ಗಾಜಾಗೆ ರಕ್ತ ಕೊಡಲು ಸಿದ್ಧ, ಉಗ್ರರ ಮೇಲಿನ ದಾಳಿ ಖಂಡಿಸಿದ ಬಂಗಾಳ ಜಮೈತ್ ಇ ಉಲೆಮಾ!
ಗಾಜಾದಲ್ಲಿ ಅಡಗಿರುವ ಹಮಾಸ್ ಉಗ್ರರ ಮೇಲಿನ ದಾಳಿಯನ್ನು ಇಸ್ರೇಲ್ ತೀವ್ರಗೊಳಿಸಿದೆ. ಆದರೆ ಈ ದಾಳಿಯನ್ನು ಕೆಲ ಅರಬ್ ರಾಷ್ಟ್ರಗಳು, ಮುಸ್ಲಿಂ ಸಂಘಟನೆಗಳು ಖಂಡಿಸುತ್ತಿದೆ. ಇದೀಗ ಪಶ್ಚಿಮ ಬಂಗಾಳದ ಜಮೈತ್ ಇ ಉಲೆಮಾ ಇಸ್ರೇಲ್ ದಾಳಿ ಖಂಡಿಸಿದ್ದ ಮಾತ್ರವಲ್ಲ, ನಾವು ಗಾಜಾ ರಕ್ತ ಬೇಕಾದರೂ ಕೊಡುತ್ತೇವೆ ಎಂದಿದೆ.
ಕೋಲ್ಕತಾ(ಅ.14) ಗಾಜಾಗೆ ರಕ್ತ ಬೇಕಾದರೆ ಕೊಡಲು ಸಿದ್ಧ ಎಂದು ಪಶ್ಚಿಮ ಬಂಗಾಳದ ಜಮೈತ್ ಇ ಉಲೆಮಾ ಅಧ್ಯಕ್ಷ ಮೌಲನಾ ಸಿದ್ದಿಖುಲ್ಲಾ ಚೌದರಿ ಹೇಳಿದ್ದಾರೆ. ನಾವು ಪ್ಯಾಲೆಸ್ತಿನ್ ಜೊತೆಗಿದ್ದೇವೆ. ಗಾಜಾಗೆ ಯಾವುದೇ ನರೆವು ನೀಡಲು ನಾವು ಸಿದ್ಧ. ಅವರಿಗೆ ಯಾವುದೇ ಅಗತ್ಯ ವಸ್ತು ಬೇಕಾದರೂ ನಾವು ನೀಡುತ್ತೇವೆ ಎಂದು ಮೌಲನಾ ಸಿದ್ಧಿಖುಲ್ಲಾ ಹೇಳಿದ್ದಾರೆ. ಇದೇ ವೇಳೆ ಹಮಾಸ್ ಉಗ್ರರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಸಿದ್ಧಿಖುಲ್ಲಾ ಖಂಡಿಸಿದ್ದಾರೆ.ಇದೇ ಮೌಲನಾ ಸಿದ್ಧಿಖುಲ್ಲಾ, ಕೋವಿಡ್ ಸಂದರ್ಭದಲ್ಲಿ ಪಶ್ಚಿಮಬಂಗಾಳಕ್ಕೆ ಕೇಂದ್ರ ಸರ್ಕಾರ ಕಳುಹಿಸಿದ ಕೊರೋನಾ ಲಸಿಕೆ ಟ್ರಕ್‌ಗಳನ್ನು ತಡೆದು ವಾಪಸ್ ಕಳುಹಿಸಿದ್ದರು. ಇದು ಬಿಜೆಪಿ ಲಸಿಕೆ, ಜನರ ಪ್ರಾಣ ತೆಗೆಯಲು ಕಳುಹಿಸಿರುವ ಲಸಿಕೆ ಎಂದಿದ್ದರು. ಇದೀಗ ಉಗ್ರರ ಮೇಲಿನ ದಾಳಿ ಖಂಡಿಸಿ ಪ್ಯಾಲೆಸ್ತಿನ್ ಹಾಗಾ ಗಾಜಾ ಬೆಂಬಲಕ್ಕೆ ನಿಂತಿದ್ದಾರೆ.
ಗಾಜಾದ ಮೇಲೆ ಇಸ್ರೇಲ್ ಬಾಂಬ್ ಮಳೆ ಸುರಿಸುತ್ತಿದೆ. ಅಲ್ಲಿನ ಅಮಾಯಕ ಜನರು, ಮಕ್ಕಳು, ಹೆಣ್ಣುಮಕ್ಕಳು ಮೃತಪಟ್ಟಿದ್ದಾರೆ. ಹಲವರು ಮನೆ ಕಳೆದುಕೊಂಡಿದ್ದಾರೆ.ಮಕ್ಕಳು ಅನಾಥರಾಗಿದ್ದಾರೆ. ಯುದ್ಧ ಯಾವುದಕ್ಕೂ ಪರಿಹಾರವಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ಪ್ಯಾಲೆಸ್ತಿನ್ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಸಿದ್ಧಿಖುಲ್ಲಾ ಹೇಳಿದ್ದಾರೆ.
