ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ವಿರುದ್ದ ಸಿಡಿದೆದ್ದಿರುವ ಸಿಂಧ್ ಜನತೆ ಪ್ರತ್ಯೇಕ ಸಿಂಧೂದೇಶಕ್ಕಾಗಿ ಹೋರಾಟ ತೀವ್ರಗೊಳಿಸಿದ್ದಾರೆ. ಪ್ರತಿಭಟನೆ, ಮರೆಣಿಗೆಗಳು ತೀವ್ರಗೊಂಡಿದೆ. ಬಲೂಚ್ ಹೋರಾಟದ ಬೆನ್ನಲ್ಲೇ ಇದೀಗ ಸಿಂಧ್ ಪ್ರಾಂತ್ಯ ಕೂಡ ಪ್ರತ್ಯೇಕತೆ ಕೂಗು ಎಬ್ಬಿಸಿದೆ.

ಇಸ್ಲಾಮಾಬಾದ್ (ನ.24) ಭಾರತದಿಂದ ಪ್ರತ್ಯೇಕವಾಕಿ ಪಾಕಿಸ್ತಾನ ಉದಯವಾಯಿತು. ಆದರೆ ಪಾಕಿಸ್ತಾನ ಹುಟ್ಟಿನಿಂದ ಇಲ್ಲೀವರೆಗೆ ಸಮಸ್ಯೆಗಳ ಕೂಪದಲ್ಲಿ ಮುಳುಗಿದೆ. ಇದೀಗ ಪಾಕಿಸ್ತಾನ ಒಡೆದು ಹೋಳಾಗುವ ಆತಂಕ ತೀವ್ರಗೊಂಡಿದೆ. ಬಲೂಚಿಸ್ತಾನ್, ಖೈಬರ್ ಪಖ್ತುಂಖ್ವಾ ಹೋರಾಟದ ಬೆನ್ನಲ್ಲೇ ಇದೀಗ ಪಾಕಿಸ್ದಾನದಲ್ಲಿ ಪ್ರತ್ಯೇಕ ಸಿಂಧೂದೇಶಕ್ಕಾಗಿ ಹೋರಾಟ ತೀವ್ರಗೊಂಡಿದೆ. ಸಿಂಧ್ ಪ್ರಾಂತ್ಯವನ್ನು ವಿಭಜಿಸಿ ಹೊಸ ಪ್ರಾಂತ್ಯಗಳನ್ನಾಗಿ ಮಾಡುವ ಸೇನಾ ಮುಖ್ಯಸ್ಥ ಆಸೀಮ್ ಮನೀರ್ ನಿರ್ಧಾರದ ವಿರುದ್ದ ಜನ ಸಿಡಿಮಿಡಿ ಗೊಂಡಿದ್ದಾರೆ. ಆಸೀಮ್ ಮುನೀರ್ ಪ್ರಸ್ತಾವನೆ ವಿರುದ್ದ ಪಾಕಿಸ್ತಾನದ ಕರಾಚಿ ಸೇರಿದಂತೆ ಹಲವು ನಗರದ ಬೀದಿಗಳಲ್ಲಿ ಸ್ವತಂತ್ರ ಸಿಂಧುದೇಶ ಸ್ಥಾಪನೆ ಕೂಗು ಮೊಳಗಿಸಿದ್ದಾರೆ.

ಸಿಂಧೂ ದೇಶದ ಕೂಗು

ಪಾಕ್ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಹಾಗೂ ಪಾಕಿಸ್ತಾನ ಸರ್ಕಾರ ಪಾಕಿಸ್ತಾನದ ಪ್ರಮುಖ ಪ್ರಾಂತ್ಯಗಳನ್ನು ವಿಭಿಜಸಲು ಮುಂದಾಗಿದೆ. ಈ ಕುರಿತು ಮನೀರ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಸಿಂಧ್ ಪ್ರಾಂತ್ಯವನ್ನು ಒಡೆದು ಹೋಳುವ ಮಾಡುವ ಹುನ್ನಾರ ಸಹಿಸುವುದಿಲ್ಲ, ಸಿಂಧ್ ಪ್ರಾಂತ್ಯ ಪ್ರತ್ಯೇಕವಾಗಲಿದೆ. ಕರಾಚಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಆರ್ಥಿಕ ದಿಗ್ಬಂದನ ಹೇರುವುದಾಗಿ ಬೆದರಿಕೆ ಹಾಕಿದ್ದಾರೆ.ಇದೇ ವೇಳೆ ಸ್ವತಂತ್ರ್ಯ ಪಾಕಿಸ್ತಾನದ ಆರಂಭಿಕ ದಿನಗಳಲ್ಲಿ ಪ್ರತ್ಯೇಕ ಸಿಂಧುದೇಶಕ್ಕೆ ಕೂಗು ಕೇಳಿಬಂದಿತ್ತು. ಈ ವೇಳೆ ಸಿಂದ್ ಪ್ರಾಂತ್ಯದಲ್ಲಿ ನೆಲೆಸಿದ್ದ ಅತೀ ಹೆಚ್ಚು ಹಿಂದೂಗಳು ಪ್ರತ್ಯೇಕ ಸಿಂಧೂ ದೇಶದ ಕೂಗು ಮೊಳಗಿಸಿದ್ದರು. ಇದೀಗ ಇದೇ ಕೂಗ ಮತ್ತೆ ಮುನ್ನಲೆಗೆ ಬಂದಿದೆ. ಸದ್ಯ ಸಿಂದ್ ಪ್ರಾಂತ್ಯದಲ್ಲಿರುವ ಹಿಂದೂಗಳ ಸಂಖ್ಯೆ ಶೇಕಡಾ 8.81ರಷ್ಟು ಮಾತ್ರ.

