ಭಾರತ-ಪಾಕ್‌ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಮೋದಿ ಜಿಂದಾಬಾದ್‌ ಘೋಷಣೆ ವೈರಲ್‌ ಆಗಿದೆ. ಕಾಶ್ಮೀರ ನಮ್ಮ ಕೈಬಿಟ್ಟಿದೆ ಎಂದು ಪಾಕ್‌ ಪ್ರಜೆಗಳು ಒಪ್ಪಿಕೊಂಡಿದ್ದಾರೆ. ಮೋದಿ ಖಾನ್‌ ಆಗಿದ್ದರೆ ಬೆಂಬಲಿಸುತ್ತಿದ್ದೆವು ಎಂದೂ ಹೇಳಿದ್ದಾರೆ. ಬಲೂಚಿಸ್ತಾನ ಕೂಡ ಕೈತಪ್ಪುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.

ಭಾರತ ಮತ್ತು ಪಾಕಿಸ್ತಾನ ಸದಾ ಶತ್ರು ರಾಷ್ಟ್ರ ಎಂದೇ ಬಿಂಬಿತವಾಗುತ್ತ ಬಂದಿದೆ. ಉಗ್ರರಿಗೆ ನೆಲೆ ನೀಡುತ್ತಿರುವ ಪಾಕಿಸ್ತಾನದಿಂದ ಭಾರತೀಯರಿಗೆ ಆಗಿರುವ, ಆಗುತ್ತಿರುವ ನಷ್ಟವಂತೂ ಅಷ್ಟಿಷ್ಟಲ್ಲ. ಅದರಲ್ಲಿಯೂ ಇದೀಗ ಕಾಶ್ಮೀರಕದ ಪೆಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿ, ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿದ ನರಮೇಧ, ಅದಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆಯ ಆಪರೇಷನ್​ ಸಿಂದೂರ... ಇವೆಲ್ಲವುಗಳ ನಡುವೆ ಈ ಎರಡು ದೇಶಗಳ ನಡುವೆ ಉದ್ವಿಗ್ನತೆ ಇನ್ನಷ್ಟು ಹೆಚ್ಚಿದೆ. ಪಾಕಿಸ್ತಾನ ಎಂದರೆ ನಿಜವಾದ ಭಾರತೀಯರು ಉರಿದು ಬೀಳುತ್ತಿದ್ದಾರೆ. ಆದರೆ, ಉಗ್ರರನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇದಾಗಲೇ ಭಾರಿ ಸ್ಕೆಚ್ ಕೂಡ ಹಾಕಲಾಗಿದ್ದು, ಅದರ ಟ್ರೇಲರ್​ ಅನ್ನು ಇದಾಗಲೇ ತೋರಿಸಿ ಆಗಿದೆ.

ಪರಿಸ್ಥಿತಿ ಹೀಗಿರುವಾಗ, ಭಾರತದಲ್ಲಿ ಪಾಕಿಸ್ತಾನ ಪ್ರೇಮಿಗಳಿಗೇನೂ ಕೊರತೆ ಇಲ್ಲ. ಅದನ್ನು ಹಲವರು ಇದಾಗಲೇ ಸಾಬೀತು ಕೂಡ ಮಾಡಿದ್ದಾರೆ. ಕೆಲವರು ತೋರಿಕೆಗಾಗಿ ಭಾರತೀಯರಂತೆ ಇದ್ದು, ಒಳಗೆ ಪಾಕಿಸ್ತಾನಕ್ಕೆ ಸಹಾಯ ಮಾಡುವವರು, ಭಾರತದ ನೆಲದಲ್ಲಿಯೇ ಇದ್ದು, ಹಿಂದೂಗಳ ಮೇಲೆ ಕಿಡಿ ಕಾರುತ್ತಿರುವವರು ಇಲ್ಲವೆಂದೇನಲ್ಲ. ಆದರೆ ಇದೇ ಮನಸ್ಥಿತಿ ಪಾಕಿಸ್ತಾನದಲ್ಲಿ ಇದೆ ಎಂದರೆ ನಂಬುವುದು ಬಲು ಕಷ್ಟ. ಆದರೆ ಪಾಕಿಸ್ತಾನದಲ್ಲಿರುವ ಭಾರತದ ಪರ ಕೆಲವು ಯೂಟ್ಯೂಬರ್​ಗಳು ಇದಾಗಲೇ ಭಾರತವನ್ನು ಹಾಡಿ ಹೊಗಳುತ್ತಲೇ ಬಂದಿದ್ದಾರೆ. ಅವರಿಗೆ ಪಾಕಿಸ್ತಾನದ ಪ್ರಜೆಗಳು ಕೂಡ ಬೆಂಬಲ ಸೂಚಿಸುತ್ತಿರುವುದನ್ನು ನೋಡಬಹುದಾಗಿದೆ.

