ಇಸ್ರೇಲ್‌ಗೆ ರಹಸ್ಯವಾಗಿ ಪಾಕ್‌ನಿಂದ ಶಸ್ತ್ರಾಸ್ತ್ರ ಪೂರೈಕೆ? ಹಮಾಸ್ ವಿರುದ್ಧದ ಯುದ್ಧದಲ್ಲಿ ಯಹೂದಿ ರಾಷ್ಟ್ರಕ್ಕೆ ಬೆಂಬಲ!
ಪ್ಯಾಲೆಸ್ತೀನ್ ಕಾರಣಕ್ಕೆ ಇಸ್ಲಾಮಾಬಾದ್‌ನ ದೀರ್ಘಕಾಲದ ಬೆಂಬಲ ಮತ್ತು ಇಸ್ರೇಲ್ ದೇಶದ ಅಸ್ತಿತ್ವಕ್ಕೆ ನಿರ್ದಿಷ್ಟ ವಿರೋಧವಿದೆ. ಆದರೂ ಸಹ ಹಮಾಸ್‌ನೊಂದಿಗಿನ ಯುದ್ಧದ ಮಧ್ಯೆ ಪಾಕಿಸ್ತಾನವು ಇಸ್ರೇಲ್‌ಗೆ 155 ಎಂಎಂ ಶೆಲ್‌ಗಳನ್ನು ಪೂರೈಸುತ್ತಿದೆ ಎಂದು ಹೇಳಲಾಗಿದೆ.
ಇಸ್ಲಾಮಾಬಾದ್ (ನವೆಂಬರ್ 19, 2023): ಇಸ್ರೇಲ್ - ಹಮಾಸ್ ಯುದ್ಧ ಆರಂಭವಾಗಿ ತಿಂಗಳಿಗೂ ಹೆಚ್ಚು ಸಮಯ ಕಳೀತು. ಈ ಪೈಕಿ ಬಹುತೇಕ ಮುಸಲ್ಮಾನ ದೇಶಗಳು ಪ್ಯಾಲೆಸ್ತೀನ್ ಅಥವಾ ಹಮಾಸ್‌ಗೆ ಬೆಂಬಲ ಕೊಡ್ತಿದೆ. ಇಸ್ರೇಲ್‌ಗೆ ಬೆಂಬಲ ನಿಡ್ತಿರೋ ದೇಶಗಳು ತುಂಬಾ ಕಡಿಮೆ. ಆದ್ರೂ, ಯುದ್ಧದಲ್ಲಿ ಸದ್ಯ ಇಸ್ರೇಲ್ ಮೇಲುಗೈ ಸಾಧಿಸಿದ್ದು, ಹಮಾಸ್ ಉಗ್ರರ ನೆಲೆಗಳನ್ನು ಧ್ವಂಸ ಮಾಡ್ತಿದೆ.
ಇನ್ನು, ಪ್ಯಾಲೆಸ್ತೀನ್ ಕಾರಣಕ್ಕೆ ಇಸ್ಲಾಮಾಬಾದ್‌ನ ದೀರ್ಘಕಾಲದ ಬೆಂಬಲ ಮತ್ತು ಇಸ್ರೇಲ್ ದೇಶದ ಅಸ್ತಿತ್ವಕ್ಕೆ ನಿರ್ದಿಷ್ಟ ವಿರೋಧವಿದೆ. ಆದರೂ ಸಹ ಹಮಾಸ್‌ನೊಂದಿಗಿನ ಯುದ್ಧದ ಮಧ್ಯೆ ಪಾಕಿಸ್ತಾನವು ಇಸ್ರೇಲ್‌ಗೆ 155 ಎಂಎಂ ಶೆಲ್‌ಗಳನ್ನು ಪೂರೈಸುತ್ತಿದೆ ಎಂದು ಹೇಳಲಾಗಿದೆ.
ಇದನ್ನು ಓದಿ: ಗಾಜಾದಲ್ಲಿರೋ ಹಮಾಸ್ ಸಂಸತ್ತಿನ ಕಟ್ಟಡವನ್ನೇ ವಶಪಡಿಸಿಕೊಂಡ ಇಸ್ರೇಲ್ ಸೇನೆ: ಉಗ್ರರ ಖೇಲ್ ಖತಂ?
