ಹಿಂದೂ ಪ್ರಾಬಲ್ಯದ ಸಿಂಧ್ ಭಾರತ ಕೈವಶ ಸಾಧ್ಯತೆ, ರಾಜನಾಥ್ ಸಿಂಗ್ ಎಚ್ಚರಿಕೆಗೆ ಪಾಕಿಸ್ತಾನ ಕಂಗಾಲು, ನಾಗರೀಕತೆ, ಭಾರತದ ಇತಿಹಾಸದಲ್ಲಿ ಸಿಂಧ್ ಪ್ರಾಂತ್ಯ ಅತ್ಯಂತ ಪ್ರಮುಖ. ಸದ್ಯ ಪಾಕಿಸ್ತಾನದಲ್ಲಿರುವ ಸಿಂದ್ ಭಾರತ ಕೈಸೇರುವ ಸಾಧ್ಯತೆ ಇದೆ ಎಂದಿದ್ದಾರೆ.

ನವದೆಹಲಿ (ನ.23) ಭಾರತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ ಎಚ್ಚರಿಕೆಗೆ ಪಾಕಿಸ್ತಾನ ಕಂಗಾಲಾಗಿದೆ. ಭಾರತದ ನಾಗರೀಕತೆ, ಇತಿಹಾಸ, ಪರಂಪರೆಯಲ್ಲಿ ಸಿಂಧ್ ಪ್ರಾಂತ್ಯಕ್ಕೆ ಪ್ರಮುಖ ಸ್ಥಾನವಿದೆ. ಆದರೆ 1947ರ ದೇಶ ವಿಭಜನಯೆಲ್ಲಿ ಸಿಂದ್ ಪ್ರಾಂತ್ಯ ಪಾಕಿಸ್ತಾನದ ಕೈವಶವಾಯಿತು. ಸಿಂದ್ ಪ್ರಾಂತ್ಯ ಭಾರತದ ಕೈವಶವಾಗಬಹುದು, ಗಡಿ ಬದಲಾಗಬಹುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ದೇಶ ವಿಭಜನೆಯಾದಾಗ ಸಿಂದ್ ಪ್ರಾಂತ್ಯ ಭಾರತದಿಂದ ಬೇರ್ಪಡುವುದನ್ನು ಹಲವು ನಾಯಕರು ವಿರೋಧಿಸಿದ್ದರು. ಆದರೆ ಸಿಂಧ್ ಮತ್ತೆ ಭಾರತ ಸೇರುವ ದಿನಗಳು ದೂರವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ದೇಶ ವಿಭಜನೆಯಾದಾಗ ಸಿಂದ್ ಜನರೂ ಒಪ್ಪಿರಲಿಲ್ಲ

ನಮ್ಮ ನಾಗರೀಕತೆ, ಹಿಂದೂ ಸಮುದಾಯದ ಪ್ರಮುಖ ಸ್ಥಾನ ಸಿಂದೂ ನದಿ. ಸಿಂದೂ ನದಿ ತಟದಿಂದಲೇ ಹಿಂದೂ ನಾಗರೀಕತೆ ಹುಟ್ಟಕೊಂಡಿದೆ. 1947ರಲ್ಲಿ ಸಿಂದ್ ಪ್ರಾಂತ್ಯದಲ್ಲಿದ್ದ ಜನ, ಭಾರತದಿಂದ ಬೇರ್ಪಡಲು ಬಯಸಿರಲಿಲ್ಲ. ದೇಶ ವಿಭಜನಯಾದಾಗ ಸಿಂದ್ ಪ್ರಾಂತ್ಯದ ಅತೀ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದರು. ಈಗಲೂ ಸಿಂದ್ ಪ್ರಾಂತ್ಯದ ಹಿಂದೂಗಳು ಸಂಕಷ್ಟದಲ್ಲಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಯಾರಿಗೆ ಗೊತ್ತು? ರಾಜನಾಥ್ ಸಿಂಗ್ ಮಾರ್ಮಿಕ ನುಡಿ

ಇಂದು ಸಿಂಧ್ ಭಾರತದ ಭಾಗವಾಗಿಲ್ಲ. ಆದರೆ ನಾಗರೀಕತೆ, ಪರಂಪರೆ ದೃಷ್ಟಿಯಿಂದ ಸಿಂಧ್ ಯಾವತ್ತೂ ಭಾರತದ ಭಾಗ. ನಾಳೆ ಏನಾಗುತ್ತೆ ಯಾರಿಗೆ ಗೊತ್ತು? ಗಡಿ ಬದಲಾಗಬಹುದು, ಭೂಪಟ ಹೊಸದಾಗಬಹುದು. ನಾಳೆ ಸಿಂದ್ ಕೂಡ ಭಾರತದ ಭಾಗವಾಗಬಹುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ನಮ್ಮ ಸಿಂಧ್ ಜನರು ಸಿಂಧೂ ನದಿಯನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಇದು ನಮ್ಮ ಪವಿತ್ರ ನದಿ. ಸಿಂಧಿಗಳು ಎಲ್ಲೇ ಇದ್ದರು ಅವರು ನಮ್ಮವರು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Scroll to load tweet…

ಆಪರೇಶನ್ ಸಿಂದೂರ್ ವೇಳೆ ಭಾರತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಲವು ಭಾಗ ಕೈವಶ ಮಾಡಲಿದೆ ಎಂದು ಭಾವಿಸಲಾಗಿತ್ತು. ಆದರೆ ದಿಢೀರ್ ಆಪರೇಶನ್ ಸಿಂದೂರ್‌ಗೆ ಕದನ ವಿರಾಮ ಹಾಕಲಾಗಿತ್ತು. ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಇದೀಗ ಮತ್ತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಸಿಂಧ್ ಪ್ರಾಂತ್ಯದ ಕುರಿತು ಹೇಳಿಕೆ ಭಾರಿ ಸಂಚಲನ ಪಡೆದುಕೊಂಡಿದೆ.