ಗಂಡನನ್ನ ಕೊಲ್ಲೋದು ಹೇಗೆ ಎಂದು ಬರೆದಿದ್ದ ಕ್ರಾಂಪ್ಟನ್-ಬ್ರೊಫಿ 2018ರಲ್ಲಿ ಕೊಲೆಯಾಗಿದ್ದ ಕ್ರಾಂಪ್ಟನ್-ಬ್ರೊಫಿ ಪತಿ ಡೇನಿಯಲ್ ಬ್ರೊಫಿ 1.5 ಮಿಲಿಯನ್ ಡಾಲರ್ ಮೊತ್ತದ ಜೀವ ವಿಮೆಗಾಗಿ ಕೊಲೆ ಮಾಡಿದ ಆರೋಪ
ಒಂದೊಮ್ಮೆ 'ಹೌ ಟು ಮರ್ಡರ್ ಯುವರ್ ಹಸ್ಬೆಂಡ್' ಎಂಬ ಕತೆ ಬರೆದು ಖ್ಯಾತಿ ಗಳಿಸಿದ ಅಮೆರಿಕಾದ ಒರೆಗಾನ್ (Oregon) ರಾಜ್ಯದ ಪ್ರಣಯ ಕಾದಂಬರಿಗಳನ್ನು ಬರೆಯುತ್ತಿದ್ದ ಕಾದಂಬರಿಗಾರ್ತಿ ಈಗ ತನ್ನ ಗಂಡನನ್ನೇ ಗುಂಡಿಕ್ಕಿ ಕೊಂದ ಆರೋಪದ ಮೇಲೆ ಜೈಲು ಪಾಲಾಗಿದ್ದಾರೆ. 71 ವರ್ಷದ ನ್ಯಾನ್ಸಿ ಕ್ರಾಂಪ್ಟನ್-ಬ್ರೊಫಿ (Nancy Crampton-Brophy) ಎಂಬಾಕೆ 1.5 ಮಿಲಿಯನ್ ಡಾಲರ್ ಮೊತ್ತದ ಜೀವ ವಿಮೆಗಾಗಿ ತನ್ನ ಗಂಡನನ್ನೇ ಗುಂಡಿಕ್ಕಿ ಕೊಂದ ಆರೋಪ ಎದುರಿಸುತ್ತಿದ್ದಾರೆ.
ಜೂನ್ 2018ರಲ್ಲಿ ಪೋರ್ಟ್‌ಲ್ಯಾಂಡ್‌ನಲ್ಲಿ (Portland) ತನ್ನ ಪತಿ ಡೇನಿಯಲ್ ಬ್ರೊಫಿಯನ್ನು (Daniel Brophy) ಗುಂಡಿಕ್ಕಿ ಕೊಂದಿದ್ದ ಈಕೆ ತಾನು ಪ್ರಕರಣದಲ್ಲಿ ತಪ್ಪಿತಸ್ಥಳಲ್ಲ ಎಂದು ವಾದಿಸಿದ್ದರು. ಒರೆಗಾನ್ ಪಾಕಶಾಲೆಯ ಇನ್‌ಸ್ಟಿಟ್ಯೂಟ್‌ನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಡೇನಿಯಲ್ ಅವರು ಕೆಲಸಕ್ಕೆ ಬಂದ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿತ್ತು. ಅವರ ಬೆನ್ನು ಮತ್ತು ಎದೆಯಲ್ಲಿ ಗುಂಡೇಟಿನ ಗಾಯಗಳು ಕಂಡುಬಂದಿದ್ದವು ಎಂದು ಸ್ಥಳೀಯ ಔಟ್ಲೆಟ್ KGW8 ವರದಿ ಮಾಡಿದೆ.
Suvarna FIR : ಬೆಳಗಾವಿ ಗಂಡನ ಕತೆ ಮುಗಿಸಲು ಪತ್ನಿಯೇ ಪ್ರಿಯಕರನಿಗೆ ಕರೆ ಮಾಡಿ ಹೇಳಿದ್ದಳು!
ಆದರೆ ಶೂಟೌಟ್ ನಡದಾಗ ತಾನು ತನ್ನ ಮನೆಯಲ್ಲಿದ್ದೆ ಎಂದು ಕಾದಂಬರಿಗಾರ್ತಿ ಕ್ರಾಂಪ್ಟನ್-ಬ್ರೊಫಿ ಪೊಲೀಸರಿಗೆ ತಿಳಿಸಿದ್ದರು, ಆದರೆ ಅವರು ಅಪರಾಧ ನಡೆದ ಸ್ಥಳದ ಸಮೀಪದಲ್ಲೇ ಇದ್ದರು ಎಂದು ಪ್ರಕರಣದ ತನಿಖೆ ಬೆನ್ನತ್ತಿದ್ದ ಪತ್ತೆದಾರರು ಹೇಳಿದ ಬಳಿಕ ತಿಂಗಳ ನಂತರ ಆಕೆಯನ್ನು ಬಂಧಿಸಲಾಯಿತು. ಡೇನಿಯಲ್‌ನ ಹತ್ಯೆಯಾದ ನಂತರ ಕ್ರಾಂಪ್ಟನ್-ಬ್ರೋಫಿ ಫೇಸ್‌ಬುಕ್‌ನಲ್ಲಿಈ ವಿಚಾರ ಹಂಚಿಕೊಂಡಿದ್ದರು. 'ನನ್ನ ಫೇಸ್‌ಬುಕ್ ಸ್ನೇಹಿತರು ಮತ್ತು ಕುಟುಂಬಕ್ಕೆ ನಾನೊಂದು ದುಃಖದ ವಿಚಾರ ಹೇಳ ಬೇಕಿದೆ. ನನ್ನ ಪತಿ ಮತ್ತು ಆತ್ಮೀಯ ಸ್ನೇಹಿತ, ಚೆಫ್ ಡಾನ್ ಬ್ರೋಫಿ ನಿನ್ನೆ ಬೆಳಗ್ಗೆ ಕೊಲ್ಲಲ್ಪಟ್ಟರು ಎಂದು ಅವರು ಬರೆದುಕೊಂಡಿದ್ದರು.
