ರಷ್ಯಾ ಶ್ರೀಮಂತನ ವಿಚ್ಛೇದನ : ಪತ್ನಿಗೆ 52 ಸಾವಿರ ಕೋಟಿ ರು. ಜೀವನಾಂಶ?  ಬೆಜೋಸ್‌, ಗೇಟ್ಸ್‌ ನಂತರದ ಗರಿಷ್ಠ ಜೀವನಾಂಶ

ಸ್ಮಾಕೋ (ಡಿ.09): ರಷ್ಯಾದ (Russia) ಎರಡನೇ ಶ್ರೀಮಂತ ವ್ಯಕ್ತಿ ವ್ಲಾದಿಮಿರ್‌ ಪೊಟಾನಿನ್‌ ಅವರು ತಮ್ಮ ವಿಚ್ಛೇದಿತ ಪತ್ನಿಗೆ ಬರೋಬ್ಬರಿ 52 ಸಾವಿರ ಕೋಟಿ ರು. ಜೀವನಾಂಶ ನೀಡಬೇಕಾಗಿರುವ ಸವಾಲು ಎದುರಿಸುತ್ತಿದ್ದಾರೆ. ಈ ಮೂಲಕ ಅಮೆಜಾನ್‌ (Amazon) ಸಂಸ್ಥಾಪಕ ಜೆಫ್‌ ಬೆಜೋಸ್‌ ಮತ್ತು ಮೈಕ್ರೋ ಸಾಫ್ಟ್‌ (Microsoft) ಸಂಸ್ಥಾಪಕ ಬಿಲ್‌ ಗೇಟ್ಸ್‌ (Bill Gates) ನಂತರ ಇಷ್ಟು ದೊಡ್ಡ ಮೊತ್ತದ ಜೀವನಾಂಶ ನೀಡುವ ವಿಶ್ವದ ವ್ಯಕ್ತಿಗಳಲ್ಲಿ ಒಬ್ಬರು ಎನಿಸಿಕೊಳ್ಳಲಿದ್ದಾರೆ. ಮಂಗಳವಾರ ಲಂಡನ್‌ (London) ನ್ಯಾಯಾಲಯದಲ್ಲಿ (Court) ವಿಚ್ಛೇದನ (Divorce) ಕುರಿತ ಅರ್ಜಿ ವಿಚಾರಣೆ ವೇಳೆ ಪೊಟಾನಿನ್‌ ಮಾಜಿ ಪತ್ನಿ ನತಾಲಿಯಾ ಪೊಟಾನಿನಾ ಅವರು ಎಂಎಂಸಿ ನಾರಿಲಸ್ಕ್‌ ನಿಕೆಲ್‌ ಪಿಜೆಎಸ್‌ಸಿ ಕಂಪನಿಯ ಶೇ.50ರಷ್ಟು ಷೇರನ್ನು ಪರಿಹಾರವಾಗಿ ಬಯಸುವುದಾಗಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಲೋಹ ಉತ್ಪಾದನೆಯಲ್ಲಿ ಪೊಟಾನಿನ್‌ ಸುಮಾರು ಮೂರನೇ ಒಂದು ಭಾಗದಷ್ಟು ಷೇರುಗಳನ್ನು ಹೊಂದಿರುವುದರಿಂದ ಡಿವೋರ್ಸ್ ಬಳಿಕ ಅರ್ಧದಷ್ಟು ಷೇರಿನ ಮೊತ್ತವು 700 ಕೋಟಿಗೂ ಮೀರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇಷ್ಟೊಂದು ಮೊತ್ತದ ಜೀವನಾಂಶ ನೀಡಲು ತಯಾರಿಲ್ಲದ ಪೊಟಾನಿನ್‌ ಲಂಡನ್‌ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದಾರೆ.

ಅಮೆಜಾನ್ ಮುಖ್ಯಸ್ಥ ಕೊಟ್ಟಿದ್ದೆಷ್ಟು:

ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾದ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಅವರು ತಮ್ಮ ಪತ್ನಿಗೆ ವಿಚ್ಛೇದನ ನೀಡುತ್ತಿರುವುದಾಗಿ ಘೋಷಿಸಿದ್ದಾರೆ.

‘ದೀರ್ಘಾಕಾಲೀನದಿಂದ ನಾವು ಪ್ರತ್ಯೇಕವಾಗಿಯೇ ವಾಸವಿದ್ದೆವು. ಇದೀಗ ನಮ್ಮ ಜೀವನದ ವಿಚಾರವೊಂದನ್ನು ಜನತೆಗೆ ತಿಳಿಸಲು ಇಚ್ಚಿಸುತ್ತಿದ್ದೇವೆ. ನಾನು(ಜೆಫ್‌ ಬಿಜೋಸ್‌) ಮತ್ತು ಮ್ಯಾಕ್‌ಕೆನ್ಝಿ ಬಿಜೋಸ್‌(48) ಪರಸ್ಪರ ವಿಚ್ಛೇದನಕ್ಕೆ ಮುಂದಾಗಿದ್ದೇವೆ,’ ಎಂದು ಜಂಟಿ ಹೇಳಿಕೆಯನ್ನು ಟ್ವಿಟರ್‌ ಮೂಲಕ ಬಿಡುಗಡೆ ಮಾಡಿದ್ದಾರೆ.

pic.twitter.com/Gb10BDb0x0

— Jeff Bezos (@JeffBezos) January 9, 2019

ಜೆಫ್‌ ಪ್ರಸ್ತುತ 10.50 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದು, ಅದರ ಅರ್ಧ ಪಾಲನ್ನು ಅಂದರೆ ಅಂದಾಜು 5 ಲಕ್ಷ ಕೋಟಿ ರು.ಗಳನ್ನು ಮ್ಯಾಕ್‌ಕೆನ್ಝಿ ಅವರಿಗೆ ನೀಡಬೇಕಾಗಿ ಬರಬಹುದು ಎನ್ನಲಾಗಿದೆ.

