ವಾಷಿಂಗ್ಟನ್‌(ಮೇ.04): ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್ ಗೇಟ್ಸ್‌ ಮತ್ತು ಮೆಲಿಂಡಾ ಗೇಟ್ಸ್‌ ದಂಪತಿ ಮದುವೆಯಾಗಿ 27 ವರ್ಷದ ದಾಂಪತ್ಯದ ನಂತರ ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದಾರೆ. ವಿಶ್ವದ ಶ್ರೀಮಂತ ದಂಪತಿಯಲ್ಲೊಂದಾದ ಈ ಜೋಡಿಯ, ಜಂಟಿ ಸಂಪತ್ತು ಬರೋಬ್ಬರಿ 13,000 ಕೋಟಿ ಡಾಲರ್ ಮೌಲ್ಯದ್ದಾಗಿದೆ. ಬಿಲ್‌ ಗೇಟ್ಸ್‌ ಅವರ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್‌ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ವಿಚ್ಛೇದನದ ಬಗ್ಗೆ ಟ್ವೀಟ್‌ ಮಾಡಿರುವ ಬಿಲ್‌ ಗೇಟ್ಸ್‌, ‘27 ವರ್ಷಗಳ ದಾಂಪತ್ಯದ ಬಳಿಕ ನಾವು ವಿಚ್ಛೇದನ ಘೋಷಿಸಿದ್ದೇವೆ. ಜಾಗತಿಕ ಆರೋಗ್ಯ, ಲಿಂಗ ಸಮಾನತೆ, ಶಿಕ್ಷಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳಿಗೆ ಧನಸಹಾಯ ನೀಡುವ ಕೆಲಸ ಮಾಡುವ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಲ್ಲಿ ಜಂಟಿ ಸಹಭಾಗಿತ್ವ ಮುಂದುವರಿಸುತ್ತೇವೆ’ ಎಂದಿದ್ದಾರೆ.

Photos| ವಿಶ್ವ ಕುಬೇರ ಬಿಲ್ ಗೇಟ್ಸ್ ಖರೀದಿಸಿದ ಹೈಡ್ರೋಜನ್ ವಿಹಾರ ನೌಕೆ ಇದು!

‘ಕಳೆದ 27 ವರ್ಷದಲ್ಲಿ ನಾವು ಮೂವರು ಮಕ್ಕಳನ್ನು ಬೆಳೆಸಿದ್ದು, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುಉವ ಫೌಂಡೇಷನ್ ಸ್ಥಾಪಿಸಿದ್ದೇವೆ. ಆದರೀಗ ಈ ದಾಂಪತ್ಯ ಜೀವನ ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ’ ಎಂದು ಹೇಳಿಕೆ ನೀಡಿರುವ ಪ್ರತಿಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕರೂ ಹೌದು

ವಿಶ್ವದ ಅತ್ಯಧಿಕ ಧನಿಕರಾದ ಅಮೆರಿಕಾದ 67 ವರ್ಷದ ಬಿಲ್​ ಗೇಟ್ಸ್​ ಹಾಗೂ 56 ವರ್ಷದ ಮೆಲಿಂಡಾ ಗೇಟ್ಸ್​  ದಂಪತಿ ವಿಚ್ಛೇದನದಿಂದ ಮುಂದೇನು ಎಂದು ಪ್ರಶ್ನೆ ಎದುರಾಗಿದೆ. ಇಬ್ಬರೂ ಸೇರಿ ದಾನ ದತ್ತಿಯನ್ನು ಹುಟ್ಟುಹಾಕಿದ್ದರು. ಹಾಗಾಗಿ ಈ ದತ್ತಿಯ ಭವಿಷ್ಯ ಏನಾಗಲಿದೆ ಎಂಬ ಚಿಂತೆ ಈಗ ಎಲ್ಲರಲ್ಲೂ ಮನೆ ಮಾಡಿದೆ. ಬಿಲ್ ಗೇಟ್ಸ್​ ದಂಪತಿ ತಮ್ಮೆಲ್ಲಾ ಸಂಪತ್ತು ಈ ಫೌಂಡೇಷನ್‌ಗೆ ನೀಡಿಲ್ಲ. ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ ಅವರೊಬ್ಬರ ಫೋರ್ಬ್ಸ್​ ಅನ್ವಯ ಪ್ರಕಾರ 124 ಶತಕೋಟಿ ಡಾಲರ್​ ಸಂಪತ್ತನ್ನು ಹೊಂದಿದ್ದಾರೆ.

ಕೋವಿಡ್‌ ಆಯ್ತು, ಜಗತ್ತಿಗೆ ಕಾದಿದೆ ಇನ್ನೂ 2 ವಿಪತ್ತು: ಬಿಲ್‌ ಗೇಟ್ಸ್‌ ಭವಿಷ್ಯ!

ಇಬ್ಬರ ಭೇಟಿ  ಹೇಗೆ?

ಮಿಲಿಂದಾ ಗೇಟ್ಸ್​ 1987ರಲ್ಲಿ ಪ್ರಾಡಕ್ಟ್​ ಮ್ಯಾನೇಜರ್​ ಆಗಿ Microsoft ಸಂಸ್ಥೆಯನ್ನು ಸೇರಿದ್ದರು. ಅದೇ ವೇಳೆ ಕಂಙನಿಯ ಪರವಾಗಿ ಅನೇಕ ಉದ್ಯಮ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ವೇಳೆ ಇಬ್ಬರ ಮಧ್ಯೆ ಪ್ರೇಮ ಮೊಳಕೆಯೊಡೆದು ಹೆಮ್ಮರವಾಗತೊಡಗಿತ್ತು. 1994ರಲ್ಲಿ ಇಬ್ಬರೂ ವಿವಾಹವಾಗಿದ್ದರು.