ಇಸ್ರೇಲ್ ಸರ್ಜಿಕಲ್ ದಾಳಿ: ಗಾಜಾ ಉಗ್ರರ ಬಳಿ ಇದ್ದ 250 ಒತ್ತೆಯಾಳು ರಕ್ಷಣೆ; 60 ಹಮಾಸ್ ಉಗ್ರರ ಹತ್ಯೆ
ಪ್ಯಾಲೆಸ್ತಿನ್ ಜನ ಸಾವಿನ ಭಯದಿಂದಲೇ ಬದಕು ಸಾಗಿಸುತ್ತಿದ್ದಾರೆ. ಯಾವ ದೇಶ ಯುದ್ಧದಿಂದ ಪರಿಹಾರ ಕಂಡುಕೊಂಡಿದೆ? ಯಾವತ್ತೂ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇಸ್ರೇಲ್ ನೇರವಾಗಿ ದಾಳಿ ಆರಂಭಿಸಿದೆ. ಇಸ್ರೇಲ್ ದಾಳಿಯನ್ನು ಖಂಡಿಸುತ್ತೇವೆ. ತಕ್ಷಣವೇ ಇಸ್ರೇಲ್ ದಾಳಿ ನಿಲ್ಲಿಸಿ ಮಾತುಕತೆ ಮೂಲಕ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಒತ್ತಾಯಿಸುತ್ತೇವೆ ಎಂದು ಮೌಲನಾ ಸಿದ್ಧಿಖಿ ಹೇಳಿದ್ದಾರೆ.
ಗಾಜಾದ ಮೇಲಿನ ದಾಳಿಯ ತೀವ್ರತೆ ನಾವು ಬಿಡಿಸಿ ಹೇಳಬೇಕಾಗಿಲ್ಲ. ಪ್ರತಿಯೊಬ್ಬರ ಮನ ನಾಶವಾಗಿದೆ. ಕಟ್ಟಡಗಳು ಧ್ವಂಸಗೊಂಡಿದೆ.ಇಷ್ಟಾದರೂ ಇಸ್ರೇಲ್ ದಾಳಿ ನಿಂತಿಲ್ಲ. ಮಾನಹ ಹಕ್ಕುಗಳ ಸಂರಕ್ಷಣೆ ಎಲ್ಲಿದೆ? ಎಂದು ಸಿದ್ದಿಖುಲ್ಲಾ ಹೇಳಿದ್ದಾರೆ. ನಾವು ಗಾಜಾಗೆ ಎಲ್ಲವನ್ನೂ ಕೊಡಲು ಸಿದ್ಧ ಎಂದಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು 5,000 ರಾಕೆಟ್ ಮೂಲಕ ಗಾಜಾದಿಂದ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಬಳಿಕ ಪ್ಯಾರಾ ಗ್ಲೈಡಿಂಗ್ ಮೂಲಕ, ಯುದ್ಧ ಟ್ಯಾಂಕರ್ ಮೂಲಕ, ಸ್ಪೀಡ್ ಬೋಟ್ ಮೂಲಕ ಇಸ್ರೇಲ್‌ಗೆ ಮುಗ್ಗಿ ಮಾರಣಹೋಮ ನಡೆಸಿತ್ತು. 1,500 ಇಸ್ರೇಲಿಗರನ್ನು ಹತ್ಯೆ ಮಾಡಿತ್ತು. ಇದರಲ್ಲಿ 200ಕ್ಕೂ ಹೆಚ್ಚು ಮಕ್ಕಳು. ಇನ್ನು ಹಲವು ಕುಟುಂಬಗಳನ್ನು ಜೀವಂತವಾಗಿ ಸುಟ್ಟಿತ್ತು. 300ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಳಾಗಿಟ್ಟುಕೊಂಡಿದೆ. ಹಲವು ಮಹಿಳೆಯರ ಶವಗಳನ್ನು ಬೆತ್ತಲೆ ಮೆರವಣಿಗೆ ಮಾಡಲಾಗಿತ್ತು. ಮಕ್ಕಳ ಶಿರಚ್ಚೇಧ ಮಾಡಲಾಗಿದೆ.
ಗಾಜಾಪಟ್ಟಿ ಒಳಗೆ ಇಸ್ರೇಲ್ ಸೇನೆ, ಯುದ್ಧ ಟ್ಯಾಂಕರ್ ಲಗ್ಗೆ: ಗುಳೆ ಹೊರಟ ಸಾವಿರಾರು ಜನ
ಈ ಭೀಕರತೆಗೆ ನಲುಗಿದ ಇಸ್ರೇಲ್, ಮರುದಿನವೇ ಪ್ರತಿದಾಳಿ ಆರಂಭಿಸಿದೆ. ಗಾಜಾದ ಜನರಗೆ ಸುರಕ್ಷಿತ ತಾಣಕ್ಕೆ ತೆರಳಲು ಅಲರ್ಟ್ ನೀಡಿದ ಇಸ್ರೇಲ್ 24 ಗಂಟೆ ಬಳಿಕ ದಾಳಿ ಆರಂಭಿಸಿತ್ತು. ಇದೀಗ ಹಮಾಸ್ ಉಗ್ರರನ್ನು ಇಸ್ರೇಲ್ ಹುಡುಕಿ ಹುಡುಕಿ ಹತ್ಯೆ ಮಾಡಲಾಗುತ್ತಿದೆ.