ಡಿವೋರ್ಸ್ ರಹಸ್ಯ ಬಯಲು : 

ಅತ್ಯಾಚಾರ ಪ್ರಕರಣ ದೋಷಿ, ಹೂಡಿಕೆದಾರ ಜೆಫ್ರಿ ಎಪಿಸ್ಟನ್‌ ಜೊತೆ ಬಿಲ್‌ಗೇಟ್ಸ್‌ ನಂಟು ಹೊಂದಿದ್ದೇ, ಅವರ ವಿವಾಹ ವಿಚ್ಛೇಧನಕ್ಕೆ ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ.

2013ರಿಂದಲೂ ಜೆಫ್ರಿ ಜೊತೆ ಬಿಲ್‌ ನಂಟು ಹೊಂದಿದ್ದರು. ಇದಕ್ಕೆ ಹಲವು ಬಾರಿ ಮೆಲಿಂಡಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ ಜೆಫ್ರಿ ಜೊತೆಗಿನ ಸಂಬಂಧವನ್ನು ಬಿಲ್‌ ಕಡಿದುಕೊಂಡಿರಲಿಲ್ಲ. ಜೊತೆಗೆ 2019ರಲ್ಲಿ ಹಲವು ಬಾರಿ ಬಿಲ್‌-ಜೆಫ್ರಿ ಭೇಟಿ ನಡೆದಿತ್ತು. ಒಮ್ಮೆ ಹೋಟೆಲ್‌ನಲ್ಲಿ ಇಬ್ಬರು ಒಟ್ಟಿಗೆ ಉಳಿದುಕೊಂಡಿದ್ದರು. ಇದರಿಂದ ಬೇಸತ್ತ ಮೆಲಿಂಡಾ 2019ರಲ್ಲೇ ಡೈವೋರ್ಸ್‌ಗೆ ನಿರ್ಧರಿಸಿದ್ದರು.

27 ವರ್ಷದ ದಾಂಪತ್ಯ ಅಂತ್ಯ: ವಿಚ್ಛೇದನಕ್ಕೆ ಮುಂದಾದ ಬಿಲ್‌ ಗೇಟ್ಸ್ ದಂಪತಿ!

ನಂತರ ಸುದೀರ್ಘ ಮಾತುಕತೆ, ಕಾನೂನು ಸಮಾಲೋಚನೆ ಬಳಿಕ ಇದೀಗ ಇಬ್ಬರೂ ಈ ವಿಷಯವನ್ನು ಬಹಿರಂಗಪಡಿಸಿದರು ಎಂದು ಮೂಲಗಳು ತಿಳಿಸಿದೆ.

ಆಸ್ತಿ ಹಂಚಿಕೆ ಹೇಗೆ?:

ಬಿಲ್‌ ಗೇಟ್ಸ್‌ ಅವರು ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಅವರ ಆಸ್ತಿ 124 ಶತಕೋಟಿ ಡಾಲರ್‌ ಆಗಿದೆ. ಇನ್ನು ಗೇಟ್ಸ್‌ ಫೌಂಡೇಶನ್‌ ಸುಮಾರು 50 ಶತಕೋಟಿ ಡಾಲರ್‌ ಮೌಲ್ಯದ್ದಾಗಿದೆ. ಇವರ ವಿಚ್ಛೇದನವು ಗೇಟ್ಸ್‌ ಆಸ್ತಿ ಹಾಗೂ ಪ್ರತಿಷ್ಠಾನದ ಆಸ್ತಿಪಾಸ್ತಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಕರನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

ಕೋವಿಡ್‌ ಆಯ್ತು, ಜಗತ್ತಿಗೆ ಕಾದಿದೆ ಇನ್ನೂ 2 ವಿಪತ್ತು: ಬಿಲ್‌ ಗೇಟ್ಸ್‌ ಭವಿಷ್ಯ!

‘ಜಂಟಿ ಆಸ್ತಿಯನ್ನು ಸಮನಾಗಿ ಹಂಚಿಕೆ ಮಾಡಬೇಕು’ ಎಂದು ಕೋರಿ ದಂಪತಿಯು ಕಿಂಗ್‌ ಕೌಂಟಿ ಸುಪೀರಿಯರ್‌ ಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.

ಅಮೆರಿಕದ ಕಾನೂನು ಪ್ರಕಾರ ಮದುವೆಗಿಂತ ಮೊದಲು ಸಂಪಾದಿಸಿದ್ದ ಆಸ್ತಿ ವೈಯಕ್ತಿಕವಾಗಿ ಅವರವರ ಪಾಲಾಗುತ್ತದೆ. ವೈವಾಹಿಕ ಜೀವನದ ಸಂದರ್ಭದಲ್ಲಿ ಸಂಪಾದಿಸಿದ ಆಸ್ತಿ ಪರಸ್ಪರ ಹಂಚಿಕೆ ಆಗಬೇಕು.