ಪೆಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಸೇರಿದಂತೆ ಹಲವು ನೆಲೆಗಳ ಮೇಲೆ ದಾಳಿ ನಡೆಸಿತು. ಪಾಕಿಸ್ತಾನದಲ್ಲಿ ೪.೬ ತೀವ್ರತೆಯ ಭೂಕಂಪ ಸಂಭವಿಸಿ ತತ್ತರಿಸಿ, ಕದನವಿರಾಮಕ್ಕೆ ಮನವಿ ಮಾಡಿದೆ. ಭಾರತದ ಎಚ್ಚರಿಕೆಗೆ ಬೆದರಿ ಪಾಕಿಸ್ತಾನ ತಣ್ಣಗಾಗಿದೆ. ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನಲ್ಲಿರುವ ಪಾಕಿಸ್ತಾನದಲ್ಲಿ ಭೂಕಂಪಗಳು ಸಾಮಾನ್ಯ.
ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಉಗ್ರರ ನೆಲೆಯನ್ನಷ್ಟೇ ಭಾರತ ಛಿದ್ರಗೊಳಿಸಲು ಮುಂದಾಗಿದ್ದರೆ, ಪಾಕಿಸ್ತಾನವು ಭಾರತದ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. ಅದಕ್ಕೆ ತಕ್ಕ ಉತ್ತರ ನೀಡಿದ ಭಾರತದ ಸೇನೆ, ಪಾಕಿಸ್ತಾನದ ನೂರ್ ಖಾನ್ ನೆಲೆ ಮೇಲೆಯೇ ಭಾರತ ದಾಳಿ ನಡೆಸಿದೆ. ನೂರ್ ಖಾನ್ ವಾಯುನೆಲೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ರಾವಲ್ಪಿಂಡಿಯ ಚಕ್ಲಾಲಾದಲ್ಲಿದೆ. ಇದು ಪಾಕಿಸ್ತಾನದ ವಾಯುನೆಲೆಗಳಲ್ಲಿ ಅತ್ಯಂತ ಪ್ರಮುಖವಾಗಿದೆ ಮತ್ತು ಪಾಕಿಸ್ತಾನದ ಪ್ರಮುಖ ವಿಮಾನ ಸಂಚಾರದ ನೆಲೆಯಾಗಿದೆ ಮತ್ತು ಇದನ್ನು ಲಾಜಿಸ್ಟಿಕಲ್ ಮತ್ತು ಕಾರ್ಯತಂತ್ರದ ಏರ್‌ಲಿಫ್ಟ್ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ಭಾರತೀಯ ಸಶಸ್ತ್ರ ಪಡೆಗಳು ರಫೀಕಿ, ಮುರಿದ್, ನೂರ್ ಖಾನ್, ಪಂಜಾಬ್‌ನ ಚುನಿಯನ್ ಮತ್ತು ಸುಕ್ಕೂರ್‌ನಲ್ಲಿರುವ ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ.
ಒಂದು ಕುತೂಹಲದ ವಿಷಯ ಏನೆಂದರೆ, ಇದೇ ಸಮಯದಲ್ಲಿ, ಪಾಕಿಸ್ತಾನದಲ್ಲಿ ಲಘು ಭೂಕಂಪವೂ ಸಂಭವಿಸಿದೆ. ಇದರಿಂದ ಪ್ರಕೃತಿಯೇ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಮುಂದಾಗಿದ್ದು, ಪಾಕಿಸ್ತಾನ ತತ್ತರಿಸಿ ಹೋಗಿದೆ. ಶುಕ್ರವಾರ-ಶನಿವಾರದ ಮಧ್ಯರಾತ್ರಿ ಈ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಬಲೂಚಿಸ್ತಾನ್, ಖೈಬರ್ ಪಖ್ತುಂಖ್ವಾ ಸೇರಿದಂತೆ ಹಲವಾರು ಪ್ರಾಂತ್ಯಗಳು ಭೂಕಂಪನದಿಂದ ತತ್ತರಿಸಿ ಹೋಗಿವೆ. ಭೂಕಂಪದ ಅಕ್ಷಾಂಶ 29.12N ಮತ್ತು ರೇಖಾಂಶ 67.26E ಆಗಿರುವುದಾಗಿ ವರದಿಯಾಗಿದೆ. ಶನಿವಾರ ಪಾಕಿಸ್ತಾನದಲ್ಲಿ ಸತತ ಎರಡು ಭೂಕಂಪಗಳು ಸಂಭವಿಸಿದ ಕೇವಲ ಎರಡು ದಿನಗಳ ನಂತರ, ಬೆಳಿಗ್ಗೆ 5.7 ತೀವ್ರತೆಯ ಭೂಕಂಪ ಮತ್ತು ನಂತರ ಗಂಟೆಗಳ ನಂತರ 4.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಅಣ್ವಸ್ತ್ರ ಇದೆ ಎಂದು ಹೆದರಿಸ್ತಿರೋ ಪಾಕ್, ಕದನ ವಿರಾಮಕ್ಕೆ ಕಾಲು ಹಿಡಿದಿದ್ದೇಕೆ? ಅಸಲಿ ಸ್ಟೋರಿನೇ ಬೇರೆ!
