Alice and Ellen Kessler story: ಯುರೋಪ್‌ನಲ್ಲಿ ನಟನೆ, ಗಾಯನ ಮತ್ತು ನೃತ್ಯದಿಂದ ಪ್ರಸಿದ್ಧರಾಗಿದ್ದ ಜರ್ಮನಿ ಮೂಲದ ಕೆಸ್ಲರ್ ಅವಳಿಗಳಾದ ಆಲಿಸ್ ಮತ್ತು ಎಲೆನ್, ತಮ್ಮ 89ನೇ ವಯಸ್ಸಿನಲ್ಲಿ ಜೊತೆಯಾಗಿ ಸಾವಿಗೆ ಶರಣಾಗಿದ್ದಾರೆ.
ಜೊತೆಯಾಗಿ ಸಾವಿಗೆ ಶರಣಾದ ಅವಳಿಗಳು
ನಟನೆ ಗಾಯನ ಹಾಗೂ ನೃತ್ಯದಿಂದ ಯುರೋಪ್‌ನಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಜರ್ಮನಿ ಮೂಲದ ಖ್ಯಾತ ಅವಳಿಗಳು ತಮ್ಮ 89ರ ಇಳಿವಯಸ್ಸಿನಲ್ಲಿ ಜೊತೆಯಾಗಿ ಸಾವಿಗೆ ಶರಣಾಗಿದ್ದಾರೆ. ಇವರ ಸಾವು ಯುರೋಪ್ ಕಲಾ ಲೋಕವನ್ನು ಆಘಾತಕ್ಕೀಡು ಮಾಡಿದೆ.
ಕೆಸ್ಲರ್ ಅವಳಿಗಳೆಂದೇ ಕರೆಯಲ್ಪಡುತ್ತಿದ್ದ ಆಲಿಸ್ ಹಾಗೂ ಎಲೆನ್ ಕೆಸ್ಲೆರ್ ಅವರು ಒಬ್ಬರೊಬ್ಬರಿಗೆ ಸಾಯುವುದಕ್ಕೆ ಸಹಾಯ ಮಾಡುತ್ತಾ ಜೊತೆಯಾಗಿ ಸಾವಿನ ಮನೆ ಸೇರಿದ್ದಾರೆ. ಅವರ ದುರಂತ ಸಾವಿನ ಸುದ್ದಿಯನ್ನು ವಕಾಲತ್ತು ಸಂಸ್ಥೆ ಜರ್ಮನ್ ಸೊಸೈಟಿ ಫಾರ್ ಹ್ಯೂಮನ್ ಡೈಯಿಂಗ್ (ಡಿಜಿಹೆಚ್ಎಸ್) ಮಂಗಳವಾರ ದೃಢಪಡಿಸಿದೆ ಎಂದು ಆಂಗ್ಲ ಮಾಧ್ಯಮ ಸಿಎನ್ಎನ್ ವರದಿ ಮಾಡಿದೆ. ಗ್ರೂನ್‌ವಾಲ್ಡ್‌ನಲ್ಲಿ ಈ ಕಲಾ ಜೋಡಿ ಜೊತೆಯಾಗಿ ವಾಸ ಮಾಡುತ್ತಿದ್ದರು.
ಕೆಸ್ಲರ್ ಅವಳಿಗಳಿಗೆ ಏನಾಯಿತು?
