ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಯುದ್ಧ ಆರಂಭವಾಗಿ ಒಂದು ವಾರ ಕಳೆದಿದೆ. ಆದರೆ, ಕಳೆದ ಶನಿವಾರ ಹಮಾಸ್‌ ಉಗ್ರರು ಇಸ್ರೇಲ್‌ನ ಪ್ರದೇಶದಲ್ಲಿ ನಡೆದ ಭೀಬತ್ಸ ಕೃತ್ಯದ ವರದಿಗಳು ಒಂದೊಂದೆ ಬಿತ್ತರವಾಗುತ್ತಿದೆ. ದಕ್ಷಿಣ ಇಸ್ರೇಲ್‌ನ ಜಾಕಾ ಸಂಸ್ಥೆ ಹಮಾಸ್‌ ನಡೆಸಿದ ಅಮಾನುಷ ಕೃತ್ಯವೊಂದರ ವಿವರ ಇಲ್ಲಿದೆ. 

ಟೆಲ್‌ ಅವೀವ್‌ (ಅ.14): ಅಮಾಯಕ ಯುವತಿಯರ ಮೇಲೆ ರೇಪ್‌, ಕಾರಲ್ಲಿ ಕುಳಿತಿದ್ದವರನ್ನು ಅಲ್ಲಿಯೇ ಲಾಕ್‌ ಮಾಡಿ ಬೆಂಕಿ ಹಚ್ಚಿದ ಹಮಾಸ್ ಉಗ್ರರ ಭೀಕರತೆಗಳ ಸುದ್ದಿಗಳ ನಡುವೆ 40ಕ್ಕೂ ಅಧಿಕ ನವಜಾತ ಶಿಶುಗಳ ಶಿರಚ್ಛೇದ ಮಾಡಿದ್ದ ಚಿತ್ರಗಳನ್ನು ಇಸ್ರೇಲ್‌ ಹಂಚಿಕೊಂಡಿತ್ತು. ಇದರ ನಡುವೆ ಇಸ್ರೇಲ್‌ನ ಜಾಕಾ ಸಂಸ್ಥೆ ಹೇಳಿರುವ ಹಮಾಸ್‌ ಉಗ್ರರರ ಇನ್ನಷ್ಟು ಭೀಕರತೆಗಳನ್ನು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್‌ ಗಡಿಗೆ ನುಗ್ಗಿದ ಹಮಾಸ್‌ ಉಗ್ರರು, ಶಿಶುಗಳು, ಮಕ್ಕಳು, ವೃದ್ಧರು ಕೊನೆಗೆ ಗರ್ಭಿಣಿಯರಿಗೂ ಕೂಡ ಪಾಪಿಗಳು ಕರುಣೆ ತೋರಿಲ್ಲ. ಕಳೆದ 33 ವರ್ಷಗಳಿಂದ ಇಸ್ರೇಲ್‌ನಲ್ಲಿ ಶವಗಳನ್ನು ಸಂಗ್ರಹಿಸುತ್ತಿರುವ ಯೋಸಿ ಲ್ಯಾಂಡೌ, ದೇಶದ ಅತ್ಯಂತ ಭೀಕರ ದಾಳಿಯಲ್ಲಿ ಹಮಾಸ್ ಉಗ್ರಗಾಮಿಗಳಿಂದ ಕೊಲ್ಲಲ್ಪಟ್ಟ ಜನರ ಅವಶೇಷಗಳನ್ನು ಮರುಪಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಶನಿವಾರದಂದು ಸೈರನ್‌ಗಳ ಶಬ್ದಕ್ಕೆ ಮೊದಲಿಗೆ ತಮಗೆ ಎಚ್ಚರವಾಗಿತ್ತು ಎಂದು ಲ್ಯಾಂಡೌ ತಿಳಿಸಿದ್ದಾರೆ. ಆರಂಭದಲ್ಲಿ ಅವರು ನಮ್ಮ ಮೇಲೆ ರಾಕೆಟ್‌ ದಾಳಿ ಮಾಡಿದ್ದಾರೆ ಎಂದುಕೊಂಡಿದ್ದೆ. ಆದರೆ, ಕೆಲ ಹೊತ್ತಿನಲ್ಲಿಯೇ ರಾಕೆಟ್‌ ದಾಳಿ ಎನ್ನುವುದು ಬರೀ ಕವರ್‌ ಅಪ್‌ ಆಗಿತ್ತು. ಇಸ್ರೇಲ್‌ನ ಗಡಿಗೆ ನುಗ್ಗಿ ನಮ್ಮ ನಾಗರೀಕರ ಸಂಹಾರ ಮಾಡುವುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದ್ದಾರ. ಗಾಜಾದಿಂದ ನುಗ್ಗಿದ ಹಮಾಸ್‌ ಉಗ್ರರು 1200 ನಾಗರೀಕರನ್ನು ಈವರೆಗೂ ಹತ್ಯೆ ಮಾಡಿದ್ದಾರೆ.

