ಮಂಗಳೂರು(ನ.28): ತಾಯಿ ಪರೀ​ಕ್ಷೆಗೆ ಓದಲು ಹೇಳಿ​ದ್ದಕ್ಕೆ ಬಾಲಕಿ ಆತ್ಮ​ಹತ್ಯೆ ಮಾಡಿ​ಕೊಂಡ ಘಟನೆ ಬುಧ​ವಾರ ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮೂರು ಕಾವೇರಿ ಬಳಿಯ ಕಮ್ಮಜೆ ಎಂಬ​ಲ್ಲಿ ನಡೆ​ದಿದೆ.

ಶ್ರೀಲತಾ ಎಂಬವರ 10 ವರ್ಷದ ಮಗಳು, ಕಿನ್ನಿಗೋಳಿಯ ಮೇರಿವೆಲ್‌ ಶಾಲೆಯಲ್ಲಿ 4 ನೇ ತರಗತಿಯ ವಿದ್ಯಾ​ರ್ಥಿನಿ ಮೃತಳು. ಈಕೆಗೆ ಪರೀ​ಕ್ಷೆಗೆ ಓದಲು ಹೇಳಿ ಉದ್ಯೋ​ಗಕ್ಕೆ ತೆರ​ಳಿ​ದ್ದರು.

ಗಾಡಿ ಪಾರ್ಕಿಂಗ್ ಮಾಡಿ ಹೋಟೆಲ್ ಒಳಗೆ ಹೋಗುವ ಮುನ್ನ ಹುಷಾರ್..!

ತಾಯಿ ಕಿನ್ನಿಗೋಳಿಯ ಕನ್ಸೆಟ್ಟಾ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದು ಬುಧವಾರ ಅವರ ಮಗಳು ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯ ಕೋಣೆಯಲ್ಲಿ ಕಿಟಕಿಗೆ ರಿಬ್ಬನ್‌ ಹಾಕಿಕೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಯಿ ಸಂಜೆ ಮನೆಗೆ ಬಂದಾಗ ವಿಷಯ ತಿಳಿದಿದ್ದು, ಈ ಬಗ್ಗೆ ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ರಾಜಾರೋಷವಾಗಿ ಬಸ್ಸಲ್ಲೇ ಗಾಂಜಾ ಸಾಗಿಸ್ತಿದ್ದ ಮಹಿಳೆ ಅರೆಸ್ಟ್

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]