ಸಿಂಧಿ ರಾಷ್ಟ್ರೀಯವಾದಿ ಪಕ್ಷಗಳ ಒಕ್ಕೂಟವಾದ ಜಿಯೆ ಸಿಂದ್ ರಹಬರ್ ಕಮಿಟಿ ಕರಾಚಿಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದೆ. ಸಿಂಥಧಿ ಅಜ್ರಕ್ ಶಾಲು, ಟೋಪಿ ಧರಿಸಿ ಹೋರಾಟ ಆರಂಭಗೊಂಡಿತ್ತು. ಕೆಂಪು ಬಾವುಟ ಹಿಡಿದು ಪ್ರತಿಭಟನೆಗೆ ಆಗಮಿಸಿದ ಪ್ರತಿಭಟನಕಾರರು ಅಸೀಮ್ ಮುನೀರ್ ವಿರುದ್ದ, ಪಾಕ್ ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದಾರೆ. ಪಾಕಿಸ್ತಾನಗ ನವಾಬ್ಶಾ, ಹೈದರಾಬಾದ್, ಲರ್ಕಾನಾ ಸೇರಿದಂತೆ ಹಲವು ನಗರ ಹಾಗೂ ಪಟ್ಟಣಗಳಲ್ಲಿ ಪ್ರತ್ಯೇಕ ಸಿಂಧೂದೇಶದ ಕೂಗು ಮೊಳಗಿದೆ.

ಸಿಂಧ್ ಪಾಕಿಸ್ತಾನವಲ್ಲ

ಸಿಂಧ್ ಪಾಕಿಸ್ತಾನವಲ್ಲ. ಸಿಂಧ್ ಯಾವತ್ತೂ ಪಾಕಿಸ್ತಾನದ ಭಾಗವಾಗಿರಲು ಸಾಧ್ಯವಿಲ್ಲ ಎಂದು ಜಿಯೆ ಸಿಂಧ್ ಮುತ್ತಹಿದಾ ಮಹಾಜ್ ಸಂಘಟನೆ ಹೇಳಿದೆ. ಜಿಯೆ ಸಿಂಧ್ ಮುತ್ತಹಿದಾ ಮಹಾಜ್ ಅಧ್ಯಕ್ಷ ಶಫಿ ಮುಹಮ್ಮದ್ ಬುರ್ಪತ್ ಜರ್ಮನಿಯಿಂದ ಎಕ್ಸ್ ಮೂಲಕ ಪೋಸ್ಟ್ ಮಾಡಿದ್ದು, ಪಂಜಾಬ್‌ಗೆ ಆರ್ಥಿಕ ದಿಗ್ಬಂದನ ವಿಧಿಸುವುದಾಗಿ ಎಚ್ಚಿರಿಸಿದ್ದಾರೆ. ಸಿಂಧೂದೇಶಕ್ಕಾಗಿ ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಬೆಂಬಲ ನೀಡಬೇಕು ಎಂದು ಬುರ್ಫತ್ ಮನವಿ ಮಾಡಿದ್ದಾರೆ.

ಸಿಂಧ್ ಪ್ರಾಂತ್ಯದಲ್ಲಿ ಆಡಳಿತದಲ್ಲಿರುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಲ್ ಬುಟ್ಟೋ ಜರ್ದಾರಿ ಎಚ್ಚರಿಕೆ ನೀಡಿದ್ದು ಕೋಲಾಹಲ ಶುರುವಾಗಿದೆ. ಸಿಂಧ್ ವಿಭಜಿಸಲು ಹೊರಟರೆ ಜನರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಸಿಂದ್ ವಿಭಜನೆಗೆ ವಿರೋಧ ವ್ಯಕ್ತಪಡಿಸಿದೆ.