ಇಸ್ರೇಲ್ ನಿರ್ಮಾಣವಾಗಿದ್ದು ಕದ್ದ ಭೂಮಿಯಲ್ಲೆಂದ ಚೇತನ್: ಪಾಕ್, ಬಾಂಗ್ಲಾ ಇನ್ನೆಂಥ ಕೇಳುತ್ತಿದ್ದಾರೆ ನೆಟ್ಟಿಗರು!
ಇಸ್ರೇಲ್ ಎನ್ನುವುದು ಕದ್ದ ಭೂಮಿ. ಈ ಹೋರಾಟದಲ್ಲಿ ಪ್ಯಾಲೆಸ್ತೇನ್‌ನ ನ್ಯಾಯದ ಪರವಾಗಿ ಭಾರತ ನಿಲ್ಲಬೇಕೆಂದ ನಟ ಅಹಿಂಸಾ ಚೇತನ್ ಮತ್ತೊಮ್ಮೆ ಟ್ರೋಲ್ ಆಗುತ್ತಿದ್ದಾರೆ.
ಬೆಂಗಳೂರು (ಅ.14): ಇಸ್ರೇಲ್ ಎನ್ನುವುದು ಕದ್ದ ಭೂಮಿ. ಈ ಹೋರಾಟದಲ್ಲಿ ಪ್ಯಾಲೆಸ್ತೇನ್‌ನ ನ್ಯಾಯದ ಪರವಾಗಿ ಭಾರತ ನಿಲ್ಲಬೇಕು ಎಂದು ಹೇಳಿಕೆ ನೀಡಿದ ಸಾಮಾಜಿಕ ಕಾರ್ಯಕರ್ತ ಹಾಗೂ ನಟ ಅಹಿಂಸಾ ಚೇತನ್ ಮತ್ತೊಮ್ಮೆ ಟ್ರೋಲ್ ಆಗುತ್ತಿದ್ದಾರೆ.
ಇಂದು ಪುನಃ ತಮ್ಮ ಸಮಾಜಿಕ ಜಾಲತಾಣದಲ್ಲಿ ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ಯುದ್ಧದ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ನಟ ಅಹಿಮಸಾ ಚೇತನ್, ಭಾರತವು 'ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯ ರಾಷ್ಟ್ರವಾದ ಪ್ಯಾಲೆಸ್ತೀನ್‌ಗೆ' ಬೆಂಬಲ ವ್ಯಕ್ತಪಡಿಸಿದೆ. ಪ್ಯಾಲಸ್ಟೈನಿನ ಜನರ ನ್ಯಾಯದ ಪರವಾಗಿ ನಿಂತ ಭಾರತಕ್ಕೆ ವಂದನೆಗಳು ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನು ಭಾರತ ಸರ್ಕಾರ ಈ ಅರ್ಥದಲ್ಲಿ ಹೇಳಿಕೆ ನೀಡಿಲ್ಲ. "ಭಾರತವು ಯಾವಾಗಲೂ ಪ್ಯಾಲೆಸ್ತೀನ್‌ನ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ರಾಜ್ಯವನ್ನು ಸ್ಥಾಪಿಸುವ ಬಗ್ಗೆ ನೇರ ಮಾತುಕತೆ ಮಾಡುವುದನ್ನು ಪ್ರತಿಪಾದಿಸುತ್ತದೆ. ಈ ಮೂಲಕ ಇಸ್ರೇಲ್‌ನೊಂದಿಗೆ ಶಾಂತಿಯಿಂದ ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳಲ್ಲಿ ವಾಸಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದರು.
ಇಸ್ರೇಲ್‌ನದ್ದು ಕದ್ದ ಭೂಮಿ, ಪ್ಯಾಲೆಸ್ತೇನ್ ಪರವಾಗಿ ಭಾರತ ನಿಲ್ಲಬೇಕು ಎಂದ ಚೇತನ್ ಅಹಿಂಸಾ!
ಆದರೆ, ಇಸ್ರೇಲ್ ಮೇಲೆ ಹಮಾಸ್ ನಡೆಸುತ್ತಿರುವ ಭೀಕರ ದಾಳಿಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ, ಹೊಸದಿಲ್ಲಿ ಯಹೂದಿ ರಾಷ್ಟ್ರದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಟ ಅಹಿಂಸಾ ಚೇತನ್, ಇಸ್ರೇಲ್ ದೇಶ ಇರೋದೇ ಕದ್ದ ಭೂಮಿಯಲ್ಲಿ. ಭಾರತ ಪ್ಯಾಲೆಸ್ತೇನ್ ದೇಶದ ಪರವಾಗಿ ನಿಲ್ಲಬೇಕು ಎಂದು ಹೇಳಿದ್ದರು. ಇನ್ನು ಇಡೀ ಭಾರತ ದೇಶ ಈ ಯುದ್ಧದಲ್ಲಿ ಇಸ್ರೇಲ್ ಪರವಾಗಿ ನಿಂತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನ ಪರವಾಗಿ ಟ್ವೀಟ್ ಮಾಡಿದ್ದಲ್ಲದೆ, ಇಸ್ರೇಲ್‌ನಲ್ಲಿ ಅಮಾಯಕರ ಸಾವಿಗೆ ಮರುಕ ವ್ಯಕ್ತಪಡಿಸಿದ್ದರು.