ಎಕ್ಸ್ (ಈ ಹಿಂದಿನ ಟ್ವಿಟ್ಟರ್‌ನಲ್ಲಿ ಖಾತೆಯೊಂದು) ಬ್ರಿಟಿಷ್ ವಾಯುಪಡೆಯ ವಿಮಾನವು ಬಹ್ರೇನ್‌ನಿಂದ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ಬೇಸ್‌ಗೆ ಹಾರಿತು ಮತ್ತು ಓಮನ್ ಮೂಲಕ ಸೈಪ್ರಸ್‌ನ ಮಿತ್ರ ನೆಲೆಯನ್ನು ತಲುಪಿದೆ ಎಂದು ಹೇಳಲು ಫ್ಲೈಟ್-ಟ್ರ್ಯಾಕರ್ ಡೇಟಾವನ್ನು ಉಲ್ಲೇಖಿಸಿದೆ. ಸೈಪ್ರಸ್‌ನಲ್ಲಿರುವ ಬ್ರಿಟಿಷ್ ರಾಯಲ್ ಏರ್ ಫೋರ್ಸ್‌ನ ಅಕ್ರೋತಿರಿ ಬೇಸ್ ಹಮಾಸ್‌ನೊಂದಿಗಿನ ಯುದ್ಧದ ಮಧ್ಯೆ ಇಸ್ರೇಲ್‌ಗೆ ಮದ್ದುಗುಂಡುಗಳನ್ನು ಪೂರೈಸಲು ಅಂತಾರಾಷ್ಟ್ರೀಯ ಮಿಲಿಟರಿ ಕೇಂದ್ರವಾಗಿ ಹೊರಹೊಮ್ಮಿದೆ.
ಈ ಹಿಂದೆಯೂ 40ಕ್ಕೂ ಹೆಚ್ಚು ಅಮೆರಿಕ ಸಾರಿಗೆ ವಿಮಾನಗಳು, 20 ಬ್ರಿಟಿಷ್ ಸಾರಿಗೆ ವಿಮಾನಗಳು ಮತ್ತು 7 ಭಾರಿ ಸಾರಿಗೆ ಹೆಲಿಕಾಪ್ಟರ್‌ಗಳು ಉಪಕರಣಗಳು, ಶಸ್ತ್ರಾಸ್ತ್ರಗಳು ಮತ್ತು ಪಡೆಗಳನ್ನು ಹೊತ್ತು RAF ಅಕ್ರೋತಿರಿಯಲ್ಲಿ ಲ್ಯಾಂಡ್ ಆಗಿವೆ ಎಂದು ಇಸ್ರೇಲ್ ವಾರ್ತಾಪತ್ರಿಕೆ Haaretz ವರದಿ ಮಾಡಿದೆ.
ಇದನ್ನೂ ಓದಿ: 16 ವರ್ಷಗಳ ಬಳಿಕ ಹಮಾಸ್ ಗಾಜಾ ಪಟ್ಟಿಯ ನಿಯಂತ್ರಣ ಕಳೆದುಕೊಂಡಿದೆ: ಇಸ್ರೇಲ್ ರಕ್ಷಣಾ ಸಚಿವ
ನೆಗೆವ್ ಮರುಭೂಮಿಯ ಬಳಿ ದಕ್ಷಿಣ ಇಸ್ರೇಲ್‌ನಲ್ಲಿರುವ ನೆವಾಟಿಮ್ ಏರ್ ಫೋರ್ಸ್ ಬೇಸ್‌ನಲ್ಲಿ ಅಮೆರಿಕ ವಿಮಾನಗಳು ಇಳಿಯುತ್ತಿವೆ. ಹಾಗೂ ಇಸ್ರೇಲ್‌ನ ಮಿಲಿಟರಿಗೆ ಶಸ್ತ್ರಾಸ್ತ್ರಗಳನ್ನು ತಲುಪಿಸಿವೆ ಎಂದೂ ಹಾರೆಟ್ಜ್ ವರದಿ ಮಾಡಿದೆ. ಇದಲ್ಲದೆ, US ವಿಮಾನವು ಟೆಲ್ ಅವಿವ್‌ನ ಬೆನ್ ಗುರಿಯಾನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ಇತರ ಸಾಮಗ್ರಿಗಳ ಜೊತೆಗೆ, ಶಸ್ತ್ರಸಜ್ಜಿತ ವಾಹನಗಳನ್ನು ಹೊತ್ತೊಯ್ದಿದೆ. ಎಂದೂ ಹೇಳಿದೆ.
ಇಸ್ರೇಲ್‌ಗ್ಯಾಕೆ ಪಾಕ್ ಬೆಂಬಲ?