ಅಶ್ಡೋಡ್‌ನಲ್ಲಿರುವ ನನ್ನ ಮನೆಯಿಂದ ಭಯಾನಕ ಘಟನೆಗಳಾದ ಪ್ರದೇಶಕ್ಕೆ ಹೋದಾಗ ಅಲ್ಲಿನ ಒಂದೊಂದು ಮೃತದೇಹಗಳು ಭಯಾನಕವಾಗಿದ್ದವು ಎಂದು ಲ್ಯಾಂಡೌ ಹೇಳಿದ್ದಾರೆ. ಒಂದು ಕಾರ್‌ಅನ್ನು ಸಂಪುರ್ಣವಾಗಿ ಪಲ್ಟಿ ಮಾಡಲಾಗಿತ್ತು. ಬೀದಿ ಬೀದಿಯಲ್ಲಿ ಜನರು ಸತ್ತಿದ್ದರು ಎಂದು ಸೆದ್ರೋತ್‌ನಲ್ಲಿ ಹೇಳಿದ್ದಾರೆ. ಗಾಜಾದ ಜೊತೆಗೆ ಗಡಿ ಹಂಚಿಕೊಂಡಿರುವ ಈ ಪ್ರದೇಶದಲ್ಲಿ ಹೆಚ್ಚಿನ ಇಸ್ರೇಲ್‌ ನಾಗರೀಕರು ಸಾವು ಕಂಡಿದ್ದಾರೆ. ಕಳೆದ 33 ವರ್ಷಗಳಿಂದ ಅಸಹಜ ಸಾವುಗಳಾಗುವ ದೇಹಗಳನ್ನು ಸ್ವೀಕರಿಸುವ ಜಾಕಾ ಸಂಸ್ಥೆಗೆ ಲ್ಯಾಂಡೌ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆದರೆ ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ಮತ್ತು ಇಸ್ರೇಲಿ ಪಡೆಗಳ ನಡುವೆ ಗುಂಡಿನ ಚಕಮಕಿಗಳು ನಡೆಯುತ್ತಿದ್ದಾಗ, ಲ್ಯಾಂಡೌ ಅವರು ಹಿಂದೆಂದೂ ನೋಡಿರದ ಹಿಂಸಾಚಾರವನ್ನು ಕಂಡಿದ್ದೇನೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ಪ್ರತಿ ಮೃತ ದೇಹವು ದಾಳಿ ಎಷ್ಟು ಕ್ರೂರವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. ನಾನಿರುವ ಪ್ರದೇಶದಿಂದ ಘಟನೆ ನಡೆದ ಸ್ಥಳಕ್ಕೆ ರಸ್ತೆಯಲ್ಲಿ ಹೋಗಲು ಹೆಚ್ಚೆಂದರೆ 15 ನಿಮಿಷ ತೆಗೆದುಕೊಳ್ಳಬಹುದು. ಆದರೆ, ಈ ಬಾರಿ 11 ಗಂಟೆಯಾಗಿವೆ. ರಸ್ತೆಯ ಉದ್ಧಕ್ಕೂ ಬಿದ್ದಿದ್ದ ಶವಗಳನ್ನು ಎತ್ತಿ ಅದರ ಚಿತ್ರ ತೆಗೆದು ಬ್ಯಾಗ್‌ನಲ್ಲಿ ಪ್ಯಾಕ್‌ ಮಾಡಲು ಸಾಕಷ್ಟು ಸಮಯ ಹಿಡಿಯಿತು ಎಂದು ತಿಳಿಸಿದ್ದಾರೆ.

