ಬೋನೊಳಗಿದ್ದ ಸಿಂಹವೊಂದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ಆಸ್ಪತ್ರೆ ಸೇರಿದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ. ಮುಹಮ್ಮೆದ್ ಅಮಿನ್ 20 ಸಿಂಹದ ಜೊತೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಯುವಕ
ಪಾಕಿಸ್ತಾನ: ಬೋನೊಳಗಿದ್ದ ಸಿಂಹವೊಂದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ಆಸ್ಪತ್ರೆ ಸೇರಿದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ. ಮುಹಮ್ಮೆದ್ ಅಮಿನ್ 20 ಸಿಂಹದ ಜೊತೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಯುವಕ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಆಯೋಜಿಸಿದ ವನ್ಯಜೀವಿಗಳ ಮೇಳದಲ್ಲಿ ಈ ದುರಂತ ನಡೆದಿದೆ. ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೋನಿನಲ್ಲಿದ್ದ ಸಿಂಹದ ಬಳಿ ಫೋಟೋ ತೆಗದುಕೊಳ್ಳಲು ಹೋದ ವೇಳೆ ಸಿಂಹ ಈತನ ಮೇಲೆ ದಾಳಿ ಮಾಡಿ ಆತನ ತೋಳನ್ನು ಹಿಡಿದೆಳೆದಿದೆ.
ಪಾಕಿಸ್ತಾನದ ಉದ್ಯಾನವನ ಹಾಗೂ ತೋಟಗಾರಿಕಾ ಪ್ರಾಧಿಕಾರವೂ ಲೋಕಮೇಳ (ಕೃಷಿ ಮೇಳದಂತಹ ಮೇಳ) ವನ್ನು ಆಯೋಜಿಸಿತ್ತು. ಈ ಮೇಳದಲ್ಲಿ ಸಿಂಹವೊಂದು ವೀಕ್ಷಕನ ಮೇಲೆ ದಾಳಿ ಮಾಡಿದ ನಂತರ ಈ ಮೇಳವನ್ನು ಸ್ಥಗಿತಗೊಳಿಸಲಾಗಿದೆ. ವಾರದ ಹಿಂದಷ್ಟೇ ಪಾಕಿಸ್ತಾನದ ಮೃಗಾಲಯವೊಂದರಲ್ಲಿ ಟೈಗರ್‌ಗಳು ವೀಕ್ಷಕನೋರ್ವನ ಮೇಲೆ ದಾಳಿ ಮಾಡಿ ಕೊಂದಿದ್ದವು. ಆ ಘಟನೆ ಮಾಸುವ ಮೊದಲೇ ಈ ದುರಂತ ನಡೆದಿದ್ದು, ಝೂಗೆ ತೆರಳುವವರನ್ನು ಬೆಚ್ಚಿ ಬೀಳಿಸಿದೆ.
ಬಂಡೀಪುರ ಕಾಡಂಚಿನಲ್ಲಿ ಕುರಿಗಾಹಿಯನ್ನು ಎಳೆದೊಯ್ದು ತಿಂದು ಹಾಕಿದ ಹುಲಿ!
ಆಗ ಹುಲಿಗಳ ದಾಳಿಯಿಂದ ಪ್ರಾಣ ಬಿಟ್ಟ ಯುವಕನನ್ನು ಮುಹಮದ್ ಬಿಲಾವಲ್ ಎಂದು ನಂತರ ಗುರುತಿಸಲಾಗಿದೆ. ಈತ ಹುಲಿಗಳಿರುವ ಪ್ರದೇಶಕ್ಕೆ ಸುರಕ್ಷಿತ ಸ್ಥಳದಿಂದ ಜಂಪ್ ಮಾಡಿದ್ದ ಎಂದು ತಿಳಿದು ಬಂದಿದೆ. ಆದರೆ ದಿನವೂ ಮೃಗಾಲಯ ಸ್ವಚ್ಛತೆಗೆ ಬರುವ ವ್ಯಕ್ತಿ ಅಲ್ಲಿಗೆ ಬಂದಾಗ ಈತನ ಮೃತದೇಹ ಪತ್ತೆಯಾಗಿದ್ದು, ಈತನ ಶೂವೊಂದು ಹುಲಿಯ ಬಾಯಲ್ಲಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
ಈ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಇನ್ನು ಹೊರ ಬಂದಿಲ್ಲ, ಆದರೆ ಮೂಲಗಳ ಪ್ರಕಾರ ಈತ ಹುಲಿ ದಾಳಿ ನಡೆಯುವ ವೇಳೆ ಜೀವಂತವಾಗಿಯೇ ಇದ್ದ ಆಕಸ್ಮಿಕವಾಗಿ ಕುಸಿದು ಬಿದ್ದು ಸತ್ತಿದ್ದೇನು ಅಲ್ಲ. ಆತ ಹುಲಿ ದಾಳಿಯಿಂದಲೇ ಮೃತಪಟ್ಟಿದ್ದು ಎಂದು ಮೃಗಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹುಲಿಗಳು ಮನುಷ್ಯರ ಮೇಲೆ ದಾಳಿ ಮಾಡಲು ಹೋಗುವುದಿಲ್ಲ, ಇಲ್ಲಿ ಈತನೇ ಹುಲಿಗಳಿದ್ದ ಪ್ರದೇಶಕ್ಕೆ ಹಾರಿದ ಎಂದು ಮೂಲಗಳು ತಿಳಿಸಿವೆ.
ಯಾರನ್ನೋ ಮೆಚ್ಚಿಸಲು ಬಲಿಯಾದೆಯಲ್ಲ ಕಂದಾ..! ಮಣ್ಣಲ್ಲಿ ಮಣ್ಣಾದ ಅಂಬಾರಿ ಅರ್ಜುನ
ಹುಲಿ ದಾಳಿಯಿಂದ ಮೃತಪಟ್ಟ ಮಹಮ್ಮದ್ ಬಿಲಾವಲ್‌ನ ತಂದೆ ಮುಹಮ್ಮದ್ ಜಾವೇದ್ ಮಾತನಾಡಿದ್ದು, ತನ್ನ ಪುತ್ರ ಎರಡು ಬಾರಿ ಮದ್ಯವರ್ಜನ ಶಿಬಿರಕ್ಕೆ ಸೇರಿಸಿದ ನಂತರವೂ ದುಶ್ಚಟಕ್ಕೆ ದಾಸನಾಗಿದ್ದ ಎಂದು ಹೇಳಿದ್ದಾರೆ. ಬಹವಲ್‌ಪುರ ಮೃಗಾಲಯದಲ್ಲಿ ಈ ಘಟನೆ ನಡೆದಿತ್ತು.