ಪಾಕ್​ನಲ್ಲಿ ವಿಕಿರಣ ಸೋರಿಕೆ- ವೈದ್ಯಕೀಯ ಎಮರ್ಜೆನ್ಸಿ? ಕದನ ವಿರಾಮದ ಘನಘೋರ ಸತ್ಯ ಬಯಲು?

ಆದರೆ, ಇದೀಗ ಪಾಕಿಸ್ತಾನದ ಯುಟ್ಯೂಬ್​ಗಳು ಬ್ಯಾನ್​ ಆಗಿವೆ. ಇದರ ನಡುವೆಯೂ, ಪಾಕಿಸ್ತಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಜೈಕಾರ ಹಾಕಿರುವ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಇದರಲ್ಲಿ ಯುಟ್ಯೂಬರ್​ ಭಾರತದ ಬಗ್ಗೆ ಕೇಳುತ್ತಿದ್ದಾಗ ವೃದ್ಧರೊಬ್ಬರು, ಮೋದಿ ಜಿಂದಾಬಾದ್​, ಮೋದಿ ಜಿಂದಾಬಾದ್ ಎಂದಿದ್ದಾರೆ. ಅದಕ್ಕೆ ಯುಟ್ಯೂಬರ್​ ನೀವು ಪಾಕಿಸ್ತಾನದಲ್ಲಿ ಇದ್ದುಕೊಂಡು ಭಾರತದ ಪ್ರಧಾನಿನ್ನು ಹೊಗಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ವೃದ್ಧರು ಹೌದು. ಒಂದು ವೇಳೆ ಮೋದಿ ಏನಾದ್ರೂ ಮೋದಿ ಖಾನ್​ ಎಂದು ಇಟ್ಟುಕೊಂಡರೆ, ನಾವೆಲ್ಲವೂ ಅವರಿಗೇ ಸಪೋರ್ಟ್​ ಮಾಡೋದು ಎಂದೂ ಹೇಳಿದ್ದಾರೆ. 

ಆಮೇಲೆ ಕಾಶ್ಮೀರದ ವಿಷಯಕ್ಕೆ ಬಂದಾಗ, ಬಿಡಿ ಕಾಶ್ಮೀರ ನಮ್ಮ ಕೈಬಿಟ್ಟು ಹೋಗಿದೆ ಎಂದಿದ್ದಾರೆ. ಆಗ ಅಲ್ಲಿಯೇ ಇದ್ದ ಇನ್ನೊಬ್ಬ ವ್ಯಕ್ತಿ, ಕಾಶ್ಮೀರ ಅಷ್ಟೇ ಏಕೆ, ಈಗ ಬಲೂಚಿಸ್ತಾನವೂ ನಮ್ಮ ಕೈಬಿಟ್ಟು ಹೋಗುತ್ತಿದೆ ಎಂದು ಅಷ್ಟೇ ಖುಷಿಯಲ್ಲಿ ಹೇಳಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಿದೆ. ನಿಲುಮೆ ಫೇಸ್​ಬುಕ್​ ಖಾತೆಯಲ್ಲಿ ಈ ವಿಡಿಯೋ ತುಣುಕನ್ನು ಶಿಲ್ಪಾ ಮಂಜುನಾಥ್​ ಎನ್ನುವವರು ಶೇರ್​ ಮಾಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಪಾಕಿಸ್ತಾನವೊಂದೇ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವುದು ಬಾಕಿ ಇತ್ತು. ಈಗ ಅದೂ ಆಯಿತು ಬಿಡಿ, ಇನ್ನೇನು ಬೇಕು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. 

ಪಾಕಿಗಳ ಮೇಲೆ ಪ್ರಕೃತಿಗೂ ಮುನಿಸು! ಉಗ್ರರ ನೆಲೆ ಛಿದ್ರಗೊಳ್ತಿದ್ದಂತೆಯೇ ಹಲವೆಡೆ ಭೂಕಂಪ...