ಮಿಸೌರಿ[ನ.14]: ಅಮೆರಿಕಾದ ಮಿಸೌರಿ ರಾಜ್ಯದ ಮುಖದ ಮೇಲೆ ಬಾಲ ಇರುವ ಪುಟ್ಟ ನಾಯಿ ಮರಿಯೊಂದು ಕಂಡು ಬಂದಿದೆ. ವರದಿಗಳನ್ವಯ ಈ ನಾಯಿ ಮರಿ ಹುಟ್ಟಿದಾಗಿಂದಲೇ ಮುಖದ ಮೇಲೆ ಬಾಲವಿತ್ತೆಂದು ಉಲ್ಲೇಖಿಸಲಾಗಿದೆ.

ಸದ್ಯ ಈ ನಾಯಿ ಮರಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಿಸಿದೆ. ಜನರು ಇದನ್ನು ಕ್ಯೂಟ್ ಯೂನಿಕಾರ್ನ್'(ಹಣೆ ಮೇಲೆ ಕೊಂಬು ಇರುವ ಕುದುರೆ] ಎಂದು ಕರೆಯುತ್ತಿದ್ದಾರೆ. ಹೀಗಿದ್ರೂ ಈ ಪುಟ್ಟ ಮರಿಯ ಹೆಸರು Narwahal ಎಂಬುವುದು ಮರೆಯುವಂತಿಲ್ಲ.

ಅನಾಥವಾಗಿತ್ತು...

ವರದಿಗಳನ್ವಯ ಈ ನಾಯಿಮರಿ ನವೆಂಬರ್ 8ರಂದು ಅಮೆರಿಕಾದ ಜ್ಯಾಕ್ಸನ್ ನಗರದಲ್ಲಿ ಕೊರೆಯುವ ಚಳಿಯಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಇದರೊಂದಿಗೆ ಒಂದು ದೊಡ್ಡ ನಾಯಿ ಕೂಡಾ ಇತ್ತು. ಇವುಗಳನ್ನು Cape Girardeau ನಗರದ ರಕ್ಷಣಾ ತಂಡ ಕಾಪಾಡಿದೆ. ಆದ್ರೆ ಈ ಪುಟ್ಟ ನಾಯಿ ಮರಿಯ ಮುಖದಲ್ಲಿ, ಹಣೆ ಭಾಗದಲ್ಲಿ ಬಾಲವಿರುವುದನ್ನು ಗಮನಿಸಿದ ಸದಸ್ಯರು ಪಶು ವೈದ್ಯರ ಬಳಿ ಕರೆದೊಯ್ದಿದ್ದಾರೆ.

ಬಾಲ ತೆಗೆಯಲಿಲ್ಲ ಪಶು ವೈದ್ಯರು

Narwahal ತಪಾಸಣೆ ನಡೆಸಿದ ವೈದ್ಯರು ಮುಖದ ಮೇಲಿರುವ ಈ ಬಾಲ ದೇಹಕ್ಕೆ ಜೋಡಣೆಯಾಗಿಲ್ಲ ಎಂದು ತಿಳಿದು ಬಂದಿದೆ. ಹೀಗಿರುವಾಗ ನಾಯಿ ಇದನ್ನು ಯಾವುದೇ ರೀತಿ ಬಳಸಿಕೊಳ್ಳಲು ಸಾಧ್ಯವಿಲ್ಲ, ಇದರಿಂದ ಯಾವುದೇ ಅಪಾಯವಿಲ್ಲ ಎಂದು ಕತ್ತರಿಸದೇ ಸುಮ್ಮನಾಗಿದ್ದಾರೆ.

ನಾಯಿ ದತ್ತು ತೆಗೆದುಕೊಳ್ಳಲು ಸಾಧ್ಯವಿಲ್ಲ

ಸದ್ಯ Narwahal ವನ್ನು ದತ್ತು ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅದನ್ನು ಕಾಪಾಡಿದ ರಕ್ಷಣಾ ತಂಡ ಇನ್ನೂ ಸ್ವಲ್ಪ ದೊಡ್ಡದಾಗಲಿ ಹಾಗೂ ಮುಖದ ಮೇಲಿರುವ ಬಾಲ ಯಾವುದೇ ಸಮಸ್ಯೆ ಹುಇಟ್ಟಿಸುವುದಿಲ್ಲ ಎಂದು ಖಚಿತಪಡಿಸಕೊಳ್ಳಲು ಬಯಸಿದ್ದಾರೆ.