ಭಾನುವಾರ ಸಂಜೆ ದಕ್ಷಿಣ ಸ್ಪೇನ್‌ನ ಅದಮೂಜ್ ಎಂಬಲ್ಲಿ 2 ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 39 ಜನ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ನವೀಕರಿಸಲಾಗಿದ್ದ ಹಳಿಯಲ್ಲಿ ಈ ಅಪಘಾತ ಸಂಭವಿಸಿದೆ.
ಅದಮೂಜ್(ಸ್ಪೇನ್): ಭಾನುವಾರ ಸಂಜೆ ದಕ್ಷಿಣ ಸ್ಪೇನ್‌ನ ಅದಮೂಜ್ ಎಂಬಲ್ಲಿ 2 ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 39 ಜನ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ನವೀಕರಿಸಲಾಗಿದ್ದ ಹಳಿಯಲ್ಲಿ ಈ ಅಪಘಾತ ಸಂಭವಿಸಿದೆ.
ಬೋಗಿಗಳಲ್ಲಿ ಹಳಿ ತಪ್ಪಿ ಮುಂದಿನ ಕೋಚ್‌ಗಳಿಗೆ ಡಿಕ್ಕಿ
ಸಂಜೆ ಸುಮಾರು 7.45ರ ಸುಮಾರಿಗೆ ಮಲಗಾದಿಂದ ಮ್ಯಾಡ್ರಿಡ್ ಕಡೆ ಸಾಗುತ್ತಿದ್ದ ರೈಲಿನ ಕೊನೆಯ ಬೋಗಿಗಳಲ್ಲಿ ಹಳಿ ತಪ್ಪಿದ್ದು, ಇನ್ನೊಂದು ಹಳಿಯಲ್ಲಿ ಬರುತ್ತಿದ್ದ ರೈಲಿನ ಮುಂದಿನ ಕೋಚ್‌ಗಳಿಗೆ ಡಿಕ್ಕಿಯಾಗಿದೆ. ಅದು 13 ಅಡಿ ದೂರದ ಪ್ರದೇಶಕ್ಕೆ ಉರುಳಿ ಬಿದ್ದ ಪರಿಣಾಮ, ಹೆಚ್ಚಿನ ಸಾವು ನೋವು ಸಂಭವಿಸಿದೆ. ಎರಡೂ ರೈಲುಗಳಲ್ಲಿ ಒಟ್ಟು 600 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ.
ಭೀಕರ ಹೇಗಿತ್ತು:
ರೈಲಿ ಡಿಕ್ಕಿಯ ರಭಸಕ್ಕೆ ಸಿಕ್ಕಿ ಬೃಹತ್ ಬೋಗಿಗಳು ನುಜ್ಜುಗುಜ್ಜಾಗಿದ್ದು, ಅದರ ಅಡಿ ಸಿಲುಕಿದವರ ಸ್ಥಿತಿ ದಯನೀಯವಾಗಿದೆ. ಹಲವರು ಕಿಟಕಿ ಗಾಜುಗಳನ್ನು ಒಡೆದು ಹೊರಬರುವಲ್ಲಿ ಯಶಸ್ವಿಯಾಗಿರುವರಾದರೂ, ಕೆಳಗೆ ಸಿಲುಕಿದವರ ಬದುಕುಳಿಯುವ ಸಾಧ್ಯತೆ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ. ಅಪಘಾತಕ್ಕೆ ತುತ್ತಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸ್ಪೇನ್‌ನ ಪತ್ರಕರ್ತರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದು, ‘ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದಂತೆ ಅನುಭವವಾಯಿತು. ನೋಡಿದರೆ ರೈಲು ಹಳಿತಪ್ಪಿತ್ತು’ ಎಂದು ಹೇಳಿದ್ದಾರೆ.


