Asianet Suvarna News Asianet Suvarna News

ಬಾನೆತ್ತರದ ಪ್ರೀತಿ, ವಿಮಾನದಲ್ಲಿ ಗಗನಸಖಿಗೆ ಲವ್ ಪ್ರಪೋಸ್ ಮಾಡಿದ ಪೈಲೆಟ್, ಮುಂದೇನಾಯ್ತು?

ಒಂದೊವರೆ ವರ್ಷದಿಂದ ಪೈಲೆಟ್ ಹಾಗೂ ಗಗನಸಖಿ ಒಂದೇ ವಿಮಾನದಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮೀಯರಾಗಿದ್ದಾರೆ. ಪೈಲೆಟ್‌ಗೆ ಪ್ರೀತಿ ಚಿಗುರೊಡೆದಿದೆ. ಶುಭದಿನ ನೋಡಿ ವಿಮಾನದಲ್ಲಿ ಸಾಮಾನ್ಯವಾಗಿ ಕ್ಯಾಪ್ಟನ್ ಅನೌನ್ಸ್‌ಮೆಂಟ್‌ನಲ್ಲಿ ಗಗನಸಖಿಗೆ ಪ್ರಪೋಸ್ ಮಾಡಿದ್ದಾನೆ. ಆಕೆಯ ಉತ್ತರವೇನು?
 

Will You marry me Poland Pilot Love propose to flight staff girlfriend with captain announcement viral video ckm
Author
First Published Apr 25, 2024, 3:15 PM IST | Last Updated Apr 25, 2024, 3:25 PM IST

ವರ್ಸಾವ್(ಏ.25) ಪ್ರೀತಿ ಎಲ್ಲಿ ಹೇಗೆ ಬೇಕಾದರು ಹುಟ್ಟಬಹುದು. ಆದರೆ ಈ ಪ್ರೀತಿಯನ್ನು ತಿಳಿಸಿ ಜೊತೆಯಾಗಿ ಹೆಜ್ಜೆ ಹಾಕುವುದು ಸವಾಲಿನ ಕೆಲಸ. ಲವ್ ಪ್ರಪೋಸಲ್‌ನಲ್ಲಿ ಭಾವನೆಗಳು, ಪ್ರೀತಿ, ನಂಬಿಕೆಗಳನ್ನು ತುಂಬಿ ನಿವೇದನೆ ಮಾಡುತ್ತಾರೆ. ಕ್ರಿಯಾತ್ಮಕವಾಗಿ, ಸರ್ಪಪ್ರೈಸ್ ಸೇರಿದಂತೆ ಹಲವು ರೀತಿಯಲ್ಲಿ ಸಂಗಾತಿಯ ಗ್ರೀನ್ ಸಿಗ್ನಲ್‌ಗೆ ಕಸರತ್ತು ಮಾಡುತ್ತಾರೆ. ಹಲವು ಯಶಸ್ವಿಯಾದರೆ ಮತ್ತೆ ಕೆಲವು ಹಾರ್ಟ್ ಬ್ರೇಕ್ ಆದ ಉದಾಹರಣೆಗಳಿವೆ. ಇದೀಗ ವಿಮಾನದ ಪೈಲೆಟ್, ಅದೇ ವಿಮಾನದ ಗಗನಸಖಿಗೆ ಅನೌನ್ಸ್‌ಮೆಂಟ್ ಮುೂಲಕ ಲವ್ ಪ್ರಪೋಸಲ್ ಮಾಡಿದ್ದಾನೆ. ಪ್ರಯಾಣಿಕರ ಸೇವೆಯಲ್ಲಿ ನಿರತವಾಗಿದ್ದ ಗಗನಸಖಿ ಪೈಲೆಟ್ ಮಾತುಗಳು ಕೇಳುತ್ತಿದ್ದಂತೆ ಓಡೋಡಿ ಬಂದು ಬಿಗಿದಪ್ಪಿ ಪ್ರಪೋಸಲ್ ಸ್ವೀಕರಿಸಿದ್ದಾಳೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಪೋಲೆಂಡ್‌ನ ವರ್ಸಾವ್‌ದಿಂದ ಕಾರಕೋವ್‌ ವಿಮಾನದಲ್ಲಿ ಈ ಬಾನೆತ್ತರ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಎಲ್ಲಾ ಪ್ರಯಾಣಿಕರು ಕುಳಿತಿದ್ದರು. ಇತ್ತ ವಿಮಾನದ ಗಗನಸಖಿಯರು ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದರು. ಇನ್ನೇನು ವಿಮಾನ ರನ್‌ವೇನಲ್ಲಿ ಸಾಗಲು ಸಿದ್ದವಾಗಿತ್ತು. ಅಷ್ಟರಲ್ಲೇ ಕಾಕ್‌ಪಿಟ್ ಕ್ಯಾಬಿನ್‌ನಿಂದ ಪ್ಯಾಸೆಂಜರ್ ಬಳಿ ಆಗಮಿಸಿದ ಕ್ಯಾಪ್ಟನ್ ಕೋನಾರ್ಡ್ ಹ್ಯಾಂಕ್, ವಿಶೇಷ ಅನೌನ್ಸ್‌ಮೆಂಟ್ ಮಾಡಿದ್ದಾರೆ.

