ಪಾಕಿಸ್ತಾನದ ಕದನವಿರಾಮ ಕೋರಿಕೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಕಿರಣ ಸೋರಿಕೆ ವರದಿ, ಶಶಿ ತರೂರ್ ಹೇಳಿಕೆ, ಪ್ರಧಾನಿ ಮೋದಿ ಎಚ್ಚರಿಕೆಗಳು ಒಂದಕ್ಕೊಂದು ಹೊಂದಿಕೊಳ್ಳುತ್ತಿವೆ. ಆದರೆ ಭಾರತೀಯ ಸೇನೆ ಪಾಕಿಸ್ತಾನದ ಅಣುಸ್ಥಾವರಗಳ ಮೇಲೆ ದಾಳಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಕಿರಣ ಸೋರಿಕೆ ವರದಿಯ ಸತ್ಯಾಸತ್ಯತೆ ಅಸ್ಪಷ್ಟ.

ಭಾರತದ ಹೊಡೆತಕ್ಕೆ ತತ್ತರಿಸಿದ ಪಾಕಿಸ್ತಾನ ಓಡಿಹೋಗಿ ಕದನ ವಿರಾಮಕ್ಕೆ ದೊಡ್ಡಣ್ಣನ ಕಾಲು ಬಿದ್ದಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಧ್ಯಸ್ಥಿಕೆಯಲ್ಲಿ, ಭಾರತವು ಕದನವಿರಾಮಕ್ಕೆ ಒಪ್ಪಿಕೊಂಡಿತು ಕೂಡ. ಆದರೆ ತನ್ನ ಬಳಿ ಅಣ್ವಸ್ತ್ರ ಇದೆ ಎಂದು ಸಾರುತ್ತಿದ್ದ ಪಾಕಿಸ್ತಾನ, ಕದನ ವಿರಾಮಕ್ಕೆ ಕಾಲು ಹಿಡಿದುಕೊಂಡಿರುವ ರೀತಿ ಒಂದು ರೀತಿಯಲ್ಲಿ ಅಚ್ಚರಿಯನ್ನೂ ಮೂಡಿಸಿತ್ತು ಜೊತೆಗೆ ಉಗ್ರರ ನಾಶಕ್ಕೆ ಭಾರತಕ್ಕೆ ಒಳ್ಳೆಯ ಅವಕಾಶ ಇದ್ದಾಗ, ಕದನ ವಿರಾಮಕ್ಕೆ ಒಪ್ಪಿಕೊಳ್ಳಬಾರದಿತ್ತು ಎನ್ನುವವರೂ ಇದ್ದಾರೆ. ಆದರೆ ಈ ಕದನ ವಿರಾಮದ ಹಿಂದೆ ಬೇರೆಯದ್ದೇ ವಿಷ್ಯ ಇದ್ಯಾ ಎನ್ನುವ ಸಂದೇಹ ಬರುವಂಥ ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್ ಎನ್ನುವ ನೋಟಿಸ್​ ಒಂದು ಪಾಕಿಸ್ತಾನದಿಂದ ಹೊರಕ್ಕೆ ಬಂದಂತೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಅಷ್ಟಕ್ಕೂ ಸಾಮಾಜಿಕ ಜಾಲತಾಣ ಎನ್ನುವುದು ದೊಡ್ಡ ಸುಳ್ಳಿನ ಕಂತೆಯೇ. ಅದರಲ್ಲಿಯೂ ಇಂಥ ಸನ್ನಿವೇಶಗಳಲ್ಲಿ ಫೇಕ್​ ನ್ಯೂಸ್​ಗಳ ಹಾವಳಿಯೂ ಹೆಚ್ಚು ಎನ್ನುವುದು ಹೌದಾದರೂ, ಈ ದಾಖಲೆಯ ಸತ್ಯಾಸತ್ಯತೆಯ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಕದನ ವಿರಾಮಕ್ಕೆ ಪಾಕಿಸ್ತಾನ ಕಾಲಿಗೆ ಬಿದ್ದಿರುವುದರಿಂದ ಇದು ನಿಜ ಇರಬಹುದೇ ಎನ್ನುವ ಒಂದು ಮಾತೂ ಕೇಳಿಬರುತ್ತಿದೆ. ಇದರಲ್ಲಿ ಇರುವ ವಿಷಯ ಏನೆಂದರೆ, ಪರಮಾಣು ವಿಕಿರಣ ಮತ್ತು ವಿಕಿರಣ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನಿಗಳಿಗೆ ವಾಂತಿ, ತಲೆನೋವು ಮುಂತಾದ ಲಕ್ಷಣಗಳು ಕಂಡುಬಂದಿವೆ. ಸದ್ಯ ಪಾಕಿಸ್ತಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಾಗಿದೆ ಎಂದು ತಿಳಿಸಲಾಗಿದೆ. ಉತ್ತರ ಪಾಕಿಸ್ತಾನದಲ್ಲಿ ವಿಕಿರಣ ಸೋರಿಕೆಯಾಗಿದೆ. ವಿನಾಶಕಾರಿಯಲ್ಲದ ಪರೀಕ್ಷೆಗೆ (NDT) ಬಳಸುವ ಇಂಡಿಯಮ್-192 ಕ್ಯಾಪ್ಸುಲ್ ವರ್ಗಾವಣೆಯ ಸಮಯದಲ್ಲಿ ಸಂಭವಿಸಿದ ಯಾಂತ್ರಿಕ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಇದರಲ್ಲಿ ತಿಳಿಸಲಾಗಿದೆ. 

