ಹೆಣ್ಣಿನಂತೆ ಅಳು, ರಕ್ಷಿಸುವಂತೆ ಮೊರೆ: ಪಕ್ಕದ ಮನೆಯವರು ನೀಡಿದ ದೂರು ಕೇಳಿ ಮನೆಗೆ ಬಂದ ಪೊಲೀಸರೇ ಶಾಕ್‌?

ಬಾಗಿಲು ಹಾಕಿದ್ದ ನೆರೆ ಮನೆಯಿಂದ ಜೋರಾಗಿ ಹೆಣ್ಣೊಬ್ಬಳು ಅಳುತ್ತಾ ಕಾಪಾಡುವಂತೆ ಕೂಗುತ್ತಿರುವ ಧ್ವನಿ ಕೇಳಿ ಬಂದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪಕ್ಕದ ಮನೆಯವರು ನೀಡಿದ ಮಾಹಿತಿ ಹಿನ್ನೆಲೆ ವಿಷಯ ಏನೆಂದು ತಿಳಿದುಕೊಳ್ಳಲು ಅಲ್ಲಿಗೆ ಬಂದ ಪೊಲೀಸರು ಮನೆಯೊಳಗಿದ್ದವ ನೋಡಿ ಬೆಸ್ತು ಬೀಳುವುದೊಂದು ಬಾಕಿ. ಹಾಗಿದ್ದರೆ ಅಲ್ಲಿ ನಡೆದಿದ್ದೇನು?

Crying like a woman begging for rescue The police came to the house after hearing a complaint from the neighbors and were shocked akb

ಬಾಗಿಲು ಹಾಕಿದ್ದ ನೆರೆ ಮನೆಯಿಂದ ಜೋರಾಗಿ ಹೆಣ್ಣೊಬ್ಬಳು ಅಳುತ್ತಾ ಕಾಪಾಡುವಂತೆ ಕೂಗುತ್ತಿರುವ ಧ್ವನಿ ಕೇಳಿ ಬಂದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪಕ್ಕದ ಮನೆಯವರು ನೀಡಿದ ಮಾಹಿತಿ ಹಿನ್ನೆಲೆ ವಿಷಯ ಏನೆಂದು ತಿಳಿದುಕೊಳ್ಳಲು ಅಲ್ಲಿಗೆ ಬಂದ ಪೊಲೀಸರು ಮನೆಯೊಳಗಿದ್ದವ ನೋಡಿ ಬೆಸ್ತು ಬೀಳುವುದೊಂದು ಬಾಕಿ. ಹಾಗಿದ್ದರೆ ಅಲ್ಲಿ ನಡೆದಿದ್ದೇನು?

ವ್ಯಕ್ತಿಯೊಬ್ಬ ತನ್ನ ಮನೆಯ ಮುಂದೆ ತನ್ನ ಕಾರಿನ ಮುಂದಿನ ಭಾಗದ ಟೈರ್ ಬಿಚ್ಚಿ ಅದನ್ನು ರಿಪೇರಿ ಮಾಡುತ್ತಾ ಕುಳಿತಿದ್ದ. ಆದರೆ ಆ ಮನೆಯ ಒಳಗಿನಿಂದ ಜೋರಾಗಿ ಹೆಣ್ಣೊಬ್ಬಳು ಅಳುವ ಜೊತೆಗೆ ಕಾಪಾಡಿ ಎಂದು ಬೇಡುತ್ತಿರು ಸದ್ದು ಕೇಳುತ್ತಿತ್ತು.  ಆದರೆ ಮನೆಯ ಬಾಗಿಲುಗಳು ಬಂದ್ ಆಗಿದ್ದವು. ಪಕ್ಕದ ಮನೆಗೂ ಈ ಹೆಣ್ಣಿನ ಧ್ವನಿ ಜೋರಾಗಿ ಕೇಳುತ್ತಿದ್ದರೂ ಮನೆ ಮುಂದೆ ಕಾರು ಸರಿ ಮಾಡುತ್ತಿದ್ದ ವ್ಯಕ್ತಿ ಮಾತ್ರ ಸ್ವಲ್ಪವೂ ಆ ಬಗ್ಗೆ ತಲೆಕೆಡಿಸಿಕೊಳ್ಳದೇ ತನ್ನ ಕೆಲಸದಲ್ಲಿ ಮಗ್ನನಾಗಿದ್ದ ಇದನ್ನು ಗಮನಿಸಿದ್ ಪಕ್ಕದ ಮನೆಯವರು ಅಲ್ಲಿ ಮಹಿಳೆ ಯಾರೋ ಅಪಾಯದಲ್ಲಿರಬೇಕು ಎಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಅದರಂತೆ ಪಕ್ಕದ ಮನೆಯವರು ಹೇಳಿದ ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ. ಈ ವೇಳೆ ಕಾರು ರಿಪೇರಿ ಮಾಡುತ್ತಾ ವ್ಯಕ್ತಿಯೊಬ್ಬ ಅಲ್ಲಿ ಕುಳಿತಿದ್ದು, ಪೊಲೀಸರನ್ನು ನೋಡಿದೊಡನೆಯೇ ಆತ ಎದ್ದು ಬಂದಿದ್ದಾನೆ. ಈ ವೇಳೆ ಪೊಲೀಸರು ನಿಮ್ಮ ಮನೆಯಿಂದ ಹೆಣ್ಣೊಬ್ಬಳು ಅಳುತ್ತಿರುವ ಧ್ವನಿ ಕೇಳುತ್ತಿರುವ ಬಗ್ಗೆ ಕರೆ ಬಂದಿದೆ. ಈ ಬಗ್ಗೆ ಪರಿಶೀಲಿಸಲು ಬಂದಿರುವುದಾಗಿ ಹೇಳುತ್ತಾರೆ. ಈ ವೇಳೆ ಆ ವ್ಯಕ್ತಿ ಜೋರಾಗಿ ನಗುತ್ತಾ ಪೊಲೀಸರಿಗೆ ಅಲ್ಲೇ ಇರುವಂತೆ ಹೇಳಿ, ಅಳುವವರನ್ನು ಕರೆದುಕೊಂಡು ಬರುವುದಾಗಿ ಹೇಳುತ್ತಾರೆ. ನಂತರ ಅಳುವ ಹೆಣ್ಣನ್ನು ಕೈಯಲ್ಲಿ ಎತ್ತಿಕೊಂಡು ಬಂದು ತೋರಿಸಿದ್ದು ಇದನ್ನು ನೋಡಿ ಬೆಚ್ಚಿ ಬೀಳುವ ಸರದಿ ಪೊಲೀಸರದಾಗಿತ್ತು. ಅವರು ಅದನ್ನು ನೋಡಿ ಜೋರಾಗಿ ನಗಲು ಆರಂಭಿಸಿದ್ದಾರೆ.