ಯಾಕೆ ಹುಡುಗೀರೇ ಮೊದಲು ಲವ್ ಪ್ರಪೋಸ್ ಮಾಡಲ್ಲ ಗೊತ್ತಾ?

ಎಲ್ಲಾ ಪ್ರಯಾಣಿಕರನ್ನು ಸ್ವಾಗತಿಸಿದ ಕೋನಾರ್ಡ್, ಈ ವಿಮಾನದಲ್ಲಿ ವಿಶೇಷ ವ್ಯಕ್ತಿಯೊಬ್ಬರಿದ್ದಾರೆ. ಈ ವ್ಯಕ್ತಿ ಏನನ್ನೂ ಬಯಸುವುದಿಲ್ಲ. ಒಂದೂವರೆ ವರ್ಷದ ಹಿಂದೆ ಈ ವಿಮಾನದಲ್ಲಿ ವೃತ್ತಿ ಆರಂಭಿಸಿದರು. ಈ ವಿಶೇಷ ಹಾಗೂ ಸುಂದರ ವ್ಯಕ್ತಿಯನ್ನು ನಾನು ಭೇಟಿಯಾದ ಬಳಿಕ ನನ್ನ ಬದಕು ಬದಲಾಯಿತು. ಕಾರಕೋವ್‌ಗೆ ಹೊರಟ ವಿಮಾನದಲ್ಲಿ ನಾನು ಆ ವಿಶೇಷ ವ್ಯಕ್ತಿಯನ್ನು ಭೇಟಿಯಾದೆ. ಆ ವ್ಯಕ್ತಿಯ ಹೆಸರು ಪೌಲಾ. ಹೇ ಪೌಲಾ, ನೀನು ನನಗೆ ಅತೀ ಅಮೂಲ್ಯ. ನನ್ನೆಲ್ಲಾ ಕನಸುಗಳ ಶಕ್ತಿ ನೀನು. ನನಗೆ ಒಂದು ಸಹಾಯ ಮಾಡಲು ಮನವಿ ಮಾಡುತ್ತಿದ್ದೇನೆ ಹನಿ. ನನ್ನನ್ನು ಮದುವೆಯಾಗುತ್ತೀಯಾ ಎಂದು ಕ್ಯಾಪ್ಟನ್ ಕೋನಾರ್ಡ್ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದಾರೆ.

ಇದೇ ವೇಳೆ ಒಂದು ಕೈಯಲ್ಲಿ ಹೂವಿನ ಬೊಕ್ಕೆ ಮತ್ತೊಂದು ಕೈಯಲ್ಲಿ ರಿಂಗ್ ಹಿಡಿದು ಈ ಪ್ರೇಮ ನಿವೇದನೆ ಮಾಡಿದ ಕ್ಯಾಪ್ಟನ್‌ಗೆ, ಪೌಲಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ವಿಮಾನ ಮತ್ತೊಂದು ತುದಿಯಲ್ಲಿದ್ದ ಪೌಲಾ,ಕ್ಯಾಪ್ಟನ್ ಪ್ರಪೋಸ್ ಮಾಡುತ್ತಿದ್ದಂತೆ ಓಡೋಡಿ ಬಂದಿದ್ದಾಳೆ. ಕ್ಯಾಪ್ಟನ್ ಬಿಗಿದಪ್ಪಿ ಚುಂಬಿಸಿದ್ದಾಳೆ. ಆನಂದ ಬಾಷ್ಪದಲ್ಲೇ ಕೈಬೆರಳು ತೋರಸಿದ್ದಾಳೆ. ರಿಂಗ್ ಹಾಕಿದ ಕೋನಾರ್ಡ್ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ.

Family Gangsters: ಲವ್ವಾಗಿ ಎರಡೂವರೆ ವರ್ಷದ ನಂತ್ರ ಮೊದಲ ಬಾರಿಗೆ ದಿವ್ಯಾ-ಅರವಿಂದ್ ರೊಮ್ಯಾಂಟಿಕ್​ ಪ್ರಪೋಸಲ್​!

ಇದೇ ವಿಮಾನದಲ್ಲಿದ್ದ ಪ್ರಯಾಣಿಕರು, ಇತರ ಸಿಬ್ಬಂದಿಗಳು ಚಪ್ಪಾಳೆ ಮೂಲಕ ಕ್ಯಾಪ್ಟನ್ ಕೋನಾರ್ಡ್ ಹಾಗೂ ಗಗನಸಖಿ ಪೌಲಾಳನ್ನು ಅಭಿನಂದಿಸಿದ್ದಾರೆ.


 

Latest Videos
Follow Us:
Download App:
  • android
  • ios