಖ್ಯೆ 5100 ದಾಟಿದಂತಾಗಿದೆ.

ಇಸ್ರೇಲ್ ನಿರ್ಮಾಣವಾಗಿದ್ದು ಕದ್ದ ಭೂಮಿಯಲ್ಲೆಂದ ಚೇತನ್: ಪಾಕ್, ಬಾಂಗ್ಲಾ ಇನ್ನೆಂಥ ಕೇಳುತ್ತಿದ್ದಾರೆ ನೆಟ್ಟಿಗರು!

ಗಡಿಯಲ್ಲೇ ನೆರವು ಸಾಮಗ್ರಿ:

ಗಾಜಾದ ಸಂತ್ರಸ್ತರಿಗೆಂದು ವಿಶ್ವಸಂಸ್ಥೆ ರವಾನಿಸಿರುವ ಪರಿಹಾರ ಸಾಮಗ್ರಿಗಳು ಈಜಿಪ್ಟ್‌ನೊಂದಿಗೆ (Egypt) ಹೊಂದಿಕೊಂಡಿರುವ ಗಾಜಾದ ದಕ್ಷಿಣ್‌ ಚೆಕ್‌ಪಾಯಿಂಟ್‌ ತಲುಪಿವೆ. ಇಸ್ರೇಲ್‌ ಅನುಮತಿ ನೀಡದ ಹೊರತೂ ಈ ಪರಿಹಾರ ಸಾಮಗ್ರಿ ಗಾಜಾ ಪ್ರವೇಶ ಸಾಧ್ಯವಿಲ್ಲ.

ಗ್ಲೈಡರ್ಸ್‌ಗಳ ಮೂಲಕ ಇಸ್ರೇಲ್‌ ಮೇಲೆ ದಾಳಿಗೆ ಸೂಚಿಸಿದ್ದ ಹಮಾಸ್‌ ಏರ್‌ಫೋರ್ಸ್ ನಾಯಕ ಏರ್‌ಸ್ಟ್ರೈಕ್‌ನಲ್ಲಿ ಹತ!

ಅಮೆರಿಕ ಯುದ್ಧ ವಿಮಾನ:

ಇದೇ ವೇಳೆ ಅಮೆರಿಕ ತನ್ನ ಎಫ್‌ -15ಇ ಯುದ್ಧ ವಿಮಾನವನ್ನು ಮಧ್ಯಪ್ರಾಚ್ಯದಲ್ಲಿ ನಿಯೋಜಿಸುವ ಮೂಲಕ ಹಮಾಸ್‌ (Hamas terrorist) ವಿರುದ್ಧ ಹೋರಾಟದಲ್ಲಿ ಇಸ್ರೇಲ್‌ಗೆ ಬೆಂಬಲ ಘೋಷಿಸಿದೆ.

ಇಸ್ರೇಲ್‌ ಸರ್ಜಿಕಲ್‌ ದಾಳಿ: ಗಾಜಾ ಉಗ್ರರ ಬಳಿ ಇದ್ದ 250 ಒತ್ತೆಯಾಳು ರಕ್ಷಣೆ; 60 ಹಮಾಸ್‌ ಉಗ್ರರ ಹತ್ಯೆ

Follow Us:
Download App:
  • android
  • ios