ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಭೀಕರ ಆತ್ಮಾಹುತಿ ದಾಳಿ ಸಂಭವಿಸಿದೆ. ಜೆಯುಐ-ಎಫ್ ಪಕ್ಷದ ಬೃಹತ್ ರ‍್ಯಾಲಿಯಲ್ಲಿ ಈ ಬಾಂಬ್ ಸ್ಫೋಟಿಸಲಾಗಿದ್ದು, ಇದೀಗ ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾಗಿದ್ದರೆ, ಗಾಯಗೊಂಡವರ ಸಂಖ್ಯೆ 200 ದಾಟಿದೆ.
ಇಸ್ಲಾಮಾಬಾದ್(ಜು.30): ಉಗ್ರರನ್ನು ಪೋಷಿಸುವ ಪಾಕಿಸ್ತಾನಕ್ಕೆ ಇದೀಗ ತಿರುಗುಬಾಣವಾಗಿದೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಆಯೋಜನೆಗೊಂಡಿದ್ದ ರಾಜಕೀಯ ರ‍್ಯಾಲಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 39ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಮೈತ್ ಉಲೇಮಾ ಇ ಇಸ್ಲಾಮ್ ಫಜ್ಲ್(JUI-F) ಪಕ್ಷದ ರ‍್ಯಾಲಿಯಲ್ಲಿ ಈ ಬಾಂಬ್ ಸ್ಫೋಟ ಸಂಭವಿಸಿದೆ.
JUI-F ಪಕ್ಷದ ಬೃಹತ್ ರ‍್ಯಾಲಿಯನ್ನು ಬಜೌರ್ಸ್ ಖಾರ್ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಕಾರ್ಯಕರ್ತರು ಸೇರಿದಂತೆ ಸಾವಿರಾರು ಮಂದಿ ಈ ರ‍್ಯಾಲಿಗೆ ಆಗಮಿಸಿದ್ದರು. ಪಶ್ರದ ಪ್ರಮುಖ ನಾಯಕ, ಭಾಷಣಕ್ಕೆ ಕೆಲವೇ ನಿಮಿಷಗಳು ಮಾತ್ರ ಬಾಕಿ ಇತ್ತು. ಕಾರ್ಯಕ್ರಮಕ್ಕೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಪ್ರಮುಖ ನಾಯಕ ಇನ್ನೇನು ಸ್ಥಳಕ್ಕೆ ಆಗಮಿಸಬೇಕು ಅನ್ನುವಷ್ಟರಲ್ಲೇ ಆತ್ಮಾಹುತಿ ದಾಳಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.
ಆರ್ಟಿಕಲ್ 370 ರದ್ದು ವಿರೋಧಿಸಿ ಆ.5ರಂದು ಜಾಗೃತವಾಗಲಿದೆ ಪಾಕಿಸ್ತಾನದ ಟೂಲ್‌ಕಿಟ್ ಗ್ಯಾಂಗ್!
ಗಾಯಗೊಂಡ 200ಕ್ಕೂ ಹೆಚ್ಚು ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಬಹುತೇಕರ ಸ್ಥಿತಿ ಚಿಂತಾಜನಕವಾಗಿದೆ. ಹಲವರ ದೇಹಗಳು ಛಿದ್ರ ಛಿದ್ರವಾಗಿದೆ. ಘಟನೆ ನಡೆದ ಬೆನ್ನಲ್ಲೇ ಪಾಕಿಸ್ತಾನ ಭದ್ರತಾ ಪಡೆ ಸಂಪೂರ್ಣ ಪ್ರದೇಶವನ್ನು ಸುತ್ತುವರಿದಿದೆ. ಪಾಕಿಸ್ತಾನ ಸರ್ಕಾರ ಉನ್ನತ ಮಟ್ಟದ ತನಿಖೆ ಆದೇಶ ನೀಡಬೇಕು ಎಂದು JUI-F ಪಕ್ಷದ ನಾಯಕರು ಆಗ್ರಹಿಸಿದ್ದಾರೆ.
