ಮಹಿಳೆ ತಲೆ ಕತ್ತರಿಸಿ ಅನ್ನದೊಂದಿಗೆ ಮೆದುಳು ತಿಂದ ರಾಕ್ಷಸ!
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು?| ಮಹಿಳೆ ತಲೆ ಕತ್ತರಿಸಿ ಅನ್ನದೊಂದಿಗೆ ಮೆದುಳು ತಿಂದ ರಾಕ್ಷಸ| ಫಿಲಿಪೈನ್ಸ್'ನಲ್ಲಿ ನಡೆಯಿತು ಹೀಗೊಂದು ಭಯನಾಕ ಕೊಲೆ| ಮಿಂಡಾನಾವೊ ದ್ವೀಪದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ| ತನಿಖೆ ನಡೆಸಿ ಭಯಾನಕ ಕೊಲೆ ಪ್ರಕರಣದ ಬೇಧಿಸಿದ ಪೊಲೀಸರು| ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಲಾಯ್ಡ್ ಬಾಗ್ಟೊಂಗ್ ಎಂಬ ಯುವಕನ ಬಂಧನ|
ಮನಿಲಾ(ಡಿ.07): ಫಿಲಿಪೈನ್ಸ್'ನಲ್ಲಿ ಮಹಿಳೆಯೋರ್ವಳ ಶಿರಚ್ಛೇದನ ಮಾಡಿ ನಂತರ ಆಕೆಯ ಮೆದುಳನ್ನು ಅನ್ನದದೊಂದಿಗೆ ಬೆರೆಸಿ ಸೇವಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಇಲ್ಲಿನ ಮಿಂಡಾನಾವೊ ದ್ವೀಪದಲ್ಲಿ ಅಪರಿಚಿತ ಮಹಿಳೆಯ ಭಾಗಶಃ ಕತ್ತರಿಸಿದ ಮೃತದೇಹ ಪತ್ತೆಯಾಗಿದ್ದು, ಮಹಿಳೆ ಕೊಲೆ ಆರೋಪದ ಮೇಲೆ 21 ವರ್ಷದ ಲಾಯ್ಡ್ ಬಾಗ್ಟೊಂಗ್ ಎಂಬ ಯುವಕನನ್ನು ಬಂಧಿಸಲಾಗಿದೆ.
ಹುಟ್ಟು ಹಬ್ಬದ ದಿನ ಹುಟ್ಟಿಸಿದಾಕೆಯನ್ನೇ ಕೊಂದ ಪಾಪಿ ಮಗ..!
ಮಹಿಳೆ ಇಂಗ್ಲಿಷ್ನಲ್ಲಿ ಮಾತನಾಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ಆಕೆಯನ್ನು ಕೊಂದು ಹಸಿವಾಗಿದ್ದರಿಂದ ಆಕೆಯ ಮೆದುಳನ್ನು ಅನ್ನದೊಂದಿಗೆ ಬೆರೆಸಿ ತಿಂದಿದ್ದಾಗಿ ಬಾಗ್ಟಾಂಗ್ ಅಚ್ಚರಿಯ ಹೇಳಿಕೆ ನೀಡಿದ್ದಾನೆ.
ಕೊಲೆ ಸಂದರ್ಭದಲ್ಲಿ ಆರೋಪಿ ಬಾಗ್ಟಾಂಗ್ ಕುಡಿದ ಮತ್ತಿನಲ್ಲಿದ್ದು, ಮಹಿಳೆಯ ಕತ್ತರಿಸಿದ ತಲೆಯನ್ನು ಬ್ಯಾಗ್ನಲ್ಲಿ ಹೊತ್ತು ತಂದು ಮನೆಯಲ್ಲಿ ಅನ್ನದೊಂದಿಗೆ ಬೇಯಿಸಿ ತಿಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ ಓದಲು ಹೇಳಿದ್ದಕ್ಕೆ 4ನೇ ತರಗತಿ ಬಾಲಕಿ ಆತ್ಮಹತ್ಯೆ