Asianet Suvarna News Asianet Suvarna News

ಮೋದಿಯಿಂದ ಭಾರತದಲ್ಲಿ ಅಗಾಧ ಬದಲಾವಣೆ: ಜೆಪಿ ಮೋರ್ಗನ್‌ ಸಿಇಒ ಪ್ರಶಂಸೆ

ನರೇಂದ್ರ ಮೋದಿ ತಮ್ಮ ಅಧಿಕಾರಾವಧಿಯಲ್ಲಿ 40 ಕೋಟಿ ಜನರನ್ನು ಬಡತನದಿಂದ ಹೊರತಂದು ದೇಶದ ಮಾನವ ಸಂಪನ್ಮೂಲವನ್ನು ಬೆಳೆಸಿದ್ದಾರೆ. ಜೊತೆಗೆ 70 ಕೋಟಿ ಜನರಿಗೆ ಬ್ಯಾಂಕ್‌ ಖಾತೆ ತೆರೆಯುವ ಮೂಲಕ ಡಿಜಿಟಲ್‌ ಆರ್ಥಿಕತೆಗೆ ಒತ್ತು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜೆಪಿ ಮೋರ್ಗನ್‌ ಸಂಸ್ಥೆಯ ಸಿಇಒ ಜೇಮಿ ಡೈಮನ್‌ 

JP Morgan CEO Jamie Dimon Praises Indian PM Narendra Modi grg
Author
First Published Apr 25, 2024, 2:04 PM IST | Last Updated Apr 25, 2024, 2:04 PM IST

ನ್ಯೂಯಾರ್ಕ್(ಏ.25):  ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ದೇಶದಲ್ಲಿ ಸುಭದ್ರ ಆಡಳಿತದ ಮೂಲಕ ಅಗಾಧ ಬದಲಾವಣೆ ತಂದಿದ್ದಾರೆ ಎಂದು ಜೆಪಿ ಮೋರ್ಗನ್‌ ಸಂಸ್ಥೆಯ ಸಿಇಒ ಜೇಮಿ ಡೈಮನ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನ್ಯೂಯಾರ್ಕ್‌ನ ಎಕನಾಮಿಕ್‌ ಕ್ಲಬ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿ ತಮ್ಮ ಅಧಿಕಾರಾವಧಿಯಲ್ಲಿ 40 ಕೋಟಿ ಜನರನ್ನು ಬಡತನದಿಂದ ಹೊರತಂದು ದೇಶದ ಮಾನವ ಸಂಪನ್ಮೂಲವನ್ನು ಬೆಳೆಸಿದ್ದಾರೆ. ಜೊತೆಗೆ 70 ಕೋಟಿ ಜನರಿಗೆ ಬ್ಯಾಂಕ್‌ ಖಾತೆ ತೆರೆಯುವ ಮೂಲಕ ಡಿಜಿಟಲ್‌ ಆರ್ಥಿಕತೆಗೆ ಒತ್ತು ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಗತಿಕ ರಕ್ಷಣಾ ವೆಚ್ಚದಲ್ಲಿ ಶೇ.6.8ರಷ್ಟು ಏರಿಕೆ: ಭಾರತಕ್ಕೆ 4ನೇ ಸ್ಥಾನ

ಅಮೆರಿಕಕ್ಕೂ ಅಗತ್ಯ:

ಇದೇ ವೇಳೆ ಪರೋಕ್ಷ ತೆರಿಗೆ ಪದ್ಧತಿಯನ್ನು ಅಳವಡಿಸುವ ಜೊತೆಗೆ ಅಧಿಕಾರಶಾಹಿತ್ವದಲ್ಲಿ ಬದಲಾವಣೆ ತಂದು ಭ್ರಷ್ಟಾಚಾರಕ್ಕೆ ಮೋದಿ ಕಡಿವಾಣ ಹಾಕಿದ್ದಾರೆ. ಅಮೆರಿಕದಲ್ಲೂ ಭ್ರಷ್ಟಾಚಾರವನ್ನು ತೊಲಗಿಸಲು ನರೇಂದ್ರ ಮೋದಿಯವರ ಆಡಳಿತ ನೀತಿಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

Latest Videos
Follow Us:
Download App:
  • android
  • ios