JUI-F ಪಕ್ಷದ ಹಲವು ಸಭೆಗಳ ಮೇಲೆ ಉಗ್ರರ ದಾಳಿಯಾಗಿದೆ. ಇಂದಿನ ಬೃಹತ್ ಸಭೆಗೆ ಹೆಚ್ಚುವರಿ ಭದ್ರತೆಯನ್ನು ಕೋರಲಾಗಿತ್ತು. ಆದರೆ ಪಾಕಿಸ್ತಾನ ಪೊಲೀಸ್ ಭದ್ರತೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. JUI-F ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು JUI-F ನಾಯಕರು ಆರೋಪಿಸಿದ್ದಾರೆ. ಭೀಕರ ಬಾಂಬ್ ಸ್ಫೋಟವನ್ನು ಪಾಕಿಸ್ತಾನದ ಹಲವು ನಾಯಕರು ಖಂಡಿಸಿದ್ದಾರೆ.
ಪಾಕಿಸ್ತಾನದ ಇಸ್ಲಾಮಿಯಾ ವಿವಿಯ 5500 ವಿದ್ಯಾರ್ಥಿನಿಯರು, ಶಿಕ್ಷಕಿಯರ ಪೋರ್ನ್ ಕ್ಲಿಪ್ ವೈರಲ್!
ಪಾಕಿಸ್ತಾನ ಉಗ್ರರನ್ನು ಪೋಷಿಸಿ ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳುತ್ತಿದೆ. ಆದರೆ ಹಲವು ಬಾರಿ ಪಾಕ್ ಉಗ್ರರೇ ತಿರುಗಿ ಬಿದ್ದು ಹಲವು ದುರಂತ ಸಂಭವಿಸಿದೆ.ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ಆಪ್ತರೇ ದೇಶದ ಕುತಂತ್ರವನ್ನು ಒಪ್ಪಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂಜಾಬ್ ಗಡಿಭಾಗದಲ್ಲಿ ಡ್ರೋನ್ ಮೂಲಕ ಡ್ರಗ್‌್ಸ ಕಳ್ಳಸಾಗಣೆ ಮಾಡುತ್ತಿರುವ ವಿಷಯವನ್ನು ಸ್ವತಃ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್‌ರ ಆಪ್ತ ಮಲಿಕ್ ಮಮೊಹಮ್ಮದ್ ಅಹ್ಮದ್ ಖಾನ್ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು. ಆದರೆ ಇದನ್ನು ಪಾಕಿಸ್ತಾನ ಮಾಡುತ್ತಿಲ್ಲ ಬದಲಾಗಿ ಇಲ್ಲಿನ ಕಳ್ಳಸಾಗಣೆದಾರರು ಮಾಡುತ್ತಿದ್ದು ಅದನ್ನು ತಡೆಯುವ ಪ್ರಯತ್ನವನ್ನು ಪಾಕ್ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಕ್ಷಣಾ ಇಲಾಖೆಯ ವಿಶೇಷ ಅಧಿಕಾರಿಯಾಗಿರುವ ಮಲಿಕ್ ‘ಡ್ರೋನ್ ಮೂಲಕ ಭಾರತದ ಗಡಿಯುದ್ದಕ್ಕೂ ಡ್ರಗ್‌್ಸ ಅನ್ನು ಕಳ್ಳಸಾಗಾಣಿಕೆ ಮೂಲಕ ರವಾನಿಸಲಾಗುತ್ತಿದ್ದು ಪಾಕಿಸ್ತಾನಿ ಏಜೆನ್ಸಿಗಳು ಇದನ್ನು ತಡೆಯಲು ಪ್ರಯತ್ನಿಸುತ್ತಿವೆ’ ಎಂದಿದ್ದಾರೆ. ಅಲ್ಲದೇ ‘10 ಕೇಜಿ ಹೆರಾಯಿನ್ ಅನ್ನು ಎರಡು ಡ್ರೋನ್‌ಗಳಿಗೆ ಕಟ್ಟಿಸಾಗಿಸಿದ್ದ 2 ಘಟನೆಗಳು ಇತ್ತೀಚೆಗೆ ನಡೆದಿವೆ. ಇದನ್ನು ತಡೆಯುವಲ್ಲಿ ನಮ್ಮ ಏಜೆನ್ಸಿಗಳು ಕೆಲಸ ಮಾಡುತ್ತಿವೆ. ಕಳ್ಳಸಾಗಾಣಿಕೆ ಬಗ್ಗೆ ಗುಪ್ತಚರ ಮಾಹಿತಿ ಬಂದಾಗ ಮೊಬೈಲ್ ಸಿಗ್ನಲ್‌ಗಳನ್ನು ಕಡಿತಗೊಳಿಸಲಾಗುತ್ತದೆ.