ಇಸ್ರೇಲ್ ಅನ್ನು ಗುರುತಿಸದ ವಿಶ್ವದ ಕೆಲವೇ ದೇಶಗಳಲ್ಲಿ ಪಾಕಿಸ್ತಾನವೂ ಒಂದು. 1947 ರಲ್ಲಿ ಪ್ರಾರಂಭದ ಸಮಯದಲ್ಲಿ, ಪಾಕಿಸ್ತಾನವು ವಿಶ್ವಸಂಸ್ಥೆಯ ಪ್ಯಾಲೆಸ್ತೀನ್ ವಿಭಜನೆಯ ಪ್ಲ್ಯಾನ್‌ಗೆ ವಿರುದ್ಧವಾಗಿ ಮತ ಹಾಕಿತು. ಅಲ್ಲದೆ, ಈ ಪಾಸ್‌ಪೋರ್ಟ್ ಇಸ್ರೇಲ್ ಹೊರತುಪಡಿಸಿ ವಿಶ್ವದ ಎಲ್ಲಾ ದೇಶಗಳಿಗೆ ಮಾನ್ಯವಾಗಿದೆ ಎಂದು ಪಾಕಿಸ್ತಾನ ಪಾಸ್‌ಪೋರ್ಟ್‌ನ ಕೊನೆಯ ಪುಟದಲ್ಲಿ ಪ್ರಿಂಟ್ ಮಾಡಲಾಗಿತ್ತು.
ಇದನ್ನೂ ಓದಿ: ಶಾಲೆಯಲ್ಲಿ ಹಮಾಸ್ ಉಗ್ರರಿಂದ ಶಸ್ತ್ರಾಸ್ತ್ರ ಸಂಗ್ರಹ: ಹೊಸ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್
ಹಾಗೂ, 1967ರವರೆಗೆ ಇಸ್ರೇಲ್‌ನೊಂದಿಗೆ ಸಾಮಾನ್ಯ ಸಂಬಂಧವನ್ನು ಸಹ ಪಾಕ್ ಸರ್ಕಾರ ಹೊಂದಿರಲಿಲ್ಲ. ಆದರೆ, 2009 ರಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕರು ಯಹೂದಿ ಸಾಂಸ್ಕೃತಿಕ ಕೇಂದ್ರವನ್ನು ಗುರಿಯಾಗಿಸಿಕೊಂಡಾಗ ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಮುಂಬೈನಲ್ಲಿ 26/11 ದಾಳಿಗೂ ಮುನ್ನ ಭಯೋತ್ಪಾದಕ ದಾಳಿಯ ವಿರುದ್ಧ ಇಸ್ರೇಲ್‌ಗೆ ಎಚ್ಚರಿಕೆ ನೀಡಿತ್ತು ಎಂದು ವಿಕಿಲೀಕ್ಸ್ ವರದಿ ಮಾಡಿದೆ.
ಉಕ್ರೇನ್ ಮತ್ತು ಇಸ್ರೇಲ್ ನಡುವೆ: 155 ಎಂಎಂ ಅಂಶ
ಪಾಕಿಸ್ತಾನವು ಸೇನಾ ದಾಳಿಗೆ ಅಗತ್ಯವಾದ ಮೂಲಭೂತ ಯುದ್ಧಸಾಮಗ್ರಿಗಳ ಉತ್ಪಾದಕವಾಗಿದೆ. ಸೆಪ್ಟೆಂಬರ್ 2023 ರಲ್ಲಿ, ಅಮೆರಿಕಕ್ಕೆ ರಹಸ್ಯವಾಗಿ ಪಾಕಿಸ್ತಾನ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದ ಹಿನ್ನೆಲೆ ಐಎಂಎಫ್‌ನಿಂದ ಬೇಲ್‌ಔಟ್‌ಗೆ ಸಹಾಯವಾಗಿದೆ ಎಂದು ದಿ ಇಂಟರ್‌ಸೆಪ್ಟ್ ವರದಿ ಹೇಳಿದೆ.
ಇದನ್ನು ಓದಿ: ಗಾಜಾ ನಗರದ ಹೃದಯ ಭಾಗಕ್ಕೇ ನುಗ್ಗಿ ಸುರಂಗಗಳನ್ನು ಧ್ವಂಸಗೈದ ಇಸ್ರೇಲ್: ಹಮಾಸ್ ಕ್ಷಿಪಣಿ ತಜ್ಞನ ಹತ್ಯೆ
ಅಲ್ಲದೆ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ತನ್ನ ಕಟ್ಟುನಿಟ್ಟಾದ ತಟಸ್ಥತೆ ನೀತಿ ಹೊಂದಿದ್ದರೂ ಉಕ್ರೇನ್ ಮಿಲಿಟರಿಗೆ 155 ಎಂಎಂ ಶೆಲ್‌ಗಳನ್ನು ಪೂರೈಸುವ ಉದ್ದೇಶದಿಂದ ಶಸ್ತ್ರಾಸ್ತ್ರ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿತ್ತು ಇದೇ ರೀತಿ ಈಗ ಇಸ್ರೇಲ್‌ಗೆ ಯಾವ ಕಾರಣಕ್ಕೆ ಶಸ್ತ್ರಾಸ್ತ್ರ ಪೂರೈಸುತ್ತಿದೆ ಎಂಬುದು ನಿಜಕ್ಕೂ ಚರ್ಚೆಗೆ ಗ್ರಾಸವಾಗಿದೆ.