ವಿದೇಶದಿಂದ ಆಮದಾದ ಸರ್ಕಾರ ಒಪ್ಪಿಕೊಳ್ಳಲ್ಲ ಎಂದ ಪ್ರತಿಭಟನಾಕಾರರು ಪಾಕ್‌ ಮಾತ್ರವಲ್ಲ ದುಬೈ, ಬ್ರಿಟನ್‌, ಚಿಗಾಗೋದಲ್ಲೂ ಪ್ರತಿಭಟನೆ ನಾನು ಕಳ್ಳರೊಂದಿಗೆ ಕುಳಿತುಕೊಳ್ಳುವುದಿಲ್ಲ ಎಂದ ಇಮ್ರಾನ್‌ 6 ಇಮ್ರಾನ್‌ ಖಾನ್ ಆಪ್ತರ ವಿದೇಶ ಯಾತ್ರೆಗೆ ತಡೆ

ಲಾಹೋರ್‌: ವಿಪಕ್ಷಗಳು ಅವಿಶ್ವಾಸ ಮತ ನಿರ್ಣಯದ ಮೂಲಕ ಸರ್ಕಾರ ಉರುಳಿಸಿದ್ದನ್ನು ವಿರೋಧಿಸಿ ಇಮ್ರಾನ್‌ ಖಾನ್‌ (Imran Khan)ಅವರ ಪಕ್ಷ ಪಾಕಿಸ್ತಾನ ತೆಹ್ರಿಕ್‌-ಎ- ಇನ್ಸಾಫ್‌ (akistan Tehrik-e-Insaf) ಬೆಂಬಲಿಗರು ಲಾಹೋರಿನ ಲಿಬರ್ಟಿ ಚೌಕ (Liberty Square)ಹಾಗೂ ಇಡೀ ಪಾಕಿಸ್ತಾನಲ್ಲಿ (Pakistan)ಭಾರೀ ಪ್ರತಿಭಟನೆ ನಡೆಸಿದರು. ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (former Prime Minister Imran Khan) ಸರ್ಕಾರ ವಿದೇಶಿ ಶಕ್ತಿಗಳ ಕೈವಾಡದಿಂದ ಉರುಳಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭಿಸಲು ದೇಶಾದ್ಯಂತ ಕರೆ ನೀಡಿದ ಬೆನ್ನಲ್ಲೇ ಮಹಿಳೆಯರು, ಮಕ್ಕಳು ಸೇರಿದಂತೆ ಪಿಟಿಐ ಪಕ್ಷದ ಬೆಂಬಲಿಗರು ಭಾನುವಾರ ರಾತ್ರಿ 9 ಗಂಟೆಗೆ ಆರಂಭವಾಗಿ ಸೋಮವಾರ ಮುಂಜಾನೆ 3 ಗಂಟೆಯವರೆಗೆ ನಡೆದ ಸುದೀರ್ಘ ರಾರ‍ಯಲಿಯಲ್ಲಿ ಇಮ್ರಾನ್‌ ಖಾನ್‌ರೊಂದಿಗೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.

ಖಾನ್‌ ಸರ್ಕಾರ ಉರುಳಿಸುವಲ್ಲಿ ಅಮೆರಿಕದ ಕೈವಾಡವಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಅಮೆರಿಕದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ವಿದೇಶಿ ಶಕ್ತಿಗಳ ನೆರವಿನಿಂದ ಆಮದು ಮಾಡಿಕೊಂಡ ಸರ್ಕಾರವನ್ನು ಒಪ್ಪಿಕೊಳ್ಳುವುದಿಲ್ಲ ಎಂದರು. ಪಾಕಿಸ್ತಾನದ ಪಂಜಾಬ್‌ (Punjab), ಫೈಜಲಾಬಾದ್‌ (Faisalabad), ಮುಲ್ತಾನ್‌ (Multan), ಜೇಲಂ (Jhelum), ವೇಹಾರಿ (Vehari), ಗುಜರಾತ್‌ ಪ್ರಾಂತ್ಯಗಳು ಮಾತ್ರವಲ್ಲದೇ ಚಿಕಾಗೋ (Chicago), ಟೊರೊಂಟೊ (Toronto), ಬ್ರಿಟನ್‌ (Britain) ಹಾಗೂ ದುಬೈ (Dubai)ಯಲ್ಲೂ ಖಾನ್‌ ಬೆಂಬಲಿಸಿ ಭಾರೀ ಪ್ರತಿಭಟನೆ ನಡೆಸಲಾಗಿತ್ತು.

