ಉಕ್ರೇನ್‌ಗೆ ರೈಲಲ್ಲಿ ಮೋದಿ ಪ್ರಯಾಣ: ಟ್ರೇನ್ ಪೋರ್ಸ್ ಒನ್‌ನಲ್ಲಿ ಪ್ರಧಾನಿ ಸಂಚಾರ

ಮೂರು ದಿನಗಳ ಕಾಲ ಪೋಲೆಂಡ್ ಮತ್ತು ಉಕ್ರೇನ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಈ ಭೇಟಿಯ ಮೂಲಕ ಹಲವು ದಾಖಲೆಗಳಿಗೆ ಕಾರಣವಾಗುವ ಜೊತೆಗೆ ವಿಶೇಷವೊಂದಕ್ಕೂ ಸಾಕ್ಷಿಯಾಗಲಿದ್ದಾರೆ. 

PM Modi to travel on luxurious Train Force One to Ukrainian capital Kyiv gvd

ವಾರ್ಸಾ (ಆ.21): ಇಂದಿನಿಂದ (ಆ.21ರಿಂದ) ಮೂರು ದಿನಗಳ ಕಾಲ ಪೋಲೆಂಡ್ ಮತ್ತು ಉಕ್ರೇನ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಈ ಭೇಟಿಯ ಮೂಲಕ ಹಲವು ದಾಖಲೆಗಳಿಗೆ ಕಾರಣವಾಗುವ ಜೊತೆಗೆ ವಿಶೇಷವೊಂದಕ್ಕೂ ಸಾಕ್ಷಿಯಾಗಲಿದ್ದಾರೆ. ಮೊದಲಿಗೆ ಪೋಲೆಂಡ್‌ಗೆ ತೆರಳಲಿರುವ ಮೋದಿ, ಅಲ್ಲಿಂದ ಉಕ್ರೇನ್‌ಗೆ ತೆರಳಲು ಮತ್ತು ಉಕ್ರೇನ್‌ನಿಂದ ಪೋಲೆಂಡ್ ಮರಳಲು ವಿಶೇಷ ರೈಲು ಬಳಸಲಿದ್ದಾರೆ. 

ಹೌದು! ಹಾಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ನಿತ್ಯವೂ ಪರಸ್ಪರರ ವಿರುದ್ಧ ವೈಮಾನಿಕ ದಾಳಿ ನಡೆಯುತ್ತಲೇ ಇದೆ. ಹೀಗಾಗಿ ಪೋಲೆಂಡ್ ನಿಂದ ಉಕ್ರೇನ್‌ ರಾಜಧಾನಿ ಕೀವ್‌ಗೆ ಮೋದಿ ವಿಶೇಷ 'ಟ್ರೇನ್ ಪೋರ್ಸ್ ಒನ್' ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ. ಹೀಗೆ ಒಂದು ಕಡೆಯ ಸಂಚಾರಕ್ಕೆ 10 ಗಂಟೆಗಳ ಸಮಯ ಬೇಕು. ಅಂದರೆ ಒಟ್ಟಾರೆ 20 ಗಂಟೆಗಳ ಕಾಲ ಮೋದಿ ರೈಲಿನಲ್ಲಿ ಪ್ರಯಾಣ ಮಾಡಬೇಕಿದೆ. ಸುರಕ್ಷಿತ, ಐಷಾರಾಮಿ: ಮೊದಲಿಗೆ ಈ ರೈಲನ್ನು ಕೆಮಿಯಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆಂದು ಸಿದ್ಧಪಡಿಸಲಾಗಿತ್ತು. 

ಕಳ್ಳತನ, ದರೋಡೆ, ಪಿಕ್‌ಪಾಕೆಟ್‌, ಸುಲಿಗೆ ಕಲಿಸಲು ಶುರುವಾಗಿದೆ ಸ್ಕೂಲ್: ಬಾಡಿಗೆಗೂ ಸಿಗ್ತಾರೆ ಪಕ್ಕಾ ಕ್ರಿಮಿನಲ್‌ಗಳು!

ಆದರೆ ರಷ್ಯಾ ಕ್ರೆಮಿಯಾ ಆಕ್ರಮಿಸಿದ ಬಳಿಕ ಈ ರೈಲನ್ನು ಉಕ್ರೇನ್‌ಗೆ ಆಗಮಿಸುವಗಣ್ಯರ ಸಂಚಾರಕ್ಕೆ ಮೀಸಲಿಡಲಾಗಿದೆ. ಈ ರೈಲು ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಜೊತೆ ಐಷಾರಾಮಿ ಸೌಲಭ್ಯ ಹೊಂದಿದೆ. ಕೆಲ ಸಮಯದ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್, ಜರ್ಮನ್ ಚಾನ್ಸಲರ್ ಒಲಾಫ್ ಸ್ಕೋಲ್ಸ್ ಸೇರಿದಂತೆ 200ಕ್ಕೂ ಹೆಚ್ಚು ವಿದೇಶಿ ಗಣ್ಯರು ಉಕ್ರೇನ್‌ಗೆ ಭೇಟಿ ನೀಡಲು ಇದೇ ರೈಲಿನ ಸೇವೆ ಬಳಸಿದ್ದರು.

ಇಂದಿನಿಂದ ಮೋದಿ ಪೋಲೆಂಡ್‌, ಉಕ್ರೇನ್‌ ಪ್ರವಾಸ: ಪ್ರಧಾನಿ ನರೇಂದ್ರ ಮೋದಿ ಆ 21ರಿಂದ ಮೂರು ದಿನಗಳ ಕಾಲ ಪೋಲೆಂಡ್‌ ಹಾಗೂ ಉಕ್ರೇನ್‌ ಪ್ರವಾಸ ಕೈಗಳ್ಳಲಿದ್ದಾರೆ. ಆ.21ರಂದು ಪೋಲೆಂಡ್‌ಗೆ ಭೇಟಿ ನೀಡಲಿರುವ ಮೋದಿ ಆ.23 ಯುದ್ಧಪೀಡಿತ ಉಕ್ರೇನ್‌ ದೇಶಕ್ಕೆ ಭೇಟಿ ನೀಡಲಿದ್ದಾರೆ. 1979ರಲ್ಲಿ ಮೊರಾರ್ಜಿ ದೇಸಾಯಿ ಪೋಲೆಂಡ್‌ಗೆ ಭೇಟಿ ನೀಡಿದ್ದರು. ಆ ಬಳಿಕ 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. 

ಭಾರತ ತನ್ನ ಅಭಿವೃದ್ಧಿಯ ವೇಗಕ್ಕೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ: ಗೀತಾ ಗೋಪಿನಾಥ್‌

ಇನ್ನು 1991ರಲ್ಲಿ ಉಕ್ರೇನ್‌ ಸ್ವತಂತ್ರ ದೇಶವಾಗಿ ಹೊರಹೊಮ್ಮಿದ ಬಳಿಕ ಅಲ್ಲಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹಿರಿಮೆಗೂ ಮೋದಿ ಪಾತ್ರರಾಗಲಿದ್ದಾರೆ. ಎರಡೂ ದೇಶಗಳ ಆಹ್ವಾನದ ಮೇರೆಗೆ ಮೋದಿ ಅಲ್ಲಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಅಲ್ಲಿನ ಪ್ರಮುಖ ನಾಯಕರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಪ್ರಯತ್ನಿಸಲಿದ್ದಾರೆ.

Latest Videos
Follow Us:
Download App:
  • android
  • ios