ರೆಫ್ರಿಜಿರೇಟರ್‌ ಟ್ರಕ್‌ನಲ್ಲಿ ಎಲ್ಲಾ ಶವಗಳನ್ನು ತುಂಬಿದಾಗ ನಾನು ಹಾಗೂ ನನ್ನ ಸ್ವಯಂಸೇವಕರು ಬೇರಿ ಪ್ರದೇಶಕ್ಕೆ ತಲುಪಿದೆವು. ಗಾಜಾದಿಂದ 5 ಕಿಲೋಮೀಟರ್‌ ದೂರದಲ್ಲಿರುವ ಈ ಪ್ರದೇಶದಲ್ಲಿ 1200 ಮಂದಿ ಕಿಬ್ಬುಟ್ಜ್‌ ನೆಲೆಸಿದ್ದರು. ಮೊದಲ ಮನೆಗೆ ಹೊಕ್ಕಾಗ ನಮಗೆ ಅಲ್ಲಿ ಹೆಣ್ಣಿವ ಶವ ಕಂಡಿತು. ಅದನ್ನು ನೋಡಿದ ತಕ್ಷಣವೇ ನಮಗೆ ತಲೆತಿರುಗಿದಂತಾಯಿತು. ನನ್ನ ತಂಡದಲ್ಲಿದ್ದ ಎಲ್ಲರಿಗೂ ಅದೇ ಅನುಭವವಾಯಿತು. ಗರ್ಭಿಣಿಯ ಹೊಟ್ಟೆಯನ್ನು ಹಮಾಸ್‌ ಉಗ್ರರು ಸೀಳಿದ್ದರು. ಹೊಟ್ಟೆಯಲ್ಲಿದ್ದ ಮಗು ಹೊರಗಡೆ ಬಂದಿತ್ತು. ಕರಳುಬಳ್ಳಿಯನ್ನೂ ಕತ್ತರಿಸಿದ ಇನ್ನೂ ಹುಟ್ಟದ ಆ ಮಗುವಿಗೂ ಅವರು ಚಾಕು ಇರಿದಿದ್ದರು' ಎಂದು 55 ವರ್ಷದ ಲ್ಯಾಂಡೌ ಹೇಳಿದ್ದಾರೆ.

'ಏಳು ತಿಂಗಳ ಯುದ್ಧ..' ಇಸ್ರೇಲ್‌-ಹಮಾಸ್‌ ಯುದ್ಧದ ಬಗ್ಗೆ ನಿಜವಾದ ನಾಸ್ಟ್ರಾಡಾಮಸ್‌ ಭವಿಷ್ಯ!

ಅದಲ್ಲದೆ, ಅದೇ ಪ್ರದೇಶದಲ್ಲಿ ಕನಿಷ್ಢ 20ಕ್ಕೂ ಅಧಿಕ ಮಕ್ಕಳ ಶವವನ್ನು ನಾವು ಸ್ವೀಕರಿಸಿದವು. ಅವರ ಕೈಗಳನ್ನು ಹಿಂದೆ ಕಟ್ಟಲಾಗಿತ್ತು. ಬಂದೂಕಿನಿಂದ ಅವರಿಗೆ ಶೂಟ್‌ ಮಾಡಿದ್ದಲ್ಲದೆ, ಅವರ ಶವಕ್ಕೆ ಅಲ್ಲಿಯೇ ಬೆಂಕಿ ಹಚ್ಚಲಾಗಿತ್ತು. ಇನ್ನೂ ಹಮಾಸ್‌ ಉಗ್ರರಿಂದ ಲೈಂಗಿಕವಾಗಿ ಹಲ್ಲೆಗೆ ಒಳಗಾದವರ ಸಂಖ್ಯ ಲೆಕ್ಕವಿಲ್ಲದಷ್ಟಿದೆ ಎಂದು ಲ್ಯಾಂಡೌ ಹೇಳಿದ್ದಾರೆ.

ಗ್ಲೈಡರ್ಸ್‌ಗಳ ಮೂಲಕ ಇಸ್ರೇಲ್‌ ಮೇಲೆ ದಾಳಿಗೆ ಸೂಚಿಸಿದ್ದ ಹಮಾಸ್‌ ಏರ್‌ಫೋರ್ಸ್ ನಾಯಕ ಏರ್‌ಸ್ಟ್ರೈಕ್‌ನಲ್ಲಿ ಹತ!