ಪಾಕಿಗಳ ಮೇಲೆ ಪ್ರಕೃತಿಗೂ ಮುನಿಸು! ಉಗ್ರರ ನೆಲೆ ಛಿದ್ರಗೊಳ್ತಿದ್ದಂತೆಯೇ ಹಲವೆಡೆ ಭೂಕಂಪ...

ಇದಕ್ಕೆ ಪುಷ್ಟಿ ಕೊಡಲು ಎಂಬಂತೆ ಭಾರತವು ಆಪರೇಷನ್ ಸಿಂದೂರದ ಭಾಗವಾಗಿ ಸ್ಕಾರ್ಡು ನಿಂದ ಮಸ್ರೂರ್‌ವರೆಗಿನ ಪ್ರಮುಖ ಪಾಕಿಸ್ತಾನಿ ವಾಯುಪಡೆಯ (PAF) ಸ್ಥಾಪನೆಗಳ ಮೇಲೆ ಸರ್ಜಿಕಲ್ ಏರ್ ಮತ್ತು ಕ್ಷಿಪಣಿ ದಾಳಿ ಮಾಡಿತ್ತು. ಇದಕ್ಕೆ ಹೋಲಿಸಿಕೊಂಡರೆ ವಿಕಿರಣ ಸೋರಿಕೆಯು ಅದಕ್ಕೆ ಹೊಂದಿಕೆಯಾಗುವಂತಿವೆ. ಅಷ್ಟೇ ಅಲ್ಲದೇ ನಿನ್ನೆಯಷ್ಟೇ ಕಾಂಗ್ರೆಸ್ ನಾಯಕ ಶಶಿ ತರೂರ್, 'Ceasefire credit goes to radiation not for Trump mediation' ಅರ್ಥಾತ್​ ಕದನ ವಿರಾಮದ ಹಿಂದೆ ಇರುವುದು ಟ್ರಂಪ್​ ಸಂಧಾನವಲ್ಲ, ಬದಲಿಗೆ ವಿಕಿರಣ ಎಂದು ಹೇಳಿದ್ದರು. ನಿನ್ನೆ ಪ್ರಧಾನಿಯವರು ತಮ್ಮ ಭಾಷಣದಲ್ಲಿ ಕೂಡ, ನೀವು ಗಡಿಗೆ ಗುರಿಯಿಟ್ರೆ ನಾವು ಎದೆಗೇ ಗುರಿಯಿಟ್ವಿ ಎಂದಿದ್ದರು. ಇವನ್ನೆಲ್ಲಾ ಒಂದಕ್ಕೊಂದು ಜೋಡಿಸಿ ನೋಡಿದರೇ ಏನೋ ಒಂದು ನಡೆದಿದೆ ಎನ್ನುವಂತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 

ಆದರೆ, ನಿನ್ನೆ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಪಾಕಿಸ್ತಾನದ ಕಿರಾನಾ ಬೆಟ್ಟದಲ್ಲಿರುವ ಅಣ್ವಸ್ತ್ರ ನೆಲೆ ಮೇಲೆ ಭಾರತ ದಾಳಿ ಮಾಡಿದೆ ಎಂಬುದು ಸತ್ಯಕ್ಕೆ ದೂರವಾದದ್ದು ಎಂದಿದ್ದರು. ಕಿರಾನಾ ಬೆಟ್ಟಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ನೆಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಗುರಿ ಉಗ್ರನೆಲೆಗಳು ಮಾತ್ರ ಆಗಿತ್ತು. ಅವುಗಳನ್ನು ಹೊಡೆದುರುಳಿಸಿದ್ದೇವೆ. ಕಿರಾನಾ ಬೆಟ್ಟಗಳಲ್ಲಿ ನಾವು ದಾಳಿ ಮಾಡಿಲ್ಲ ಎಂದು ತಿಳಿಸಿದ್ದರು. 

ಉಗ್ರರ ನೆಲೆಗೇ ಗುರಿಯಿಟ್ಟು ನಾಶ ಮಾಡಿದ 'ರಫೇಲ್​ ಜೆಟ್'​ಗೆ ಗಂಟೆಯೊಂದಕ್ಕೆ ಅಬ್ಬಾ ಇಷ್ಟು ಇಂಧನ ಬೇಕಾ?

Scroll to load tweet…