ಶೂಟೌಟ್‌ನ ಕೆಲವು ದಿನಗಳ ನಂತರ, ಕ್ರಾಂಪ್ಟನ್-ಬ್ರೋಫಿ ಅವರು ತನ್ನ ಗಂಡನ ಕೊಲೆಯಲ್ಲಿ ತಾನು ಶಂಕಿತಳಲ್ಲ ಎಂದು ಹೇಳುವ ಪತ್ರವನ್ನು ಒದಗಿಸುವಂತೆ ಪೊಲೀಸರನ್ನು ಕೇಳಿದ್ದಾಳೆ, ಆದ್ದರಿಂದ ಅವಳು $ 40,000 ಮೌಲ್ಯದ ಜೀವ ವಿಮಾ ಪಾಲಿಸಿಯನ್ನು ಸಂಗ್ರಹಿಸಬಹುದು ಎಂಬುದು ಆಕೆಯ ಯೋಚನೆಯಾಗಿತ್ತು. ನಂತರ ನ್ಯಾಯಾಲಯದ ದಾಖಲೆಗಳ ಪ್ರಕಾರ, ಕ್ರಾಂಪ್ಟನ್-ಬ್ರಾಫಿ ತನ್ನ ಪತಿಯ ಸಾವಿನ ನಂತರ $1.5 ಮಿಲಿಯನ್ ಗಳಿಸಿದ್ದಾರೆಂದು ಅಧಿಕಾರಿಗಳು ನಂತರ ತಿಳಿದುಕೊಂಡರು. ಕ್ರಾಂಪ್ಟನ್-ಬ್ರೊಫಿ ಒಂದು ಕಾಲದ ಸಮೃದ್ಧ ಕಾದಂಬರಿಕಾರರಾಗಿದ್ದು, ಅವರು 'ಹೆಲ್ ಆನ್ ದಿ ಹಾರ್ಟ್' ಮತ್ತು 'ದಿ ರಾಂಗ್ ಹಸ್ಬೆಂಡ್' ನಂತಹ ಪುಸ್ತಕಗಳನ್ನು ಬರೆದಿದ್ದಾರೆ.
ಕೆಲಸದವನಿಗೆ ಹೃದಯ ಕೊಟ್ಟ ಉದ್ಯಮಿಯ ಪತ್ನಿ, ಆಳಿಗಾಗಿ ಗಂಡನ ಕೊಲೆ!
ಅವರು 2011 ರಲ್ಲಿ 'ಹೌ ಟು ಮರ್ಡರ್ ಯುವರ್ ಹಸ್ಬೆಂಡ್' ಎಂಬ ಪ್ರಬಂಧವನ್ನು ಕೂಡ ಬರೆದಿದ್ದರು. ಅದರಲ್ಲಿ ಅವರು, ಒಬ್ಬ ರೋಮ್ಯಾಂಟಿಕ್ ಸಸ್ಪೆನ್ಸ್ ಬರಹಗಾರನಾಗಿ, ನಾನು ಕೊಲೆಯ ಬಗ್ಗೆ ಮತ್ತು ಅದರ ಪರಿಣಾಮವಾಗಿ ಪೊಲೀಸ್ ಕಾರ್ಯವಿಧಾನದ ಬಗ್ಗೆ ಯೋಚಿಸಲು ಸಾಕಷ್ಟು ಸಮಯವನ್ನು ಕಳೆಯುತ್ತೇನೆ. ಏಕೆಂದರೆ ಕೊಲೆಯಲ್ಲಿ ಆರೋಪಮುಕ್ತನಾಗಲು ಬಯಸುತ್ತೇನೆ ಮತ್ತು ನಾನು ಖಂಡಿತವಾಗಿಯೂ ಜೈಲಿನಲ್ಲಿ ಯಾವುದೇ ಸಮಯವನ್ನು ಕಳೆಯಲು ಬಯಸುವುದಿಲ್ಲ ಎಂದು ಬರೆದಿದ್ದರು. ಜನರನ್ನು ಕೊಲ್ಲುವುದಕ್ಕಿಂತ ಅವರು ಸಾಯಬೇಕೆಂದು ಬಯಸುವುದು ಸುಲಭ. ಆದರೆ ಕೊಲೆಯ ಬಗ್ಗೆ ನನಗೆ ತಿಳಿದಿರುವ ವಿಷಯವೆಂದರೆ ನಮ್ಮಲ್ಲಿ ಪ್ರತಿಯೊಬ್ಬರು ಅದನ್ನು ಕೆಲವೊಂದು ಸಂದರ್ಭಗಳಲ್ಲಿ ಮಾಡಬೇಕೆಂದು ಬಯಸುತ್ತಾರೆ ಎಂದು ಆಕೆ ಬರೆದಿದ್ದಾಳೆ.