Breaking News : ವಿಶ್ವಾಸ ಮತ ಯಾಚನೆಯಲ್ಲಿ ಸೋಲು, ಮುಗಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧ್ಯಾಯ

ಸಂಸತ್ತಿಗೆ ರಾಜೀನಾಮೆ: ಇಮ್ರಾನ್‌, ಪಿಟಿಐ ಸಂಸದರ ಘೋಷಣೆ

ಈ ಮಧ್ಯೆ ಪಾಕ್‌ ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌, ನಾನು ಕಳ್ಳರೊಂದಿಗೆ (ಸಂಸತ್ತಿನಲ್ಲಿ) ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಇಮ್ರಾನ್‌ ಹಾಗೂ ಅವರ ಪಕ್ಷ ತೆಹ್ರಿಕ್‌-ಎ ಇನ್ಸಾಫ್‌ ಸದಸ್ಯರು ಸಂಸತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದಾಗಿ ಘೋಷಿಸಿದ್ದಾರೆ. ಒಂದು ಪ್ರಕರಣದಲ್ಲಿ 1.21 ಲಕ್ಷ ಕೋಟಿ ರೂ. ಭ್ರಷ್ಟಾಚಾರ ಹಾಗೂ ಇನ್ನೊಂದರಲ್ಲಿ 45.5 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಸಿದ ಆರೋಪವುಳ್ಳ ವ್ಯಕ್ತಿಯನ್ನು ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆ ಮಾಡಲಾಗುತ್ತಿದೆ. ದೇಶಕ್ಕೆ ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ. ಹೀಗಾಗಿ ನಾವು ನ್ಯಾಶನಲ್‌ ಅಸೆಂಬ್ಲಿಗೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಇಮ್ರಾನ್‌ ಟ್ವೀಟ್‌ ಮಾಡಿದ್ದಾರೆ. ಈ ನಡುವೆ, ಸಂಸತ್ತಿನ ಸದಸ್ಯತ್ವವನ್ನು ಮುಂದುವರೆಸುವುದರೆ ಶೆಹಬಾಜ್‌ ಷರೀಫ್‌ ಅವರಿಗೆ ಬೆಂಬಲ ಸೂಚಿಸಿದಂತೆ ಹೀಗಾಗಿ ರಾಜೀನಾಮೆ ನೀಡುತ್ತಿದ್ದೇವೆ ಎಂದು ಮಾಜಿ ಆಂತರಿಕ ಸಚಿವ ಶೇಖ್‌ ರಷೀದ್‌ ಹೇಳಿದ್ದಾರೆ.

Pakistan New PM ಪಾಕಿಸ್ತಾನ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ!


6 ಇಮ್ರಾನ್‌ ಆಪ್ತರ ವಿದೇಶ ಯಾತ್ರೆಗೆ ತಡೆ

ಇಮ್ರಾನ್‌ ಖಾನ್‌ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಆಪ್ತರಿಗೆ ಹೊಸ ಸಂಕಷ್ಟಶುರುವಾಗಿದೆ. ಇಮ್ರಾನ್‌ ಖಾನ್‌ನ 6 ಆಪ್ತ ಅಧಿಕಾರಿಗಳಿಗೆ ದೇಶವನ್ನು ತೊರೆದು ವಿದೇಶಕ್ಕೆ ಹೋಗದಂತೆ ತಡೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಮಾಜಿ ಪ್ರಧಾನ ಕಾರ್ಯದರ್ಶಿ ಆಜಂ ಖಾನ್‌ (Azam Khan), ಮಾಜಿ ರಾಜಕೀಯ ಸಂವಹನ ಸಹಾಯಕರಾದ ಶೆಹಬಾಜ್‌ ಗಿಲ್‌ (Shehbaz Gill), ಮಾಜಿ ಆಂತರಿಕ ಹೊಣೆಗಾರರಾದ ಶಾಹ್‌ಜಾದ್‌ ಅಕ್ಬರ್‌ (Shahzad Akbar), ಪಂಜಾಬಿನ ವ್ಯವಸ್ಥಪಕ ನಿರ್ದೇಶಕ ಗೋಹರ್‌ ನಫೀಜ್‌, ಪಂಜಾಬ್‌ ವಲಯದ ಫೆಡೆರಲ್‌ ತನಿಖಾ ಏಜೆನ್ಸಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ರಿಜ್ವಾನ್‌, ಪಾಕಿಸ್ತಾನ್‌ ತೆಹ್ರಿಕ್‌-ಎ-ಇನ್ಸಾಫ್‌ ಪಕ್ಷದ ಸಾಮಾಜಿಕ ಮಾಧ್ಯಮ ನಿರ್ವಹಣಾ ಮುಖ್ಯಸ್ಥ ಅರ್ಸಾಲನ್‌ ಖಾಲೀದ್‌ ಅವರ ಹೆಸರನ್ನು ಪಾಕಿಸ್ತಾನದ ಫೆಡೆರಲ್‌ ತನಿಖಾ ಏಜೆನ್ಸಿ ವಿದೇಶಕ್ಕೆ ಹಾರದಂತೇ ತಡೆ ಪಟ್ಟಿಯಲ್ಲಿ ಸೇರಿಸಿದೆ. ಇವರು ಏಜೆನ್ಸಿಯ ಅನುಮತಿಯಿಲ್ಲದೇ ದೇಶ ಬಿಟ್ಟು ವಿದೇಶಗಳಿಗೆ ತೆರಳುವಂತಿಲ್ಲ.