ಇನ್ನೊಂದೆಡೆ ಇಸ್ರೇಲ್‌ನ ವಿದೇಶಾಂಗ ಇಲಾಖೆ, ಮೊಸಾದ್ ಕೂಡ ಭಾರತದಿಂದ ಸಿಕ್ಕಿರುವ ದೊಡ್ಡ ಮಟ್ಟದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದೆ. ಆದರೆ, ದೇಶದ ಕೆಲವೊಂದು ಕಡೆ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಪ್ಯಾಲೆಸ್ತೇನ್ ಪರವಾಗಿಯೂ ಒಲವು ವ್ಯಕ್ತವಾಗಿದೆ. ಪ್ಯಾಲೇಸ್ಟಿನಿಯನ್ ಹಮಾಸ್ 5,000 ರಾಕೆಟ್‌ಗಳನ್ನು ಉಡಾಯಿಸಿದ್ದರಿಂದ ಮತ್ತು ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದರಿಂದ ಇಸ್ರೇಲ್-ಪ್ಯಾಲೇಸ್ಟಿನಿಯಲ್ಲಿ ಭಾರಿ ಹಿಂಸಾಚಾರ ಮತ್ತು ಸಾವುನೋವುಗಳು ಸಂಭವಿಸಿವೆ.
ಇಸ್ರೇಲ್ (Isreal) ದೇಶವು ಕದ್ದ ಭೂಮಿಯಲ್ಲಿ ನಿರ್ಮಿಸಲಾದ ದೇವಪ್ರಭುತ್ವದ ವಸಾಹತುಗಾರರ ಕಾಲೋನಿ. ಭಾರತವು ಇಸ್ರೇಲ್-ಯುಎಸ್ ಪ್ರಾಬಲ್ಯದ ದೌರ್ಜನ್ಯವನ್ನು ಪ್ರಶ್ನಿಸಬೇಕು ಮತ್ತು ಪ್ಯಾಲೇಸ್ಟಿನಿಯನ್ (Palestinian) ನ್ಯಾಯದ ಪರವಾಗಿ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಮೈಸೂರು ಹೆದ್ದಾರಿ ಸರಣಿ ಅಪಘಾತದಲ್ಲಿ ಸುಟ್ಟು ಭಸ್ಮವಾದ ಕಾರು: ಮಂಡ್ಯ ಎಸ್‌ಪಿ ಕಾರಿಗೂ ಡ್ಯಾಮೇಜ್
ಸನಾತನ ಭಾರತಿ ಎಂಬ ಫೇಸ್‌ಬುಕ್ ಪೇಜ್‌ನಿಂದ ಹಾಗಾದರೆ ಕಾಶ್ಮೀರ, ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ತಾನ ಇವೆಲ್ಲವೂ ಯಾರಿಗೆ ಸೇರಬೇಕು? ಯಾರು ಕದ್ದು ಸೇರಿದವರು? ಭಾರತ ಯಾರನ್ನು ಕೇಳಬೇಕು ಎಂದು ಟ್ರೋಲಿಗರು ಪ್ರಶ್ನೆ ಮಾಡಿದ್ದಾರೆ. ಇನ್ನು ನಟ ಚೇತನ್ ಯಾವ ಕೇಂದ್ರದ ಬಿಜೆಪಿ ಸರ್ಕಾರ ಕೈಗೊಳ್ಳುವ ಎಲ್ಲ ನಿರ್ಧಾರಗಳನ್ನು ವಿರೋಧಿಸುತ್ತಾರೆ ಎಂದು ಟೀಕೆ ಮಾಡಿದ್ದಾರೆ. ಮತ್ತೊಂದೆಡೆ, ನಟ ಚೇತನ್ ಪೋಸ್ಟ್ ಬಗ್ಗೆ ಕಮೆಂಟ್ ಮಾಡಿರುವ "ಯಹೂದಿಗಳಿಗೆ ಅವರದೇ ಆದ ರಾಷ್ಟ್ರದ ಅವಶ್ಯಕತೆ ಇದೆ. ಯಹೂದೆಯರು ಅರಬ್ ರಾಷ್ಟ್ರಗಳ ಮೂಲ ನಿವಾಸಿಗಳು. ಇಸ್ಲಾಂ ಒಂದು ಮಾನವರನ್ನು ಛೆದಿಸುವ ರಾಜಕೀಯ ಅಸ್ತ್ರವಾಗಿದೆ. ಇಸ್ಲಾಂ ಮತ್ತು ಮುಸ್ಲಿಮರನ್ನು ಬೆಂಬಲಿಸುವುದು ಮಾನವತೆಗೆ ವಿರುದ್ಧ ಎಂದು ರಘುನಾಥ ರಂಗಸ್ವಾಮಿ ಎನ್ನುವವರು ಕಮೆಂಟ್ ಮಾಡಿದ್ದಾರೆ.