Asianet Suvarna News Asianet Suvarna News

ಪಾಕಿಸ್ತಾನದ ಸೇನಾನೆಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 23 ಯೋಧರ ಸಾವು

ಪಾಕಿಸ್ತಾನದ ಖೈಬರ್ ಪಕ್ತುಖ್ವಾ ಪ್ರಾಂತ್ಯದಲ್ಲಿ ಇರುವ ಪಾಕಿಸ್ತಾನದ ಸೇನಾ ನೆಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಈ ದುರಂತದಲ್ಲಿ ಒಟ್ಟು 23 ಪಾಕಿಸ್ತಾನದ ಯೊಧರು ಹುತಾತ್ಮರಾಗಿದ್ದಾರೆ.

Suicide bomb attack on Pakistan army base 23 soldiers killed akb
Author
First Published Dec 13, 2023, 10:13 AM IST

ಇಸ್ಲಾಮಾಬಾದ್‌: ಪಾಕಿಸ್ತಾನದ ಖೈಬರ್ ಪಕ್ತುಖ್ವಾ ಪ್ರಾಂತ್ಯದಲ್ಲಿ ಇರುವ ಪಾಕಿಸ್ತಾನದ ಸೇನಾ ನೆಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಈ ದುರಂತದಲ್ಲಿ ಒಟ್ಟು 23 ಪಾಕಿಸ್ತಾನದ ಯೊಧರು ಹುತಾತ್ಮರಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪಕ್ತುಖ್ವಾ ಪ್ರಾಂತ್ಯದ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ದಾಳಿ ಹಿನ್ನೆಲೆಯಲ್ಲಿ ಘಟನೆ ನಡೆದ ಡೇರಾ ಇಸ್ಲಾಯಿಲ್ ಖಾನ್ ಜಿಲ್ಲೆಯ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.  ತಾಲಿಬಾನ್‌ಗೆ ಸೇರಿದ ಆತ್ಮಾಹುತಿ ಬಾಂಬರ್‌ಗಳು ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ವರದಿಗಳ ಪ್ರಕಾರ, ಆರು ಜನ ಆತ್ಮಾಹುತಿ ಬಾಂಬರ್‌ಗಳು ಈ ದಾಳಿ ನಡೆಸಿದ್ದಾರೆ.  ವರದಿಗಳ ಪ್ರಕಾರ, ಅಫ್ಘಾನಿಸ್ತಾನದ ಗಡಿಯಲ್ಲಿರುವ ದಕ್ಷಿಣ ವಜಿರಿಸ್ತಾನ್ ಬುಡಕಟ್ಟು ಜಿಲ್ಲೆಯ ಗಡಿಯಲ್ಲಿರುವ  ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ದಾರಾಬನ್ ಪೊಲೀಸ್ ಠಾಣೆಯ ಭದ್ರತಾ ಕಾಂಪೌಂಡ್ ಮೇಲೆ ಮೊದಲಿಗೆ ದಾಳಿ ನಡೆಸಿದ್ದಾರೆ.

ಬೃಹತ್ ರ‍್ಯಾಲಿ ಮೇಲೆ ಉಗ್ರರ ದಾಳಿ, ಪಾಕಿಸ್ತಾನ ಬಾಂಬ್ ಸ್ಫೋಟಕ್ಕೆ ಸಾವಿನ ಸಂಖ್ಯೆ 39ಕ್ಕೆ ಏರಿಕೆ!

ಭಯೋತ್ಪಾದಕರು ಸ್ಫೋಟಕ ತುಂಬಿದ್ದ ವಾಹನವನ್ನು ಬಿಲ್ಡಿಂಗ್‌ಗೆ ಡಿಕ್ಕಿ ಹೊಡೆಸಿದ್ದಾರೆ. ನಂತರ ಆತ್ಮಾಹುತಿ ಬಾಂಬರ್‌ಗಳು ಒಳನುಗ್ಗಿದ್ದಾರೆ. ಬೃಹತ್ ಪ್ರಮಾಣದ ಸ್ಫೋಟಕವಿದ್ದ ವಾಹನ ಡಿಕ್ಕಿ ಹೊಡೆದ ನಂತರ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಇಡೀ ಕಟ್ಟಡವೇ ಕುಸಿದು ಬಿದ್ದಿದೆ ಇದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಯ್ತು ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ. ದಾಳಿ ನಡೆದ ಪ್ರದೇಶವನ್ನು ಪಾಕಿಸ್ಥಾನ ಬೇಸ್ ಕ್ಯಾಂಪ್ ಆಗಿ ಬಳಸುತ್ತಿತ್ತು. 

ಪಾಕಿಸ್ತಾನ್ ತಾಲಿಬಾನ್ ಜೊತೆ ಸಂಪರ್ಕದಲ್ಲಿರುವ ತೆಹರಿಕ್ ಇ ಜಿಹಾದ್ ಎಂಬ ಭಯೋತ್ಪಾದಕ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ತೆಹರಿಕ್ ಇ ಜಿಹಾದ್ ನ ವಕ್ತಾರ ಈ ಸ್ಫೋಟವನ್ನು ಇದೊಂದು ಸುಸೈಡ್ ಮಿಷನ್ (ಫಿದಾಯಿನ್ ) ಎಂದು ಹೇಳಿದ್ದಾರೆ. ದಾಳಿ ನಡೆಸಿದ ಎಲ್ಲರೂ ಈ ವಿಧ್ವಂಸಕ ಕೃತ್ಯದಲ್ಲಿ ಮೃತಪಟ್ಟಿದ್ದಾರೆ. 

ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು, ಬೆದರಿಕೆ ಪತ್ರದ ಬೆನ್ನಲ್ಲೇ ಕೇರಳದಲ್ಲಿ ಹೈ ಅಲರ್ಟ್!

Follow Us:
Download App:
  • android
  • ios