ಐಡಿಎಫ್ ಪಡೆಗಳು ಉತ್ತರ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಗಾಜಾದ ಶಿಶುವಿಹಾರದೊಳಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ಸಾಧನಗಳನ್ನು ಕಂಡುಕೊಂಡಿವೆ ಎಂದು ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ.

ಜೆರುಸಲೇಂ (ನವೆಂಬರ್ 12, 2023): ಇಸ್ರೇಲ್ - ಪ್ಯಾಲೆಸ್ತೀನ್‌ ಯುದ್ಧ ಮುಂದುವರಿದಿದ್ದು, ಈ ಮಧ್ಯೆ ಇಸ್ರೇಲ್‌ ಹಮಾಸ್‌ಗೆ ಸಂಬಂಧಿಸಿದಂತೆ ಹೊಸ ವಿಡಿಯೋ ಬಿಡುಗಡೆ ಮಾಡಿದೆ. ಗಾಜಾ ಪಟ್ಟಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ತಮ್ಮ ಸೈನಿಕರು ಶಿಶುವಿಹಾರದಲ್ಲಿ (ಪುಟ್ಟ ಮಕ್ಕಳ ಶಾಲೆ) ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ಸಾಧನಗಳನ್ನು ಪತ್ತೆ ಮಾಡಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ. 

ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ನಲ್ಲಿ ವಿಡಿಯೋ ಹಂಚಿಕೊಂಡ ಇಸ್ರೇಲ್ ಸೇನೆಯು, ಐಡಿಎಫ್ ಪಡೆಗಳು ಉತ್ತರ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಗಾಜಾದ ಶಿಶುವಿಹಾರದೊಳಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ಸಾಧನಗಳನ್ನು ಕಂಡುಕೊಂಡಿವೆ ಎಂದು ಮಾಹಿತಿ ನೀಡಿದೆ.

ಇದನ್ನು ಓದಿ: ಗಾಜಾ ನಗರದ ಹೃದಯ ಭಾಗಕ್ಕೇ ನುಗ್ಗಿ ಸುರಂಗಗಳನ್ನು ಧ್ವಂಸಗೈದ ಇಸ್ರೇಲ್‌: ಹಮಾಸ್ ಕ್ಷಿಪಣಿ ತಜ್ಞನ ಹತ್ಯೆ

ಉತ್ತರ ಗಾಜಾದ ವಸತಿ ಪ್ರದೇಶಗಳಿಂದ "ಮಹತ್ವದ" ಹಮಾಸ್ ಯುದ್ಧ ಯೋಜನೆಗಳನ್ನು ವಿವರಿಸುವ ಅನೇಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರವನ್ನು ಪಡೆಗಳು ವಶಪಡಿಸಿಕೊಂಡಿವೆ ಎಂದೂ ಐಡಿಎಫ್‌ ಹೇಳಿದೆ. ಶಿಶುವಿಹಾರದ ಪಕ್ಕದಲ್ಲಿ ಒಂದನ್ನು ಒಳಗೊಂಡಂತೆ, ಸೈನಿಕರು ಸುರಂಗದ ಶಾಫ್ಟ್‌ಗಳನ್ನು ಸಹ ಪತ್ತೆಹಚ್ಚಿದ್ದಾರೆ. ಇದು ಸಹ ವಿಸ್ತೃತ ಭೂಗತ ಮಾರ್ಗಕ್ಕೆ ಕಾರಣವಾಯಿತು ಎಂದೂ ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ ಹೇಳಿದೆ. 

Scroll to load tweet…

ಈ ಮಧ್ಯೆ, ಗಾಜಾದಲ್ಲಿ ಕದನ ವಿರಾಮಕ್ಕಾಗಿ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತ್ತಾಯಗಳನ್ನು ಇಸ್ರೇಲ್ ತಿರಸ್ಕರಿಸಿದೆ. ಹಾಗೂ, ಹಮಾಸ್ ನಾಶವಾಗುವವರೆಗೆ ಮುತ್ತಿಗೆ ಹಾಕಿದ ಗಾಜಾ ಪಟ್ಟಿಯಲ್ಲಿ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದೂ ಹೇಳಿದೆ. ಅಲ್ಲದೆ, ಯುದ್ಧ ಮುಗಿದ ನಂತರ ಗಾಜಾದ ಆಡಳಿತಕ್ಕೆ ಮರಳುವ ಪ್ಯಾಲೆಸ್ತೀನ್‌ ಅಧಿಕಾರದ ಕಲ್ಪನೆಯನ್ನು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ಇಸ್ರೇಲ್ - ಗಾಜಾ ಯುದ್ಧದ ನಡುವೆ ಪ್ಯಾಲೆಸ್ತೀನ್‌ ಅಧ್ಯಕ್ಷನ ಹತ್ಯೆಗೇ ನಡೀತು ಯತ್ನ? ವಿಡಿಯೋ ವೈರಲ್‌!

ಅಲ್ಲದೆ, ಗಾಜಾದಿಂದ ದಕ್ಷಿಣ ಇಸ್ರೇಲ್‌ಗೆ ಇನ್ನೂ ರಾಕೆಟ್‌ಗಳನ್ನು ಹಾರಿಸಲಾಗುತ್ತಿದೆ ಎಂದು ಸಹ ಇಸ್ರೇಲ್ ಹೇಳಿದೆ. ಹಾಗೂ, ಇದರಿಂದ ಈವರೆಗೆ ಸುಮಾರು 1,200 ಜನರು ಮೃತಪಟ್ಟಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನರನ್ನು ಕಳೆದ ತಿಂಗಳು ಹಮಾಸ್ ಒತ್ತೆಯಾಳುಗಳಾಗಿ ತೆಗೆದುಕೊಂಡಿದೆ ಎಂದೂ ಯಹೂದಿಗಳ ದೇಶ ಹೇಳಿಕೊಂಡಿದೆ.

ಇನ್ನೊಂದೆಡೆ, ಅಕ್ಟೋಬರ್ 7 ರಿಂದ ವಾಯು ಮತ್ತು ಫಿರಂಗಿ ದಾಳಿಯಲ್ಲಿ 11,078 ಗಾಜಾ ನಿವಾಸಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನ್‌ ಅಧಿಕಾರಿಗಳು ಶುಕ್ರವಾರ ಹೇಳಿದ್ದು, ಅವರಲ್ಲಿ ಸುಮಾರು 40% ಮಕ್ಕಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗಾಜಾ ಮೇಲೆ ಪರಮಾಣು ಬಾಂಬ್ ಹಾಕೋದೂ ಒಂದು ಆಯ್ಕೆ ಎಂದ ಇಸ್ರೇಲ್‌ ಸಚಿವ: ಪ್ರಧಾನಿ ನೆತನ್ಯಾಹು ಹೇಳಿದ್ದೀಗೆ..