ಒಟ್ಟಿನಲ್ಲಿ, ಒಂದು ಕಡೆ ಭಾರತದ ಏಟು ತಿಂತಿರೋ ಪಾಕ್ಗೆ ಪ್ರಕೃತಿಯೇ ಬುದ್ಧಿ ಕಲಿಸಿದೆ. ಇದರಿಂದ ಜರ್ಜರಿತವಾದ ಪಾಕಿಸ್ತಾನ ಕೊನೆಗೆ ಅಮೆರಿಕದ ಕಾಲು ಹಿಡಿದಿದೆ. ಕದನ ವಿರಾಮ ಘೋಷಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿಕೊಂಡಿದೆ. ಆದರೆ ಕೊನೆಗೂ ತನ್ನ ಪಾಪಿ ಬುದ್ಧಿ ಬಿಡಲಿಲ್ಲ. ಕದನ ವಿರಾಮದ ನಂತರವೂ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಆದರೆ ಕೊನೆಗೆ ಭಾರತ ನೀಡಿದ ಎಚ್ಚರಿಕೆಗೆ ಬೆದರಿ ಪಾಕಿಸ್ತಾನ ತಣ್ಣಗಾಗಿದೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಎರಡನೇ ಪ್ರಮುಖ ಭೂಕಂಪ ಇದಾಗಿದೆ. ಇದಕ್ಕೂ ಮೊದಲು ಮೇ 9 ರಂದು, 4.0 ತೀವ್ರತೆಯ ಭೂಕಂಪ ದಾಖಲಾಗಿತ್ತು. ಇದರ ಕೇಂದ್ರಬಿಂದು ಬಲೂಚಿಸ್ತಾನದಲ್ಲಿಯೂ ಇತ್ತು. ತಜ್ಞರ ಪ್ರಕಾರ, ಪಾಕಿಸ್ತಾನವು ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನಲ್ಲಿ ಅಸ್ತಿತ್ವದಲ್ಲಿರುವ ಕಾರಣ ಭೂಕಂಪನಶೀಲ ಸಕ್ರಿಯ ವಲಯದಲ್ಲಿದೆ. ಇದರಿಂದಾಗಿ, ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯ. ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಂತಹ ಪ್ರದೇಶಗಳು ಯುರೇಷಿಯನ್ ಪ್ಲೇಟ್‌ನ ದಕ್ಷಿಣ ಅಂಚಿನಲ್ಲಿದ್ದರೆ, ಪಂಜಾಬ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಗಳು ಭಾರತೀಯ ಪ್ಲೇಟ್‌ನ ವಾಯುವ್ಯ ಅಂಚಿನಲ್ಲಿವೆ.
ಉಗ್ರರ ನೆಲೆಗೇ ಗುರಿಯಿಟ್ಟು ನಾಶ ಮಾಡಿದ 'ರಫೇಲ್ ಜೆಟ್'ಗೆ ಗಂಟೆಯೊಂದಕ್ಕೆ ಅಬ್ಬಾ ಇಷ್ಟು ಇಂಧನ ಬೇಕಾ?