ಏಕೆಂದರೆ ಅಲ್ಲಿ ಅಳುತ್ತಿದ್ದಿದ್ದು ಹೆಣ್ಣಲ್ಲ ಗಿಳಿ, ಹೌದು ಆ ಮನೆಯ ಮಾಲೀಕ ಈ ಗಿಣಿ ಪುಟ್ಟದಾಗಿರುವಾಗಲೇ ಅದಕ್ಕೆ ಕೆಲವು ಪದಗಳನ್ನು ಕಲಿಸಿದ್ದಾರಂತೆ. ಅಂದಹಾಗೆ ಇದು ಹೆಣ್ಣು ಗಿಳಿಯೂ ಅಲ್ಲ, ಗಂಡು ಗಿಳಿ. ಹಸಿರು ಬಣ್ಣದಲ್ಲಿರುವ ಈ ಹುಡುಗನನ್ನು ನೋಡಿ ಎಂದು ಈ ಮನೆ ಮಾಲೀಕನಾದ ಜಾಸನ್ ಅವರು ಈ ಗಿಳಿಯನ್ನು ಕರೆತಂದು ಪೊಲೀಸರಿಗೆ ತೋರಿಸಿದ್ದಾರೆ. , ಈ ಗಿಳಿಗೆ 40 ವರ್ಷ ವಯಸ್ಸಂತೆ ಹೆಸರು ರಾಂಬೋ, ಈ ಮನೆ ಮಾಲೀಕನಾದ ಜಾಸನ್ ಈ ಗಿಳಿಗೆ ಅದು ಸಣ್ಣದಿರುವಾಗಲೇ ಹೆಲ್ಪ್‌ ಹೆಲ್ಪ್ ಲೆಟ್ ಮೀ ಔಟ್ ಎಂಬ ವಾಕ್ಯವನ್ನು ಹೇಳಿಕೊಟ್ಟಿದ್ದರಂತೆ. ಹಾಗೆಯೇ ಈ ರಾಂಬೋ ಗೂಡೊಂದರಲ್ಲಿ ವಾಸ ಮಾಡುತ್ತಿದ್ದು ಆಗಾಗ ಹೆಲ್ಪ್‌ ಹೆಲ್ಪ್ ಲೆಟ್ ಮೀ ಔಟ್ ಎಂದು ಬೊಬ್ಬೆ ಹೊಡೆಯುತ್ತಲೇ ಇರುತ್ತಿತ್ತು. ಇದನ್ನು ಕೇಳಿದ ನೆರೆಮನೆಯವರು ಗಾಬರಿಯಾಗಿ ಪೊಲೀಸರಿಗೆ ಕರೆ ಮಾಡಿದ್ದಾರೆ ಅಷ್ಟೇ..!

ಗಿಣಿಗಳು ಮನುಷ್ಯರ ಧ್ವನಿಯನ್ನು ಬಹುತೇಕ ಅನುಸರಿಸುತ್ತವೆ. ಮನುಷ್ಯರಂತೆ ಮಕ್ಕಳಂತೆ ಅಳುವುದನ್ನು  ಮಾತನಾಡುವುದನ್ನು ನೀವು ಕೇಳಿರಬಹುದು. ಮನೆಯಲ್ಲಿ ಗಿಣಿ ಸಾಕಿದ್ದರೆ ನಿಮಗೆ ಈ ಅನುಭವ ಆಗಿರಬಹುದು. ಆದರೆ ಇಲ್ಲಿ ಈ ಗಿಣಿ ಪೊಲೀಸರನ್ನೇ ಬೆಸ್ತು ಬೀಳಿಸಿದ್ದು ಸುಳ್ಳಲ್ಲ..

 
 
 
 
 
 
 
 
 
 
 
 
 
 
 

A post shared by LANRE (@kimola_official)

 

Latest Videos
Follow Us:
Download App:
  • android
  • ios