ಭಾರತ ತನ್ನ ಅಭಿವೃದ್ಧಿಯ ವೇಗಕ್ಕೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ. ಹೀಗಾಗಿ ಅರ್ಹರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ 2030ರ ವೇಳೆಗೆ 14.8 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ ಎಂದು ಐಎಂಎಫ್‌ ಉಪಾಧ್ಯಕ್ಷೆ ಗೀತಾ ಗೋಪಿನಾಥ್‌ ಹೇಳಿದ್ದಾರೆ.

ನವದೆಹಲಿ (ಆ.18): ಭಾರತ ತನ್ನ ಅಭಿವೃದ್ಧಿಯ ವೇಗಕ್ಕೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ. ಹೀಗಾಗಿ ಅರ್ಹರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ 2030ರ ವೇಳೆಗೆ 14.8 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ ಎಂದು ಐಎಂಎಫ್‌ ಉಪಾಧ್ಯಕ್ಷೆ ಗೀತಾ ಗೋಪಿನಾಥ್‌ ಹೇಳಿದ್ದಾರೆ. ಡೆಲ್ಲಿ ಸ್ಕೂಲ್‌ ಆಫ್ ಎಕಾನಮಿಕ್ಸ್‌ನಲ್ಲಿ ಮಾತನಾಡಿದ ಅವರು,‘ಉದ್ಯೋಗ ಸೃಷ್ಟಿಯಲ್ಲಿ ಭಾರತವು ಮಿಕ್ಕ ಜಿ20 ರಾಷ್ಟ್ರಗಳಿಗಿಂತ ಹಿಂದುಳಿದಿದೆ. 2010ರಿಂದ ಭಾರತವು ಶೇ.6.6 ವೇಗದಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತಿದೆ. ಆದರೆ ಭಾರತದಲ್ಲಿನ ಹೊಸ ಉದ್ಯೋಗ ಸೃಷ್ಟಿಯು ಕೇವಲ ಶೇ.2ರಲ್ಲಿದೆ ಎಂದು ವಿಷಾದಿಸಿದರು.

ಭಾರತದ ಜನಸಂಖ್ಯೆ ಬೆಳವಣಿಗೆ ಅಂದಾಜಿಗೆ ಹೋಲಿಸಿದರೆ, 2030ರ ಒಳಗೆ ಅಂದರೆ ಇನ್ನು ಕೇವಲ 6 ವರ್ಷದಲ್ಲಿ 6-14 ಕೋಟಿ ಉದ್ಯೋಗವನ್ನು ಭಾರತ ಸೃಷ್ಟಿಸಬೇಕಿದೆ. ಇದಕ್ಕೆ ಪೂರಕವಾಗಿ ಭಾರತ ಸರ್ಕಾರವು ಯುವಕರಲ್ಲಿ ಹೆಚ್ಚು ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು ಅದಕ್ಕಾಗಿ ತನ್ನ ಶಿಕ್ಷಣ ನೀತಿಯನ್ನು ಬದಲಾಯಿಸಿಕೊಳ್ಳಬೇಕು. ದೇಶದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಿಸಬೇಕು, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಜೊತೆಗೆ ತೆರಿಗೆ ನೀತಿಯನ್ನು ಪರಿಷ್ಕರಿಸಿಕೊಳ್ಳಬೇಕು ಎಂದು ಹೇಳಿದರು.

ರಸ್ತೆ ಸಂಪರ್ಕ, ಆರೋಗ್ಯ ಸೌಕರ್ಯಗಳು ಇಲ್ಲದ ದುರ್ಗಮ ಸ್ಥಳಕ್ಕೆ ‘ಮಿನಿ ಆಸ್ಪತ್ರೆ’ ಏರ್‌ಡ್ರಾಪ್‌ ಮಾಡಿದ ಸೇನಾಪಡೆ!

ದೂರ ಉಳಿದ ಬಿಜೆಪಿ ಮಿತ್ರ ಪಕ್ಷಗಳು: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಏಕರೂಪ ನಾಗರಿಕ ಸಂಹಿತೆ ಮತ್ತು ಒಂದು ದೇಶ, ಒಂದು ಚುನಾವಣೆಗೆ ಕರೆಗೆ ಮಿತ್ರ ಪಕ್ಷಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ. ಯುಸಿಸಿಗೆ ವಿಚಾರದಲ್ಲಿ ಮಿತ್ರಗಳು ಪಕ್ಷಗಳು ದೂರವೇ ಉಳಿದಿದ್ದರೆ, ಒಂದು ದೇಶ, ಒಂದು ಚುನಾವಣೆ ಕಲ್ಪನೆಗೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ಜೆಡಿಯು ನಾಯಕ ಬಿಹಾರ ಸಿಎಂ ಸಿತೀಶ್‌ ಕುಮಾರ್‌ ಈ ವಿಚಾರದಲ್ಲಿ ಭಿನ್ನ ನಿಲುವನ್ನು ಹೊಂದಿದ್ದು ‘ ಸಮಾಲೋಚನೆ ನಡೆಸದೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ಸಮಾಜದಲ್ಲಿ ಘರ್ಷಣೆಗೆ ಕಾರಣವಾಗಬಹುದು’ ಎಂದಿದ್ದಾರೆ. ಆದರೆ ನಿತೀಶ್‌ ಒಂದು ದೇಶ ಒಂದು ಚುನಾವಣೆಗೆ ಬೆಂಬಲ ನೀಡಿದ್ದಾರೆ. 

ಜೆಡಿಯು ವಕ್ತಾರ ಕೆ.ಸಿ ತ್ಯಾಗಿ, ‘ಧಾರ್ಮಿಕ ಮುಖಂಡರು, ಎಲ್ಲ ಪಾಲುದಾರರೊಂದಿಗೆ ಒಮ್ಮತದೊಂದಿಗೆ ಚರ್ಚಿಸಿದ ಬಳಿಕವೇ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದಿದ್ದಾರೆ. ಇನ್ನು ತೆಲುಗು ದೇಶಂ ಪಕ್ಷ (ಟಿಡಿಪಿ) ತಮ್ಮ ನಿಲುವನ್ನು ಅಂತಿಮಗೊಳಿಸಲು ಯುಸಿಸಿಗೆ ಸಂಬಂಧಿಸಿದ ಸಂಪೂರ್ಣ ವಿವರಕ್ಕಾಗಿ ಕಾಯುತ್ತಿದ್ದೇವೆ ಎಂದಿದೆ. ಮತ್ತೊಂದೆಡೆ ಲೋಕ ಜನಾಶಕ್ತಿ ಕೂಡ ಏಕರೂಪ ನಾಗರಿಕ ಸಂಹಿತೆಗೆ ಬೆಂಬಲವನ್ನು ಸೂಚಿಸಿಲ್ಲ. ಅಲ್ಲದೇ ವೈವಿಧ್ಯತೆಗಳನ್ನು ಹೊಂದಿರುವ ದೇಶವನ್ನು ಒಂದೇ ವೇದಿಕೆಯಡಿ ತರುವುದು ಹೇಗೆ ಎಂದು ಪ್ರಶ್ನಿಸಿದೆ. ಆದರೆ ಮಹಾರಷ್ಟ್ರದಲ್ಲಿ ಶಿವಸೇನೆಯ ಶಿಂಧೆ ಬಣ ಏಕರೂಪ ಸಂಹಿತೆ ಮತ್ತು ಒಂದು ದೇಶ ಒಂದು ಚುನಾವಣೆ ಎರಡಕ್ಕೂ ಬೆಂಬಲ ಸೂಚಿಸಿವೆ.