1950 ಮತ್ತು 60 ರ ದಶಕಗಳಲ್ಲಿ ಯುದ್ಧದ ನಂತರದ ಯುಗದಲ್ಲಿ ಈ ಕೆಸ್ಲರ್ ಅವಳಿಗಳು ಯುರೋಪ್‌ನಲ್ಲಿ ಜನರಿಗೆ ತಮ್ಮ ನೃತ್ಯ ಹಾಗೂ ಹಾಡುಗಾರಿಕೆಯ ಮೂಲಕ ಮನೋರಂಜನೆ ನೀಡಿದ್ದರು ಆ ಸಮಯದಲ್ಲೇ ಇವರಿಗೆ ಸಾಕಷ್ಟು ಪ್ರಸಿದ್ಧ ಬಂತು. ವರ್ಷದ ಹಿಂದೆ ಅವರು ಜರ್ಮನ್ ಸೊಸೈಟಿ ಫಾರ್ ಹ್ಯೂಮನ್ ಡೈಯಿಂಗ್ ಅನ್ನು ಸಂಪರ್ಕಿಸಿದ್ದರು. ಅವರ ಹಠಾತ್ ಸಾವಿಗೆ ಕಾರಣ ಏನಿರಬಹುದು ಎಂಬ ಬಗ್ಗೆ ತಿಳಿದಿಲ್ಲ ಎಂದು ಡಿಜಿಎಚ್‌ಎಸ್ ವಕ್ತಾರ ವೆಗಾ ವೆಟ್ಜೆಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜೊತೆಯಾಗಿ ಸಾಯುವ ಅವರ ಆಸೆಯೂ ಚೆನ್ನಾಗಿ ಬಹಳ ಚೆನ್ನಾಗಿ ಯೋಚಿಸಿ ದೀರ್ಘಕಾಲದಿಂದ ಮಾಡಿದ ಯೋಜನೆಯಾಗಿತ್ತು ಹಾಗೂ ಯಾವುದೇ ಮಾನಸಿಕ ಬಿಕ್ಕಟ್ಟುಗಳಿಂದ ಮುಕ್ತವಾದ ನಿರ್ಧಾರವಾಗಿತ್ತು. ಕೆಸ್ಲರ್ ಅವಳಿಗಳು ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಮತ್ತು ಅವರು ಒಟ್ಟಿಗೆ ತಮ್ಮ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಆಯ್ಕೆ ಮಾಡಿಕೊಂಡಿದ್ದರು ಹಾಗೂ ಸಾಯುವಾಗ ವೈದ್ಯಕೀಯ ಸಹಾಯವನ್ನು ಆರಿಸಿಕೊಂಡರು. ಅವರ ಸಾವಿನ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಧಿಕಾರಿಗಳಿಗೆ ತಿಳಿಸಲಾಯಿತು ಎಂದು ಜರ್ಮನ್ ಪತ್ರಿಕೆ ಬಿಲ್ಡ್ ವರದಿ ಮಾಡಿದೆ.
ಕಳೆದ ವರ್ಷ ಇಟಾಲಿಯನ್ ಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾಗೆ ನೀಡಿದ ಸಂದರ್ಶನದಲ್ಲಿಈ ಅವಳಿ ಸಹೋದರಿಯರು ಒಟ್ಟಿಗೆ ಸಾಯುವ ಕಲ್ಪನೆಯನ್ನು ತೆರೆದಿಟ್ಟಿದ್ದರು. ಅವರು ತಾವಿಬ್ಬರು ಒಂದೇ ದಿನ ಒಟ್ಟಿಗೆ ಹೋಗಬೇಕೆಂದು ಬಯಸಿದ್ದರು. ನಮ್ಮಲ್ಲಿ ಒಬ್ಬರು ಮೊದಲು ಸಾವನ್ನು ಪಡೆಯಬಹುದು ಎಂಬ ಕಲ್ಪನೆಯನ್ನೇ ಸಹಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಅವರು ಹೇಳಿಕೊಂಡಿದ್ದರು. ಅಲ್ಲದೇ ಆ ಸಮಯದಲ್ಲಿಯೇ ಅವರು ತಮ್ಮ ಚಿತಾಭಸ್ಮವನ್ನು ತಮ್ಮ ತಾಯಿ ಎಲ್ಸಾ ಮತ್ತು ತಮ್ಮ ನಾಯಿ ಯೆಲ್ಲೊ ಅವರ ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲೇ ತಮ್ಮ ಚಿತಾಭಸ್ಮದಲ್ಲಿ ಮಣ್ಣು ಮಾಡಬೇಕೆಂದು ಅವರು ಹೇಳಿಕೊಂಡಿದ್ದರು.
ಹಲವು ದಶಕಗಳ ಕಾಲ ಯುರೋಪ್‌ನಲ್ಲಿ ಕಲಾ ರಸಿಕರ ರಂಜಿಸಿದ ಈ ಹಿರಿಯ ಕಲಾ ಜೋಡಿಯ ಸಾವಿಗೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಕ್ಸ್‌ಗರ್ಲ್‌ಫ್ರೆಂಡ್‌ಗೆ ಕಿಸ್ ಮಾಡಲು ಹೋದ ವಿವಾಹಿತ: ನಾಲಗೆ ಕತ್ತರಿಸಿದ ಮಾಜಿ ಗೆಳತಿ
ಇದನ್ನೂ ಓದಿ: ಜಿಪ್ ಲೈನ್ ಅಪಘಾತವಾಗಿದೆ ಎಂದು ಸುಳ್ಳು ಎಐ ವೀಡಿಯೋ: ಯುವಕನ ಬಂಧನ


