Asianet Suvarna News Asianet Suvarna News

ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು, ಬೆದರಿಕೆ ಪತ್ರದ ಬೆನ್ನಲ್ಲೇ ಕೇರಳದಲ್ಲಿ ಹೈ ಅಲರ್ಟ್!

ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 24 ಹಾಗೂ 25 ರಂದು ಕೇರಳ ಪ್ರಯಾಣ ಮಾಡಲಿದ್ದಾರೆ. ಆದರೆ ಕೇರಳದಲ್ಲಿ ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿ ನಡೆಸುವ ಸಂಚು ರೂಪಿಸಿರುವುದು ಬಯಲಾಗಿದೆ.ಹೀಗಾಗಿ ಕೇರಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 

Kerala on high alert after BJP office receive threat letter on PM Modi visit on april 24th and 25th ckm
Author
First Published Apr 22, 2023, 1:21 PM IST

ಕೊಚ್ಚಿ(ಏ.22):  ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 24 ಹಾಗೂ 25ರಂದು ಬಿಡುವಿಲ್ಲದೆ ಹಲವು ಕಾರ್ಯಕ್ರಮಗಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬರೋಬ್ಬರಿ 5,300 ಕಿಲೋಮೀಟ್ ಪ್ರಯಾಣ ಮಾಡಿ 8 ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆದರೆ ಪ್ರಧಾನಿ ಮೋದಿಯ ಕೇರಳ ಭೇಟಿ ಭದ್ರತಾ ಪಡೆಗಳ ತಲೆನೋವಿಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೇಲೆ ಆತ್ಮಾಹುತಿ ದಾಳಿ ನಡುಸುವುದಾಗಿ ಸಂಚು ರೂಪಿಸಲಾಗಿದೆ. ಈ ಕುರಿತು ಕೇರಳ ಬಿಜೆಪಿ ಕಚೇರಿಗೆ ಬೆದರಿಕೆ ಪತ್ರವೊಂದು ಬಂದಿದೆ. ಈ ಪತ್ರ ಬಂದ ಬೆನ್ನಲ್ಲೇ ಕೇಂದ್ರ ಭದ್ರತಾ ಪಡೆಗಳು ಹೈ ಅಲರ್ಟ್ ಆಗಿದೆ. ಕೇರಳ ಪೊಲೀಸರಿಗೆ ಕೆಲ ಮಹತ್ವದ ಸೂಚನೆ ನೀಡಲಾಗಿದೆ.

ಕೇರಳ ಬಿಜೆಪಿ ಕಚೇರಿಗೆ ಬಂದಿರುವ ಪತ್ರವನ್ನು ಪೊಲೀಸರಿಗೆ ನೀಡಲಾಗಿದೆ. ಬಳಿಕ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಕೇರಳ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಅನುಮಾನದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬೆದರಿಕೆ ಪತ್ರಕ್ಕೂ ತನಗೂ ಸಂಬಂಧವಿಲ್ಲ. ತನ್ನ ಹೆಸರು ಬಳಸಿ ಈ ಪತ್ರ ರವಾನಿಸಲಾಗಿದೆ ಎಂದು ತನಿಖೆಯಲ್ಲಿ ಶಂಕಿತ ವ್ಯಕ್ತಿ ಹೇಳಿದ್ದಾರೆ. ಇತ್ತ ತನಿಖೆ ತೀವ್ರಗೊಳಿಸಿರುವ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

36 ಗಂಟೆ, 8 ಕಾರ್ಯಕ್ರಮ, 7 ನಗರ, 5,300 ಕಿ.ಮೀ ಪ್ರಯಾಣ,ಇದು ಪ್ರಧಾನಿ ಮೋದಿ 2 ದಿನದ ವೇಳಾಪಟ್ಟಿ!

ಕೇರಳ ಎಡಿಜಿಪಿ ಕೊಚ್ಚಿ, ತಿರುವಂತಪುರಂನಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಇತರ ಕೆಲ ಸಂಘಟನೆಗಳಿಂದ ಬೆದರಿಕೆಗೆಳು ಬಂದಿದೆ. ಈ ಕುರಿತೂ ತನಿಖೆ ನಡೆಯುತ್ತಿದೆ. ಪ್ರಧಾನಿ ಮೋದಿ ಭೇಟಿಗೆ ಭದ್ರತೆ ಹೆಚ್ಚಿಸಲಾಗಿದೆ. ಸಿಸಿಟಿವಿ, ಕಂಟ್ರೋಲ್ ರೂಂ ಮೂಲಕವೂ ಹದ್ದಿನ ಕಣ್ಣಿಡಲಾಗಿದೆ. ಯಾವುದೇ ಲೋಪವಾಗದಂತೆ ಮುನ್ನಚ್ಚಿರಿಕೆ ವಹಿಸಲಾಗಿದೆ ಎಂದು ಕೇರಳ ಎಡಿಜಿಪಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಎರಡು ದಿನದ ಕೇರಳ ಪ್ರವಾಸ ವೇಳಾಪಟ್ಟಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕೇರಳ ಪೊಲೀಸ್, ಮೋದಿ ಭದ್ರತಾ ಪಡೆಗಳು ಮುನ್ನಚ್ಚೆರಿಕೆ ವಹಿಸಿದೆ. ಕೇರಳದಲ್ಲಿ ಬಿಜೆಪಿ ಹಿರಿಯ ನಾಯಕರ ರೋಡ್ ಶೋ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕೇರಳದಲ್ಲಿ ಮೋದಿ ಆಡಳಿತದಲ್ಲಿ ಹಲವು ಬದಲಾವಣೆಗಳಾಗಿವೆ. ಅಭಿವೃದ್ಧಿ ಕಾಣುತ್ತಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೇರಳಕ್ಕೆ ಆಗಮಿಸಿದೆ. ಇದರಿಂದ ಕೇರಳದ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದಾರೆ.

ಏ.30ಕ್ಕೆ ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಪ್ರಚಾರ: 2 ಲಕ್ಷ ಜನ ಭಾಗಿ

ಏಪ್ರಿಲ್ 24 ರಂದು ಪ್ರಧಾನಿ ಮೋದಿ ಕೇರಳದ ಕೊಚ್ಚಿಗೆ ಆಗಮಿಸಲಿದ್ದಾರೆ. ಕೊಚ್ಚಿಯಲ್ಲಿ ಯುವಂ ಕಾಂಕ್ಲೇವ್‌ನಲ್ಲಿ ಮೋದಿ ಭಾಗವಹಿಸಲಿದ್ದಾರೆ. ಬಳಿಕ ಕೊಚ್ಚಿಯಲ್ಲಿ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ, ಏಪ್ರಿಲ್ 25ರಂದು ಕೊಚ್ಚಿಯಿಂದ ತಿರುವನಂತಪುರಂಗೆ ತೆರಳಲಿದ್ದಾರೆ.ತಿರುವನಂತಪುರಂನಲ್ಲಿ ಮೋದಿ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಿ 2 ದಿನದ ಕೇರಳ ಪ್ರವಾಸ, ಕೇರಳ ಬಿಜೆಪಿಯಲ್ಲಿ ಹೊಸ ಹುರುಪು ತಂದಿದೆ. ಆದರೆ ಕೇರಳ ಪೊಲೀಸರ ತಲೆನೋವು ಹೆಚ್ಚಾಗಿದೆ. ಸೂಕ್ತ ಭದ್ರತೆ ಒದಗಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. 

Follow Us:
Download App:
  • android
  • ios