ಮಂಡ್ಯ(ಡಿ.03): ದುಶ್ಚಟಗಳಿಂದ ದೂರವಿರುವಂತೆ ಬುದ್ದಿಮಾತು ಹೇಳಿದ್ದ ತಾಯಿಗೆ ಮಗನೊಬ್ಬ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿ, ತಾಯಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವ ಘಟನೆ ತಾಲೂಕಿನ ಕಿರಂಗೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಮಲಾ ಮೇರಿಯಮ್ಮ (46) ಮೃತ ಮಹಿಳೆ. ಆಕೆಯ ಮೊದಲನೇ ಪುತ್ರ ಪ್ರಜ್ವಲ್ (23) ಕೃತ್ಯ ಎಸಗಿ ತಲೆ ಮರೆಸಿಕೊಂಡಿರುವ ಆರೋಪಿ. ಶನಿವಾರ ಅಮಲಾ ಮೇರಿಯಮ್ಮ ಅವರ ಮೊದಲನೇ ಪುತ್ರ ಪ್ರಜ್ವಲ್‌ ಜನ್ಮದಿನ ವಿದ್ದು, ಆತನನ್ನು ಹಾರೈಸಿ ದುಶ್ಚಟಗಳಿಂದ ದೂರವಿದ್ದು ಸುಂದರ ಬದುಕನ್ನು ಕಟ್ಟಿಕೊಳ್ಳುವಂತೆ ತಿಳಿ ಹೇಳಿದ್ದಾಳೆ. ತನ್ನ ಸ್ನೇಹಿತರೊಡಗೂಡಿ ಈಗಾಗಲೇ ದುಶ್ಚಟಕ್ಕೆ ಬಿದ್ದಿದ್ದ ಪ್ರಜ್ವಲ್ ಇದರಿಂದ ಕುಪಿತನಾಗಿ ಆಕೆಯೊಂದಿಗೆ ಜಗಳಕ್ಕೆ ನಿಂತು ಮನೆಯಲ್ಲಿದ್ದ ಚಾಕುವಿನಿಂದ ಹೊಟ್ಟೆಹಾಗೂ ತೊಡೆಯ ಭಾಗಕ್ಕೆ ಬಲವಾಗಿ ಹಿರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ.

ವೈದ್ಯೆಯ ಮೃತದೇಹದ ಮೇಲೂ ಕಾಮುಕರ ಅಟ್ಟಹಾಸ: ಸತ್ತರೂ ಬಿಡದ ದುರುಳರು!

ಬಳಿಕ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎರಡನೇ ಪುತ್ರ ರೋಹನ್‌ ಗಾಯಗೊಂಡಿದ್ದ ತಾಯಿ ಅಮಲಾ ಮೇರಿಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆಗೆ ದೊರೆಯದ ಕಾರಣ ಭಾನುವಾರ ರಾತ್ರಿ ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆರೋಪಿ ಪ್ರಜ್ವಲ್ ವಿರುದ್ಧ ಸಹೋದರ ರೋಹನ್‌ ಪೊಲೀಸರಿಗೆ ದೂರು ನೀಡಿದ್ದು, ಶ್ರೀರಂಗಪಟ್ಟಣ ಟೌನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

6 ವರ್ಷ ಬಾಲಕಿಯ ರೇಪ್: ಸ್ಕೂಲ್ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ, ಆರೋಪಿ ಅರೆಸ್ಟ್!