ಗಾಜಾದ ಸಂಸತ್ ಕಟ್ಟಡವನ್ನು ಇಸ್ರೇಲ್‌ ಸೈನಿಕರು ವಶಪಡಿಸಿಕೊಂಡಿರೋ ಫೋಟೋ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ.

ಟೆಲ್ ಅವೀವ್ (ನವೆಂಬರ್ 14, 2023): ಪ್ಯಾಲೆಸ್ತೀನ್‌ ಅಥಾರಿಟಿ (ಪಿಎ) ಅನ್ನು ಹೊರಹಾಕಿದ ನಂತರ ಗಾಜಾ ಪಟ್ಟಿಯನ್ನು ಹಲವು ವರ್ಷಗಳಿಂದ ಆಳುತ್ತಿರುವ ಹಮಾಸ್ ಸಂಸತ್ ಕಟ್ಟಡವನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ವಶಪಡಿಸಿಕೊಂಡಿವೆ. ಇಸ್ರೇಲ್ ಸೇನೆಯ ಗೋಲಾನಿ ಬ್ರಿಗೇಡ್ ಸೋಮವಾರ ಹಮಾಸ್ ಸಂಸತ್ ಕಟ್ಟಡವನ್ನು ವಶಪಡಿಸಿಕೊಂಡಿದೆ ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಸಂಬಂಧ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದು, ಗಾಜಾದ ಸಂಸತ್ ಕಟ್ಟಡದಲ್ಲಿ ಐಡಿಎಫ್ ಸೈನಿಕರು ಇಸ್ರೇಲ್‌ ಧ್ವಜ ಬೀಸುತ್ತಿರುವುದನ್ನು ಸಹ ನೋಡಬಹುದಾಗಿದೆ. 

Scroll to load tweet…

ಇದನ್ನು ಓದಿ: 16 ವರ್ಷಗಳ ಬಳಿಕ ಹಮಾಸ್ ಗಾಜಾ ಪಟ್ಟಿಯ ನಿಯಂತ್ರಣ ಕಳೆದುಕೊಂಡಿದೆ: ಇಸ್ರೇಲ್‌ ರಕ್ಷಣಾ ಸಚಿವ

ಅಕ್ಟೋಬರ್ 7 ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ್ದು, ಅದಕ್ಕೆ ಪ್ರತಿಯಾಗಿ ಇಸ್ರೇಲ್‌ ಅಂದಿನಿಂದ ಯುದ್ಧ ಘೋಷಿಸಿ ವಾಯು ದಾಳಿ ನಡೆಸುತ್ತಿತ್ತು. ಅಲ್ಲದೆ, 
ಅಕ್ಟೋಬರ್ 27 ರಂದು ಭೂ ಸೇನೆಯೂ ಆಕ್ರಮಣ ನಡೆಸಿತ್ತು. IDF ಗಾಜಾ ಪಟ್ಟಿಯಲ್ಲಿ ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಇನ್ನು, ಉತ್ತರ ಗಾಜಾದಲ್ಲಿನ ಪ್ರಮುಖ ಆಸ್ಪತ್ರೆಗಳನ್ನು ಹಮಾಸ್ ತನ್ನ ಕಮಾಂಡ್ ಸೆಂಟರ್‌ಗಳಾಗಿ ಬಳಸುತ್ತಿದೆ ಎಂದು IDF ಆರೋಪಿಸಿದ್ದು, ಗಾಜಾ ಪಟ್ಟಿಯ ದಕ್ಷಿಣ ಭಾಗಕ್ಕೆ ಸ್ಥಳಾಂರವಾಗುವಂತೆ ನಾಗರಿಕರನ್ನು ಮನವಿ ಮಾಡಿತ್ತು.

ಗಾಜಾದಲ್ಲಿ ಹಲವಾರು ಹಿರಿಯ ಹಮಾಸ್ ಕಾರ್ಯಕರ್ತರ ಬಲಿ!
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (IDF) ಗಾಜಾದಲ್ಲಿ ಹಮಾಸ್‌ ಗುಂಪಿನ ಮಾಜಿ ಗುಪ್ತಚರ ಮುಖ್ಯಸ್ಥ ಖಾಮಿಸ್ ದಬಾಬಾಶ್ ಸೇರಿ ಹಲವಾರು ಹಿರಿಯ ಹಮಾಸ್ ಕಾರ್ಯಕರ್ತರನ್ನು ಕೊಂದಿದೆ ಎಂದು ಹೇಳಿಕೊಂಡಿದೆ. ಐಡಿಎಫ್ ವಕ್ತಾರ ರಿಯಲ್ ಅಡ್ಮಿರಲ್ ಡೇನಿಯಲ್ ಹಗರಿ ಸೋಮವಾರ ಹೇಳಿಕೆಯಲ್ಲಿ, ಐಡಿಎಫ್ ಯುದ್ಧ ಸಹಾಯ ಕಂಪನಿಯ ಹಮಾಸ್ ಕಮಾಂಡರ್ ತಹಸಿನ್ ಮಸ್ಲಾಮ್ ಮತ್ತು ಹಮಾಸ್‌ನ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ರಚನೆಯ ಹಾಗೂ ಗುಂಪಿನ ಖಾನ್ ಯೂನಿಸ್ ಬ್ರಿಗೇಡ್‌ನ ಕಮಾಂಡರ್ ಯಾಕುಬ್ ಅಶೂರ್ ಅವರನ್ನು ಕೊಂದಿದೆ ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ಶಾಲೆಯಲ್ಲಿ ಹಮಾಸ್‌ ಉಗ್ರರಿಂದ ಶಸ್ತ್ರಾಸ್ತ್ರ ಸಂಗ್ರಹ: ಹೊಸ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್‌

ಗಾಜಾ ನಗರದ ಅಲ್ - ಕುದ್ಸ್‌ ಆಸ್ಪತ್ರೆಯಿಂದ ಪಡೆಗಳ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕನನ್ನು ಕೊಂದಿರುವುದಾಗಿಯೂ ಐಡಿಎಫ್ ಹೇಳಿದೆ. ಹಮಾಸ್ ನಾಗರಿಕರು, ರೋಗಿಗಳು ಮತ್ತು ವೃದ್ಧರನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ ಎಂದು IDF ಪುನರುಚ್ಚರಿಸಿದೆ. ಗುಂಪು ಆಸ್ಪತ್ರೆಗಳನ್ನು ಕಮಾಂಡ್ ಸೆಂಟರ್‌ಗಳಾಗಿ ಬಳಸುತ್ತಿದೆ ಎಂದೂ ಅರೋಪಿಸಿದೆ.

ಇದನ್ನು ಓದಿ: ಗಾಜಾ ನಗರದ ಹೃದಯ ಭಾಗಕ್ಕೇ ನುಗ್ಗಿ ಸುರಂಗಗಳನ್ನು ಧ್ವಂಸಗೈದ ಇಸ್ರೇಲ್‌: ಹಮಾಸ್ ಕ್ಷಿಪಣಿ ತಜ್ಞನ ಹತ್ಯೆ