ಮಾಜಿ ಪ್ರಧಾನಿ ಸಹೋದರ ಶೆಹಬಾಜ್ ಷರೀಫ್‌ಗೆ ಪ್ರಧಾನಿ ಪಟ್ಟ ವಿರೋಧ ಪಕ್ಷದ ನಾಯಕನಿಗೆ ಭರ್ಜರಿ ಬೆಂಬಲ ಇಮ್ರಾನ್ ಪಕ್ಷದಿಂದ ಕಣಕ್ಕಿಳಿದ ಖುರೇಷಿಗೆ ಹಿನ್ನಡೆ
ಇಸ್ಲಾಮಾಬಾದ್(ಏ.11): ಪಾಕಿಸ್ತಾನ ನೂತನ ಪ್ರಧಾನಿಯಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. ಇಮ್ರಾನ್ ಖಾನ್ ಪಟ್ಟ ಕಳಚಿದ ಬೆನ್ನಲ್ಲೇ ಇದೀಗ ವಿರೋಧ ಪಕ್ಷದ ನಾಯಕರಾಗಿದ್ದ ಶೆಹಬಾಜ್ ಷರೀಫ್ ಅವಿರೋಧವಾಗಿ ಪಾಕಿಸ್ತಾನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಪಾಕಿಸ್ತಾನದಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟು ಇದೀಗ ಅಂತಿಮ ಹಂತ ತಲುಪಿದೆ. ಇಮ್ರಾನ್ ಖಾನ್ ವಿಶ್ವಾಸ ಮತಯಾಚನೆಯಲ್ಲಿ ಸೋಲು ಕಂಡ ಬಳಿಕ ಮುಂದಿನ ಪ್ರಧಾನಿ ಯಾರು ಅನ್ನೋ ಚರ್ಚೆ ಶುರುವಾಗಿತ್ತು. ಶೆಹಬಾಜ್ ಷರೀಪ್ ಮುಚೂಣಿಯಲ್ಲಿದ್ದರೆ, ಇಮ್ರಾನ್ ಖಾನ್ ಅವರ ತೆಹ್ರಿಕ್ ಇ ಇನ್ಸಾಫ್ ಪಕ್ಷದಿಂದ ಶಾ ಮೊಹಮ್ಮದ್ ಖುರೇಷ್ ಕೂಡ ಸ್ಪರ್ಧೆಯಲ್ಲಿದ್ದರು. ಆದರೆ ಶೆಹಬಾಜ್ ಷರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಂಧನದಿಂದ ಪಾರಾಗಲು ಸೋಲೊಪ್ಪಿದ ಇಮ್ರಾನ್ ಖಾನ್
ಅವಿಶ್ವಾಸದಲ್ಲಿ ಸೋತ ಪಾಕ್ ಮೊದಲ ಪ್ರಧಾನಿ
ಸಂಸತ್ತಿನಲ್ಲಿ ಮಂಡಿಸಲಾದ ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್ ಖಾನ್ ಸೋಲನುಭವಿಸಿದ್ದಾರೆ. ಈ ಮೂಲಕ ಪಾಕಿಸ್ತಾನ ರಾಜಕೀಯ ಇತಿಹಾಸದಲ್ಲಿ ಅವಿಶ್ವಾಸ ಮತದಲ್ಲಿ ಬಹುಮತ ಕಳೆದುಕೊಂಡು ಪದಚ್ಯುತರಾದ ದೇಶದ ಮೊದಲ ಪ್ರಧಾನಿ ಎಂಬ ಕುಖ್ಯಾತಿಗೆ ಇಮ್ರಾನ್ ಖಾನ್ ಪಾತ್ರರಾಗಿದ್ದಾರೆ. ಈ ಹಿಂದೆ ಬೆನಜೀರ್ ಭುಟ್ಟೋ ಮತ್ತು ಶೌಕತ್ ಆಲಿ ಈ ಇಬ್ಬರು ಪ್ರಧಾನಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಆದರೆ ಅವರು ಮತದಾನಕ್ಕೂ ಮೊದಲೇ ರಾಜೀನಾಮೆ ಘೋಷಿಸಿದ್ದರು.
ಇಮ್ರಾನ್ ಸರ್ಕಾರದ ಪತನದ ನಂತರ ಶೆಹಬಾಜ್ ಷರೀಫ್ ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಿದ್ದಾರೆ. ಪಾಕಿಸ್ತಾನದ ಮುಸ್ಲಿಂ ಲೀಗ್-ನವಾಜ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ, ನವಾಜ್ ಷರೀಫ್‌ರನ್ನು ಹೊರತುಪಡಿಸಿ ಪಿಎಂಎಲ್ ಪಕ್ಷದಿಂದ ಮೊಟ್ಟಮೊದಲ ಬಾರಿ ಶೆಹಬಾಜ್ ಅವರು ಪ್ರಧಾನಿಯಾಗಿದ್ದಾರೆ.
ಇಮ್ರಾನ್ ಸರ್ಕಾರ ಉರುಳಿಸಿದ 4 ಪ್ರಮುಖರು
ಶೆಹಬಾಜ್ 1951ರಲ್ಲಿ ಲಾಹೋರಿನನಲ್ಲಿ ಜನಿಸಿದ್ದರು. ಇವರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರರಾಗಿದ್ದಾರೆ. 1980 ರ ದಶಕದಲ್ಲಿ ರಾಜಕೀಯ ಪ್ರವೇಶ ಮಾಡಿದ ಅವರು 1988ರಲ್ಲಿ ಪಾಕಿಸ್ತಾನದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇವರು 1997ರಲ್ಲಿ ಶೆಹಬಾಜ್ ಪಾಕಿಸ್ತಾನದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಹಾಗೂ ರಾಜಕೀಯವಾಗಿ ನಿರ್ಣಾಯಕ ಪಾತ್ರ ವಹಿಸಿದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 1999ರಲ್ಲಿ ನವಾಜ್ ಷರೀಫ್ ಸರ್ಕಾರವನ್ನು ಜನರಲ್ ಮುಶರಫ್ ಪತನಗೊಳಿಸಿದ ನಂತರ ಇವರು 8 ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿದ್ದು, 2007ರಲ್ಲಿ ಪಾಕಿಸ್ತಾನಕ್ಕೆ ಮರಳಿದರು. 2008 ಹಾಗೂ 2013ರಲ್ಲಿ ಇವರು ಮತ್ತೆ ಪಂಜಾಬಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. 2018ರ ಚುನಾವಣೆ ಬಳಿಕ ಇವರು ಪಾಕಿಸ್ತಾನದ ಸಂಸತ್ತಿನಲ್ಲಿ ವಿರೋಧ ಪಕ್ಷ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಕಾರ ಕೆಡವಲು ಅಮೆರಿಕ ಸಂಚು: ಪಾಕ್ ವಿದೇಶಾಂಗ ಸಚಿವ
ಪಾಕಿಸ್ತಾನದಲ್ಲಿ ಆಡಳಿತಾರೂಢ ಸರ್ಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಘೋಷಿಸುವಲ್ಲಿ ವಿದೇಶಿ ಸಂಚಿದೆ ಎಂಬ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಪವನ್ನು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಶಿ ಸಮರ್ಥಿಸಿಕೊಂಡಿದ್ದಾರೆ. ಶನಿವಾರ ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಕರೆ ಮಾಡಿ ಇಮ್ರಾನ್ ಖಾನ್ ರಷ್ಯಾಗೆ ತೆರಳದಂತೆ ಸೂಚಿಸಿದ್ದರು.
